ಅಟಲಬಿಹಾರಿ ವಾಜಪೇಯಿ ಇವರು ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿರುತ್ತಿದ್ದರೆ, ಕಾಶ್ಮೀರದ ಸಮಸ್ಯೆ ಬಗೆಹರಿಯುತ್ತಿತ್ತು ! - ಸರಸಂಘಚಾಲಕ ಮೋಹನ ಭಾಗವತ

ಪಾಕಿಸ್ತಾನಕ್ಕೆ ಪಾಠ ಕಲಿಸುವುದೇ ಕಾಶ್ಮೀರ ಪ್ರಶ್ನೆಗೆ
ಏಕೈಕ ಪರಿಹಾರವೆಂಬುದು ನಮಗೆ ಯಾವಾಗ ತಿಳಿಯುವುದು?
ಆಗ್ರಾ : ಭಾರತದ ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಇವರು ಸಂಯಮದಿಂದ ನಿಧಾನವಾಗಿ ಕಾಶ್ಮೀರದ ಪರಿಸ್ಥಿತಿಯನ್ನು ಸರಿದಾರಿಗೆ ತರುತ್ತಿದ್ದರು. ಅವರಿಗೆ ಇನ್ನಷ್ಟು ಕಾಲಾವಧಿ ಸಿಗುತ್ತಿದ್ದರೆ, ಕಾಶ್ಮೀರದ ಸಮಸ್ಯೆ ಬಗೆಹರಿಯುತ್ತಿತ್ತು, ಎಂದು ಸರಸಂಘಚಾಲಕ ಮೋಹನ ಭಾಗವತ ಇವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸರಸಂಘಚಾಲಕ ಭಾಗವತ ಇವರು ಮಾತು ಮುಂದುವರಿಸುತ್ತಾ, ಇಷ್ಟು ಖರ್ಚು ಮಾಡಿಯೂ ಕಾಶ್ಮೀರದ ವಿಕಾಸ ಆಗಿಲ್ಲ, ಉದ್ಯೋಗ ನಿರ್ಮಾಣವಾಗಿಲ್ಲ. ಇದರ ಹೊಣೆ ಆಡಳಿತದ್ದಾಗಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಘಟಿಸಿರುವ ಘಟನೆಗಳು ಹಾಗೂ ಜನರು ಪ್ರಕ್ಷುಬ್ಧರಾಗಿರುವ ಬಗ್ಗೆ ವಿಚಾರವಾಗಬೇಕು. ಪ್ರಸ್ತುತ ಸರಕಾರ ಕಾಶ್ಮೀರದಲ್ಲಿ ಅಸಂತೋಷವನ್ನು ಹರಡಿಸುವವರನ್ನು ಗುರುತಿಸಲು ಎಲ್ಲ ರೀತಿಯಿಂದ ಪ್ರಯತ್ನಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ ಜನರು ಸಹ ಸರಕಾರಕ್ಕೆ ಬೆಂಬಲ ನೀಡಿದರೆ, ಕಾಶ್ಮೀರದ ಬೆಂಬಲಕ್ಕೆ ಪೂರ್ಣ ಭಾರತ ನಿಂತಿದೆ, ಎಂಬುದನ್ನು ಪಾಕ್‌ನಲ್ಲಿ ಕುಳಿತು ಷಡ್ಯಂತ್ರ ರಚಿಸುವವರಿಗೆ ತಿಳಿಯಬಹುದು, ಎಂದೂ ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಟಲಬಿಹಾರಿ ವಾಜಪೇಯಿ ಇವರು ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿರುತ್ತಿದ್ದರೆ, ಕಾಶ್ಮೀರದ ಸಮಸ್ಯೆ ಬಗೆಹರಿಯುತ್ತಿತ್ತು ! - ಸರಸಂಘಚಾಲಕ ಮೋಹನ ಭಾಗವತ