ಸದ್ಗುರು (ಸೌ.) ಅಂಜಲಿ ಗಾಡಗೀಳರವರ ಮಾರ್ಗದರ್ಶನಯುಕ್ತ ವಾಕ್ಯಗಳು

ಅ. ಎರಡು ಉತ್ತಮ ವಿಷಯಗಳಲ್ಲಿ  ಹೆಚ್ಚು ಉತ್ತಮವಾದದ್ದು ಯಾವುದು ? ಎನ್ನುವುದನ್ನು ನೋಡಿಯೇ  ನಿರ್ಧರಿಸಬೇಕು.
ಆ. ಜ್ಞಾನವು ಸ್ನೇಹಶೂನ್ಯವಾಗಿರುತ್ತದೆ. ಭಕ್ತಿಯ ಭಾಷೆಯು ಕಣ್ಣಲ್ಲಿ ನೀರು ತರುತ್ತದೆ ( ಭಾವ ನಿರ್ಮಿಸುತ್ತದೆ) ; ಆದುದರಿಂದ ಅದು ಉತ್ತಮವಾಗಿರುತ್ತದೆ.
 ಇ. ಸ್ವಾರ್ಥವನ್ನು ತ್ಯಜಿಸಿದರೆ, ಪರಮಾರ್ಥವು ಆರಂಭವಾಗುತ್ತದೆ.
ಈ. ಆನಂದ ಪಡೆಯುವುದೇ ಸಾಧನೆ.
ಉ. ತಳಮಳದಿಂದ ಪ್ರಾರ್ಥನೆ ಮಾಡಿ ಮೊದಲ ಪ್ರಯತ್ನದಲ್ಲಿಯೇ ಧ್ಯೇಯವನ್ನು ಸಾಧ್ಯಗೊಳಿಸಬೇಕು. ಪುನಃ ಪುನಃ ಪ್ರಾರ್ಥನೆ ಮತ್ತು ಪ್ರಯತ್ನಗಳನ್ನು ಮಾಡಬೇಕಾಗಬಾರದು.
ಊ. ಯಾಂತ್ರಿಕತೆಯನ್ನು ತ್ಯಜಿಸಬೇಕು, ಆನಂದದಿಂದಲೇ ಎಲ್ಲವೂ ಸಾಧವಾಗುತ್ತದೆ.
ಋ. ಪಾರದರ್ಶಕತೆಯಿಂದ ನಾವು ಕಲಿಯಲು ಸಾಧ್ಯವಾಗುತ್ತದೆ.
ಎ. ಯಾವುದೇ ಚಿತ್ರವನ್ನು ತೋರಿಸುವಾಗ ಅದನ್ನು ಮೇಲಿನಿಂದ ಕೆಳಗಿನವರೆಗೆ ಪೂರ್ತಿ ತೋರಿಸಬೇಕು. ತುಂಡು ತುಂಡು ಮಾಡಿ ತೋರಿಸಿದರೆ ಅದರ ಭವ್ಯತೆಯು ತಿಳಿಯುವುದಿಲ್ಲ. ಪೂರ್ತಿ ಚಿತ್ರವನ್ನು  ತೋರಿಸಿದಾಗ ಅದರಲ್ಲಿನ  ಸಾತ್ತ್ವಿಕತೆಯೂ ಹೆಚ್ಚಿರುತ್ತದೆ.
ಏ. ವ್ಯಾಪಕತೆಯ ಹೊರತು ಪ್ರಗತಿಯಾಗುವುದಿಲ್ಲ !
ಒ. ಸೇವೆಯನ್ನು ಪರಿಪೂರ್ಣ ಮಾಡಿದಾಗಲೇ ಶೀಘ್ರವಾಗಿ ಪ್ರಗತಿಯಾಗಲು ಸಾಧ್ಯ !
ಓ. ಸಂಘರ್ಷ ಮಾಡದಿದ್ದರೆ ಯಶಸ್ಸು ದೊರೆಯುವುದಿಲ್ಲ. ಸಂಘರ್ಷ ಮಾಡಿಯೇ ಯಶಸ್ಸನ್ನು ಎಳೆದು ತರಬೇಕಾಗುತ್ತದೆ.
ಔ. ಕಾರ್ಯಪದ್ಧತಿಗಳ  ಮಹತ್ವವನ್ನು ಅರಿತುಕೊಳ್ಳಬೇಕು.
ಅಂ. ತತ್ತ್ವದೊಂದಿಗೆ ಏಕನಿಷ್ಠರಾಗಿರಬೇಕು !
ಅಃ. ತಪ್ಪುಗಳನ್ನು ತಡವಾಗಿ ಹೇಳಿದರೆ  ಅಷ್ಟು ಸಮಯದವರೆಗೆ ಪಾಪ ಉಳಿಯುತ್ತದೆ; ಆದುದರಿಂದ ತಪ್ಪಾದರೆ ತಕ್ಷಣ ಹೇಳಬೇಕು.
ಪ.ಪೂ. ಡಾಕ್ಟರ್,  ನಿಮ್ಮ ಕೃಪೆಯಿಂದಲೇ ಸದ್ಗುರು ಗಾಡಗೀಳ ಕಾಕೂರವರ ಅಮೂಲ್ಯವಾದ ಸತ್ಸಂಗವು ನಮಗೆ ದೊರಕುತ್ತಿದೆ ಮತ್ತು  ಅದರಿಂದ ಸಾಧನೆಗೆ ಲಾಭವಾಗುತ್ತ್ತಿದೆ. ಈ ಸತ್ಸಂಗದ ಅವಕಾಶವನ್ನು ತಾವು ನಮಗೆ ಅನುಗ್ರಹಿಸಿದ್ದಕ್ಕಾಗಿ ನಿಮ್ಮ ಚರಣಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. - ಸರ್ವಶ್ರೀ. ವಿನಿತ ದೇಸಾಯಿ, ಹೃಷಿಕೇಶ ನಾಯಿಕ್, ಚೇತನ ಎಂ.ಎನ್., ದಿವಾಕರ ಆಗವಣೆ, ಸನಾತನ ಆಶ್ರಮ,  ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸದ್ಗುರು (ಸೌ.) ಅಂಜಲಿ ಗಾಡಗೀಳರವರ ಮಾರ್ಗದರ್ಶನಯುಕ್ತ ವಾಕ್ಯಗಳು