ಉಜೈನ್‌ನಲ್ಲಿ ಶ್ರೀ ವೃಷಭ ದೇವ ಮಂದಿರದಲ್ಲಿ ಮಹಿಳೆಯರ ಪಾಶ್ಚಾತ್ಯ ಉಡುಗೆಗೆ ನಿಷೇಧ !

ದೇವಸ್ಥಾನಗಳಲ್ಲಿ ಪಾಶ್ಚಾತ್ಯ ಉಡುಗೆಗೆ ನಿಷೇಧ ಎಂದು ಫಲಕ ಹಾಕಿ ಅಷ್ಟಕ್ಕೇ
ನಿಲ್ಲದೆ ದೇವಸ್ಥಾನಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕು.
ಅದರಿಂದ ಹಿಂದೂಗಳಲ್ಲಿ ಧರ್ಮಾಭಿಮಾನವೂ ನಿರ್ಮಾಣವಾಗುವುದು !
ಉಜೈನ್ : ಇಲ್ಲಿನ ಶ್ರೀ ವೃಷಭ ದೇವ ಮಂದಿರದ ನ್ಯಾಸವು ಮಹಿಳೆಯರಿಗೆ ಹೊಸ ನಿಯಮವನ್ನು ನಿರ್ಮಾಣ ಮಾಡಿದೆ. ಈ ದೇವಸ್ಥಾನಕ್ಕೆ ಬರುವಾಗ ೮ ವರ್ಷಗಳ ಮೇಲಿನ ಹುಡುಗಿಯರು ಅಥವಾ ವಿವಾಹಿತ ಮಹಿಳೆಯರು ಪಾಶ್ಚಾತ್ಯ ಉಡುಗೆಯ ಬದಲು ಭಾರತೀಯ ಉಡುಗೆಗಳನ್ನು ತೊಟ್ಟುಕೊಂಡು ಬರಬೇಕು, ಎಂದು ನಿಯಮ ಮಾಡಿದೆ. ಈ ದೇವಸ್ಥಾನದ ನ್ಯಾಸವು ದೇವಸ್ಥಾನದ ಹೊರಗೆ ಒಂದು ಸೂಚನಾ ಫಲಕ ಹಚ್ಚಿದೆ. ಅದರಲ್ಲಿ ಮಹಿಳೆಯರು ಜೀನ್ಸ್ ತೊಟ್ಟು ದೇವಸ್ಥಾನಕ್ಕೆ ಬರಬಾರದು, ಎಂದು ಬರೆಯಲಾಗಿದೆ. ಈ ಹಿಂದೆ ಮಂಗಳೂರಿನ ಮಂಗಳಾದೇವಿ ಮತ್ತು ಕೆನಗೇರಿಯಲ್ಲಿನ ಕಾಳಿಕಾಂಬಾ ದೇವಸ್ಥಾನದಲ್ಲಿಯೂ ಮಹಿಳೆಯರಿಗೆ ಜೀನ್ಸ್ ಧರಿಸಿ ಬರದಂತೆ ನಿಷೇಧ ಹೇರಲಾಗಿತ್ತು. ಅದರ ಜೊತೆಗೆ ಮಹಾಲಕೀ ದೇವಸ್ಥಾನದಲ್ಲಿಯೂ ಭೂಮಾತಾ ಬ್ರಿಗೇಡ್‌ನ ಅಧ್ಯಕ್ಷೆ ತೃಪ್ತಿ ದೇಸಾಯಿಗೆ ಸೀರೆ ಉಟ್ಟುಕೊಂಡು ಬರಲು ಹೇಳಿದ್ದರು; ಆದರೆ ಅವರು ಇದನ್ನು ವಿರೋಧಿಸಿದ್ದರು. (ಇಂತಹ ಪುರೋ(ಅಧೋ)ಗಾಮಿಗಳಿಂದಾಗಿಯೇ ಇಂದು ಧರ್ಮಾಚರಣೆಯು ದೂರ ಸರಿಯುತ್ತಿದ್ದು ಅವರಿಂದ ಹೆಚ್ಚೆಚ್ಚು ಅಧರ್ಮವಾಗುತ್ತಿದೆ. ಆದ್ದರಿಂದ ಸಮಾಜದಲ್ಲಿ ನಿರಾಶೆ, ಆತ್ಮಹತೆ, ವಂಚನೆ, ಭ್ರಷ್ಟಾಚಾರ ಇತ್ಯಾದಿ ಘಟನೆಗಳು ಹೆಚ್ಚಾಗಿ ಸಮಾಜವು ಅಧೋಗತಿಯ ಕಡೆಗೆ ಹೋಗುತ್ತಿದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉಜೈನ್‌ನಲ್ಲಿ ಶ್ರೀ ವೃಷಭ ದೇವ ಮಂದಿರದಲ್ಲಿ ಮಹಿಳೆಯರ ಪಾಶ್ಚಾತ್ಯ ಉಡುಗೆಗೆ ನಿಷೇಧ !