ಮಂಗಳೂರಿನಲ್ಲಿ ಏಳು ದಿನಗಳ ರಾಜ್ಯಮಟ್ಟದ ಶಿಬಿರ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ

ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುತ್ತಿರುವ (ಎಡದಿಂದ)
ಶ್ರೀ. ರಮಾನಂದ ಗೌಡ ಮತ್ತು ಶ್ರೀ. ಕಾಶಿನಾಥ ಪ್ರಭು
ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಸದ್ಗುರು ಸತ್ಯವಾನ ಕದಮ್
ಮಂಗಳೂರು : ಸಾಧಕರ ಕ್ಷಮತೆ ಹೆಚ್ಚಾಗಬೇಕು, ವಿಹಂಗಮ ಪ್ರಸಾರವಾಗಬೇಕು ಮತ್ತು ಸಾಧಕರ ಪ್ರಗತಿಯು ಶೀಘ್ರವಾಗಿ ಆಗಬೇಕೆಂದು ಸೆಪ್ಟೆಂಬರ್ ೧೦ ರಿಂದ ೧೬ ರ ವರೆಗೆ ಏಳು ದಿನಗಳ ‘ಸಾಧನಾವೃದ್ಧಿ, ಧರ್ಮರಕ್ಷಣೆ ಹಾಗೂ ವಿಹಂಗಮ ಪ್ರಚಾರ’ ಎಂಬ ರಾಜ್ಯ ಮಟ್ಟದ ಶಿಬಿರವು ಅತ್ಯಂತ ಉತ್ಸಾಹ ಹಾಗೂ ಭಾವಪೂರ್ಣ ವಾತಾವರಣದಲ್ಲಿ ನಡೆಯಿತು. ೬೫ ಸಾಧಕರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಶಿಬಿರದಲ್ಲಿ ಸದ್ಗುರು ಸತ್ಯವಾನ ಕದಮ್ ಇವರ ವಂದನೀಯ ಉಪಸ್ಥಿತಿ ಇತ್ತು.
೧. ಶಿಬಿರದ ಉದ್ದೇಶವನ್ನು ಸದ್ಗುರು ಸತ್ಯವಾನ್ ಕದಮ್‌ರವರು ಸ್ಪಷ್ಟಪಡಿಸಿದರು. ಜಿಲ್ಲಾಸೇವಕರು, ಲೆಕ್ಕಸೇವಕರು ಹಾಗೂ ಸಮಿತಿಸೇವಕರ ವ್ಯಷ್ಟಿ ಸಾಧನೆಯ ಬಗ್ಗೆ ಶ್ರೀ. ರಮಾನಂದ ಗೌಡ ಮತ್ತು ಶ್ರೀ. ಕಾಶಿನಾಥ ಪ್ರಭುರವರು ಮಾರ್ಗದರ್ಶನ ಮಾಡಿದರು.
೨. ಹೊಸ ಸ್ಥಳದಲ್ಲಿ ಪ್ರಚಾರ ಕಾರ್ಯವನ್ನು ಹೇಗೆ ಪ್ರಾರಂಭಿಸ ಬೇಕು, ಅದರಲ್ಲಿ ಬರುವ ಅಡಚಣೆಗಳು, ಧರ್ಮಶಿಕ್ಷಣವರ್ಗಗಳು ಕಡಿಮೆಯಾಗುವುದರ ಹಿಂದಿನ ಕಾರಣ, ಹಿಂದೂ ಧರ್ಮಜಾಗೃತಿ ಸಭೆ, ಹಿಂದೂ ಅಧಿವೇಶನ, ಸನಾತನ ಪ್ರಭಾತ ವಾಚಕ ಅಭಿಯಾನ ಹಾಗೂ ಧರ್ಮಸಭೆಯ ನಂತರದ ಫಲನಿಷ್ಪತ್ತಿಯ ಬಗ್ಗೆ ಶಿಬಿರದಲ್ಲಿ ಮಾರ್ಗದರ್ಶನ ಮಾಡಲಾಯಿತು.
೩. ಸಾಧಕರ ೩ ತಿಂಗಳ ವ್ಯಷ್ಟಿ ಮತ್ತು ಸಮಷ್ಟಿಯ ಆಯೋಜನೆ ಮಾಡಲಾಯಿತು.
೪. ಸದ್ಯ ವಿವಿಧ ದೂರದರ್ಶನಗಳಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ವಿಷಯವನ್ನು ಮಂಡಿಸಲು ಆಮಂತ್ರಿಸಲಾಗುತ್ತಿದೆ. ಹಾಗಾಗಿ ಹೇಗೆ ವಕ್ತಾರರಾಗಬೇಕು ? ಎಂಬ ಬಗ್ಗೆ ಪ್ರಾಯೋಗಿಕ ಭಾಗದ ಮಾಧ್ಯಮದಿಂದ ಮಾರ್ಗದರ್ಶನ ಮಾಡಲಾಯಿತು.
ಯಾವುದೇ ಪ್ರಸಂಗವನ್ನು ಸಾಧನೆಯಿಂದ ಎದುರಿಸಬಹುದು !
- ಸದ್ಗುರು ಸತ್ಯವಾನ ಕದಮ್

ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಸದ್ಗುರು ಸತ್ಯವಾನ್ ಕದಮ್‌ರವರು, ಭಾವಪೂರ್ಣ + ಪರಿಪೂರ್ಣ = ಈಶ್ವರಪ್ರಾಪ್ತಿ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಸೇವೆ ಮಾಡಬೇಕು. ನಮಗೆ ಎಷ್ಟು ಶ್ರೇಷ್ಠ ಗುರುಗಳು ಸಿಕ್ಕಿದ್ದಾರೆ ಎಂಬುದನ್ನು ಸತತವಾಗಿ ಸ್ಮರಿಸಿಕೊಂಡು ಪ್ರಯತ್ನ ಮಾಡಬೇಕು. ಸಾಧಕರಿಂದ ತಪ್ಪುಗಳಾದಾಗ ಅವರು ‘ನಾನೆಲ್ಲಿ ಕಡಿಮೆಬಿದ್ದೆ’ ಎನ್ನದೇ ‘ನಾನು ಹೇಗೆ ಸರಿಯಾಗಿದ್ದೇನೆ’ ಎಂದು ಹೇಳಲು ಪ್ರಯತ್ನಿಸುತ್ತಾರೆ, ಅದಕ್ಕಿಂತ ಪ್ರತಿಯೊಂದು ಪ್ರಸಂಗದಲ್ಲಿಯೂ ನಾನೆಲ್ಲಿ ಕಡಿಮೆಬಿದೆ, ಎಂದು ನೋಡಿ ಪ್ರಯತ್ನಿಸಬೇಕು. ಸಾಕ್ಷಾತ್ ಭಗವಾನ್ ಶ್ರೀಕೃಷ್ಣನೇ ಅರ್ಜುನನ ರಥದ ಕುದುರೆಗಳನ್ನು ತೊಳೆದನು, ರಾಜಸೂಯ ಯಾಗದಲ್ಲಿ ಎಂಜಲೆಲೆಯನ್ನು ತೆಗೆದನು, ಹೀಗಿರುವಾಗ ನಾವೆಷ್ಟು ಕಡಿಮೆತನವನ್ನು ತೆಗೆದುಕೊಳ್ಳಬೇಕಲ್ಲ ? ನಮ್ಮ ಮೇಲೆ ಯಾವುದೇ ರೀತಿಯ ಸಂಕಟ ಬಂದರೂ ನಾವು ಅದನ್ನು ಕೇವಲ ಸಾಧನೆಯಿಂದ ಮಾತ್ರ ಎದುರಿಸಬಹುದು. ಈಗ ಸಮಯ ಕಡಿಮೆಯಿದೆ. ಆದ್ದರಿಂದ ನಮ್ಮ ಸಾಧನೆ ಹೆಚ್ಚಿಸುವುದು ಮಹತ್ವದ್ದಾಗಿದೆ, ಎಂದು ನುಡಿದರು.
ಗಮನಾರ್ಹ ಅಂಶಗಳು
೧. ಸಾಧಕರ ಉತ್ಸಾಹ ಹಾಗೂ ತಳಮಳದಿಂದ ೫ ದಿನಗಳ ಶಿಬಿರವನ್ನು ೭ ದಿನಗಳ ವರೆಗೆ ನಡೆಸಲಾಯಿತು.

೨. ಎಲ್ಲ ಸಾಧಕರೂ ಮನಮುಕ್ತವಾಗಿ ತಮ್ಮ ಮನಸ್ಸಿನ ಪ್ರಕ್ರಿಯೆಯನ್ನು ಹೇಳಿ ಶಿಬಿರದ ಲಾಭವನ್ನು ಪಡೆದುಕೊಳ್ಳುತ್ತಿದ್ದರು.

 ಶಿಬಿರದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿಗಳು

೧. ಇದು ಶಿಬಿರವಾಗಿರದೆ ಭಾವಸತ್ಸಂಗವೇ ಆಗಿದೆ ಎಂದು ಅನಿಸುತ್ತಿತ್ತು.

೨. ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಂಡಿದ್ದರಿಂದ ಮನಸ್ಸು ಹಗುರವಾಗಿ ಪ್ರಯತ್ನಗಳಾಗಲು ಪ್ರಾರಂಭವಾಯಿತು, ಅಂತರ್ಮುಖತೆ ಹೆಚ್ಚಾಯಿತು.

೩. ಈ ಶಿಬಿರವು ಮಂಗಳೂರಿನಲ್ಲಿರದೆ ಗೋವಾದ ರಾಮನಾಥಿ ಆಶ್ರಮದಲ್ಲಿಯೇ ಆಗುತ್ತಿದೆ ಎಂದು ಅನಿಸಿತ್ತಿತ್ತು.

೪. ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುತ್ತಿರುವಾಗ ಶ್ರೀ. ರಮಾನಂದಣ್ಣನವರ ಜಾಗದಲ್ಲಿ ಶ್ರೀಕೃಷ್ಣ ಹಾಗೂ ಪರಾತ್ಪರ ಗುರು ಡಾ. ಜಯಂತ ಆಠವಲೆಯವರೇ ವರದಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿತ್ತು.

ಇಲ್ಲಿ ನೀಡಲಾದ ಅನುಭೂತಿಗಳು ‘ಭಾವ ಇದ್ದಲ್ಲಿ ದೇವರು’ ಎಂಬ ಉಕ್ತಿಗನುಸಾರ ಸಾಧಕರ ವೈಯಕ್ತಿಕ ಅನುಭೂತಿಯಾಗಿದೆ. - ಸಂಪಾದಕರು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಂಗಳೂರಿನಲ್ಲಿ ಏಳು ದಿನಗಳ ರಾಜ್ಯಮಟ್ಟದ ಶಿಬಿರ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ