ಶ್ರಾದ್ಧದ ಬಗ್ಗೆ ನಿಮಗಿವು ತಿಳಿದಿವೆಯೇ ?

ಶ್ರಾದ್ಧದ ಸಂಕಲ್ಪವನ್ನು ಮಾಡುವ ಮೊದಲು ದ್ವಾರಲೋಪದ ವಿಚಾರವನ್ನು ಮಾಡುವುದು ಆವಶ್ಯಕವಾಗಿರುವುದು
ಪಿತೃತ್ರಯಿ, ಮಾತೃತ್ರಯಿ ಮತ್ತು ಮಾತಾಮಹತ್ರಯಿ ಈ ಮೂವರ ಪೈಕಿ ಯಾರಾದರೊಬ್ಬರು ಜೀವಂತವಾಗಿದ್ದರೆ ಅಲ್ಲಿ ದ್ವಾರಲೋಪವಾಗುತ್ತದೆ. ಉದಾ. ತಂದೆ ತೀರಿಹೋಗಿ ತಾತನವರು ಜೀವಂತವಾಗಿದ್ದರೆ ಅದು ತಂದೆಯ ನಂತರದ ದ್ವಾರಲೋಪವಾಗಿದೆ. ಕೆಲವು ಪುರೋಹಿತರು ದ್ವಾರಲೋಪದ ವಿಚಾರ ಮಾಡದೇ ತ್ರಯಿಯ ಉಚ್ಚಾರವನ್ನು ಮಾಡಿಸಿ ಕೊಳ್ಳುತ್ತಾರೆ. ಅಂದರೆ ತಾತನವರು ಜೀವಂತವಿರುವಾಗಲೇ ಶ್ರಾದ್ಧದಲ್ಲಿ ಆತನನ್ನು ಪಿತಾಮಹನೆಂದು ಉಲ್ಲೇಖಿಸಲಾಗುತ್ತದೆ, ಇದು ಅಯೋಗ್ಯವಾಗಿದೆ. ತಂದೆ ತೀರಿಕೊಂಡಿದ್ದು ತಾತನವರು ಜೀವಂತವಾಗಿದ್ದರೆ ಅವರನ್ನು ಬಿಟ್ಟು ಅವರ ಪೂರ್ವಜರ ಪೀಳಿಗೆಯ ಉಲ್ಲೇಖವನ್ನು ಮಾಡಬೇಕು. ಶ್ರಾದ್ಧಕರ್ತನ ಪಾರ್ವಣ, ದ್ವಾರಲೋಪ ಇತ್ಯಾದಿಗಳ ವಿಚಾರವನ್ನು ಮಾಡಿದ ನಂತರವೇ ಶ್ರಾದ್ಧ ಸಂಕಲ್ಪವನ್ನು ಮಾಡಬೇಕು.

ಶ್ರಾದ್ಧವಿಧಿಯಲ್ಲಿ ತಂದೆ, ಅಜ್ಜ ಮತ್ತು ಮುತ್ತಜ್ಜ ಹೀಗೆ ಮೂರು ಪೀಳಿಗೆಗಳ ಉಲ್ಲೇಖ ಇರುವುದು
ಮತ್ತು ಅವರಿಗಿಂತ ಹಿಂದಿನ ಪೀಳಿಗೆಗಳಿಗೆ ಶ್ರಾದ್ಧದಲ್ಲಿ ಪಿಂಡದಾನ ಇಲ್ಲದಿರುವುದು
ಧರ್ಮಶಾಸ್ತ್ರದಲ್ಲಿ ಮೂರು ಪೀಳಿಗೆಯವರೆಗೆ ಮಾತ್ರ ಪಿಂಡದಾನವನ್ನು ಮಾಡಲು ಹೇಳಲಾಗಿದೆ. ಅವರಿಗಿಂತ ಮೊದಲಿನ ಪಿತೃಗಳನ್ನು ದಿವ್ಯ ಪಿತೃಗಳೆಂದು ತಿಳಿದುಕೊಳ್ಳಲಾಗುತ್ತದೆ, ಅಂದರೆ ಅವರಿಗೆ ಮುಕ್ತಿಯು ದೊರಕಿದೆ ಎಂದು ತಿಳಿದುಕೊಳ್ಳ ಲಾಗುತ್ತದೆ. ಹಾಗೆಯೇ ನಮ್ಮ ಮೊದಲಿನ ಮೂರು ಪೀಳಿಗೆಯಲ್ಲಿನ ಪೂರ್ವಜರಿಗೆ ನಮ್ಮಿಂದ ಬಹಳ ಅಪೇಕ್ಷೆಗಳಿರುತ್ತವೆ ಮತ್ತು ಅದಕ್ಕಿಂತ ಹಿಂದಿನ ಪೀಳಿಗೆಯಲ್ಲಿನ ಪೂರ್ವಜರಿಗೆ ನಮ್ಮಿಂದ ಅಷ್ಟೊಂದು ಅಪೇಕ್ಷೆಗಳಿರುವುದಿಲ್ಲ. ಶ್ರಾದ್ಧದಲ್ಲಿ ಮುಖ್ಯಪಿಂಡವು ಮೊದಲಿನ ಮೂರು ಪೀಳಿಗೆಗಾಗಿ ಇದ್ದರೂ, ಅವರಿಗಿಂತ ಹಿಂದಿನ ಪೀಳಿಗೆಯಲ್ಲಿನ ಯಾರಿಗಾದರೂ ಗತಿಯು ಸಿಗದೇ ಇದ್ದರೆ ಅವರಿಗಾಗಿ ಶ್ರಾದ್ಧದಲ್ಲಿ ಧರ್ಮಪಿಂಡವನ್ನು ನೀಡಲಾಗುತ್ತದೆ. ಹೀಗೆ ಶ್ರಾದ್ಧವು ಹಿಂದೂಧರ್ಮದಲ್ಲಿ ಹೇಳಲಾಗಿರುವ ಒಂದು ಪರಿಪೂರ್ಣ ವಿಧಿಯಾಗಿದೆ.
ಶ್ರಾದ್ಧಕ್ಕಾಗಿ ತಂದೆ ಜೀವಂತವಾಗಿರುವಾಗ ಮಗನು ತಲೆಕೂದಲುಗಳನ್ನು ತೆಗೆಯುವುದು ಆವಶ್ಯಕವಾಗಿಲ್ಲ
ಸಂಕಲನಕಾರರು : ಯಾರ ತಂದೆಯು ಜೀವಂತ ವಾಗಿರುವುದಿಲ್ಲವೋ ಅವರು ತ್ರಿಪಿಂಡಿ ಶ್ರಾದ್ಧ, ನಾರಾಯಣ ನಾಗಬಲಿ ಈ ವಿಧಿಗಳನ್ನು ಮಾಡುವಾಗ ತಲೆಕೂದಲನ್ನು ತೆಗೆಯುವುದು ಆವಶ್ಯಕವಾಗಿರುತ್ತದೆ ಆದರೆ ತಂದೆಯು ಜೀವಂತವಿರುವಾಗ ತಲೆಕೂದಲನ್ನು ತೆಗೆಯುವುದು ಆವಶ್ಯಕವಾಗಿರುವುದಿಲ್ಲ, ಇದು ಹೀಗೇಕೆ?
ಓರ್ವ ವಿದ್ವಾಂಸ : ಶ್ರಾದ್ಧವನ್ನು ಮಾಡುವಾಗ ಕೆಟ್ಟ ಶಕ್ತಿಗಳು ಮಗನ ಕೂದಲುಗಳ ಕಡೆಗೆ ಆಕರ್ಷಿಸಿ ಅವನ ಮೇಲೆ ಹಲ್ಲೆಯನ್ನು ಮಾಡುತ್ತಿರುತ್ತವೆ. ಮಗ ನಿಗೆ ತಂದೆಯೊಂದಿಗೆ ಶೇ. ೭೦ ರಷ್ಟು ತ್ರಿಗುಣಾತ್ಮಕ ಅನುವಂಶಿಕ ಸಂಬಂಧ ಮತ್ತು ಹೋಲಿಕೆ ಇರುತ್ತದೆ, ಆದುದರಿಂದ ಕೆಟ್ಟ ಶಕ್ತಿಗಳು ಮಗನೊಂದಿಗೆ ತಂದೆಯ ಲಿಂಗದೇಹದ ಮೇಲೆಯೂ ಹಲ್ಲೆಯನ್ನು ಮಾಡುತ್ತವೆ. ಅಲ್ಲದೆ ಅದೇ ಸಮಯದಲ್ಲಿ ಶ್ರಾದ್ಧದ ಆವಾಹನಾತ್ಮಕ ಪ್ರಕ್ರಿಯೆಯಿಂದ ಹಿಂದಿನ ಎರಡು ಪೀಳಿಗೆಗಳ ಲಿಂಗದೇಹಗಳು ಬಂದಿರುತ್ತವೆ. ಅವರ ಮೇಲೆಯೂ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಸಾಧ್ಯತೆ ಇರುತ್ತದೆ. ಪುತ್ರನು ಶ್ರಾದ್ಧವನ್ನು ಮಾಡುವಾಗ ಅವನ ಶರೀರದಿಂದ ಪ್ರಕ್ಷೇಪಿತವಾಗುವ ಲಹರಿಗಳು ತಂದೆಯ ಲಿಂಗದೇಹಕ್ಕೆ ಸಿಗುವುದರಲ್ಲಿ ಅಡಚಣೆಗಳು ನಿರ್ಮಾಣವಾಗುತ್ತವೆ. ಇದರಿಂದ ವಿಧಿಯಿಂದ ಸಿಗುವ ಫಲವು ಕಡಿಮೆ ಯಾಗುತ್ತದೆ. ಆದುದರಿಂದ ಶ್ರಾದ್ಧವಿಧಿಯಿಂದ ಅಪೇಕ್ಷಿತವಿದ್ದಷ್ಟು ಶಕ್ತಿಯು ಲಿಂಗದೇಹಗಳಿಗೆ ಸಿಗುವುದಿಲ್ಲ. ಆದುದರಿಂದ ಅವುಗಳಿಗೆ ಗತಿಯು ಸಿಗುವುದಿಲ್ಲ.
ತಂದೆಯು ಜೀವಂತವಿರುವಾಗ ಮಗನು ಕೂದಲನ್ನು ತೆಗೆಯುವುದು ಆವಶ್ಯಕವಾಗಿರುವುದಿಲ್ಲ, ಏಕೆಂದರೆ ಮಗನು ತಂದೆಗೆ ಹೋಲಿಕೆಯನ್ನು ತೋರಿಸುವಷ್ಟು ಹೋಲಿಕೆಯನ್ನು ಇತರ ಪಿತೃಗಳೊಂದಿಗೆ ತೋರಿಸುವುದಿಲ್ಲ. ಆದುದರಿಂದ ಕೂದಲುಗಳನ್ನು ತೆಗೆಯುವುದು ಅಥವಾ ತೆಗೆಯದೇ ಇರುವುದು ಇದಕ್ಕೆ ಹೆಚ್ಚಿಗೆ ಮಹತ್ವವಿಲ್ಲ. ಆದುದರಿಂದ ತಂದೆಯು ಜೀವಂತವಾಗಿರುವಾಗ ಮಗನು ‘ಕೂದಲನ್ನು ತೆಗೆಯುವ ಆವಶ್ಯಕತೆಯಿಲ್ಲ’ ಎಂದು ಹೇಳಲಾಗಿದೆ.
- (ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮ ದಿಂದ, ೧೧.೮.೨೦೦೬, ಸಾಯಂ. ೬.೫೯)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರಾದ್ಧದ ಬಗ್ಗೆ ನಿಮಗಿವು ತಿಳಿದಿವೆಯೇ ?