ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಗಳು

ಸೌ. ಸುಪ್ರಿಯಾ ಮಾಥುರ್

. ಸೇವೆಗೆ ಸಂಬಂಧಿಸಿದ ವಿಷಯಗಳು
. ನಾವು ನಮ್ಮನ್ನೇ ಶ್ರೇಷ್ಠರೆಂದು ಪರಿಗಣಿಸಿದಾಗ, ಸೇವೆಯಲ್ಲಿ ಯಾರಾ ದರೂ ಏನಾದರೂ ಸೂಚಿಸಿದರೆ ನಮಗೆ ಪ್ರತಿಕ್ರಿಯೆಗಳು ಬರುತ್ತವೆ ಮತ್ತು ನಾವು ಅದನ್ನು ಮನಃಪೂರ್ವಕ ಸ್ವೀಕರಿಸುವು ದಿಲ್ಲ. ಇದು ಸಹ ನಮ್ಮ ಸೂಕ್ಷ ಅಹಂ ಆಗಿದ್ದು ಅದು ನಮ್ಮ ಗಮನಕ್ಕೆ ಬರುವುದಿಲ್ಲ.
. ಒಬ್ಬ ಸಾಧಕನು ಒಂದು ಪ್ರಸಂಗವನ್ನು ಹೇಳಿದನು. ಒಮ್ಮೆ ಅವನಿಗೆ ಅಡುಗೆ ಮನೆಯಲ್ಲಿ ನೈವೇದ್ಯವನ್ನು ತಯಾರಿಸುವ ಸೇವೆ ಸಿಕ್ಕಿತ್ತು. ಆಗ, ನನ್ನಲ್ಲಿ ಭಾವವಿರುವುದರಿಂದಲೇ ನನಗೆ ಈ ಸೇವೆ ಸಿಕ್ಕಿದೆ ಎಂಬ ಅಹಂ ಅವನ ಮನಸ್ಸಿನಲ್ಲಿ ಪ್ರಕಟವಾಯಿತು.

ಇದು ನಮ್ಮ ಮನಸ್ಸಿನ ಆಟವಾಗಿದೆ. ನಾವು ನಮ್ಮ ಬಗ್ಗೆ ಮನಸ್ಸಿನಲ್ಲಿ ಊಹಿಸುತ್ತಾ ಇರುತ್ತೇವೆ. ಸೇವೆಯ ಕಡೆಗೆ ನೋಡುವ ನಮ್ಮ ಈ ದೃಷ್ಟಿಕೋನವು ತಪ್ಪಾಗಿದೆ. ನಮಗೆ ಸಿಗುವ ಪ್ರತಿಯೊಂದು ಸೇವೆಯಿಂದಲೂ ಈಶ್ವರನು ನಮಗೆ ಏನನ್ನಾದರು ಕಲಿಸುತ್ತಿರುತ್ತಾನೆ.
. ಕೆಲವೊಮ್ಮೆ ನಮಗೆ, ನನಗೆ ಕನಿಷ್ಟ, ಹೀನ ಸೇವೆ ಸಿಕ್ಕಿದೆ ಎಂದೆನಿಸುತ್ತದೆ; ಆದರೆ ಈ ಸೇವೆಯನ್ನು ಕೊಟ್ಟು ಈಶ್ವರನು ನಮ್ಮ ಮೇಲೆ ಕೃಪೆ ತೋರಿಸಿದ್ದಾನೆ ಎಂದು ನಾವು ವಿಚಾರ ಮಾಡುವುದಿಲ್ಲ. ಪ್ರತಿಯೊಂದು ಸೇವೆಯೂ ವಿಧಿ ಲಿಖಿತವಾಗಿರುವುದರಿಂದ ಅದನ್ನು ಸ್ವೀಕರಿಸಲೇಬೇಕು. ಈಶ್ವರನು ನಮಗೆ ಕಲಿಸುವುದಕ್ಕಾಗಿಯೇ ಸೇವೆ ಕೊಡುತ್ತಾನೆ ಎಂಬ ಭಾವದಿಂದ ಸೇವೆ ಮಾಡಬೇಕು.
. ಸೇವೆಯಲ್ಲಿ ತಪ್ಪುಗಳಾಗಲು ಕಾರಣವೇನೆಂದರೆ ನಾವು ಆ ಸೇವೆಯನ್ನು ಮನಃಪೂರ್ವಕವಾಗಿ ಸ್ವೀಕರಿಸಿರುವುದಿಲ್ಲ. ಆದುದರಿಂದ ನಾವು ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಸೇವೆಯ ವ್ಯಾಪ್ತಿಯ ಬಗ್ಗೆ ಸಂಪೂರ್ಣ ಚಿಂತನೆಯಾಗದ ಕಾರಣ ತಪ್ಪುಗಳಾಗುತ್ತವೆ. ಆದುದರಿಂದ ಸೇವೆ ಸಿಕ್ಕಿದಾಗ ಈ ಸೇವೆಯು ನನ್ನ ಕಲ್ಯಾಣಕ್ಕಾಗಿಯೇ ಸಿಕ್ಕಿದೆ, ಎಂಬ ಭಾವವನ್ನಿಟ್ಟುಕೊಂಡು ಸೇವೆಯ ವ್ಯಾಪ್ತಿಯನ್ನು ತಿಳಿದುಕೊಂಡು ಆ ಸೇವೆಯನ್ನು ಮಾಡಬೇಕು.
. ಯಾವುದೇ ಸೇವೆಯ ಬಗ್ಗೆ ಒಳ್ಳೆಯ ವಿಚಾರವೇನಾದರೂ ಹೊಳೆದರೆ ಅಲ್ಲಿಯೇ ನಿಲ್ಲಬಾರದು ಮತ್ತು ಕರ್ತೃತ್ವದ ಅಹಂ ಕೂಡ ಮನಸ್ಸಿಗೆ ಬರಬಾರದು. ತನಗೆ ಹೊಳೆದ ವಿಚಾರದ ಬಗ್ಗೆ ಇತರರಲ್ಲಿ ಕೇಳಿಕೊಳ್ಳಬೇಕು. ಆ ಸಮಯದಲ್ಲಿ ಸೇವೆಯು ಪರಿಪೂರ್ಣವಾಗುವುದಕ್ಕಾಗಿ ನಾನೇನು ಮಾಡಬೇಕು ಎನ್ನುವ ಬಗ್ಗೆ ವಿಚಾರ ಮಾಡಬೇಕು. ಇದರಿಂದ ಅಂತರ್ಮುಖತೆ ಹೆಚ್ಚಾಗುವುದು.
. ಸಂಘರ್ಷದ ಮಹತ್ವ
ಸಂಘರ್ಷವು ನಮ್ಮ ಬಹುದೊಡ್ಡ ಮಿತ್ರ. ಮನಸ್ಸಿನ ವಿರುದ್ಧ ಹೋಗುವುದೆಂದರೆ ಸಂಘರ್ಷ. ಸಂಘರ್ಷದಿಂದ
ನಮ್ಮ ಅಹಂನ ಕವಚವು ಭೇದಿಸಲ್ಪಡುತ್ತದೆ. ಆದುದರಿಂದ ಸಂಘರ್ಷವನ್ನು ಶತ್ರು ಎಂದು ಪರಿಗಣಿಸಬಾರದು.
. ಪ್ರಶಂಸೆಯಿಂದ ಅಲ್ಪಸಂತುಷ್ಟರಾಗಿರದೆ ಮುಂದಿನ ಪ್ರಯತ್ನಗಳ ಬಗ್ಗೆ ವಿಚಾರ ಮಾಡಬೇಕು
ವ್ಯಷ್ಟಿ ವರದಿಯಲ್ಲಿ ಕೆಲವೊಮ್ಮೆ ಸಾಧಕರು, ಈ ಸಂತರನ್ನು ಭೇಟಿಯಾದಾಗ ಅವರು, ನನ್ನ ಸಾಧನೆಯ ಪ್ರಯತ್ನವು ಉತ್ತಮವಾಗಿ ನಡೆಯುತ್ತಿದೆ ಮತ್ತು ಭಾವವಿದೆ ಎಂದು ಹೇಳಿದರು, ಎಂದು ಹೇಳುತ್ತಾರೆ. ಆಗ ವರದಿ ತೆಗೆದುಕೊಳ್ಳುವ ಸಾಧಕರು, ಅದರಿಂದ ಈಗ ಅಲ್ಪಸಂತುಷ್ಟರಾಗಿರಬಾರದು; ಸಂತರು ಮೊದಲಿನ ಸ್ಥಿತಿಯ ತುಲನೆಯಲ್ಲಿ ಸಾಧಕನ ಸದ್ಯದ ಸ್ಥಿತಿ ಹೇಗಿದೆ ಎಂಬು ದನ್ನು ಹೇಳುತ್ತಾರೆ. ಅದರ ಅರ್ಥ ನಾವು ಈಗ ಪ್ರಯತ್ನಿಸುವ ಅಗತ್ಯವಿಲ್ಲ ಎಂದಾಗುವುದಿಲ್ಲ, ಎಂದು ಹೇಳಿದರು.
ವ್ಯಷ್ಟಿ ವರದಿಯಲ್ಲಿ ವರದಿ ಸೇವಕರ ಮಾಧ್ಯಮದಿಂದ ಶ್ರೀ ಗುರುಗಳೇ ನಮ್ಮ ವರ್ತಮಾನ ಸ್ಥಿತಿಗನುಸಾರವಾಗಿ ನಮ್ಮಲ್ಲಿನ ಸ್ವಭಾವದೋಷ-ಅಹಂಗಳ ಅರಿವನ್ನು ಮಾಡಿಕೊಡುತ್ತಿರುತ್ತಾರೆ.
. ಕಲಿಯುವ ವೃತ್ತಿಯನ್ನು ಹೆಚ್ಚಿಸಿಕೊಳ್ಳುವುದು
ಅಹಂನಿಂದಾಗಿ ನಾವು ಚಿಕ್ಕ-ಪುಟ್ಟ ವಿಷಯಗಳಿಂದ ಸಿಗುವ ಆನಂದವನ್ನು ಅನುಭವಿಸಲು ಅಸಮರ್ಥರಾಗುತ್ತೇವೆ; ಉದಾ. ಆಶ್ರಮದಲ್ಲಿನ ಭೋಜನಕಕ್ಷೆಯಲ್ಲಿ ವಿವಿಧ ವಿಭಾಗಗಳಲ್ಲಿನ ಸಾಧಕರು ಸಿದ್ಧಪಡಿಸಿರುವ ಕೆಲವು ವಸ್ತುಗಳನ್ನು ಇಟ್ಟಿರುತ್ತಾರೆ. ನಮ್ಮ ಅಹಂ ನಿಂದನಮಗೆ, ನನಗೆ ಇದು ಮೊದಲೇ ತಿಳಿದಿದೆ, ಅದರಲ್ಲಿ ವಿಶೇಷವೇನಿದೆ ? ಎಂದೆನಿಸುತ್ತದೆ. ಆ ಸಮಯದಲ್ಲಿ ಈಶ್ವರನು ನಮ್ಮಲ್ಲಿನ ಕಲಿಯುವ ವೃತ್ತಿಯನ್ನು ಹೆಚ್ಚಿಸಿ ಇಂತಹ ಚಿಕ್ಕ ಚಿಕ್ಕ ವಿಷಯಗಳಿಂದ ಆನಂದ ಪಡೆಯಲು ಕಲಿಸುತ್ತಿರುತ್ತಾನೆ ಎಂಬುದು ನಮ್ಮ ಗಮನಕ್ಕೆ ಬರುವುದಿಲ್ಲ. ಕಲಿಯುವ ವೃತ್ತಿಯು ಕಡಿಮೆಯಾದರೆ ಒತ್ತಡವಾಗುತ್ತದೆ. ಇದು ನನಗೆ ತಿಳಿದಿದೆ ಎಂಬ ನಮ್ಮ ಅಹಂನಿಂದಾಗಿ ನಾವು ಕಲಿಯುವುದಿಲ್ಲ.
. ಒತ್ತಡಕ್ಕೆ ಒಳಗಾಗದಿರುವುದು
ಸಾಧಕನೊಬ್ಬನು ತನಗೆ ಬೆನ್ನು ನೋವಿದೆ, ಎಂದು ಹೇಳಿದನು. ಆದುದರಿಂದ ವರದಿ ಕೊಡುವಾಗ ಮನಸ್ಸಿನ ಪ್ರಕ್ರಿಯೆಯನ್ನು ತಿಳಿಸುವಾಗ ಅವನಿಗೆ ಒತ್ತಡವಾಗುತ್ತಿತ್ತು. ಆಗ ಸಂತರು ಅವರಿಗೆ, ಬೆನ್ನು ನೋವು ಶರೀರಕ್ಕೆ ಸಂಬಂಧಪಟ್ಟಿದೆ ಮತ್ತು ಒತ್ತಡವು ಮಾನಸಿಕವಾಗಿದೆ; ನಾವು ಎಷ್ಟು ನಿರಾಶರಾಗುತ್ತೇವೆಯೋ ಅಷ್ಟು ನಮ್ಮ ಶಾರೀರಿಕ ತೊಂದರೆ ಹೆಚ್ಚಾಗುತ್ತದೆ, ಎಂದರು.
. ಅಂತರ್ಮುಖತೆಯನ್ನು ಹೆಚ್ಚಿಸಿಕೊಳ್ಳುವುದು
ತನ್ನನು ತಾನು ಸದಾ ಅಂತರ್ಮುಖವಾಗಿಟ್ಟು ಕೊಳ್ಳುವುದಕ್ಕೆ ಸರ್ವೋತ್ತಮ ಮಾರ್ಗವೆಂದರೆ ಪ್ರತಿ
ಯೊಂದು ಕ್ಷಣವೂ ‘ನಾನು ಎಲ್ಲಿ ಕಡಿಮೆ ಬೀಳುತ್ತಿ ದ್ದೇನೆ’ ಎಂಬುದನ್ನು ನೋಡಿಕೊಳ್ಳುವುದು. ಮನಸ್ಸಿನ
ಮೋಸಗಾರಿಕೆಯು ಅರಿವಿಗೆ ಬರಬೇಕಾದರೆ ಅಂತರ್ಮುಖತೆಯ ಅಗತ್ಯವಿದೆ. ಅಂತರ್ಮುಖತೆ
ಇರುವುದರಿಂದ ಅಡಚಣೆಗಳ ಕುರಿತು ಚರ್ಚೆಯಾಗುವುದಷ್ಟೇ ಅಲ್ಲದೆ ಅವುಗಳಿಗೆ ಪರಿಹಾರವೂ ಸಿಗುತ್ತದೆ. ಭಾವನಾಪ್ರಧಾನತೆ/ಶೀಲತೆಯಿರುವುದರಿಂದ ಅಂತರ್ಮುಖತೆಯು ಕಡಿಮೆಯಾಗುತ್ತದೆ ಮತ್ತು ನಮಗೆ ಮಾನಸಿಕ ಆಧಾರದ ಆವಶ್ಯಕತೆಯುಂಟಾಗುತ್ತದೆ. ನಮಗೆ ಕೇವಲ ಈಶ್ವರನದ್ದೇ ಆಧಾರವೆನಿಸಬೇಕು.
. ಅಂತರ್ಮುಖತೆ ಬರುವುದಕ್ಕಾಗಿ ದಿನಚರಿ ಬರೆಯುವುದರ ಮಹತ್ವ
ದಿನಚರಿ ಅಂತರ್ಮುಖತೆಯ ಮೊದಲ ಹೆಜ್ಜೆಯಾಗಿರುತ್ತದೆ. ಅದು, ನಾವು ಹೇಗಿದ್ದೇವೆ, ಎಂಬುದನ್ನು ತೋರಿಸುವ ಕನ್ನಡಿಯಾಗಿದೆ. ಅದರಲ್ಲಿ ನಮಗೆ ನಮ್ಮ ಮನಸ್ಸಿನ ಪ್ರಕ್ರಿಯೆಗಳು ಕಾಣುತ್ತವೆ. ದಿನಚರಿಯಿಂದಾಗಿ ನಮಗೆ ಚಿಂತನೆ ಮಾಡಲು ಸಹಾಯವಾಗುತ್ತದೆ, ಉದಾ. ೧೦ ನಿಮಿಷ ತಗಲ ಬೇಕಾದ ಸೇವೆಯನ್ನು ೨೦ ನಿಮಿಷ ಮಾಡಿದರೆ ಆ ಸಮಯದಲ್ಲಿ ನನ್ನ ಮನಸ್ಸಿನ ವಿಚಾರಪ್ರಕ್ರಿಯೆಯು ಹೇಗಿತ್ತು ? ಎಂಬುದನ್ನು ನಾವು ಅಭ್ಯಾಸ ಮಾಡಬಹುದು. ದಿನಚರಿಯಿಂದಾಗಿ ನಾವು ಸಮಯವನ್ನು ಸದುಪಯೋಗ ಮಾಡಿಕೊಳ್ಳುತ್ತೇವೆ. ನನ್ನ ಸಾಧನೆಯು ಉತ್ತಮವಾಗಿ ನಡೆಯುತ್ತಿದೆ ಅಥವಾ ನನ್ನ ಸಮಯವು ಸದುಪಯೋಗವಾಗುತ್ತಿದೆ ಎಂಬ ನಮ್ಮ ಭ್ರಮೆಯು ದಿನಚರಿಯಿಂದಾಗಿ ನಷ್ಟವಾಗುತ್ತದೆ.
.ಬಹಿರ್ಮುಖತೆಯನ್ನು ತಡೆಗಟ್ಟುವುದು
ಬಹಳಷ್ಟು ಬಾರಿ ಸಾಧಕನು ನಮ್ಮ ತಪ್ಪನ್ನು ಹೇಳುತ್ತಿರುವಾಗ ನಾವು ಆತನು ತಪ್ಪನ್ನು ಹೇಳುವ ಪದ್ಧತಿಯ ಕಡೆ ಗಮನ ಕೊಡುತ್ತೇವೆ. ಆಗ ಅದು ನಮ್ಮ ಬಹಿರ್ಮುಖತೆಯಾಗಿರುತ್ತದೆ. ಆ ಸಾಧಕನಲ್ಲಿರುವ ಈ ದೋಷವನ್ನು ನೋಡಿ ನಾವು ಇನ್ನೂ ತಪ್ಪುಗಳನ್ನು ಮಾಡತೊಡಗುತ್ತೇವೆ. ಇಂತಹ ಸಮಯದಲ್ಲಿ ನಾವು, ‘ನಾನು ಈ ತಪ್ಪನ್ನು ಸ್ವೀಕರಿಸಲೇಬೇಕು’ ಎಂಬುದರ ಮೇಲೆಯೇ ಮನಸ್ಸನ್ನು ಕೇಂದ್ರೀಕರಿಸಬೇಕು.
೮ ಅ. ಸಾಧಕನಲ್ಲಿ ಬಹಿರ್ಮುಖತೆಯ ಸರ್ವ ಸಾಮಾನ್ಯ ಹಂತಗಳು
. ಮೊದಲನೆಯ ಹಂತ : ಪ್ರಾರಂಭದಲ್ಲಿ ನಾವು ಅಪರಿಚಿತ ಸಾಧಕರೊಂದಿಗೆ ಜಾಗರೂಕರಾಗಿ ಮಾತನಾಡುತ್ತೇವೆ. ಆಗ ನಮ್ಮಿಂದ ಯಾವುದೇ ತಪ್ಪಾಗಬಾರದು ಎಂಬ ವಿಚಾರವು ನಮ್ಮ ಮನಸ್ಸಿನಲ್ಲಿರುತ್ತದೆ.
. ಎರಡನೆಯ ಹಂತ : ಪರಿಚಯವಾದ ನಂತರ ನಮಗೆ ಕ್ರಮೇಣ ಪರಸ್ಪರರ ಸ್ವಭಾವದೋಷ-ಅಹಂಗಳು ಕಾಣತೊಡಗುತ್ತವೆ. ಆ ಸಮಯದಲ್ಲಿ ಮುಕ್ತಮನಸ್ಸಿನಿಂದ ಮಾತನಾಡದಿರುವುದರಿಂದ ಪೂರ್ವಗ್ರಹಗಳು ನಿರ್ಮಾಣವಾಗುತ್ತವೆ.
. ಮೂರನೆಯ ಹಂತ : ಮನಸ್ಸಿನಲ್ಲಿ ಪೂರ್ವಗ್ರಹವಿರುವುದರಿಂದ ನಾವು ನಮ್ಮ ಗಮನಕ್ಕೆ ಬಂದಿರುವ ಆತನ ಸ್ವಭಾವದೋಷಗಳನ್ನು ಪ್ರತಿಸಲ ಪರೋಕ್ಷವಾಗಿ ತೋರಿಸುತ್ತೇವೆ.
. ನಂತರ ನಾವು ತಮಾಷೆ ಮಾಡಿ ಆ ಸಾಧಕನ ಮನಸ್ಸನ್ನು ನೋಯಿಸುತ್ತೇವೆ. ಇದರಿಂದ ಬಹಿರ್ಮುಖತೆ ಹೇಗೆ ಹೆಚ್ಚಾಗುತ್ತದೆಯೆಂಬುದು ತಿಳಿಯುತ್ತದೆ.
. ಪ್ರತಿಷ್ಠೆಯನ್ನು ಕಾಪಾಡುವುದು
ಪ್ರತಿಷ್ಠೆಯನ್ನು ಕಾಪಾಡುವುದು ಅಥವಾ ತನ್ನ ಮನಸ್ಸಿಗೆ ಬಂದಂತೆ ಮಾಡುವುದು ಎಂಬುದು ಕೇಳಿ ಕೊಳ್ಳದಿರುವುದರ ಕಾರಣವಾಗಿರುತ್ತದೆ.
೧೦. ಚಿಂತನೆಯ ಮಹತ್ವ
ನಮ್ಮ ಸುತ್ತಲೂ ಸ್ವಭಾವದೋಷ ಮತ್ತು ಅಹಂಗಳ ಆವರಣವಿದೆ ಎಂಬುದರ ಅರಿವು ನಮ್ಮಲ್ಲಿ ನಿರ್ಮಾಣವಾಗಬೇಕು. ಆ ಆವರಣವನ್ನು ಚಿಂತನೆಯ ಮೂಲಕವೇ ಭೇದಿಸಬಹುದು. ಆದುದರಿಂದ ಚಿಂತನೆಯು ಬಹಳ ಮಹತ್ವದ್ದಾಗಿದೆ. ಪ್ರಕ್ರಿಯೆಯ ಮಾಧ್ಯಮದಿಂದ ನೀಡಲಾಗುವ ಸಹಾಯದಿಂದಲೇ ಈ ಚಿಂತನೆಯು ಸಾಧ್ಯ.
೧೧. ತಪ್ಪುಗಳ ಬಗ್ಗೆ ದೃಷ್ಟಿಕೋನ
೧೧ ಅ. ತಪ್ಪುಗಳ ಅರಿವಾಗುವುದು : ನಮ್ಮಿಂದ ತಪ್ಪುಗಳಾಗುತ್ತಿರುವಾಗಲೇ ಈಶ್ವರನು ನಮಗೆ ಅದರ ಅರಿವು ಮಾಡಿಕೊಡುತ್ತಾನೆ; ಆದರೆ ನಮ್ಮಲ್ಲಿರುವ ಸ್ವಭಾವದೋಷಗಳಿಂದಾಗಿ ನಾವು ಅದರೆಡೆ ದುರ್ಲಕ್ಯ ಮಾಡುತ್ತೇವೆ, ಉದಾ. ನಾಮಜಪವು ಸಂಪೂರ್ಣವಾಗದಿದ್ದರೆ ಅದನ್ನು ಗಮನಿಸದಿರುವುದು, ಯಾವು ದಾದರೊಂದು ಕಾರ್ಯಪದ್ಧತಿಯನ್ನು ಪಾಲಿಸದಿರುವುದು, ಸಮಯಕ್ಕೆ ಸರಿಯಾಗಿ ಮಾಡಬೇಕಾದ ಬರವಣಿಗೆಯನ್ನು ಮಾಡದಿರುವುದು ಇತ್ಯಾದಿ. ಒಂದು ವೇಳೆ ನಾವು ಅದೇ ಸಮಯದಲ್ಲಿ ಜಾಗೃತರಾಗಿದ್ದು ಆ ತಪ್ಪನ್ನು ಸುಧಾರಿಸಲು ಪ್ರಯತ್ನಿಸಿದರೆ ಆ ವಿಷಯದ ಗಾಂಭೀರ್ಯವು ಹೆಚ್ಚಾಗಿ ಸಾಧನೆಯಲ್ಲಾಗುವ ಹಾನಿಯು ತಪ್ಪುತ್ತದೆ.
೧೧ ಆ. ಪ್ರಶಂಸೆಯ ಕಡೆ ಹೆಚ್ಚು ಗಮನ ಹರಿಸುವ ಕಾರಣ ತಪ್ಪುಗಳ ಕಡೆ ದುರ್ಲಕ್ಯವಾಗುವುದು : ಕೆಲವೊಮ್ಮೆ ನಮಗೆ ನಮ್ಮ ತಪ್ಪುಗಳು ಕಡಿಮೆಯಾಗಿವೆ ಎಂದೆನಿಸುತ್ತದೆ. ಆಗ ನಮ್ಮ ಗಮನವು ಪ್ರಶಂಸೆಯ ಕಡೆಗೆ ಹೊರಳುತ್ತದೆ. ಇಂತಹ ಸಮಯದಲ್ಲಿ ನಾವು ಎಲ್ಲಿ ತಪ್ಪುತ್ತಿದ್ದೇವೆ ಎಂಬುದರ ಅರಿವಿದ್ದರೆ, ಯಾರೇ ಎಷ್ಟೇ ಪ್ರಶಂಸೆ ಮಾಡಿದರೂ ನನ್ನಿಂದ ಎಷ್ಟು ತಪ್ಪುಗಳಾಗುತ್ತವೆ ಎಂಬುದು ನನಗೆ ತಿಳಿದಿದೆ ಎಂಬ ವಿಚಾರವು ಮನಸ್ಸಿಗೆ ಬಂದು, ಪ್ರಶಂಸೆಯಿಂದ ದಾರಿ ತಪ್ಪದೇ ವಾಸ್ತವಿಕತೆಯನ್ನಾಧರಿಸಿ ಪ್ರಯತ್ನಗಳಾಗುತ್ತವೆ.
೧೧ ಇ. ತಪ್ಪುಗಳನ್ನು ಸ್ವೀಕರಿಸುವುದು
. ಎಲ್ಲಿಯ ತನಕ ನಾವು ನಮ್ಮ ತಪ್ಪುಗಳನ್ನು ಸ್ವೀಕರಿಸುವುದಿಲ್ಲವೋ ಅಲ್ಲಿಯ ತನಕ ನಮ್ಮ ಪಾಪಗಳ ಪರಿಮಾರ್ಜನೆ ಆಗುವುದಿಲ್ಲ.
. ನಮ್ಮಿಂದ ಆಗುವ ಪ್ರತಿಯೊಂದು ತಪ್ಪಿನಿಂದಲೂ ನಾವು ಕಲಿಯಬೇಕು, ನಮ್ಮ ತಪ್ಪುಗಳ ಬಗ್ಗೆ ಚಿಂತನೆ ಮಾಡಬೇಕು. ಅದರಿಂದ ಮುಂದಾಗುವ ೧೦ ತಪ್ಪುಗಳನ್ನು ನಾವು ಸುಧಾರಿಸಿಕೊಳ್ಳಬಹುದು.
. ಸಾಧಕಿಯೊಬ್ಬಳಿಗೆ, ಇತರರು ನನ್ನ ತಪ್ಪನ್ನು ಹೇಳುವ ಮೊದಲೇ ನಾನು ನನ್ನ ತಪ್ಪನ್ನು ಹೇಳುತ್ತೇನೆ ಎಂದೆನಿಸುತ್ತಿತ್ತು. ಅಲ್ಲಿ ಪ್ರತಿಷ್ಠೆ ಕಾಪಾಡಿಕೊಳ್ಳುವ ಅಹಂ ಇರುತ್ತದೆ. ಇತರ ಸಾಧಕರು ನಮ್ಮ ತಪ್ಪನ್ನು ಹೇಳಿ
ದಾಗ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಅಹಂ ನಿರ್ಮೂಲನೆಯಾಗುತ್ತದೆ. ಆದ್ದರಿಂದ ನಾವು ತಾವಾಗಿಯೇ ಇತರರಲ್ಲಿ ನಮ್ಮ ತಪ್ಪುಗಳನ್ನು ಕೇಳಿಕೊಳ್ಳಬೇಕು.
೧೧ ಈ. ಪ್ರಕ್ರಿಯೆಗಿಂತಲೂ ಭಾವಜಾಗೃತಿಯ ಪ್ರಯತ್ನವು ಹೆಚ್ಚು ಇಷ್ಟವಾಗುತ್ತಿದ್ದರೆ ಪ್ರಕ್ರಿಯೆಗೆ ಪ್ರಾಧಾನ್ಯತೆಯನ್ನು ಕೊಟ್ಟು ಆನಂದವನ್ನು ಪಡೆಯುವುದು : ಒಬ್ಬ ಸಾಧಕನಿಂದ ಭಾವಜಾಗೃತಿಯ ಪ್ರಯತ್ನವು ಉತ್ತಮವಾಗಿ ನಡೆಯುತ್ತಿತ್ತು; ಆದರೆ ಸ್ವಭಾವದೋಷ-ಅಹಂಗಳ ನಿರೀಕ್ಷಣೆಯಲ್ಲಿ ಪ್ರಯತ್ನ ಕಡಿಮೆಯಾಗುತ್ತಿತ್ತು. ಭಾವಜಾಗೃತಿಯ ಪ್ರಯತ್ನ ಮಾಡುವುದು ಮನಸ್ಸಿಗೆ ಒಳ್ಳೆಯದೆನಿಸುತ್ತದೆ; ಆದರೆ ಸ್ವಭಾವದೋಷ-ಅಹಂಗಳ ನಿರೀಕ್ಷಣೆ, ಅದಕ್ಕಾಗಿ ಸ್ವಯಂಸೂಚನೆ ಕೊಡುವುದು ಮತ್ತು ಬರೆಯುವುದು ಮನಸ್ಸಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ನಾವು ಅದರ ಕಡೆ ದುರ್ಲಕ್ಯ ಮಾಡುತ್ತೇವೆ. ಇದಕ್ಕೆ ಪರಿಹಾರವೆಂದು ಪ್ರಾರ್ಥನೆ ಮಾಡಿ ಈ ಪ್ರಕ್ರಿಯೆಯನ್ನು ಸ್ವೀಕರಿಸಬೇಕು. ಶರಣಾಗತಿಯ ಮೂಲಕ ಈ ಪ್ರಕ್ರಿಯೆಯಲ್ಲಿನ ಆನಂದವನ್ನು ಪಡೆದುಕೊಳ್ಳಬೇಕು
 ೧೧ ಉ. ಅಡಚಣೆಗಳು ಅಥವಾ ಪ್ರಸಂಗಗಳಲ್ಲಿ ಸಿಲುಕಿಕೊಳ್ಳುವುದು : ಅಡಚಣೆಗಳು ಬಂದಾಗ ನಾವು ಅವುಗಳಲ್ಲಿಯೇ ಸಿಲುಕಿಕೊಂಡರೆ ಅಥವಾ ನಮ್ಮ ಗಮನವು ಹೆಚ್ಚಾಗಿ ಅವುಗಳೆಡೆ ಹೋದರೆ ಅದರಿಂದ ಅಸ್ಥಿರತೆಯು ಉಂಟಾಗುತ್ತದೆ ಮತ್ತು ಸಮಸ್ಯೆಗಳು ಹೆಚ್ಚಾಗುತ್ತವೆ. ಸಮಸ್ಯೆಗಳು ಬಂದಾಗ ಸ್ಥಿರವಾಗಿದ್ದು ಅದನ್ನು ಸಾಧನೆಯೆಂದು ಸ್ವೀಕರಿಸಿದರೆ ಅಥವಾ ಈ ಅಡಚಣೆಯಲ್ಲಿ ಈಶ್ವರನೇ ನನಗೆ ಸಹಾಯ ಮಾಡುವನು ಎಂಬ ಭಾವವಿದ್ದರೆ ನಾವು ಪರಿಹಾರವನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಮುಂದೆ ಸಾಗುತ್ತೇವೆ, ಇತರರಿಂದ ಸಹಾಯವನ್ನು ಪಡೆದುಕೊಳ್ಳುತ್ತೇವೆ. ನಮ್ಮಲ್ಲಿನ ಕರ್ತೃತ್ವದ ಭಾವನೆಯಿಂದಾಗಿ ನಾವು ಪರಿಹಾರವನ್ನು ಕಂಡುಕೊಳ್ಳದೆ ನಮ್ಮ ಹಂತದಲ್ಲಿಯೇ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ನಮ್ಮ ಮನಸ್ಸಿಗನುಸಾರ ನಡೆಯದಿದ್ದಾಗ ಆ ಪ್ರಸಂಗದಲ್ಲಿ ಸಿಲುಕಿಕೊಳ್ಳುವ ಸಂದರ್ಭ ಉಂಟಾಗುತ್ತದೆ. ಕೇಳಿ ಕೊಂಡು ಮಾಡುವುದು ಅಹಂ ಹೆಚ್ಚಾಗದಿರುವುದಕ್ಕೆ ಶಸ್ತ್ರವಾಗಿದೆ. ಮನಸ್ಸಿನ ವಿರುದ್ಧ ನಡೆಯುವ ಪ್ರಸಂಗವು ಘಟಿಸಿದಾಗ ಅದರಲ್ಲಿ ಸಿಲುಕಿಕೊಳ್ಳುತ್ತೇವೆ ಮತ್ತು ಅದರಿಂದ ಉತ್ಸಾಹವು ಕಡಿಮೆಯಾಗುತ್ತದೆ. ನಾವು ಪ್ರಸಂಗದೆಡೆ ಕಲಿಯುವ ದೃಷ್ಟಿಯಿಂದ ನೋಡಿದರೆ ಅದರಲ್ಲಿ ಸಿಲುಕುವುದಿಲ್ಲ.
೧೧ ಊ. ವಿಚಾರಗಳಲ್ಲಿನ ಸಕಾರಾತ್ಮಕತೆ : ವಿಚಾರ ಮಾಡುವುದು ಮನಸ್ಸಿನ ಕಾರ್ಯವೇ ಆಗಿದೆ. ನಾವು ಈ ವಿಚಾರಗಳನ್ನು ಸ್ವಾಗತಿಸದೇ, ಅವುಗಳಕಡೆ ನಿರ್ಲಕ್ಯ ಮಾಡಬೇಕು. ಆ ಸಮಯದಲ್ಲಿ ನಾಮಜಪವನ್ನು ಮಾಡಬೇಕು. ಸದಾ ಸಕಾರಾತ್ಮಕವಾಗಿ ವಿಚಾರ ಮಾಡ ಬೇಕು. ಹಲವು ನಕಾರಾತ್ಮಕ ವಿಚಾರಗಳ ತುಲನೆಯಲ್ಲಿ ಒಂದು ಸಕಾರಾತ್ಮಕ ವಿಚಾರದಲ್ಲಿ ಹೆಚ್ಚಿನ ಶಕ್ತಿಯಿರುತ್ತದೆ. ತನ್ನ ಅಭಿಪ್ರಾಯದಲ್ಲಿಯೇ ದೃಢವಾಗಿರುವುದ ರಿಂದ ನಾವು ನಕಾರಾತ್ಮಕ ವಿಚಾರಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ ಮತ್ತು ಆಗ ನಮ್ಮಲ್ಲಿ ಇತರರು ಹೇಳುವುದನ್ನು ಕೇಳುವ ಸ್ಥಿತಿಯೂ ಇರುವುದಿಲ್ಲ. ನಕಾರಾತ್ಮಕ ವಿಚಾರಗಳಿಂದ ಕಪ್ಪು ಶಕ್ತಿಯ ಆವರಣವು ನಿರ್ಮಾಣವಾಗುತ್ತದೆ ಮತ್ತು ಯಾರಾದರೂ ನಮಗೆ ಸಹಾಯ ಮಾಡುತ್ತಿದ್ದರೂ ಅದು ತಿಳಿಯುವುದಿಲ್ಲ. ಸದಾ ಕಲಿಯುವ, ಕೇಳಿಸಿಕೊಳ್ಳುವ ಹಾಗೂ ಕೇಳುವ ಸ್ಥಿತಿಯಲ್ಲಿದ್ದರೆ ನಮಗೆ ತೊಂದರೆಯಾಗುವುದಿಲ್ಲ, ಆವರಣ ಬರುವುದಿಲ್ಲ ಮತ್ತು ಅಲ್ಪಸಂತುಷ್ಟತೆಯು ಕಡಿಮೆಯಾಗುತ್ತದೆ. ಈಶ್ವರನಿಗೆ ಶರಣಾಗುವುದ ರಿಂದಲೇ ಇದು ತಿಳಿಯುತ್ತದೆ.
೧೧ ಎ. ತಪ್ಪು ದೃಷ್ಟಿಕೋನಗಳನ್ನು ಇಟ್ಟುಕೊಳ್ಳ ದಿರುವುದರ ಮಹತ್ವ
. ನನ್ನ ಸಾಧನೆಯ ವಿಷಯದ ದೃಷ್ಟಿಕೋನಗಳು ಸರಿಯಾಗಿವೆಯೇ ಎಂದು ನಮ್ಮನ್ನೇ ನಾವು ಕೇಳಿಕೊಳ್ಳಬೇಕು. ಅದೇರೀತಿ ವಿಚಾರಗಳ ದಿಕ್ಕು ಸರಿಯಾಗಿದೆಯೇ ಎಂಬುದನ್ನೂ ಕೇಳಿಕೊಳ್ಳಬೇಕು. ಹೀಗೆ ಮಾಡದಿದ್ದರೆ ತಪ್ಪು ದೃಷ್ಟಿಕೋನಗಳಿಂದಾಗಿ ದೋಷಗಳ ತೀವ್ರತೆಯು ಹೆಚ್ಚಾಗುವ ಸಾಧ್ಯತೆಯಿರು ತ್ತದೆ. ಸಕಾರಾತ್ಮಕ ವಿಚಾರಗಳು ಮತ್ತು ಯೋಗ್ಯ ದೃಷ್ಟಿಕೋನ ಇವುಗಳು ಮನಸ್ಸನ್ನು ಸ್ವಚ್ಛಗೊಳಿಸುತ್ತವೆ.
. ಸಾಧಕಿಯೊಬ್ಬಳು ಇತರರೊಂದಿಗೆ ಆತ್ಮೀಯತೆ ಬೆಳೆಸುವ ಸಲುವಾಗಿ ಬರೆಯಲು ಕೊಡಬೇಕಾಗಿದ್ದ ಸಮಯವನ್ನು ಇತರರ ಜೊತೆಗೆ ಮಾತನಾಡುವುದಕ್ಕೆ ಕೊಟ್ಟಳು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಇತರರ ಜೊತೆ ಆತ್ಮೀಯತೆ ಹೆಚ್ಚಿಸುವ ಪ್ರಯತ್ನಗಳ ಪರಿಣಾಮ ತನ್ನ ವ್ಯಷ್ಟಿ ಸಾಧನೆಯ ಮೇಲೆ ಆಗ
ಬಾರದು. ಆತ್ಮೀಯತೆ ಹೆಚ್ಚಿಸುವಾಗ ನಾವು ಭಾವನೆಯಲ್ಲಿ ಸಿಲುಕುತ್ತೇವೆಯೇ ಎಂಬುದನ್ನು ಗಮನಿಸಿಕೊಳ್ಳ ಬೇಕು. ನಮ್ಮ ತಪ್ಪುಗಳನ್ನು ನಾವು ಪ್ರಾಮಾಣಿಕತನದಿಂದ ಹಾಗೂ ಸಹಸಾಧಕರ ತಪ್ಪುಗಳನ್ನು ಮುಕ್ತಮನಸ್ಸಿನಿಂದ ಹೇಳುವುದೇ ನಿಜವಾದ ಆತ್ಮೀಯತೆಯಾಗಿದೆ. ಇದರಿಂದಲೇ ಅಂತರ್ಮುಖತೆ ಬರುತ್ತದೆ.
೧೧ ಏ. ಇತರ ಅಂಶಗಳು
. ಪ್ರಕ್ರಿಯೆಯಲ್ಲಿರುವಾಗ ಮನಸ್ಸಿನಲ್ಲಿ ಬರುವ ಅಹಂಯುಕ್ತ ವಿಚಾರಗಳನ್ನು ಹೇಳುವಾಗ ನಮ್ಮಲ್ಲಿ ಅಪರಾಧಿಭಾವವಿಲ್ಲದಿದ್ದರೆ ಅದು ಅಪಾಯಕಾರಿಯಾಗಿರುತ್ತದೆ. ನಮ್ಮ ಮನಸ್ಸಿಗೆ ಬರುವ ಸಣ್ಣಸಣ್ಣ ವಿಚಾರ ವನ್ನು ಸಹ ಹೇಳುತ್ತೇವೆ ಎಂಬ ಕರ್ತೃತ್ವದ ವಿಚಾರವು ಮನಸ್ಸಿಗೆ ಬರುತ್ತದೆ. ಇದರಿಂದ ಜಾಗರೂಕರಾಗಿರಬೇಕು.
. ತೋರಿಕೆ ಎಂಬುದು ಅಹಂನ ಅಂಶವಾಗಿರುವುದರಿಂದ ಸೇವೆಯ ಫಲನಿಷ್ಪತ್ತಿಯು ಶೂನ್ಯವಾಗುತ್ತದೆ. ನಾನು ವರದಿಯಲ್ಲಿ ಅಹಂನ ಪ್ರಸಂಗಗಳನ್ನು ಅತ್ಯಂತ ಮುಕ್ತವಾಗಿ ಹೇಳಿದೆ ಎಂಬ ಅಪಾಯಕಾರಿ ಅಹಂ ಬರುವ ಸಾಧ್ಯತೆಯಿರುತ್ತದೆ ಮತ್ತು ಅದರಿಂದ ಪ್ರಕ್ರಿಯೆಯಲ್ಲಿ ದಿಕ್ಕು ತಪ್ಪಬಹುದು.
. ನಾವು ನಮ್ಮ ಅಹಂನ್ನು ಎಷ್ಟು ಕಾಪಾಡಿ ಕೊಳ್ಳುವೆವೋ, ಅಷ್ಟು ನಮ್ಮ ಅಧೋಗತಿಯಾಗುತ್ತದೆ ಮತ್ತು ಅಹಂನ ವಿಚಾರಗಳನ್ನು ಎಲ್ಲರಿಗೂ ಹೇಳುವುದರಿಂದ ನಮ್ಮ ಪ್ರಗತಿಯಾಗುತ್ತದೆ.
. ಮನಸ್ಸು ಶುದ್ಧವಾಗಿದ್ದರೆ ಆವರಣವು ಕಡಿಮೆಯಾಗುತ್ತದೆ ಮತ್ತು ಅದರಿಂದ ಕೆಟ್ಟಶಕ್ತಿಗಳ ಆಕ್ರಮಣಗಳೂ ಕಡಿಮೆಯಾಗುತ್ತವೆ.
. ನಾವು ಯಾರಿಗಾದರೂ ಭಾವನಾಪ್ರಧಾನರಾಗಿ ಸಹಾಯ ಮಾಡಿದರೆ ಸಮಯ ಬಂದಾಗ ಆತನೂ ನನಗೆ ಸಹಾಯ ಮಾಡಬೇಕೆಂಬ ಅಪೇಕ್ಷೆಯು ನಿರ್ಮಾಣವಾಗುತ್ತದೆ. ಭಾವನೆಯಲ್ಲಿ ತತ್ತ್ವನಿಷ್ಠೆಯಿರು ವುದಿಲ್ಲ. ಆದುದರಿಂದ ಭಾವನಾಪ್ರಧಾನರಾಗಿ ಕೃತಿ ಮಾಡಿದರೆ ಭಾವವು ಹೆಚ್ಚಾಗುವುದಿಲ್ಲ.
. ರಿಯಾಯತಿ ಪಡೆದುಕೊಳ್ಳುವುದು ಎಂದರೆ ಪರಿಸ್ಥಿತಿಯಿಂದ ಓಡಿ ಹೋಗುವುದು
. ವರದಿ ಕೊಡುವುದು ಮಹತ್ವದ್ದಾಗಿದೆ. ವರದಿ ಕೊಡದಿರುವುದರಿಂದ ತನ್ನ ಮನಸ್ಸಿನಂತೆ ಮಾಡುವುದರ ಪ್ರಮಾಣವು ಹೆಚ್ಚಾಗುತ್ತದೆ.
- ಸೌ. ಸುಪ್ರಿಯಾ ಮಾಥುರ್, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಾಧಕರೇ, ಈ ಲೇಖನವನ್ನು ಸಂಗ್ರಹವನ್ನಿಟ್ಟುಕೊಳ್ಳಿರಿ. ಅದರಿಂದಾಗಿ ನಾವು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಗಳ ಪ್ರಕ್ರಿಯೆಗಾಗಿ ಸನಾತನದ ಆಶ್ರಮಕ್ಕೆ ಹೋಗಬೇಕಾಗುವುದಿಲ್ಲ. ಈ ಪ್ರಕ್ರಿಯೆಯನ್ನು ಮನೆಯಲ್ಲಿಯೇ ಇದ್ದುಕೊಂಡು ಅನುಸರಿಸಿ ಸಾಧನೆಯಲ್ಲಿ ಶೀಘ್ರ ಪ್ರಗತಿ ಹೊಂದುವಿರಿ. ರಾಮನಾಥಿ ಆಶ್ರಮದಲ್ಲಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಹೇಗೆ ಶೀಘ್ರ ಗತಿಯಲ್ಲಿ ಸ್ವಭಾವದೋಷ ನಿರ್ಮೂಲನೆ ಹಾಗೂ ಅಹಂ ನಿರ್ಮೂಲನೆ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ನನಗೆ ಕುತೂಹಲವಿತ್ತು. ಅದು
ಸೌ. ಸುಪ್ರಿಯಾ ಮಾಥುರ್ ಇವರ ಈ ಲೇಖನದಿಂದ ಸ್ಪಷ್ಟವಾಯಿತು. ನನ್ನಿಂದ ಹೇಳಲಾಗದಂತಹ ಸುಲಭ ಭಾಷೆಯಲ್ಲಿ ಸೌ. ಸುಪ್ರಿಯಾ ಮಾಥುರ್ ಇವರು ಪ್ರಕ್ರಿಯೆಯನ್ನು ಹೇಳಿದ್ದಾರೆ. ಸೌ. ಸುಪ್ರಿಯಾ ಮಾಥುರ್ ಇವರಿಗೆ ಅಭಿನಂದನೆಗಳು ! - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಗಳು