ಹಗಲಿರುಳು ಸೇವೆಯದ್ದೇ ಧ್ಯಾಸವಿರುವ ಹಾಗೂ ತತ್ತ್ವನಿಷ್ಠರಾಗಿದ್ದು ನಿಜವಾಗಿಯೂ ಸಾಧಕರನ್ನು ಸಿದ್ಧಪಡಿಸುವ ಅದ್ವಿತೀಯ ಸಂತರತ್ನ ಸದ್ಗುರು (ಸೌ.) ಬಿಂದಾ ಸಿಂಗಬಾಳ !

ವಿವಿಧ ಪ್ರಶ್ನೆಗಳ ಮೂಲಕ ಪೂ. (ಸೌ.) ಬಿಂದಾ ಸಿಂಗಬಾಳ
(ಬಲ ಬದಿಯಲ್ಲಿ) ಇವರ ಸಾಧನೆಯ ಪ್ರವಾಸವನ್ನು ಬಿಚ್ಚಿಟ್ಟ
ಪೂ. (ಸೌ.) ಅಂಜಲಿ ಗಾಡಗೀಳ (ಎಡ ಬದಿಯಲ್ಲಿ)
ಸದ್ಗುರು (ಸೌ.) ಅಂಜಲಿ ಗಾಡಗೀಳ (ಎಡಬದಿಯಲ್ಲಿ) ಇವರು ವಿವಿಧ ಪ್ರಶ್ನೆಗಳ ಮೂಲಕ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಸಾಧನೆಯ ಪ್ರವಾಸವನ್ನು ತಿಳಿದುಕೊಂಡರು. ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆಗಾಗಿ ಅಖಂಡವಾಗಿ ಕಾರ್ಯನಿರತರಾಗಿರುವ ಹಾಗೂ ಸಾಕ್ಷಾತ್ ಮಹರ್ಷಿಗಳು ಗೌರವಿಸಿದ ಸನಾತನದ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಜುಲೈ ೨೪ ರಂದು ಸದ್ಗುರು ಪದವಿಯಲ್ಲಿ ವಿರಾಜಮಾನರಾದರು. ಈ ಭಾವಸಮಾರಂಭದ ವೈಶಿಷ್ಯವೆಂದರೆ ಅವರಿಬ್ಬರೂ ಪರಸ್ಪರರಿಗೆ ಪ್ರಶ್ನೆಗಳನ್ನು ಕೇಳಿ ಅದರ ಮೂಲಕ ಪರಸ್ಪರರ ಸಾಧನೆಯ ಪ್ರವಾಸವನ್ನು ತಿಳಿದುಕೊಂಡರು. ಈ ಸಂಭಾಷಣೆಯಿಂದ ಸನಾತನದ ಸಂತರಲ್ಲಿರುವ ದುರ್ಲಭ ಹಾಗೂ ಅಮೂಲ್ಯವಾದ ಗುಣಗಳನ್ನು ಅನುಭವಿಸುವ ಅವಕಾಶವು ಎಲ್ಲ ಸಾಧಕರಿಗೂ ಲಭಿಸಿತು. ಸನಾತನದ ಎಲ್ಲ ಸಾಧಕರಿಗೆ ಈ ಅಮೂಲ್ಯ ಸಂತರತ್ನಗಳ ಗುಣವೈಶಿಷ್ಯಗಳು ತಿಳಿಯಬೇಕೆಂದು ಈ ಸಾಧನೆಯ ಪ್ರವಾಸವನ್ನು ಲೇಖನದ ಮೂಲಕ ವಿವರಿಸಲಾಗಿದೆ. ಶ್ರೀಕೃಷ್ಣನು ಸನಾತನದ ಸಾಧಕರಿಗೆ ಇಂತಹ ಶ್ರೇಷ್ಠ ಸಂತರ ಸಾನಿಧ್ಯದಲ್ಲಿರುವ ಅವಕಾಶವನ್ನು ನೀಡಿದ್ದಾನೆ, ಅದಕ್ಕಾಗಿ ಅವನ ಚರಣಗಳಲ್ಲಿ ಕೃತಜ್ಞತೆಗಳು !
ಈ ಲೇಖನದಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳರು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ಪ್ರಶ್ನೆಗಳನ್ನು ಕೇಳಿದಾಗ ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ನಿರ್ವಹಿಸುವಾಗ ಭಗವಂತನಿಂದ ಸಿಗುವ ಸಹಾಯ, ಗುರುಗಳ ಬಗ್ಗೆ ಇರುವ ತುಡಿತ ಹಾಗೂ ಸಾಧಕರನ್ನು ಸಿದ್ಧಪಡಿಸಲು ದೇವರ ಕೃಪೆಯಿಂದಾಗುವ ಆಧ್ಯಾತ್ಮಿಕ ಸ್ತರದಲ್ಲಿನ ಪ್ರಯತ್ನ ಇತ್ಯಾದಿ ವಿಷಯದಲ್ಲಿ ಮಾಡಿದ ಮಾರ್ಗದರ್ಶನವನ್ನು ನೀಡಲಾಗಿದೆ.
೧. ಚೈತನ್ಯದಿಂದ ಸಹಜವಾಗಿ ಕಾರ್ಯವಾಗುವುದು ಹಾಗೂ ನಿರಂತರ ಗುರುಕಾರ್ಯದ್ದೇ ವಿಚಾರವಿರುವುದು
ಸದ್ಗುರು(ಸೌ.) ಅಂಜಲಿ ಗಾಡಗೀಳ : ನಿಮ್ಮಿಂದ ಅನೇಕ ಸಾಧಕರು ಸೇವೆ ಹಾಗೂ ಸಾಧನೆಗೆ ಸಂಬಂಧಿತ ಅಡಚಣೆಗಳ ಬಗ್ಗೆ ಮಾರ್ಗದರ್ಶನ ಪಡೆದುಕೊಳ್ಳುತ್ತಾರೆ. ಅದರೊಂದಿಗೆ ಅಖಿಲ ಭಾರತೀಯ ಹಿಂದೂ ಅಧಿವೇಶನ, ಸಾಧಕರ ಕಾರ್ಯಾಗಾರ ಮುಂತಾದ ಪ್ರಾಸಂಗಿಕ ಸೇವೆಗಳು ಸಹ ಇರುತ್ತವೆ. ಇವೆಲ್ಲವನ್ನೂ ನೀವು ಹೇಗೆ ನಿರ್ವಹಿಸುತ್ತೀರಿ ?

ಸದ್ಗುರು (ಸೌ.) ಬಿಂದಾ ಸಿಂಗಬಾಳ :
೧ ಅ. ನಾನು ಸ್ವತಃ ಏನೂ ಮಾಡದೆ ಈಶ್ವರನ ಚೈತನ್ಯವೇ ಎಲ್ಲವನ್ನೂ ಮಾಡುತ್ತಿರುವುದರ ಅರಿವಾಗುವುದು : ಅಧ್ಯಾತ್ಮಪ್ರಸಾರ ಬುದ್ಧಿಯಿಂದಲ್ಲ, ಆಂತರಿಕ ಪ್ರೇರಣೆಯಿಂದ ಆಗುತ್ತದೆ. ಅದೇರೀತಿ ಆಶ್ರಮದಲ್ಲಿನ ಸೇವೆಗಳೂ ಬುದ್ಧಿಯಿಂದಾಗದೆ ಆಂತರಿಕ ಪ್ರೇರಣೆಯಿಂದ ಆಗುತ್ತವೆ. ನಾವು ಏನೂ ಮಾಡದೆ ಚೈತನ್ಯದ ದೊಡ್ಡ ಪ್ರವಾಹವೇ ಕಾರ್ಯನಿರತವಾಗಿದೆ, ಎಂದು ಹೇಳಲಾಗುತ್ತದೆ. ಈಶ್ವರನೇ ಎಲ್ಲವನ್ನೂ ಮಾಡುತ್ತಿದ್ದು ನಾವು ಕೇವಲ ಆನಂದವನ್ನು ಅನುಭವಿಸುತ್ತಿದ್ದೇವೆ. ಅವನ ಕೃಪೆಯೇ ನಮ್ಮ ಮಾಧ್ಯಮದಿಂದ ಕಾರ್ಯ ಮಾಡುತ್ತಿದೆ, ಎಂಬುದು ಕಳೆದ ಅನೇಕ ದಿನಗಳಿಂದ ಅನುಭವಿಸಲು ಸಿಗುತ್ತಿದೆ. ಸಾಧಕರೊಂದಿಗೆ ಮಾತನಾಡುವಾಗ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ಚೈತನ್ಯದ ಸುನಾಮಿಯೇ ಬಂದಿರು ವಂತೆ ಮಾತನಾಡುವುದಾಗುತ್ತದೆ. ಈ ಚೈತನ್ಯದಿಂದ ಎಲ್ಲವೂ ಸಹಜವಾಗಿ ಹಾಗೂ ತನ್ನಿಂತಾನೇ ಆಗುತ್ತದೆ.

೧ ಆ. ಬಾಯಾರಿಕೆ, ಹಸಿವೆ ಮತ್ತು ವಿಶ್ರಾಂತಿಯನ್ನು ಮರೆತು ಗುರುಕಾರ್ಯ ಮಾಡುವುದು : ಹಗಲಿರುಳು ಎಷ್ಟೇ ಸೇವೆ ಮಾಡಿದರೂ ಇನ್ನೂ ಮಾಡೋಣ, ಎಂದೆನಿಸುತ್ತದೆ. ವಿಶ್ರಾಂತಿಗಾಗಿ ರಾತ್ರಿ ಕಣ್ಣು ಮುಚ್ಚಲೇಬಾರದು, ಕೇವಲ ಸೇವೆಯಲ್ಲಿಯೇ ಇರಬೇಕು, ಎಂದೆನಿಸುತ್ತದೆ. ಗುರುಕಾರ್ಯದ ವ್ಯಾಪ್ತಿ ಹೇಗೆ ಹೆಚ್ಚಿಸುವುದು ? ಎಂಬ ವಿಚಾರವೇ ಇರುತ್ತದೆ. ಆದ್ದರಿಂದ ಊಟ-ನಿದ್ರೆ ಇತ್ಯಾದಿ ನೆನಪಾಗುವುದೇ ಇಲ್ಲ. ಮಾಡುವವರು ದೇವರೇ. ಈಗ ಮಾಡುತ್ತಿರುವ ಕಾರ್ಯ ಏನೂ ಇಲ್ಲ. ನಮಗೆ ಇನ್ನೂ ಬಹಳಷ್ಟು ಮಾಡಲಿಕ್ಕಿದೆ, ಎಂದು ಅನಿಸುತ್ತದೆ.

೧ ಇ. ಸಾಧಕರೇ ನಿಜವಾದ ಸಂಪತ್ತು ಎಂದು ಅನಿಸುವುದು ಹಾಗೂ ಅವರಿಗಾಗಿ ದೇಹವನ್ನು ಸವೆಸುವ ವಿಚಾರ ಬರುವುದು : ಕೆಲವೊಮ್ಮೆ ಸೇವೆ ತುಂಬ ಇರುವಾಗ ಸಾಧಕರ ಅಡಚಣೆಗಳನ್ನು ನಿವಾರಿಸಲು ಸಮಯ ಸಿಗದಿದ್ದರೂ ಸಾಧಕರು ಅರ್ಥಮಾಡಿಕೊಳ್ಳುತ್ತಾರೆ. ತಾವೇ ಸ್ವತಃ ಜವಾಬ್ದಾರಿಯಿಂದ ಸೇವೆಯಲ್ಲಿನ ಅಡಚಣೆಯನ್ನು ನಿವಾರಿಸುತ್ತಾರೆ. ಪ.ಪೂ. ಡಾಕ್ಟರರು ಹೇಳುವಂತೆ, ಸಾಧಕರೇ ನಿಜವಾದ ಸಂಪತ್ತಾಗಿದ್ದಾರೆ, ಎಂದು ಅನಿಸುತ್ತದೆ. ಸಾಧಕರೊಂದಿಗೆ ಏಕರೂಪವಾಗಿ ಅವರ ಅಡಚಣೆಗಳನ್ನು ನಿವಾರಿಸುತ್ತಾ ಕೊನೆಯ ಉಸಿರು ಇರುವ ವರೆಗೆ ಅವರಿಗಾಗಿ ದೇಹವನ್ನು ಸವೆಸಲಿಕ್ಕಿದೆ. ಎಲ್ಲ ಆಶ್ರಮಗಳಲ್ಲಿ ಹಾಗೂ ಪ್ರಸಾರದಲ್ಲಿ ನಡೆಯುವ ಕಾರ್ಯವು ಕೇವಲ ಈಶ್ವರ, ಮಹರ್ಷಿಗಳು ಮತ್ತು ಸಂತರ ಕೃಪೆಯಿದ ಹಾಗೂ ಸಾಧಕರ ಪ್ರೇಮದಿಂದಲೇ ನಡೆಯುತ್ತಿದೆ.

೨. ಸಾಧಕರ ಕಾಳಜಿ ಹೇಗೆ ವಹಿಸಬೇಕೆಂದು ದೇವರೇ ತಾಯಿಯಂತೆ ಮಾರ್ಗದರ್ಶನ ಮಾಡುವುದು !

ಸದ್ಗುರು (ಸೌ.) ಅಂಜಲಿ ಗಾಡಗೀಳ : ಪ್ರತಿಯೊಬ್ಬ ಸಾಧಕನ ಪ್ರಕೃತಿಯನ್ನು ಗುರುತಿಸಿ ಅದಕ್ಕನುಸಾರ ನೀವು ಹೇಗೆ ಮಾರ್ಗದರ್ಶನ ಮಾಡುತ್ತೀರಿ ? ಸಾಧಕರಿಗೆ ಮಾರ್ಗದರ್ಶನ ಮಾಡಿದ ನಂತರ ಅವರಿಗೆ ಒತ್ತಡ ನಿರ್ಮಾಣವಾಗುವ ಸಾಧ್ಯತೆಯೂ ಇರುತ್ತದೆ. ಅವರಿಗೆ ವಿಕಲ್ಪವೂ ಬರಬಹುದು. ಇಂತಹ ಪ್ರಸಂಗಗಳಲ್ಲಿ ಅವರನ್ನು ಅದರಿಂದ ಹೇಗೆ ಹೊರಗೆ ತರುತ್ತೀರಿ ?

ಸದ್ಗುರು (ಸೌ.) ಬಿಂದಾ ಸಿಂಗಬಾಳ :
೨ ಅ. ಸಾಧಕರನ್ನು ಅರ್ಥಮಾಡಿಕೊಳ್ಳದಿರುವ ಸಂದರ್ಭದಲ್ಲಿ ಪ್ರಸಂಗ ನಿರ್ಮಾಣವಾದರೆ ದೇವರು ಜೊತೆಗಿದ್ದಾರೆ, ಎಂಬ ಶ್ರದ್ಧೆಯಿಂದ ಕಲಿಯುವ ಪ್ರಯತ್ನ ಮಾಡುವುದು : ಮೊದಲು ನನಗೆ ಸಾಧಕರಿಗೆ ಮಾರ್ಗದರ್ಶನ ಮಾಡಿ ಅನುಭವವಿರಲಿಲ್ಲ. ಆದ್ದರಿಂದ ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಕೆಲವು ಪ್ರಸಂಗಗಳಲ್ಲಿ ನನಗೆ ಅವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲಅಥವಾ ನಾನು ಅವರಿಗೆ ಹೇಳಿದ ವಿಷಯದಿಂದ ಅವರಿಗೆ ಒತ್ತಡವಾಯಿತು, ಹೀಗೆಯೂ ಆಗಿತ್ತು. ಆಗ ಸಾಧಕರನ್ನು ಹೇಗೆ ನೋಡಿಕೊಳ್ಳಬೇಕು ? ಅವರನ್ನು ಹೇಗೆ ಅಭ್ಯಾಸ ಮಾಡುವುದು ? ಅವರ ಸ್ಥಿತಿಯನ್ನು ಹೇಗೆ ಗುರುತಿಸುವುದು ? ಅವರಿಗೆ ಯಾವ ಸ್ಥಿತಿಯಲ್ಲಿ ಏನು ಹೇಳಬೇಕು ? ಎಂಬುದನ್ನು ದೇವರು ಕಲಿಸಿದರು. ತಾಯಿ ಹೇಗೆ ತನ್ನ ಮಗುವಿನ ಕೈಹಿಡಿದು ನಡೆಯಲು ಕಲಿಸುತ್ತಾಳೆ, ಅದೇ ರೀತಿ ದೇವರು ನನಗೆ ಎಲ್ಲವನ್ನೂ ಕಲಿಸಿದರು. ಕಲಿಯುವಾಗ ಅನೇಕ ತಪ್ಪುಗಳಾದವು, ಪ್ರಸಂಗಗಳು ನಡೆದವು; ಆದರೆ ಸಾಧಕರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಎಂಬ ಬಗ್ಗೆ ನಿರಾಶೆಯಾಗಲಿಲ್ಲ. ದೇವರು ಜೊತೆಗಿದ್ದಾರೆ, ಎಂಬ ಶ್ರದ್ಧೆಯಿಂದ ಕಲಿಯುವ ಪ್ರಯತ್ನ ಮಾಡಿ ಮುಂದುವರಿಯುತ್ತಿದ್ದೆನು.

೨ ಆ. ಸಾಧಕರನ್ನು ಸಂಪರ್ಕಿಸಬೇಕೆನಿಸುವುದು, ನಿಜವಾಗಿಯೂ ಅವರಿಗೆ ಆಧಾರದ ಅವಶ್ಯಕತೆಯಿದ್ದು ದೇವರೇ ಎಲ್ಲವನ್ನೂ ಮಾಡಿಸಿಕೊಳ್ಳು ತ್ತಾನೆ, ಎಂದು ಅನಿಸುವುದು : ಕೆಲವೊಮ್ಮೆ ತನ್ನಷ್ಟಕ್ಕೆ ಕೆಲವು ಸಾಧಕರ ನೆನಪಾಗುತ್ತದೆ. ಅವರನ್ನು ಸಂಪರ್ಕಿಸುವ ವಿಚಾರವನ್ನು ದೇವರೇ ಕೊಡುತ್ತಾರೆ ಹಾಗೂ ಸಂಪರ್ಕ ಮಾಡಿದ ನಂತರ ಅವರಿಗೆ ಆಧಾರದ ಅವಶ್ಯಕತೆ ಇರುವುದು ತಿಳಿಯುತ್ತದೆ. ಆಶ್ರಮದಲ್ಲಿಯೂ ಯಾರಿಗಾದರೂ ಸಹಾಯ ಬೇಕಿದ್ದರೆ ದೇವರು ಸಹಜವಾಗಿಯೇ ಅವರ ಹೆಸರನ್ನು ಸೂಚಿಸುತ್ತಾರೆ. ಸಾಧಕರು ಅವರ ಅಡಚಣೆಯೊಂದಿಗೆ ಬಂದಾಗ ಅಥವಾ ಕೆಲವೊಮ್ಮೆ ಆ ಸಾಧಕರಿಗೆ ನನಗೆ ಏನು ಹೇಳಲಿಕ್ಕಿರುತ್ತದೆಯೋ, ಅದು ಅವರು ಸ್ವತಃ ಹೇಳುವ ಮೊದಲೇ ನನಗೆ ತಿಳಿಯುತ್ತದೆ. ದೇವರು ಈ ಸೇವೆಯನ್ನು ನೀಡಿರುವುದರಿಂದ ನಾವು ಬುದ್ಧಿಯಿಂದ ಏನೂ ಮಾಡದೆ ದೇವರೇ ಎಲ್ಲವನ್ನೂ ಮಾಡಿಸಿಕೊಳ್ಳುತ್ತಿದ್ದಾರೆ, ಎಂಬುದರ ಅನುಭೂತಿ ಪಡೆಯಲು ಸಾಧ್ಯವಾಗುತ್ತದೆ. ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುವುದು ಅರಿವಾಗುತ್ತದೆ.

೨ ಇ. ಸಾಧಕರಿಗೆ ಮಾರ್ಗದರ್ಶನ ಮಾಡಲು ವಿಷಯ ತನ್ನಿಂತಾನೇ ಹೊಳೆಯುವುದು ಹಾಗೂ ಸತ್ಸಂಗದಲ್ಲಿ ಬ್ರಹ್ಮಾಂಡದ ಟೊಳ್ಳಿನಿಂದ ನಾದ ಕೇಳಿಸುತ್ತಿರುವ ಅನುಭೂತಿ ಬರುವುದು : ಸಾಧಕರಿಗೆ ಸತ್ಸಂಗದಲ್ಲಿ ಮಾರ್ಗದರ್ಶನ ಮಾಡುವಾಗ ಈಶ್ವರ ಪ್ರತಿಯೊಬ್ಬ ಸಾಧಕನಿಗೆ ಆವಶ್ಯಕವಿರುವ ವಿಷಯವನ್ನೇ ಸೂಚಿಸುತ್ತಾನೆ. ಮುಂದಿನ ೨೪ ಗಂಟೆಗಳಲ್ಲಿ ಪ್ರಯತ್ನಿಸಲು ಸಾಧಕರಿಗೆ ಏನು ಹೇಳಬೇಕೆಂಬ ವಿಷಯವನ್ನು ನಾನು ಬುದ್ಧಿಯಿಂದ ಚಿಂತನೆ ಮಾಡಿಕೊಂಡು ಬರುವುದಿಲ್ಲ. ದೇವರೇ ಆ ಸಮಯದಲ್ಲಿ ಯೋಗ್ಯವಾದುದನ್ನೇ ಸೂಚಿಸುತ್ತಾನೆ. ಸತ್ಸಂಗದ ಸಮಯದಲ್ಲಿ ಮಹರ್ಷಿಗಳ ಕೃಪೆಯಿಂದ, ನಾನು ಬ್ರಹ್ಮಾಂಡದ ಟೊಳ್ಳಿನಲ್ಲಿ ಕುಳಿತಿದ್ದೇನೆ ಹಾಗೂ ಮಾರ್ಗದರ್ಶನ ಮಾಡುವಾಗ ನನ್ನ ಧ್ವನಿಯ ಬದಲು ಟೊಳ್ಳಿನಿಂದ ನಾದ ಬರುತ್ತಿದೆ, ಎಂಬ ಅನುಭೂತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

೩. ಸಾಧಕರನ್ನು ಭೇಟಿಯಾಗಲು ಬಹಳ ಇಚ್ಛೆಯಿರುವುದು, ಆದರೆ ಸಮಷ್ಟಿ 
ಸೇವೆಗೆ ಪ್ರಾಧಾನ್ಯತೆ ನೀಡಿ ಗುರುಗಳಿಗೆ ಏನು ಅಪೇಕ್ಷಿತವಿದೆಯೋ ಅದನ್ನೇ ಮಾಡುವುದು
ಸದ್ಗುರು (ಸೌ.) ಅಂಜಲಿ ಗಾಡಗೀಳ : ಸದ್ಗುರು ತಾಯಿ ನಮ್ಮೊಂದಿಗೆ ಮಾತನಾಡಬೇಕು, ನಮ್ಮನ್ನು ನೋಡಬೇಕು, ಎಂದು ಪ್ರತಿಯೊಬ್ಬ ಸಾಧಕ ನಿಗೂ ಅನಿಸುತ್ತದೆ; ಆದರೆ ಸೇವೆಯ ವ್ಯಾಪಕತೆಯಿಂದಾಗಿ ಎಲ್ಲರಿಗೂ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಸಾಧಕರ ಮನಸ್ಸಿನಲ್ಲಿ ಸದ್ಗುರು ಬಿಂದಾತಾಯಿ ನಮಗೆ ಸಮಯ ನೀಡಲಿಲ್ಲವೆಂದು ಅನಿಸಬಹುದು. ಇಂತಹ ಪ್ರಸಂಗಗಳನ್ನು ಹೇಗೆ ಎದುರಿಸುತ್ತೀರಿ ?

ಸದ್ಗುರು (ಸೌ.) ಬಿಂದಾ ಸಿಂಗಬಾಳ : ಎಲ್ಲ ಸೇವೆಗಳನ್ನು ಬದಿಗಿಟ್ಟು ಸಾಧಕರನ್ನು ಭೇಟಿಯಾಗಬೇಕು, ಅವರಿಗೆ ಸಮಯ ನೀಡಬೇಕು, ಎಂದು ಅನಿಸುತ್ತದೆ; ಆದರೆ ಸಮಯದ ಅಭಾವದಿಂದ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಗುರುಗಳಿಗೆ ಈ ಕ್ಷಣದಲ್ಲಿ ಏನು ಅಪೇಕ್ಷಿತವಿದೆ, ಎಂಬುದನ್ನು ವಿಚಾರ ಮಾಡಿ ತತ್ತ್ವಕ್ಕನುಸಾರ ಮುಂದೆ ಹೋಗಲು ಪ್ರಯತ್ನಿಸುತ್ತೇನೆ. ಸಮಷ್ಟಿ ಸೇವೆಗೆ ಪ್ರಾಧಾನ್ಯತೆ ನೀಡುವ ಅವಶ್ಯಕತೆಯಿರುವುದರಿಂದ ಸೇವೆಯ ನಡುವೆ ಸಮಯ ಸಿಕ್ಕಿದಾಗ ಯಾರು ಮಾತನಾಡಲು ಇಚ್ಛೆ ವ್ಯಕ್ತಪಡಿಸಿರುವರೋ, ಅವರಿಗೆ ಸಮಯ ಕೊಡುತ್ತೇನೆ.

೪. ಸಾಧಕರನ್ನು ಮಾನಸಿಕ ಸ್ತರದಲ್ಲಿ ಅಲ್ಲ, ಆಧ್ಯಾತ್ಮಿಕ ಸ್ತರದಲ್ಲಿಯೇ ನೋಡಿಕೊಳ್ಳುವುದು
ಸದ್ಗುರು(ಸೌ.) ಅಂಜಲಿ ಗಾಡಗೀಳ : ಅಧ್ಯಾತ್ಮದಲ್ಲಿ ತತ್ತ್ವನಿಷ್ಠೆಯ ಆಧಾರದಲ್ಲಿಯೇ ಮುಂದೆ ಹೋಗಬೇಕಾಗುತ್ತದೆ. ನೀವು ಎಲ್ಲಿಯೂ ಮಾನಸಿಕ ಸ್ತರಕ್ಕೆ ಇಳಿಯುವುದಿಲ್ಲ. ನಿರಂತರ ಆಧ್ಯಾತ್ಮಿಕ ಸ್ತರದಲ್ಲಿಯೇ ಮಾರ್ಗದರ್ಶನ ಮಾಡುತ್ತೀರಿ. ಇದನ್ನು ನೀವು ಸಹಜವಾಗಿ ಹೇಗೆ ಸಾಧಿಸಿದಿರಿ ?
ಸದ್ಗುರು(ಸೌ.) ಬಿಂದಾ ಸಿಂಗಬಾಳ :
೪ ಅ. ಮಾನಸಿಕ ಸ್ತರದಲ್ಲಿ ತಾತ್ಕಾಲಿಕ ಆಧಾರ ನೀಡುವುದಕ್ಕಿಂತ ಆಧ್ಯಾತ್ಮಿಕ ಸ್ತರದಲ್ಲಿದ್ದು ಸಾಧಕರಿಗೆ ಶಾಶ್ವತವಾದ ದೃಷ್ಟಿಕೋನ ನೀಡುವುದು : ನಾನು ಸಾಧಕರ ಅಡಚಣೆಗಳನ್ನು ನಿವಾರಿಸುವಾಗ ಅವರನ್ನು ಮಾನಸಿಕ ಸ್ತರದಲ್ಲಿ ನೋಡಿಕೊಳ್ಳುವುದಿಲ್ಲ. ಮಾನಸಿಕ ಸ್ತರದಲ್ಲಿ ತಾತ್ಕಾಲಿಕ ಆಧಾರ ನೀಡುವುದಕ್ಕಿಂತ ಶಾಶ್ವತವಾದ ದೃಷ್ಟಿಕೋನವನ್ನು ಹೇಗೆ ನೀಡಬಹುದು, ಎಂಬುದರ ವಿಚಾರ ಮಾಡುತ್ತಾ ಇರುತ್ತೇನೆ. ಕೆಲವೊಮ್ಮೆ ಸಾಧಕರಿಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಆದರೆ ಸಾಧನೆಯಲ್ಲಿ ಭಾವನೆಗೆ ಆಶ್ರಯವಿಲ್ಲ, ಎಂಬುದನ್ನು ಗಮನದಲ್ಲಿಟ್ಟು ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವಂತಹ ವಿಷಯವನ್ನೇ ಹೇಳುತ್ತೇನೆ.

೪ ಆ. ಸಾಧಕರಿಗೆ ತತ್ತ್ವನಿಷ್ಠೆಯ ಕಡೆಗೆ ಹೋಗಲು ಆವಶ್ಯಕವಾದ ಆಧಾರವನ್ನು ಕೊಡುವುದು : ಸಾಧಕರನ್ನು ಆಧ್ಯಾತ್ಮಿಕ ಸ್ತರದಲ್ಲಿ ನೋಡಿ ಕೊಳ್ಳುವಾಗ ಆ ಸಾಧಕರ ವಿಷಯದಲ್ಲಿ ಒಳಗಿನಿಂದ ಪ್ರೇಮವೇ ಇರುತ್ತದೆ. ಸಾಧಕರಿಗೆ ತತ್ತ್ವನಿಷ್ಠೆಯ ಕಡೆಗೆ ಹೋಗಲು ಹಾಗೂ ಆಧ್ಯಾತ್ಮಿಕ ಸ್ತರದಲ್ಲಿರಲು ಆಧಾರದ ಅವಶ್ಯಕತೆಯಿರುತ್ತದೆ. ಮುಂದಿನ ಮಟ್ಟದಲ್ಲಿ ಆಧಾರ ನೀಡಲು ಪ್ರಯತ್ನಿಸುತ್ತೇನೆ.

೫. ಸಾಧಕರ ಸಾಧನೆಗಾಗಿ ಕಠೋರವಾಗಿರು ವಾಗ ಅದರ ಹಿಂದಿನ ದೇವರ ಕಾರ್ಯಕಾರಣ ಭಾವವು ಗಮನಕ್ಕೆ ಬರುವುದು
ಸದ್ಗುರು (ಸೌ.) ಅಂಜಲಿ ಗಾಡಗೀಳ : ಪ್ರೇಮ ದಿಂದ ಮಾತನಾಡುವುದು ಸುಲಭವಾಗಿರುತ್ತದೆ; ಆದರೆ ದೋಷಗಳ ಮೂಲಕ್ಕೆ ಹೋಗಿ ಸಾಧಕನಿಗೆ ತಪ್ಪುಗಳ ಅರಿವು ಮಾಡಿಕೊಡುವುದು, ಪ್ರಸಂಗಾನುಸಾರ ವ್ಯಷ್ಟಿ ಸಾಧನೆಗಾಗಿ ಕಠೋರವಾಗುವುದು, ಇದು ಕಠಿಣವಿರು ತ್ತದೆ. ಅದು ನಿಮಗೆ ಹೇಗೆ ಸಾಧ್ಯವಾಗುತ್ತದೆ. ಸಾಮ-ದಾಮ-ದಂಡ-ಭೇದ ಇವುಗಳಲ್ಲಿನ ದಂಡವು ಈಶ್ವರನ ಒಂದು ಗುಣವೇ ಆಗಿದೆ. ಅದರಿಂದಲೂ ಜೀವದ ಉದ್ಧಾರವಾಗುತ್ತದೆ. ಈ ಗುಣವನ್ನು ನೀವು ಹೇಗೆ ಅಂಗೀಕರಿಸಿದ್ದೀರಿ ?

ಸದ್ಗುರು(ಸೌ.) ಬಿಂದಾ ಸಿಂಗಬಾಳ :
೫ ಅ. ಸಾಧಕರ ಉದ್ಧಾರವಾಗಬೇಕೆಂದು ಅವಶ್ಯಕತೆ ಗನುಸಾರ ಅವರ ವಿಷಯದಲ್ಲಿ ಕಠೋರವಾಗಿರುವಾಗ ಈಶ್ವರನ ಅಸ್ತಿತ್ವದ ಅನುಭವವಾಗುವುದು : ಗುರುಗಳ ಆಜ್ಞೆಯಲ್ಲಿ ಬುದ್ಧಿ ಮತ್ತು ಭಾವನೆಯ ಅಡಚಣೆ ಯನ್ನು ತರದೆ ಅದನ್ನು ಇನ್ನೂ ಹೆಚ್ಚು ಉತ್ತಮವಾಗಿ ಮಾಡುವ ಪ್ರಯತ್ನವಿರುತ್ತದೆ. ಕೆಲವು ಸಾಧಕರ ವಿಷಯದಲ್ಲಿ ಕಠೋರವಾಗಿದ್ದು ಅದರಿಂದ ಅವರ ಉದ್ಧಾರವಾಗುತ್ತದೆಯಾದರೆ, ಅವರಿಗೆ ಹಾಗೆ ಹೇಳ ಲಾಗುತ್ತದೆ. ಆಗ ನಾನು ಮಾತನಾಡುವ ಶಬ್ದ ಮತ್ತು ವಿಚಾರ ಈಶ್ವರನದ್ದೇ ಇರುತ್ತದೆ, ಎಂಬ ಅನುಭೂತಿ ಬರುತ್ತದೆ.

೫ ಆ. ಕ್ರಮೇಣ ಸಾಧಕರ ಆಧ್ಯಾತ್ಮಿಕ ಪ್ರಗತಿ ಆದನಂತರ ಈಶ್ವರನ ಪ್ರತಿಯೊಂದು ನಿರ್ಣಯವು ಜೀವದ ಉದ್ಧಾರಕ್ಕಾಗಿಯೇ ಇರುವುದೆಂದು ಆರಿವಾಗುವುದು : ಕೆಲವು ಸಾಧಕರಿಗೆ ನಾನು ಕಠೋರವಾಗಿ ಹೇಳಿರುವುದನ್ನು ಸ್ವೀಕರಿಸಲು ಆಗುವುದಿಲ್ಲ; ಆದರೆ ಕ್ರಮೇಣ ಅವರ ಆಧ್ಯಾತ್ಮಿಕ ಪ್ರಗತಿಯಾದಾಗ ದೇವರು ಕಠೋರವಾಗಿದ್ದ ಕಾರಣಕ್ಕಾಗಿ ಅವರಿಗೆ ಕೃತಜ್ಞತೆಯೆನಿಸುತ್ತದೆ. ಹೇಗೆ ತಾಯಿ ತನ್ನ ಮಗು ಕೇಳದಿದ್ದರೆ, ಅವನನ್ನು ಸುಧಾರಿಸಲು ಅವನಿಗೆ ಊಟ ಕೊಡದಿರುವುದು, ಮನೆಯ ಹೊರಗೆ ನಿಲ್ಲಲು ಹೇಳುವುದು, ಇತ್ಯಾದಿ ಶಿಕ್ಷೆ ನೀಡುತ್ತಾಳೆಯೋ, ಅದೇ ರೀತಿ ಈಶ್ವರನು ಪ್ರತಿಯೊಂದು ಜೀವವನ್ನು ಬಹಳ ಪ್ರೀತಿಸುತ್ತಾನೆ. ದೇವರ ಬೋಧನೆ ಪ್ರತಿಯೊಂದು ಜೀವದ ಉದ್ಧಾರಕ್ಕಾಗಿಯೇ ಇದೆ. ಅದರಲ್ಲಿ ಯಾರಿಗೂ ಹಾನಿಯಾಗುವುದಿಲ್ಲ, ಕಲ್ಯಾಣವೇ ಆಗುತ್ತದೆ, ಎಂಬುದು ಅನುಭವಿಸಲು ಸಾಧ್ಯವಾಗಿ ಆ ಬಗ್ಗೆ ಕೃತಜ್ಞತೆಯೆನಿಸುತ್ತದೆ.

೬.ಈಶ್ವರನ ಆದರ್ಶವನ್ನು ಮುಂದಿಟ್ಟು ತನ್ನಲ್ಲಿ ಪ್ರೀತಿ ನಿರ್ಮಾಣ ಆಗುವಂತೆ ಪ್ರಯತ್ನಿಸುವುದು
ಸದ್ಗುರು (ಸೌ.) ಅಂಜಲಿ ಗಾಡಗೀಳ : ಸಾಧನೆಯಲ್ಲಿ ಪ್ರತಿಯೊಬ್ಬ ಸಾಧಕನೂ ತನ್ನಲ್ಲಿ ಪ್ರೇಮಭಾವ ನಿರ್ಮಾಣ ಮಾಡಲು ಚಡಪಡಿಸುತ್ತಿರುತ್ತಾನೆ. ಪ್ರೇಮಭಾವದ ನಂತರ ಪ್ರೀತಿಯು ಮುಂದಿನ ಹಂತವಾಗಿರು ತ್ತದೆ. ‘ಪ್ರೀತಿ’ಯು ಈಶ್ವರನ ಸರ್ವೋಚ್ಚ ಗುಣವಾಗಿದೆ. ‘ಪ್ರೇಮಭಾವದಿಂದ ಪ್ರೀತಿ’ ಈ ಪ್ರವಾಸವನ್ನು ನೀವು ಹೇಗೆ ತಲುಪಿದಿರಿ ?

ಸದ್ಗುರು (ಸೌ.) ಬಿಂದಾ ಸಿಂಗಬಾಳ : ಮೊದಲು ನನ್ನ ಸ್ವಭಾವ ಮೌನವಾಗಿತ್ತು. ಸೇವೆಯು ಪ್ರಕೃತಿಗೆ ಹೊಂದಾಣಿಕೆಯಾಗುವಂತೆ ಇರಲಿಲ್ಲ; ಆದರೆ ಪ.ಪೂ. ಡಾಕ್ಟರರೇ ಸಾಧಕರನ್ನು ಹೇಗೆ ಪ್ರೀತಿಸಬೇಕು, ಅವರೊಂದಿಗೆ ಹೇಗೆ ಮಾತನಾಡಬೇಕು, ಎಂಬುದನ್ನು ಕಲಿಸಿ ನನ್ನನ್ನು ತಯಾರು ಮಾಡಿದರು. ಪ.ಪೂ. ಡಾಕ್ಟರ್ ಎಂದರೆ ಸಾಕ್ಷಾತ್ ಪ್ರೀತಿಯ ಮೂರ್ತಿಸ್ವರೂಪವೇ ಆಗಿದ್ದಾರೆ. ಆದ್ದರಿಂದ ದೇವರ ಆದರ್ಶವನ್ನಿಟ್ಟು ನಾನು ಸಹ ಎಲ್ಲರ ಮೇಲೆ ನಿರಪೇಕ್ಷ ಪ್ರೇಮ ಹೇಗೆ ಮಾಡಬಹುದೆಂದು ಪ್ರಯತ್ನಿಸಿದೆನು. (ಪ.ಪೂ. ಡಾಕ್ಟರರ ಕುರಿತು ಭಾವವಿದ್ದ ಕಾರಣ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಪ.ಪೂ. ಡಾಕ್ಟರರೇ ಕಲಿಸಿದರು, ಎಂದು ಹೇಳಿದ್ದಾರೆ. - ಸಂಕಲನಕಾರರು)

೭. ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ದೇವರೇ ಕಲಿಸುವುದು
ಸದ್ಗುರು (ಸೌ.) ಅಂಜಲಿ ಗಾಡಗೀಳ : ತಮ್ಮಲ್ಲಿ ನೇತೃತ್ವಗುಣ ತಂದುಕೊಳ್ಳುವಾಗ ಜವಾಬ್ದಾರಿ ತೆಗೆದು ಕೊಳ್ಳಬೇಕಾಗುತ್ತದೆ. ಜವಾಬ್ದಾರಿ ತೆಗೆದುಕೊಂಡರೆ ತಪ್ಪಿನ ಭಯವಿರುತ್ತದೆ. ಈ ಭಯದಿಂದ ಸಾಧಕರು ಮುಂದೆ ಹೋಗುವುದಿಲ್ಲ. ನೀವು ಸೇವೆಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ತೆಗೆದುಕೊಳ್ಳುತ್ತೀರಿ. ಅದರ ಹಿಂದಿನ ರಹಸ್ಯವನ್ನು ತಿಳಿಸಿರಿ.

ಸದ್ಗುರು(ಸೌ.)ಬಿಂದಾ ಸಿಂಗಬಾಳ :
೭ ಅ. ಪ್ರತಿಯೊಂದು ವಿಷಯವನ್ನು ನಿರ್ಧರಿಸು ವಾಗ ದೇವರೇ ಅಭ್ಯಾಸ ಮಾಡಿಸಿಕೊಳ್ಳುವುದರಿಂದ ಜವಾಬ್ದಾರಿ ವಹಿಸಿಕೊಳ್ಳಲು ಸಹಜವಾಗಿ ಸಾಧ್ಯವಾಗುವುದು : ಯಾವುದೇ ವಿಷಯದ ಆರಂಭ ದೇವರಿಂದಲೇ ಆಗುತ್ತದೆ ಹಾಗೂ ಮುಕ್ತಾಯವೂ ಅವರಿಂದಲೇ ಆಗುತ್ತದೆ. ಪ್ರತಿಯೊಂದು ವಿಷಯವನ್ನು ನಿರ್ಧರಿಸುವಾಗ ಅಭ್ಯಾಸ ಹೇಗೆ ಮಾಡುವುದು, ನಿರ್ಣಯ ಕೊಡುವಾಗ ಅಭ್ಯಾಸ ಹೇಗೆ ಮಾಡುವುದು, ಎಂಬುದನ್ನೂ ದೇವರೇ ಸಣ್ಣ ಸಣ್ಣ ಪ್ರಸಂಗಗಳಿಂದ ಗಮನಕ್ಕೆ ತಂದು ಕೊಟ್ಟರು. ಅದನ್ನು ಅಂಗೀಕರಿಸಲು ಶಕ್ತಿಯನ್ನೂ ನೀಡಿದರು. ಈಗ ಎಲ್ಲ ವಿಷಯಗಳ ಅಭ್ಯಾಸದ ಪ್ರಕ್ರಿಯೆಗಳು ದೇವರ ಕೃಪೆಯಿಂದಲೇ ಅರಿವಾಗುತ್ತವೆ.

೭ ಆ. ವಿಷಯಗಳ ಅಭ್ಯಾಸದೊಂದಿಗೆ ಹಿರಿಯ ಸಾಧಕರಿಂದ ಮಾರ್ಗದರ್ಶನ ಪಡೆಯುವುದು ಮತ್ತು ಅದರಿಂದ ನಿರ್ಣಯ ತೆಗೆದುಕೊಳ್ಳುವಾಗ ದೃಷ್ಟಿಕೋನ ಸಿಗುವುದು : ತನ್ನ ಹಂತದಲ್ಲಿ ಭಗವಂತನ ಸಹಾಯ ಪಡೆದು ಪರಿಪೂರ್ಣ ಅಭ್ಯಾಸ ಮಾಡುವ ಪ್ರಯತ್ನ ವಿರುತ್ತದೆ. ಅಷ್ಟೇ ಅಲ್ಲ, ಸಂಬಂಧಪಟ್ಟ ಕ್ಷೇತ್ರದ ಜವಾಬ್ದಾರ ಸಾಧಕರೊಂದಿಗೆ ಮಾತನಾಡುವುದು, ಅವರ ವಿಚಾರಪ್ರಕ್ರಿಯೆಯನ್ನು ತಿಳಿದುಕೊಳ್ಳುವುದು, ಇದರಿಂದಲೂ ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ. ನಮಗೆ ತಿಳಿಯದ ಅನೇಕ ವಿಷಯಗಳಿರುತ್ತವೆ; ಆದರೆ ಇತರರಿಂದ ಕಲಿಯುವುದರಿಂದ ನಿರ್ಣಯ ತೆಗೆದುಕೊಳ್ಳುವಾಗ ದೃಷ್ಟಿಕೋನ ಸಿಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಗಲಿರುಳು ಸೇವೆಯದ್ದೇ ಧ್ಯಾಸವಿರುವ ಹಾಗೂ ತತ್ತ್ವನಿಷ್ಠರಾಗಿದ್ದು ನಿಜವಾಗಿಯೂ ಸಾಧಕರನ್ನು ಸಿದ್ಧಪಡಿಸುವ ಅದ್ವಿತೀಯ ಸಂತರತ್ನ ಸದ್ಗುರು (ಸೌ.) ಬಿಂದಾ ಸಿಂಗಬಾಳ !