ದೇವತೆಗಳ ವಿಡಂಬನೆಯನ್ನು ಈ ರೀತಿ ತಡೆಯಿರಿ !

ನಗ್ನ ಅಥವಾ ಅಶ್ಲೀಲ ಚಿತ್ರಗಳನ್ನು ಬಿಡಿಸಿ ಅದನ್ನು ಬಹಿರಂಗವಾಗಿ ಮಾರಾಟ ಮಾಡುವ ಹಿಂದೂದ್ವೇಷಿ ಗಳನ್ನು ಹಾಗೂ ಆ ರೀತಿಯ ಚಿತ್ರ-ಪ್ರದರ್ಶನವನ್ನು ನಿಷೇಧಿಸಿ !
ವಿಡಂಬನಾತ್ಮಕ ಜಾಹೀರಾತುಗಳಿರುವ ಉತ್ಪನ್ನಗಳನ್ನು, ವಾರ್ತಾಪತ್ರಿಕೆಗಳು ಹಾಗೂ ಕಾರ್ಯಕ್ರಮ ಗಳನ್ನು, ಉದಾ. ನಾಟಕವನ್ನು ಬಹಿಷ್ಕರಿಸಿ !
ವಿಡಂಬನೆಯಿಂದ ಧಾರ್ಮಿಕ ಭಾವನೆಗೆ ನೋವು ಉಂಟಾದ ಬಗ್ಗೆ ಪೋಲೀಸರಲ್ಲಿ ದೂರು ದಾಖಲಿಸಿರಿ !

ಶ್ರೀ ಗಣಪತಿ ಅಥರ್ವಶೀರ್ಷದಲ್ಲಿ ವರ್ಣಿಸಿರುವ ಶ್ರೀ ಗಣೇಶನ ಮೂರ್ತಿವಿಜ್ಞಾನ
ಶ್ರೀ ಗಣಪತಿ ಅಥರ್ವಶೀರ್ಷದಲ್ಲಿ ಗಣೇಶನ ರೂಪ (ಮೂರ್ತಿವಿಜ್ಞಾನ)ವನ್ನು ಈ ರೀತಿ ನೀಡ ಲಾಗಿದೆ - ಏಕದಂತಂ ಚತುರ್ಹಸ್ತಂ.... ಅಂದರೆ ಏಕದಂತ, ಚತುರ್ಭುಜ, ಪಾಶ ಹಾಗೂ ಅಂಕುಶವನ್ನು ಧರಿಸಿರುವ, ಒಂದು ಆನೆಯ (ಮುರಿದುಹೋಗಿ ರುವ) ಹಲ್ಲನ್ನು ಧರಿಸಿರುವ ಹಾಗೂ ಮತ್ತೊಂದು ಕೈಯಲ್ಲಿ ವರದಮುದ್ರೆಯಿರುವ, ಯಾರ ಧ್ವಜದ ಮೇಲೆ ಮೂಷಕನ ಚಿಹ್ನೆಯಿದೆಯೋ ಅಂತಹ, ರಕ್ತ (ಕೆಂಪು) ಬಣ್ಣ, ಲಂಬೋದರ, ಮೊರದಂತೆ ಕಿವಿಗಳಿರುವ, ರಕ್ತ (ಕೆಂಪು) ವಸ್ತ್ರವನ್ನು ತೊಟ್ಟಿರುವ, ಮೈಗೆ ರಕ್ತಚಂದನದ ಲೇಪವನ್ನು ಹಚ್ಚಿರುವ ಹಾಗೂ ರಕ್ತ (ಕೆಂಪು) ಹೂವಿನಿಂದ ಪೂಜಿಸಲ್ಪಟ್ಟಿರುವ.
ಜನರೇ, ಗಣೇಶಮೂರ್ತಿಯ ವಿಸರ್ಜನೆಯಿಂದ ಯಾವುದೇ ರೀತಿಯ
ಪ್ರದೂಷಣೆಯಾಗುವುದಿಲ್ಲ !
ಮಾಹಿತಿ ಹಕ್ಕು ಅಧಿಕಾರದಡಿ ಸಿಕ್ಕಿರುವ ಮಾಹಿತಿ ಯಂತೆ ಗಣೇಶಮೂರ್ತಿಯ ವಿಸರ್ಜನೆಯ ನಂತರ ಅಲ್ಲಿನ ನೀರಿನಲ್ಲಿ ಪ್ರದೂಷಣೆಯ ಮಟ್ಟ ಕುಸಿದಿರುವ ಮಾಹಿತಿಯಿದೆ ! ಗಣೇಶಮೂರ್ತಿಯ ವಿಸರ್ಜನೆ
ಯಿಂದ ಯಾವುದೇ ರೀತಿಯ ಪ್ರದೂಷಣೆಯಾಗು ವುದಿಲ್ಲ ಎಂದು ಅಧ್ಯಯನದ ಮೂಲಕ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೇಳಿದೆ !
ಪರಿಸರ ತಜ್ಞರು ಮೂರ್ತಿವಿಸರ್ಜನೆಯಿಂದ ಪ್ರದೂಷಣೆ ಆಗುವುದಿಲ್ಲ ಎಂದು ಅಧ್ಯಯನದ ಮೂಲಕ ಮಂಡಿಸಿದ್ದಾರೆ.
ಕಾಗದದ ರದ್ದಿಯಿಂದ ತಯಾರಿಸಿದ ಗಣೇಶನ ಮೂರ್ತಿ ಧರ್ಮಬಾಹಿರವಾಗಿದ್ದು ಹಾಗೂ ಅದನ್ನು ವಿಸರ್ಜನೆ ಮಾಡಿದ ಬಳಿಕ ನೀರಿನ ಮೂಲದಲ್ಲಿ ಪ್ರದೂಷಣೆ ಹೆಚ್ಚಾಗಿ ಮೀನುಗಳು ಸಾಯುತ್ತವೆ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವತೆಗಳ ವಿಡಂಬನೆಯನ್ನು ಈ ರೀತಿ ತಡೆಯಿರಿ !