ಜಿಮ್, ಪಾರ್ಲರ್, ಫ್ಯಾಶನ್ ಮತ್ತು ಮೊಡೆಲಿಂಗ್‌ಗಳ ಕುಸಂಸ್ಕಾರಗಳಲ್ಲಿ ಮೈಮರೆತಿರುವ ಮುಗ್ಧ ಬಾಲ್ಯ!

ಸೌ. ರೂಪಾಲಿ ವರ್ತಕ್
ಸದ್ಯ ಖಾಸಗೀಕರಣ ಮತ್ತು ಅಂತರರಾಷ್ಟ್ರೀಕರಣದಿಂದ ಬಂದಿರುವ ಪಾಶ್ಚಾತ್ಯೀಕರಣದ ಸುನಾಮಿಯ ತೆರೆಗಳಲ್ಲಿ ಈ ದೇಶದಲ್ಲಿನ ಕೇವಲ ಯುವಪೀಳಿಗೆ ಮತ್ತು ಹೆಚ್ಚು ವಯಸ್ಸಾಗುತ್ತಿರುವ ನಾಗರಿಕರಷ್ಟೇ ಅಲ್ಲ, ಚಿಕ್ಕ ಮಕ್ಕಳು ಸಹ ಸಿಕ್ಕಿಕೊಂಡಿ ದ್ದಾರೆ. ಪಾಶ್ಚಾತ್ಯದೇಶಗಳ ಹಾಗೆಯೇ ಈಗ ಭಾರತದಲ್ಲಿಯೂ ತಾರುಣ್ಯ ಬರುವ ವಯಸ್ಸು ಕಡಿಮೆಯಾಗುತ್ತಿದ್ದು ವಿಶೇಷವಾಗಿ ಪಟ್ಟಣ ಪ್ರದೇಶದ ಮಕ್ಕಳು ಮತ್ತು ದುರ್ಭಾಗ್ಯದಿಂದ ಅವರ ಪಾಲಕರೂ ಭೋಗವಾದಿ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಚಲನಚಿತ್ರ, ಮೊಡಲಿಂಗ್ ಇತ್ಯಾದಿಗಳ ಪ್ರಭಾವದಿಂದ (ತಥಾಕಥಿತ) ಸುಂದರವಾಗಿ ಕಾಣಿಸುವುದು ನಾಗರಿಕ ಜೀವನಶೈಲಿಯ ಒಂದು ಲಕ್ಷಣವಾಗಿದ್ದು ಅದಕ್ಕಾಗಿ ನಿರಂತರ ಹೊಸಹೊಸ ಕೇಶರಚನೆ, ವೇಶಭೂಷಣ, ರಂಗಭೂಷೆಯನ್ನು ಮಾಡುತ್ತಿರುವುದು ನಾಗರಿಕ ಜೀವನದ ಒಂದು ಅಪರಿಹಾರ್ಯ ಭಾಗವೇ ಆಗಿದೆ ! ಈ ಫ್ಯಾಶನ್‌ನಲ್ಲಿ ಈಗ ೬ ರಿಂದ ೧೪ ವರ್ಷ ವಯಸ್ಸಿನ ಎಳೆಯ ಬಾಲಕರೂ ಹೇಗೆ ಸಿಕ್ಕಿಕೊಳ್ಳುತ್ತಿದ್ದಾರೆಂಬುದು ಅರಿವಾಗಬೇಕೆಂದು ೨೦೦೭ ರ ‘ಇಂಡಿಯಾ ಟುಡೇ’ ಈ ಆಂಗ್ಲ ಭಾಷೆಯ ಮಾಸಿಕದಲ್ಲಿ ಪ್ರಸಿದ್ಧವಾಗಿರುವ ಕೆಲವು ಲೇಖನಗಳಿಂದ ಆಯ್ದ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇವೆ. ಇಂದು ೨೦೧೬ ರಲ್ಲಿ ಈ ಸ್ಥಿತಿ ಇನ್ನೂ ಹೆಚ್ಚು ಗಂಭೀರವಾಗಿದೆ, ಎಂಬುದು ಕಲ್ಪನೆ ಮಾಡುವ ವಿಷಯವಾಗಿದೆ !

೧. ಚಿಕ್ಕ ಮಕ್ಕಳ ಆಧುನಿಕಕೇಶಕರ್ತನಾಲಯಗಳು, 
ವ್ಯಾಯಾಮಶಾಲೆಗಳು, ಸೌಂದರ್ಯವರ್ಧನಾಲಯಗಳು ಮತ್ತು ಸ್ಪಾ ಸೆಂಟರ್‌ಗಳು !
ಅ. ಮುಂಬಯಿಯಂತಹ ಔದ್ಯೋಗಿಕ ನಗರಗಳಲ್ಲಿ ಈಗ ಈ ಚಿಕ್ಕ ಮಕ್ಕಳಿಗಾಗಿ ವ್ಯಾಯಾಮಶಾಲೆ, ಸೌಂದರ್ಯವರ್ಧನಾಲಯ, ಬಟ್ಟೆಯ ಅಂಗಡಿಗಳು, ಚಿಕ್ಕ ಉದ್ಯಾನ, ಗ್ರಂಥಾಲಯ ಇತ್ಯಾದಿಗಳಿರುವ ವಿಶೇಷ ಕೇಶಕರ್ತನಾಲಯಗಳನ್ನು ತೆರೆಯಲಾಗಿದೆ. ಈ ಸ್ಥಳಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಆಕರ್ಷಕ ಬಣ್ಣ ಬಣ್ಣದ ಗೋಡೆಗಳು, ದೊಡ್ಡ ದೊಡ್ಡ ಪ್ರಾಣಿಗಳ ಆಟಿಕೆಗಳು, ದೊಡ್ಡವರಂತೆ ವ್ಯಾಯಾಮ ಮಾಡುವ ಸಾಧನ ಗಳು, ಕಥೆಯ ಪುಸ್ತಕಗಳು (ಸದ್ಯ ವಿಡಿಯೋ ಗೇಮ್) ಇತ್ಯಾದಿ ಎಲ್ಲವೂ ಇರುತ್ತವೆ.
ಆ. ಇಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳ ವಿವಿಧ ಉಡುಗೆತೊಡುಗೆಗಳು, ಕೇಶರಚನೆ ಮತ್ತು ವೇಶಭೂಷಣಗಳ ದೊಡ್ಡ ದೊಡ್ಡ ಛಾಯಾಚಿತ್ರಗಳನ್ನು ಹಚ್ಚಿರುತ್ತಾರೆ. ದೊಡ್ಡವರಂತೆ ಚಿಕ್ಕಮಕ್ಕಳ ಇಂತಹ ಹೊಸ ರೂಢಿಗಾಗಿಯೂ (ಫ್ಯಾಶನ್‌ಗಾಗಿ) ಪ್ಯಾರೀಸ್‌ವೇ ಆದರ್ಶವೆಂದು ತಿಳಿಯಲಾಗುತ್ತದೆ. (ಇದರಿಂದ ಮಕ್ಕಳ ಮೇಲೆ ಯಾವುದು ಪಾಶ್ಚಾತ್ಯವೋ, ಅದು ಆದರ್ಶವೆಂಬ ಕುಸಂಸ್ಕಾರವು ಚಿಕ್ಕಂದಿನಿಂದಲೇ ಆಗುತ್ತದೆ. - ಸಂಕಲನಕಾರರು)
ಇ. ಶಾರೀರಿಕ ಹಾನಿಯಾಗುವ ಕೃತಿಗಳು
೧. ೪ ರಿಂದ ೧೧ ವಯಸ್ಸಿನ ಮಕ್ಕಳಿಗಾಗಿ ವಿವಿಧ ವ್ಯಾಯಾಮದ ಪ್ರಕಾರಗಳ ಪಾಶ್ಚಾತ್ಯ ಸಾಧನಗಳಿರುವಂತಹ ಜಿಮ್‌ಗಳನ್ನು ತೆರೆಯಲಾಗುತ್ತಿದೆ. (ಪ್ರತ್ಯಕ್ಷದಲ್ಲಿ ಇಂತಹ ವ್ಯಾಯಾಮ-ಸಾಧನಗಳಿಂದ ಮಾಡಿದ ವ್ಯಾಯಾಮದ ಪ್ರಕಾರಗಳಿಂದ ಆಗುವ ಪರಿಣಾಮವನ್ನು ಚಿಕ್ಕ ಮಕ್ಕಳ ಶರೀರವು ಸ್ವೀಕರಿಸುವುದಿಲ್ಲ, ಎಂದು ಆಧುನಿಕ ತಜ್ಞ ವೈದ್ಯರ ಅಭಿಪ್ರಾಯವಾಗಿದೆ. - ಸಂಕಲನಕಾರರು)
೨. ಕೈ-ಕಾಲುಗಳ ಉಗುರುಗಳನ್ನು ಸ್ವಚ್ಛಗೊಳಿಸುವ ಸೌಂದರ್ಯ ವರ್ಧನಾಲಯಗಳಲ್ಲಿನ ಕೃತಿಯನ್ನು ಚಿಕ್ಕ ವಯಸ್ಸಿನ ಹುಡುಗಿಯರೂ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಕೋಮಲ ಹಾಗೂ ಬೆಳವಣಿಗೆ ಯಾಗುವ ವಯಸ್ಸಿನ ಕೈ-ಕಾಲುಗಳ ಉಗುರುಗಳ ಆಕಾರದ ಮೇಲೆ ವಿಪರೀತ ಪರಿಣಾಮವಾಗುವ ಸಾಧ್ಯತೆಯಿದೆ. (ಇಂತಹ ಸಾಮಾನ್ಯ ವಿಷಯವೂ ಗಮನಕ್ಕೆಬಾರದ ಪಾಲಕರು ತಮ್ಮ ಮಕ್ಕಳ ಮೇಲೆ ಎಂತಹ ಸಂಸ್ಕಾರಗಳನ್ನು ಮಾಡುತ್ತಿರಬೇಕು ? - ಸಂಪಾದಕರು)
ಈ. ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದುಷ್ಪರಿಣಾಮಗಳು : ಚಿತ್ರ-ವಿಚಿತ್ರ ರೀತಿಯಲ್ಲಿ ಕೂದಲುಗಳನ್ನು ಕತ್ತರಿಸುವುದು, ಕೂದಲುಗಳನ್ನು ಚಿಕ್ಕ ಮಾಡಿ ಅದರಲ್ಲಿ ಗೆರೆ ಅಥವಾ ಆಕೃತಿಗಳು ಕಾಣುವ ಹಾಗೆ ಕತ್ತರಿಸುವುದು, ಮಧ್ಯದಲ್ಲಿ ಕೂದಲು ಎದ್ದು ನಿಲ್ಲುವ ಹಾಗೆ ಕತ್ತರಿಸುವುದು, ಅವ್ಯವಸ್ಥಿತವಾಗಿ ಕಾಣಿಸುವ ಹಾಗೆ ಕೂದಲುಗಳನ್ನು ಕತ್ತರಿಸುವುದು ಮುಂತಾದ ಫ್ಯಾಶನ್ ಯುವಕರಂತೆಯೇ ಚಿಕ್ಕ ಮಕ್ಕಳಲ್ಲಿಯೂ ರೂಢಿಯಾಗಿದೆ. (ಇದರಿಂದ ಮಕ್ಕಳ ಮುಖದ ಮೇಲಿನ ಮುಗ್ದತೆಯಂತೂ ಲೋಪವಾಗುತ್ತದೆ, ಅಲ್ಲದೇ ಚಿತ್ರ-ವಿಚಿತ್ರ ಕೇಶರಚನೆಯಿಂದ ಮಕ್ಕಳಿಗೆ ಆಧ್ಯಾತ್ಮಿಕ ಸ್ವರೂಪದ ತೊಂದರೆಗಳಾಗಿ ಅವರ ಬುದ್ಧಿ, ಮನಸ್ಸು ಮತ್ತು ಶರೀರದ ಮೇಲೆ ಅವು ವಿಕಾಸಗೊಳ್ಳುವ ಮೊದಲೇ ವಿಪರೀತ ಪರಿಣಾಮವಾಗುವ ಸಾಧ್ಯತೆ ಯಿರುತ್ತದೆ. - ಸಂಕಲನಕಾರರು)
ಉ. ಪಾಲಕರೇ ಹೊಣೆ ! : ೬ ರಿಂದ ೧೪ ವರ್ಷ ವಯಸ್ಸಿನ ಮಕ್ಕಳನ್ನು ಅವರ ಪಾಲಕರೇ ರಜೆಯ ದಿನ ಇಂತಹ ಆಧುನಿಕ ಕೇಶಕರ್ತನಾಲಯಗಳಿಗೆ ಕರೆದುಕೊಂಡು ಹೋಗಿ ಒಂದು ಭೇಟಿಯಲ್ಲಿಯೇ ೪ ರಿಂದ ೫ ಸಾವಿರ ರೂಪಾಯಿಗಳನ್ನು ಸಹಜವಾಗಿಯೇ ಖರ್ಚು ಮಾಡುತ್ತಿದ್ದಾರೆ. ಮಕ್ಕಳು ಸುಂದರ ಹಾಗೂ ಸ್ಮಾರ್ಟ್ ಕಾಣಿಸಬೇಕೆಂದು ಮತ್ತು ಅವರಿಗೆ ತಾವು ಸುಂದರವಾಗಿ ಕಾಣುತ್ತೇವೆ ಎಂದು ಅನಿಸಬೇಕು ಎಂಬುದಕ್ಕಾಗಿ ಹೀಗೆ ಹಣ ಖರ್ಚಾಗುವುದು ಯೋಗ್ಯವೇ ಆಗಿದೆ ಎಂಬುದು ಪಾಲಕರ ವಿಚಾರಸರಣಿಯಾಗಿದೆ. (ಇದು ಪಾಲಕರ ವೈಚಾರಿಕ ಅಧೋಗತಿಯಾಗಿದೆ. ದೇಶ ಸಂಕಟದಲ್ಲಿರುವಾಗ ಪಾಲಕರಿಗೆ ತಮ್ಮ ಮನೆಯಲ್ಲಿ ಶಿವಾಜಿ ಅಥವಾ ರಾಮದಾಸಸ್ವಾಮಿಗಳು ನಿರ್ಮಾಣವಾಗಬೇಕೆಂದು ಅನಿಸುವುದಿಲ್ಲ, ತಮ್ಮ ಮಕ್ಕಳು ಮೊಡೆಲ್ ಅಥವಾ ಚಲನಚಿತ್ರ ನಟ-ನಟಿಯರಾಗಿ ಪ್ರಸಿದ್ಧಿ ಪಡೆಯಬೇಕೆಂದು ಅನಿಸುತ್ತಿದೆ. - ಸಂಕಲನಕಾರರು)
ಊ. ಸ್ಪಾ ಸೆಂಟರ್ ಮತ್ತು ಕೇಶಕರ್ತನಾಲಯ ಗಳು ಜನಸಂದಣಿಯಿಂದಾಗಿ ತುಂಬಾ ಕಿಕ್ಕಿರಿದ ವ್ಯವಸಾಯಗಳಾಗಿವೆ. ಈ ಸ್ಪಾ ಸೆಂಟರ್‌ಗಳಲ್ಲಿನ ಶೇ. ೧೫ ರಿಂದ ೨೦ ರಷ್ಟು ಗ್ರಾಹಕರು ಯುವಕರು ಹಾಗೂ ಯುವಕರಿಗಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. (೨೦೦೭ ರ ಈ ಪ್ರಮಾಣವು ಈಗ ಸಹಜವಾಗಿಯೇ ಹೆಚ್ಚಾಗಿದೆ. - ಸಂಕಲನಕಾರರು)
ಎ. ಯುವಕರು ಮತ್ತು ಯುವಕರಿಗಿಂತ ಕಡಿಮೆ ವಯಸ್ಸಿನ ಕೆಲವು ಹುಡುಗ-ಹುಡುಗಿಯರು ಸೌಂದರ್ಯ ವರ್ಧನಾಲಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸ್ಪಾ ಸೆಂಟರ್‌ಗಳಿಗೆ ತಿಂಗಳಿಗೆ ೨-೩ ಬಾರಿ ಭೇಟಿ ನೀಡುತ್ತಾರೆ. ದೆಹಲಿಯಂತಹ ನಗರಗಳಲ್ಲಿ ಅವರು ಇಂತಹ ಭೇಟಿಯಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಅವರ ಕೂದಲುಗಳನ್ನು ಕತ್ತರಿಸುವುದು, ಕೂದಲುವಿನ್ಯಾಸ, ಕೂದಲಿಗೆ ಬಣ್ಣ ಹಚ್ಚುವುದು, ಮುಖ ಶೃಂಗಾರ (ಮೇಕ್-ಅಪ್), ಟ್ಯಾಟೂ ಮತ್ತು ಸೌಂದರ್ಯವರ್ಧನಾಲಯಗಳಲ್ಲಿ ಮಾಡುವ ವಿವಿಧ ಶರೀರ ಸ್ವಚ್ಛತೆಗೆ ಸಂಬಂಧಿಸಿದ ಹಾಗೂ ವಿವಿಧ ಸೌಂದರ್ಯವರ್ಧನ ಕೃತಿಗಳ ಪ್ರತಿಯೊಂದರ ಬೇರೆ ಬೇರೆ ಪ್ಯಾಕೇಜ್ ಇರುತ್ತವೆ. ಪ್ರಾರಂಭದಲ್ಲಿ ಉಚಿತ ಪ್ರವೇಶ ನೀಡಿ ಪಾಲಕರನ್ನು ಆಕರ್ಷಿಸಲಾಗುತ್ತದೆ.
ಐ. ಮಕ್ಕಳಿಗಾಗಿ ಆಕರ್ಷಕ ಪಾರ್ಟಿ ಪ್ಯಾಕೇಜ್‌ಗಳನ್ನು ಸಹ ಘೋಷಿಸಲಾಗುತ್ತದೆ. ಕೇಶಕರ್ತನಾಲಯಗಳಲ್ಲಿನ ಹುಟ್ಟುಹಬ್ಬದ ಔತಣಗಳು ಜನಪ್ರಿಯವಾಗುತ್ತಿದ್ದು ಕೇಶಕರ್ತನಾಲಯದ ಚಾಕರರೂ ಮಕ್ಕಳಿಗೆ ಶುಭಾಶಯಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಸೌಂದರ್ಯವರ್ಧನಾಲಯದ ವತಿಯಿಂದ ಅವರಿಗೆ ವಿವಿಧ ಸೌಂದರ್ಯ ಪ್ರಸಾಧನಗಳಿರುವ ಡಬ್ಬಿಗಳನ್ನೂ ಉಡುಗೊರೆಯೆಂದು ಕೊಡಲಾಗುತ್ತದೆ, ಅರ್ಥಾತ ಈ ಸಂದರ್ಭದಲ್ಲಿ ಆ ಮಕ್ಕಳನ್ನು ದೊಡ್ಡವರಂತೆಯೇ ಸೌಂದರ್ಯಪ್ರಸಾದನಗಳಿಂದ ಶೃಂಗರಿಸುವ ಕಾರ್ಯವನ್ನೂ ಅವರೇ ಮಾಡುತ್ತಾರೆ, ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ಓ. ಇವೆಲ್ಲವುಗಳಿಂದ ದೊಡ್ಡ ಪ್ರಮಾಣದಲ್ಲಿ ವ್ಯಾವಸಾಯಿಕ ಕಾರ್ಯ ಕಲಾಪ ಹೇಗೆ ನಡೆಯುತ್ತದೆ, ಎಂಬುದು ಸಹಜವಾಗಿ ಗಮನಕ್ಕೆ ಬರುತ್ತದೆ. (ಸೌಂದರ್ಯಪ್ರಸಾದನಗಳಲ್ಲಿ ಅಂತರರಾಷ್ಟ್ರೀಯ ಕಂಪನಿಗಳ ಪಾಲಿದೆ ಹಾಗಾಗಿಯೇ ಇದು ನಡೆಯುತ್ತಿದೆ, ಎಂದು ಹೇಳಿದರೆ ತಪ್ಪೇನಿಲ್ಲ. - ಸಂಕಲನಕಾರರು)
೨. ಶರೀರವನ್ನು ಸುಂದರಗೊಳಿಸಲು ಶಸ್ತ್ರಚಿಕಿತ್ಸೆ !
ಅ. ನಗರದ ಯೌವನಾವಸ್ಥೆಯಲ್ಲಿರುವ ಅಥವಾ ಯೌವನಾವಸ್ಥೆಗೂ ತಲುಪದಿರುವ ಯುವಕ-ಯುವತಿಯರು ಸುಂದರ ಕಾಣಿಸಬೇಕೆಂದು ಕೂದಲು, ಚರ್ಮ, ಮುಖ, ಮೂಗು, ಕೊಬ್ಬು ಇತ್ಯಾದಿಗಳಿಗೆ ಸಂಬಂಧಿಸಿದ ಲೇಝರ್ ಶಸ್ತ್ರಚಿಕಿತ್ಸೆ, ಹಾಗೆಯೇ ಪ್ಲಾಸ್ಟಿಕ್ ಸರ್ಜರಿಗಳನ್ನು ಈಗ ದೊಡ್ಡ ಪ್ರಮಾಣದಲ್ಲಿ ಮಾಡಿಸುತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆಗಳಿಂದ ತಮ್ಮ ವರ್ತನೆ-ಮಾತು ಇತ್ಯಾದಿಗಳಲ್ಲಿ ಬಹಳ ಸಕಾರಾತ್ಮಕ ಪರಿಣಾಮವಾಗುತ್ತದೆ, ಎಂದು ಈ ಯುವಕರ ಅಭಿಪ್ರಾಯವಾಗಿದೆ.
ಆ. ರಾಜಧಾನಿಗಳಲ್ಲಿನ ತರುಣಿಯರಲ್ಲಿ ಶರೀರದ ವಿಶಿಷ್ಟ ಅವಯವ ಗಳನ್ನು ವಿಶಿಷ್ಟ ಆಕಾರದಲ್ಲಿ ಮಾಡಲು ಹಾಗೂ ಅವು ಸುಂದರವಾಗಿ ಕಾಣಿಸಲು ಶಸ್ತ್ರಚಿಕಿತ್ಸೆ ಮಾಡುವ ಪದ್ಧತಿ ದೊಡ್ಡ ಪ್ರಮಾಣದಲ್ಲಿ ರೂಢಿಯಾಗುತ್ತಿದೆ. ೧೫ ನೇ ವರ್ಷದಿಂದ ಹುಡುಗಿಯರು ಇಂತಹ ವಿವಿಧ ಪ್ರಕಾರದ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿ ತಥಾಕಥಿತ ಸುಂದರಿಯರಾಗುತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರಿಂದ ತಾವು ಸುಂದರವಾಗಿದ್ದೇವೆ ಎಂದು ಅವರಿಗೆ ಅನಿಸುತ್ತದೆ ! ಇಂತಹ ಶಸ್ತ್ರಚಿಕಿತ್ಸೆ ಯಿಂದ, ತುಂಡುಡುಗೆಯಲ್ಲಿ ಮತ್ತು ಈಜುವ ಬಟ್ಟೆಗಳಲ್ಲಿ ತಾವು ಸುಂದರವಾಗಿ ಕಾಣಿಸುತ್ತೇವೆ, ಎಂಬುದು ಅವರ ಅಭಿಪ್ರಾಯವಾಗಿದೆ. (ಯುವತಿಯರು ಈ ಮೇಲಿನಂತಹ ಶಸ್ತ್ರಚಕಿತ್ಸೆಗಳನ್ನು ಮಾಡಿಸುವುದು ಭೋಗವಾದಿ ಪಾಶ್ಚಾತ್ಯ ಕುಸಂಸ್ಕೃತಿಯ ಅತಿರೇಕದ ಪರಿಣಾಮವಾಗಿದೆ. ಇಂತಹ ವರ್ತನೆಯಿಂದ ಯುವತಿಯರೇ ತಮ್ಮನ್ನು ಉಪಭೋಗದ ಒಂದು ವಸ್ತುವನ್ನಾಗಿ ಮಾಡಿದ ಹಾಗಾಗುತ್ತದೆ. ಮುಂದೆ ಹುಡುಗಿಯರಿಗೆ ಪತ್ನಿ ಹಾಗೂ ತಾಯಿ ಆಗುವುದಿದೆ, ಎಂಬ ಸಂಸ್ಕಾರವನ್ನು ಮಾಡಲು ಪಾಲಕರು ಕಡಿಮೆ ಬೀಳುತ್ತಿದ್ದಾರೆ, ಅಷ್ಟೇ ಅಲ್ಲ ಹುಡುಗಿಯರ ಕೈಗೆ ಬೇಕಾದಷ್ಟು ಹಣ ಮತ್ತು ಅನಿಯಂತ್ರಿತ ಸ್ವಾತಂತ್ರ್ಯವನ್ನು ಕೊಡುತ್ತಿದ್ದಾರೆ, ಇದು ಅದರ ದುಷ್ಪರಿಣಾಮವಾಗಿದೆ. - ಸಂಕಲನಕಾರರು)
ಇ. ವಿಶೇಷವೆಂದರೆ, ಹೀಗೆ ಮಾಡಲು ಸೂಚಿಸು ವವರು ಈ ಹುಡುಗಿಯರ ಪ್ರಿಯಕರ (ಬಾಯ ಫ್ರೇಂಡ್) ಆಗಿರುತ್ತಾರೆ.
ಈ. ಹುಡುಗ-ಹುಡುಗಿಯರಿಗೆ ಸುಂದರ ಕಾಣಿಸಬೇಕಾಗಿರುತ್ತದೆ; ಆದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆಯ ಸ್ವಲ್ಪವೂ ಭಯವೆನಿಸುವುದಿಲ್ಲ. ಮೂಗಿನ ಶಸ್ತ್ರಕ್ರಿಯೆ ಮಾಡಿಸಲು ಬರುವಾಗ ಹೆಚ್ಚಾಗಿ ಯಾವುದಾದರೊಬ್ಬ ನಟ ಅಥವಾ ನಟಿಯ ಛಾಯಾಚಿತ್ರವನ್ನು ತಂದು ನಮಗೆ ಇವರ ಹಾಗೆಯೇ ಮೂಗು ಬೇಕೆಂದು ಹೇಳುತ್ತಾರೆ.
ಉ. ಸದ್ಯ ಮಕ್ಕಳಿಗೆ ಆಧುನಿಕ ವೈದ್ಯ ಅಥವಾ ಅಭಿಯಂತಾ ಆಗುವು ದಕ್ಕಿಂತ ನಟ-ನಟಿ ಅಥವಾ ಮೊಡೆಲ್ ಆಗುವ ಒಲವು ಹೆಚ್ಚಿದೆ ಹಾಗೂ ಇಂತಹ ತೋರಿಕೆಯ ಮತ್ತು ಇಂತಹ ಝಗಮಗಿಸುವ ಕ್ಯಾರಿಯರಗಾಗಿ ಶಸ್ತ್ರಚಿಕಿತ್ಸೆಯ ಹಣ ಖರ್ಚು ಮಾಡಲು ಮಧ್ಯಮವರ್ಗದ ಹುಡುಗ-ಹುಡುಗಿಯರಿಗೂ ಏನೂ ಅನಿಸುವುದಿಲ್ಲ.
ಊ. ಮಕ್ಕಳ ಮನಬಂದಂತೆ ಮಾಡುವ ಸಮಾಜದ ಬದಲಾಗಿರುವ ಮಾನಸಿಕತೆ : ಶಸ್ತ್ರಚಿಕಿತ್ಸೆ ಮಾಡುವ ಆಧುನಿಕ ವೈದ್ಯರು, ಮಕ್ಕಳು ತಮ್ಮ ಪಾಲಕರ ಜೊತೆಗೇ ಶಸ್ತ್ರಚಿಕಿತ್ಸೆ ಮಾಡಿಸಲು ಬರುತ್ತಾರೆ. ಶಸ್ತ್ರಚಿಕಿತ್ಸೆ ಮಾಡಿಸುವ ನಿರ್ಣಯವನ್ನು ಹೆಚ್ಚಾಗಿ ಮಕ್ಕಳೇ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ಪಾಲಕರಲ್ಲಿ ಮಕ್ಕಳು ಹೇಳಿದಂತೆ ವರ್ತಿಸುವ ಒಲವು ಹೆಚ್ಚಾಗಿದೆ ಎಂದು ಹೇಳುತ್ತಾರೆ.
ಎ. ಸೌಂದರ್ಯವರ್ಧನದ ಶಸ್ತ್ರಚಿಕಿತ್ಸೆಗಳಿಂದ ಶರೀರದ ಮೇಲಾಗುವ ದುಷ್ಪರಿಣಾಮಗಳು
೧. ಮೇಲಿನಂತಹ ಶಸ್ತ್ರಚಿಕಿತ್ಸೆಗಳಿಂದ ಈ ವಯಸ್ಸಿನಲ್ಲಿ ಆಗುವ ನೈಸರ್ಗಿಕ ಬೆಳವಣಿಗೆಯನ್ನು ನಿಲ್ಲಿಸಲಾಗುತ್ತಿದೆ, ಹಾಗೆಯೇ ಇಂತಹ ಶಸ್ತ್ರಚಿಕಿತ್ಸೆಗಳಿಂದ ಹಾರ್ಮೋನ್ಸ್‌ಗಳ ಮೇಲೆ ಪರಿಣಾಮವಾಗುತ್ತದೆ, ಎಂದು ಕೆಲವು ವೈದ್ಯರ ಅಭಿಪ್ರಾಯವಾಗಿದೆ. ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆಯು ತೂಕವನ್ನು ಕಡಿಮೆಗೊಳಿಸುವ ಪರ್ಯಾಯವಾಗಿಲ್ಲ. ಈ ಶಸ್ತ್ರಚಿಕಿತ್ಸೆಯಿಂದ ಕೊಬ್ಬು ಮೂತ್ರಪಿಂಡಗಳಲ್ಲಿ ಅಥವಾ ರಕ್ತದಲ್ಲಿ ಹೋಗಿ ಅದರ ದುಷ್ಪರಿಣಾಮವಾಗುವ ಸಾಧ್ಯತೆಯಿದೆ.
೨. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ದೊಡ್ಡವರಂತೆ ವರ್ತಿಸಿ ತಮ್ಮ ಪ್ರತಿಮೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ವಯಸ್ಸಾಗುವ ಮೊದಲೇ ಈ ಮಕ್ಕಳು ಪ್ರೌಢರಾಗುವುದರಿಂದ ಅವರ ಭಾವನಿಕ ಹಾಗೂ ಬಾಲ್ಯಾವಸ್ಥೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಈ ಮಕ್ಕಳು ೪೦-೪೫ ವರ್ಷದವರಾದಾಗ ಅವರಿಗೆ ಪುನಃ ಸಣ್ಣ ಮಕ್ಕಳ ಹಾಗೆ ವರ್ತಿಸುವ ಇಚ್ಛೆಯಾಗುತ್ತದೆ ಹಾಗೂ ಅವರ ವರ್ತನೆಯು ಅಪ್ರಗಲ್ಭ ವ್ಯಕ್ತಿಗಳಂತೆ ಆಗ್ತುದೆ. - ಡಾ. ರಾಜೇಂದ್ರ ಬರ್ವೆ, ಸಲಹೆಗಾರರು ಮತ್ತು ಅಧ್ಯಕ್ಷ, ಬಾಂಬೆ ಸೈಕ್ಯಾಟ್ರಿಕ್ ಸೊಸೈಟಿ
೩. ಸೌಂದರ್ಯವರ್ಧನೆಗಾಗಿ ಮಾಡಿದ ಎಲ್ಲ ಶಸ್ತ್ರಚಿಕಿತ್ಸೆಗಳಲ್ಲಿ ಒಂದಲ್ಲ ಒಂದು ದುಷ್ಪರಿಣಾಮವಾಗುವುದನ್ನು ಅಲ್ಲಗಳೆಯಲು ಆಗುವುದಿಲ್ಲವೆಂದು ವೈದ್ಯರು ಹೇಳುತ್ತಾರೆ. ಇಂದು ಪಾಶ್ಚಾತ್ಯ ದೇಶಗಳಲ್ಲಿ ಭಾರತೀಯರು ತಮ್ಮ ಚುರುಕು ಬುದ್ಧಿಗಾಗಿ ಪ್ರಸಿದ್ಧರಾಗಿದ್ದಾರೆ ಮತ್ತು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಇದು ಭಾರತದಲ್ಲಿನ ಸಾತ್ತ್ವಿಕ ಆಹಾರ-ವಿಹಾರ, ಸರಳ ಜೀವನಶೈಲಿ, ನೈಸರ್ಗಿಕ ದಿನಚರ್ಯೆ, ಮಕ್ಕಳ ಮೇಲಿನ ಆಧ್ಯಾತ್ಮಿಕ ಸಂಸ್ಕಾರ ಇತ್ಯಾದಿಗಳ ಪರಿಣಾಮವಾಗಿದೆ. ಅಲ್ಲಿನ ಸ್ಥಳೀಯರಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ. ಭಾರತದ ಭಾವೀ ಪೀಳಿಗೆಯನ್ನು ನಿಯೋಜನಬದ್ಧವಾಗಿ ಅವನತಿಗೊಳಿಸಿ ಅವರ ತೇಜ ಮತ್ತು ಓಜಸ್ಸನ್ನು ನಾಶಗೊಳಿಸಲಾಗುತ್ತಿದೆ. ಇದೊಂದು ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ. ಭಾರತದ ರಾಜಧಾನಿಗಳಲ್ಲಿನ ಬದಲಾಗುತ್ತಿರುವ ಕುಸಂಸ್ಕೃತಿಯು ಗ್ರಾಮೀಣ ಭಾಗದಲ್ಲಿ ಹರಡಲು
ಹೆಚ್ಚು ಸಮಯ ತಗಲದು. ಇದು ಹೀಗೆಯೇ ಮುಂದುವರಿದರೆ, ಹಿಂದಿನದನ್ನು ಹೇಳುವವರು ಮತ್ತು ಸೂರ್ಯ ನಮಸ್ಕಾರ ಹಾಕುವ ಭಾರತದ ಬಾಲಕರು ಇತಿಹಾಸ ದಲ್ಲಿ ಜಮೆಯಾಗುವರು. ಕಲಬೆರಕೆಯ ಹಾಲಿನಲ್ಲಿ ಎತ್ತರವನ್ನು ಹೆಚ್ಚಿಸುವ ಚೂರ್ಣ ವನ್ನು ಮಿಶ್ರಮಾಡಿ ಅದನ್ನು ಕುಡಿಯುವ ಭಾರತದ ಭವಿಷ್ಯದ ಪೀಳಿಗೆಯು ಮಂದಬುದಿ, ದುರ್ಗುಣಿ, ನಿಸ್ತೇಜ ಹಾಗೂ ಧ್ಯೇಯಹೀನವಾಗಿ ಹುಟ್ಟಿದರೆ, ಅದರಲ್ಲಿ ಆಶ್ಚರ್ಯವೆನಿಸು ವಂತಹದ್ದೇನು ಇಲ್ಲ ! ಇದೆಲ್ಲವನ್ನೂ ತಪ್ಪಿಸಲು ಸ್ವಧರ್ಮ ಮತ್ತು ಸಂಸ್ಕೃತಿಯ ಮಹತ್ವವನ್ನು ತಿಳಿದುಕೊಳ್ಳುವುದು ಹಾಗೂ ಅವುಗಳನ್ನು ಆಚರಣೆಯಲ್ಲಿ ತರುವುದು ಅನಿವಾರ್ಯ ವಾಗಿದೆ !

- ಸೌ. ರೂಪಾಲಿ ವರ್ತಕ್, ಸನಾತನ ಆಶ್ರಮ, ದೇವದ್, ಪನವೇಲ್.(PHOTO)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜಿಮ್, ಪಾರ್ಲರ್, ಫ್ಯಾಶನ್ ಮತ್ತು ಮೊಡೆಲಿಂಗ್‌ಗಳ ಕುಸಂಸ್ಕಾರಗಳಲ್ಲಿ ಮೈಮರೆತಿರುವ ಮುಗ್ಧ ಬಾಲ್ಯ!