ಸಾಧಕರು, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಜಾಗತಿಕ ಮಟ್ಟದಲ್ಲಿ ಸಮಷ್ಟಿ ಸೇವೆ ಮಾಡುವ ಸುವರ್ಣಾವಕಾಶ !

ವಿವಿಧ ವಿದೇಶ ಭಾಷೆಗಳು ಬರುತ್ತಿದ್ದರೆ ಭಾಷಾಂತರದ ಸೇವೆಯಲ್ಲಿ ಪಾಲ್ಗೊಳ್ಳಿ !
೧. ಎಸ್.ಎಸ್.ಆರ್.ಎಫ್. ಈ ಆಧ್ಯಾತ್ಮಿಕ  ಸಂಸ್ಥೆಯ ವ್ಯಾಪಕ ಸ್ತರದಲ್ಲಿ ನಡೆಯುತ್ತಿರುವ ಪ್ರಸಾರ ಕಾರ್ಯ ! : ‘ಜಗತ್ತಿನಾದ್ಯಂತ ಇರುವ ಜಿಜ್ಞಾಸುಗಳಿಗೆ ಅಧ್ಯಾತ್ಮದ ಕುರಿತು ಮಾರ್ಗದರ್ಶನ ಮಾಡಿ ಆನಂದಮಯ ಜೀವನದ ಮಾರ್ಗವನ್ನು ತೋರಿಸುವ ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ (ಎಸ್.ಎಸ್.ಆರ್.ಎಫ್.) ಇದೊಂದು ಆಧ್ಯಾತ್ಮಿಕ ಸಂಸ್ಥೆ ಯಾಗಿದೆ. www.spiritualresearchfoundation.org ಇದು ಅದರ ಜಾಲತಾಣವಿದೆ.
ಹಿಂದಿ, ಆಂಗ್ಲ ಭಾಷೆಗಳೊಂದಿಗೆ ಪಾರ್ಸಿ, ಪೋರ್ಚುಗೀಸ್, ಡಚ್, ಫ್ರೆಂಚ್, ಜರ್ಮನ್, ರಷ್ಯನ್, ಸ್ಲೋವೆನಿಯನ್, ಚೀನಿ, ಮಲೇಶಿಯನ್, ಕ್ರೋಎಶಿಯನ್, ಸ್ಪ್ಯಾನಿಶ್, ಹಂಗೇರಿಯನ್, ಸರ್ಬಿಯನ್, ಇಂಡೋನೇಶಿಯನ್, ಮ್ಯಾಸಿಡೊನಿಯನ್, ಬಲ್ಗೇರಿಯನ್ ಹೀಗೆ ೧೮ ಭಾಷೆಗಳಲ್ಲಿ  ಈ ಸಂಸ್ಥೆಯ ಪ್ರಸಾರ ಕಾರ್ಯ ನಡೆಯುತ್ತಿದೆ. ಅಧ್ಯಾತ್ಮದ ಕುರಿತು ಜರ್ಮನ್ ಭಾಷೆಯಲ್ಲಿ ಎಸ್.ಎಸ್.ಆರ್.ಎಫ್.ನ ಗ್ರಂಥಸಂಪತ್ತನ್ನು ಪ್ರಕಾಶಿಸಲಾಗಿದೆ. ಸ್ಪ್ಯಾನಿಶ್, ಕ್ರೋಎಶಿಯನ್, ಸರ್ಬಿಯನ್ ಇತ್ಯಾದಿ ಭಾಷೆಗಳಲ್ಲಿ ಗ್ರಂಥಗಳ ಪ್ರಕಾಶನ ಮಾಡುವ ಸೇವೆ ನಡೆಯುತ್ತಿದೆ.

೨. ಅಧ್ಯಾತ್ಮದ ಅಮೂಲ್ಯ ಜ್ಞಾನವನ್ನು  ಇತರ ಭಾಷೆಗಳಲ್ಲಿ ಭಾಷಾಂತರ ಮಾಡುವುದಕ್ಕೆ  ಅದರ ಜ್ಞಾನವಿರುವವರು ಬೇಕಾಗಿದ್ದಾರೆ ! : ಇಡೀ ವಿಶ್ವಾದ್ಯಂತ ಶಾಸ್ತ್ರಶುದ್ಧ ಪರಿಭಾಷೆಯಲ್ಲಿ ಅಧ್ಯಾತ್ಮವನ್ನು ತಲುಪಿಸಿ ಅಖಿಲ ಮನುಕುಲಕ್ಕೆ ಅದರ ಲಾಭವಾಗಬೇಕು, ಎಂಬ ಉದಾತ್ತ ಉದ್ದೇಶವನ್ನಿಟ್ಟು ಎಸ್.ಎಸ್.ಆರ್.ಎಫ್. ಕಾರ್ಯನಿರತವಾಗಿದೆ.
ಅನೇಕ ಭಾರತೀಯರಿಗೆ ಅನೇಕ ವಿದೇಶಿ ಭಾಷೆಗಳ ಜ್ಞಾನ ಇರುತ್ತದೆ. ಇದರಿಂದಾಗಿ ಅವರು ಭಾಷಾಂತರದ ಮೂಲಕ ಅಧ್ಯಾತ್ಮಪ್ರಸಾರ ಕಾರ್ಯದಲ್ಲಿ ಸಹಭಾಗಿ ಯಾಗಲು ಇಚ್ಛಿಸುತ್ತಾರೆ. ಇಂತಹ ಅನೇಕ ಜನರು ಈಗ ಭಾಷಾಂತರ ಸೇವೆಯನ್ನು ಪ್ರಾರಂಭಿಸಿದ್ದು ಅಧ್ಯಾತ್ಮದ ಬಹುಮೂಲ್ಯವಾದ ಜ್ಞಾನವನ್ನು ಪಡೆಯುತ್ತ ಅವರಿಗೆ ವರ್ಣಿಸಲಾರದಷ್ಟು ಆನಂದ ಸಿಗುತ್ತಿದೆ. ಜಗತ್ತಿನಾದ್ಯಂತ ಜಿಜ್ಞಾಸುಗಳ ವರೆಗೆ ಅಧ್ಯಾತ್ಮದ ಪ್ರಸಾರವಾಗಲು ಅಧಿಕಾಧಿಕ ಜನರು ಈ ಸೇವೆಯಲ್ಲಿ ಪಾಲ್ಗೊಂಡರೆ ಈ ಕಾರ್ಯವು ಇನ್ನಷ್ಟು ವೇಗವಾಗಿ ಮುಂದೆ ಹೋಗಲು ಸಹಾಯವಾಗುವುದು. ಅದಕ್ಕಾಗಿ ‘ವಿದೇಶಿ ಭಾಷೆಯ ಜ್ಞಾನವಿರುವವರು ಈ ಸೇವೆಗಾಗಿ ಸಮಯ ನೀಡಿ ಅಧ್ಯಾತ್ಮಪ್ರಸಾರ ಕಾರ್ಯದಲ್ಲಿ ಅಮೂಲ್ಯವಾದ ಅಳಿಲು ಸೇವೆ ಮಾಡಬೇಕು, ಎಂದು ಮನವಿ ಮಾಡುತ್ತೇವೆ ! ಈ ವ್ಯಾಪಕ ಸ್ತರದ ಸೇವೆ ಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು, ಜಿಲ್ಲಾಸೇವಕರ ಮೂಲಕ ಕೆಳಗೆ ನೀಡಿದ ಕೋಷ್ಟಕಕ್ಕನುಸಾರ ತಮ್ಮ ವಿವರಗಳನ್ನು  dharmatej೨೦೨೩@gmail.com  ಈ ಗಣಕೀಯ ವಿಳಾಸಕ್ಕೆ ಕಳುಹಿಸಿ.

ಸೇವೆ ಮಾಡಲಿಚ್ಛಿಸುವವರು ಪೂರ್ಣಸಮಯ ಆಶ್ರಮದಲ್ಲಿದ್ದು ಅಥವಾ ಕೆಲವು ಸಮಯದವರೆಗೆ ಆಶ್ರಮಕ್ಕೆ ಬಂದು ಈ ಸೇವೆಯನ್ನು ಮಾಡಬಹುದು. ಹಾಗೆ ಸಾಧ್ಯವಾಗದಿದ್ದರೆ ಮನೆಯಲ್ಲಿದ್ದು ಸೇವೆ ಮಾಡಿಯೂ ಅವರು ಧರ್ಮಕಾರ್ಯದಲ್ಲಿ ಅಳಿಲು ಸೇವೆ ಮಾಡಬಹುದು.
- (ಸದ್ಗುರು ) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೮.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರು, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಜಾಗತಿಕ ಮಟ್ಟದಲ್ಲಿ ಸಮಷ್ಟಿ ಸೇವೆ ಮಾಡುವ ಸುವರ್ಣಾವಕಾಶ !