ಮುಂಬಯಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮನವಿ

ಎಡದಿಂದ ಶ್ರೀ. ಬಳವಂತರಾವ ದಳವಿ, ಶ್ರೀ. ಅಭಯ ವರ್ತಕ್, ಡಾ. ಉದಯ ಧುರಿ,
ನ್ಯಾಯವಾದಿ ಸಂಜೀವ ಪುನಾಳೆಕರ, ಹ.ಭ.ಪ. ಬಾಪೂ ಮಹಾರಾಜ ರಾವಕರ್, ಶ್ರೀ. ಭಾಲಚಂದ್ರ ಗಾಯಕವಾಡ್
ಡಾ. ಝಾಕೀರ ನಾಯಿಕ್ ಇವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನಿಷೇಧಿಸಿ !
 - ನ್ಯಾಯವಾದಿ ಸಂಜೀವ ಪುನಾಳೇಕರ್, ರಾಷ್ಟ್ರೀಯ ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್ತು
ಮುಂಬಯಿ : ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕರಾದ ಡಾ. ಝಾಕೀರ್ ನಾಯಿಕ್ ಇವರ ಭಾಷಣದಿಂದ ಇಲ್ಲಿಯ ವರೆಗೆ ೫೫ ಉಗ್ರರು ಪ್ರೇರೇಪಿತರಾಗಿದ್ದಾರೆನ್ನುವುದು ಕಂಡು ಬಂದಿದೆ. ಇದರಲ್ಲಿ ಕೆಲವು ಮತಾಂಧರು ಜಗತ್ತಿನಾದ್ಯಂತ ಈಗಾಗಲೇ ಭಯೋತ್ಪಾದಕ ಕೃತ್ಯವೆಸಗಿರುವುದು ಬಯಲಾಗಿದೆ. ಹಾಗೆಯೇ ಝಾಕೀರ್ ನಾಯಿಕ್ ಇವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಕಾರ್ಯಕರ್ತರು ಭಾರತದಲ್ಲಿ ಇಲ್ಲಿಯವರೆಗೆ ೮೦೦ ಕ್ಕಿಂತ ಅಧಿಕ ಜನರನ್ನು ಮತಾಂತರಿಸಿ ಅವರನ್ನು ಭಯೋತ್ಪಾದನೆಯೆಡೆಗೆ ಕರೆದೊಯ್ದಿರುವ ಆಘಾತಕಾರಿ ಅಂಶವು ಪೊಲೀಸರ ತನಿಖೆಯಿಂದ ಬಯಲಾಗಿದೆ. ಭಯೋತ್ಪಾದಕ ಕೃತ್ಯದಿಂದಾಗಿ ರಾಷ್ಟ್ರದ ಸುರಕ್ಷತೆ ಹಾಗೂ ಸಾಮಾಜಿಕ ಶಾಂತಿಯನ್ನು ಕಲಕುವ ಹಾಗೆಯೇ ಮತಾಂತರಿಸಿ ಕೋಮುದ್ವೇಷ ಸೃಷ್ಟಿಸಿರುವ ಡಾ. ಝಾಕೀರ್ ನಾಯಿಕ್‌ರನ್ನು ತಕ್ಷಣವೇ ಬಂಧಿಸಬೇಕು.
ಹಾಗೆಯೇ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನಿಷೇಧಿಸಬೇಕು. ಅಲ್ಲದೇ ಭಯೋತ್ಪಾದನೆಯನ್ನು ತಡೆಯಲು ಮತಾಂತರ ನಿಷೇಧ ಕಾನೂನು ಜಾರಿಗೊಳಿಸಬೇಕು ಇಂತಹ ಹಲವಾರು ಬೇಡಿಕೆಗಳನ್ನು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೇಕರ್ ಇವರು ಆಗಸ್ಟ್ ೨ ರಂದು ಮುಂಬಯಿ ಮರಾಠಿ ಪತ್ರಿಕಾ ವರದಿಗಾರರ ಸಂಘದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. ಈ ಸಮಯದಲ್ಲಿ ಸನಾತನ ಸಂಸ್ಥೆಯ ವಕ್ತಾರ ರಾದ ಶ್ರೀ. ಅಭಯ ವರ್ತಕ್, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಡಾ. ಉದಯ ಧುರಿ ಹಾಗೂ ರಾಷ್ಟ್ರೀಯ ವಾರಕರಿ ಸೇನೆಯ ಕೋಕಣ ವಿಭಾಗದ ಅಧ್ಯಕ್ಷರಾದ ಹ.ಭ.ಪ. ಬಾಪೂ ಮಹಾರಾಜ ರಾವಕರ್, ಹಿಂದೂ ರಾಷ್ಟ್ರ ಸೇನೆಯ ಶ್ರೀ. ಭಾಲಚಂದ್ರ ಗಾಯಕವಾಡ್, ಶ್ರೀಶಿವಪ್ರತಿಷ್ಠಾನ ಹಿಂದೂಸ್ಥಾನದ ಶ್ರೀ. ಬಳವಂತರಾವ ದಳವಿ ಉಪಸ್ಥಿತರಿದ್ದರು.
ಸನಾತನದ ನಿಷೇಧ ಒಂದು ಷಡ್ಯಂತ್ರ !
ರಾಜಸ್ಥಾನ ಹೈಕೋರ್ಟ್ ಅಸೋಸಿಯೇಶನ್,
ಜೋಧಪುರ ಇವರಿಂದ ಕೇಂದ್ರ ಗೃಹಸಚಿವರಿಗೆ ಮನವಿ
ಜೋಧಪೂರ : ಸನಾತನ ಸಂಸ್ಥೆಯು ರಾಜಸ್ಥಾನದ ನಗರ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಋಷಿಪರಂಪರೆ ಹಾಗೂ ಸಾಧನೆಯ ಸಂಸ್ಕಾರವನ್ನು ನೀಡುವ ಅಮೂಲ್ಯ ಕಾರ್ಯವನ್ನು ಮಾಡುತ್ತಿದೆ. ಸನಾತನದ ಆಧ್ಯಾತ್ಮಿಕ ಶಿಕ್ಷಣದಿಂದಾಗಿ ಯುವಕರೊಂದಿಗೆ, ಸಾರ್ವಜನಿಕರ ಚೇತನವೂ ಜಾಗೃತ ವಾಗುತ್ತಿದೆ. ಒಟ್ಟಾರೆ ಸಮಾಜ ಹಾಗೂ ರಾಷ್ಟ್ರ ವಿಕಾಸದ ಕಾರ್ಯದಲ್ಲಿ ಸನಾತನ ಸಂಸ್ಥೆಯ ಅಭೂತಪೂರ್ವ ಸಹಯೋಗವಿದೆ. ಕೆಲವು ರಾಷ್ಟ್ರವಿರೋಧಿ ಹಾಗೂ ನಾಸ್ತಿಕ ವಿಚಾರಗಳ ಸಂಘಟನೆಗಳು ಸಂಸ್ಥೆಯನ್ನು ನಿಷೇಧಿಸಲು ಸರಕಾರಕ್ಕೆ ಮನವಿ ಮಾಡುತ್ತಿವೆ. ಇದೊಂದು ಷಡ್ಯಂತ್ರವಾಗಿದ್ದು ಸನಾತನ ಸಂಸ್ಥೆಯ ಕಾರ್ಯಗಳ ಮೇಲೆ ಯಾವುದೇ ರೀತಿಯ ನಿಷೇಧ ಹೇರಬಾರದು ಎಂದು ನಮ್ಮ ಅಸೋಸಿಯೇಷನ್ನಿನ ಎಲ್ಲ ನ್ಯಾಯವಾದಿಗಳ ಪರವಾಗಿ ಗೃಹಮಂತ್ರಿ ಗಳಲ್ಲಿ ವಿನಂತಿಸುತ್ತಿದ್ದೇನೆ ಎಂದು ರಾಜಸ್ಥಾನ್ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಷನ್, ಜೋಧಪೂರ ಅಧ್ಯಕ್ಷರಾದ ನ್ಯಾಯವಾದಿ ರಣಜಿತ ಜೋಶಿ, ಕೇಂದ್ರ ಗೃಹ ಸಚಿವರಿಗೆ ಮನವಿಯನ್ನು ಕಳುಹಿಸಿದ್ದಾರೆ. (ಸಮಾಜ, ರಾಷ್ಟ್ರ ಹಾಗೂ ಧರ್ಮಕ್ಕಾಗಿ ಕಾರ್ಯ ಮಾಡುವ ಸನಾತನ ಸಂಸ್ಥೆಯ ಪರವಾಗಿ ನಿಂತಿರುವುದಕ್ಕಾಗಿ ರಾಜಸ್ಥಾನ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಶನ್, ಜೋಧಪೂರ ಅಧ್ಯಕ್ಷರಾದ ರಣಜಿತ ಜೋಶಿ ಹಾಗೂ ಎಲ್ಲ ಸದಸ್ಯರಿಗೂ ಸನಾತನ ಸಂಸ್ಥೆಯು ಕೃತಜ್ಞವಾಗಿದೆ. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮುಂಬಯಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮನವಿ