ಶಾರೀರಿಕ ತೊಂದರೆಯಿದ್ದರೂ ಲೆಕ್ಕಪತ್ರದ ಸೇವೆಯ ನಂತರ ವಿಶ್ರಾಂತಿಯ ಸಮಯದಲ್ಲಿ ವೈಜಯಂತಿ ಮಾಲೆ ಸಿದ್ಧಪಡಿಸುವ ಸೇವೆ ಮಾಡುವ ಪೂ. ಸತ್ಯವಾನ ಕದಮ್ ದಾದಾ !

ಸದ್ಗುರು ಸತ್ಯವಾನ ಕದಮ
‘ಮಂಗಳೂರು ಸೇವಾಕೇಂದ್ರದಲ್ಲಿದ್ದು ಪೂ. ಸತ್ಯವಾನ ದಾದಾ(ಅಣ್ಣ)ರವರು ಕರ್ನಾಟಕ ರಾಜ್ಯದ ಲೆಕ್ಕಪತ್ರದ ಸಂದರ್ಭದಲ್ಲಿನ ಸೇವೆ ಮಾಡುತ್ತಾರೆ. ಈ ಸಂದರ್ಭದ ಎಲ್ಲ ಸೇವೆ ಮುಗಿದ ನಂತರ ವಿಶ್ರಾಂತಿಯ ಸಮಯದಲ್ಲಿ ಅವರು ವೈಜಯಂತಿ ಮಾಲೆ ಸಿದ್ಧಪಡಿಸುವ ಸೇವೆ ಮಾಡುತ್ತಿದ್ದರು. ಪೂ. ಸತ್ಯವಾನ ದಾದಾರವರಿಗೆ ಕುಳಿತುಕೊಳ್ಳಲು ತುಂಬಾ ತೊಂದರೆಯಾಗುತ್ತಿದ್ದರೂ ಅವರು ಆ ಸೇವೆ ಮಾಡುತ್ತಾರೆ.ಆಗ ಅವರು ‘ಪ.ಪೂ. ಗುರುದೇವರ ವಿಚಾರಗಳೊಂದಿಗೆ ಏಕರೂಪವಾಗಿದ್ದಾರೆ’, ಎಂದು ಅನಿಸಿತು, ಹಾಗೆಯೇ ಇಷ್ಟೊಂದು ತೊಂದರೆಯಾಗುತ್ತಿದ್ದರೂ ಅವರು ಸೇವೆ ಮಾಡುತ್ತಾರೆ, ಈ ಬಗ್ಗೆ ಅವರಿಗೆ ಎಂದೂ ವಿಶೇಷ ಅನಿಸುವುದಿಲ್ಲ. ಅವರು ನಿರಪೇಕ್ಷರಾಗಿರುತ್ತಾರೆ. ಅವರು ಜಪಮಾಲೆ ಮಾಡಲು ಕಲಿಯುವಾಗ ಮಾಡಿದ ನೂಲಿನ ಸುತ್ತನ್ನು ನಾನು ಸಂತರ ಕೃಪೆ ಪಡೆಯಲೆಂದು ಜೋಪಾನವಾಗಿಟ್ಟಿದ್ದೇನೆ. ಅದನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಕಳುಹಿಸುತ್ತಿದ್ದೇನೆ. ಇಂತಹ ಆದರ್ಶ ಸಂತರ ಮಾರ್ಗದರ್ಶನದಲ್ಲಿ ಸಾಧಕರನ್ನು ಸಾಧನೆಯಲ್ಲಿ ಕೈಹಿಡಿದು ಮುಂದೆ ಕರೆದುಕೊಂಡು ಹೋಗುವ ಗುರುಗಳ (ಪ.ಪೂ. ಡಾಕ್ಟರರ) ವರ್ಣನೆ ಶಬ್ದದಲ್ಲಿ ವ್ಯಕ್ತಪಡಿಸಲಾರೆ. ಕೇವಲ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಾಧ್ಯ !’ - ಕು. ಸರ್ವಮಂಗಲಾ ಮೇದಿ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಾರೀರಿಕ ತೊಂದರೆಯಿದ್ದರೂ ಲೆಕ್ಕಪತ್ರದ ಸೇವೆಯ ನಂತರ ವಿಶ್ರಾಂತಿಯ ಸಮಯದಲ್ಲಿ ವೈಜಯಂತಿ ಮಾಲೆ ಸಿದ್ಧಪಡಿಸುವ ಸೇವೆ ಮಾಡುವ ಪೂ. ಸತ್ಯವಾನ ಕದಮ್ ದಾದಾ !