ಜಿಜ್ಞಾಸೆ, ಪ್ರೇಮಭಾವ ಹಾಗೂ ಸಹನಶೀಲ ವೃತ್ತಿಯ ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಮಂಗಳೂರಿನ ಕು. ಗುರುದಾಸ ಗೌಡ (೮ ವರ್ಷ) !

 ಕು. ಗುರುದಾಸ ಗೌಡ 
೨೦೧೨ ರಲ್ಲಿ ಕು. ಗುರುದಾಸ ಗೌಡ ಇವನ
ಆಧ್ಯಾತ್ಮಿಕ ಮಟ್ಟವು ಶೇ. ೫೧ ರಷ್ಟಿತ್ತು.  ಅದು ಈಗ ೨೦೧೬ ನೇ
ಗುರುಪೂರ್ಣಿಮೆಯ ಸಮಯದಲ್ಲಿ ಶೇ. ೫೩ ರಷ್ಟಾಗಿದೆ.
ಗುರುದಾಸನು ಚಿಕ್ಕವನಾಗಿದ್ದರೂ ಅವನೊಂದಿಗೆ ಮಾತನಾಡುವಾಗ ಅವನು ಚಿಕ್ಕವನಾಗಿರದೆ ಸಮವಯಸ್ಸಿನ ವನಾಗಿದ್ದಾನೆ ಎಂದು ಅನಿಸುತ್ತದೆ. ಅವನೊಂದಿಗೆ ಮಾತನಾಡುವಾಗ ಆನಂದ ಸಿಗುತ್ತದೆ. ಸಹನಶೀಲತೆ, ಪ್ರೇಮಭಾವ, ಸೇವಾಭಾವ, ಉತ್ಸಾಹ, ನೇತೃತ್ವಗುಣ ಇತ್ಯಾದಿ ಸಮಷ್ಟಿಗೆ ಆವಶ್ಯಕವಾಗಿರುವ ಸಾಕಷ್ಟು ಗುಣಗಳು ಅವನಲ್ಲಿವೆ. ಅವನಲ್ಲಿ ಕಂಡುಬಂದ ಗುಣವೈಶಿಷ್ಟ್ಯಗಳು ಮುಂದಿನಂತಿವೆ.
೧. ಸಹನಶೀಲತೆ
೧ ಅ. ಗುರುದಾಸ ಎರಡೂವರೆ ವರ್ಷದವನಾಗಿ ದ್ದಾಗ ಅವನ ಮೈಮೇಲೆ ಬಿಸಿನೀರು ಬಿದ್ದು ಶರೀರದ ಸ್ವಲ್ಪ ಭಾಗ ಸುಟ್ಟುಕೊಂಡಿದ್ದನು. ಗಾಯ ಎಷ್ಟು ಭಯಾನಕವಾಗಿತ್ತೆಂದರೆ ನೋಡುವವರಿಗೂ ಭಯ ವಾಗುತ್ತಿತ್ತು. ಗಾಯ ತುಂಬಾ ಉರಿಯುತ್ತಿದ್ದರೂ ಗುರುದಾಸನು ಶಾಂತವಾಗಿರುತ್ತಿದ್ದನು. ಆ ಕಠಿಣ ಪ್ರಸಂಗದಲ್ಲಿ ಅವನು ೧ ತಿಂಗಳವರೆಗೆ ಮಲಗಿಕೊಂಡೇ ಇದ್ದನು. ಅವನಿಗೆ ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಆದರೂ ಅವನು ಸಿಡಿಮಿಡಿಗೊಳ್ಳದೇ ಹೇಳಿದಂತೆ ಜಪ ಮಾಡುತ್ತಿದ್ದನು, ಹಾಗೆಯೇ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಕೇಳುತ್ತ ಶಾಂತವಾಗಿ ಮಲಗಿರುತ್ತಿದ್ದನು.

೧ ಆ. ಚಿಕ್ಕಂದಿನಿಂದ ಗುರುದಾಸ ನಿಗೆ ಏನಾದರೂಂದು ಕಾಯಿಲೆ ಇದ್ದೇ ಇರುತ್ತಿತ್ತು, ಆದರೆ ಅವನ ಮುಖದಲ್ಲಿ ಅದರ ಬಗ್ಗೆ ಯಾವುದೇ ಚಿಹ್ನೆ ಕಾಣಿಸುವುದಿಲ್ಲ. ಇತ್ತೀಚೆಗೆ ೧೫-೨೦ ದಿನಗಳ ಹಿಂದೆ ಸುಡುತ್ತಿದ್ದ ಪ್ಲಾಸ್ಟಿಕ್ ಆಟಿಕೆಯ ಮೇಲೆ ಅವನು ಕಾಲಿಟ್ಟನು. ಅದರಿಂದ ಅವನ ಕಾಲು ಸುಟ್ಟು ಕಾಲಿಗೆ ದೊಡ್ಡ ಗಾಯವಾಯಿತು; ಆದರೆ ಅವನ ಮುಖ ನೋಡಿದಾಗ ಅವನಿಗೆ ಅಷ್ಟು ಗಾಯವಾದ ಬಗ್ಗೆ ಸ್ವಲ್ಪವೂ ತಿಳಿಯುತ್ತಿರಲಿಲ್ಲ. ಸಾಧಕರು ಅವನಿಗೆ ಕಾಲು ತುಂಬಾ ಉರಿಯುತ್ತಿದೆಯೇ ?’ ಎಂದು ಕೇಳಿದಾಗ ಅವನು ಇಲ್ಲ ಎಂದು ಹೇಳಿದನು. ಅದನ್ನು ಕೇಳಿ ಸಾಧಕರಿಗೆ ಆಶ್ಚರ್ಯವಾಯಿತು.
೨. ಜಿಜ್ಞಾಸು ಮತ್ತು ಕಲಿಯುವ ವೃತ್ತಿ
ಯಾರೂ ಕಲಿಸದೇ ಸ್ವತಃ ತಾನಾಗಿ ಸೈಕಲ್ ಓಡಿಸಲು ಕಲಿಯುವುದು
ಅವನಿಗೆ ಚಿಕ್ಕಂದಿನಿಂದಲೂ ವಾಹನಗಳೆಂದರೆ ತುಂಬ ಇಷ್ಟ. ಅವನಿಗೆ ಓರ್ವ ಸಾಧಕನು ಸೈಕಲ್ ತಂದುಕೊಟ್ಟರು. ಆಗ ಅವನಿಗೆ ಸೈಕಲ್ ಓಡಿಸಲು ಬರುತ್ತಿರಲಿಲ್ಲ; ಆದರೆ ಯಾರೂ ಕಲಿಸದೇ ೨-೩ ದಿನಗಳಲ್ಲಿ ಅವನು ಸ್ವತಃ ಸೈಕಲ್ ಓಡಿಸಲು ಕಲಿತನು.
೩. ಗುರುದಾಸ ತಪ್ಪುಗಳನ್ನು ಹೇಳಿದಾಗ ಒಪ್ಪಿಕೊಳ್ಳುವುದು
ಅವನಿಂದಾದ ತಪ್ಪುಗಳನ್ನು ಅವನಿಗೆ ಗಂಭೀರವಾಗಿ ಹೇಳಿದರೆ ಅವನು ಅವುಗಳನ್ನು ಸ್ವೀಕರಿಸುತ್ತಾನೆ. ಆ ಸಮಯದಲ್ಲಿ ಅವನ ಕಣ್ಣುಗಳಲ್ಲಿ ನೀರು ಬರುತ್ತದೆ. ತಪ್ಪುಗಳಿಂದ ಇತರ ಸಾಧಕರಿಗೆ ತೊಂದರೆಯಾದರೆ, ಪ.ಪೂ. ಗುರುಗಳಿಗೆ ಇಷ್ಟವಾಗುವುದಿಲ್ಲ, ಅವರು ಎಲ್ಲವನ್ನು ನೋಡುತ್ತಿರುತ್ತಾರೆ, ಎಂದು ಹೇಳಿದಾಗ ಅವನು ಕ್ಷಮೆ ಕೇಳುತ್ತಾನೆ.
೩ ಅ. ತಪ್ಪಿಗಾಗಿ ಹೇಳಿದ ಪ್ರಾಯಶ್ಚಿತ್ತವನ್ನು ಪಾಲಿಸುವುದು
ಅವನ ಒಂದು ತಪ್ಪಿಗಾಗಿ ಅವನ ತಂದೆಯವರು ಅವನಿಗೆ ೧೦ ದಿನಗಳವರೆಗೆ ಗಣಕಯಂತ್ರ ವಿಭಾಗಕ್ಕೆ ಹೋಗಬಾರದು ಎಂದು ಶಿಕ್ಷೆಯನ್ನು ನೀಡಿದ್ದರು. ಅವನು ಗಣಕಯಂತ್ರ ವಿಭಾಗದ ಬಾಗಿಲಿನ ಹತ್ತ್ತಿರ ಬಂದು ನಿಲ್ಲುತ್ತಿದ್ದನು; ಆದರೆ ಒಳಗೆ ಬರುತ್ತಿರಲಿಲ್ಲ.
೪. ಉಪಾಯಗಳ ಮಹತ್ವದ ಅರಿವಿರುವುದು
ಗುರುದಾಸನಿಗೆ ಶಾಲೆಯಲ್ಲಿ ಅವನ ಶಿಕ್ಷಕಿ ಹೇಳಿದ್ದು ಅವನಿಗೆ ಸರಿಯಾಗಿ ಕೇಳಿಸಲಿಲ್ಲ, ಮರುದಿನ ಶಾಲೆಗೆ ಹೋಗುವಾಗ ಗುರುದಾಸನು ತನ್ನ ಅಮ್ಮನಲ್ಲಿ, ನನ್ನ ಕಿವಿಯ ಸುತ್ತಲೂ ಕರ್ಪೂರವನ್ನು ಹಚ್ಚು. ಶಿಕ್ಷಕಿ ಹೇಳಿದ್ದು, ನನಗೆ ಸರಿಯಾಗಿ ಕೇಳಿಸುವುದಿಲ್ಲ ಎಂದು ಹೇಳಿದನು.
೫. ಪ್ರೇಮಭಾವ
೫ ಅ.ತನ್ನ ತಮ್ಮನ ಕಾಳಜಿಯನ್ನು ದೊಡ್ಡವರಂತೆ ವಹಿಸುವುದು
ಗುರುದಾಸನು ತನ್ನ ತಮ್ಮನ ಕಾಳಜಿಯನ್ನು ತೆಗೆದುಕೊಳ್ಳುತ್ತಾನೆ. ಅದನ್ನು ನೋಡಿ ಅವನು ವಯಸ್ಸಿನಲ್ಲಿ ಚಿಕ್ಕವನಾಗಿದ್ದಾನೆಂದು ಅನಿಸುವುದೇ ಇಲ್ಲ. ಚರಣದಾಸನು (ತಮ್ಮ) ಹಟ ಮಾಡಿದಾಗ ಗುರುದಾಸನು ಅವನಿಗೆ ಸಮಾಧಾನ ಹೇಳುತ್ತಾನೆ. ಗುರುದಾಸನ ತನ್ನ ತಮ್ಮನೊಂದಿಗೆ ಆಡುವ-ಮಾತನಾಡುವ ಪದ್ಧತಿ ಮತ್ತು ಅವನನ್ನು ಅರಿತು ಕೊಳ್ಳುವುದು ಇತ್ಯಾದಿಗಳು ದೊಡ್ಡ ಜವಾಬ್ದಾರಿಯುತ ವ್ಯಕ್ತಿಯಂತಿವೆ.
೫ ಆ. ಹೊಸ ಸಾಧಕರೊಂದಿಗೆ ಸ್ವತಃ ತಾನಾಗಿಯೇ ಮಾತನಾಡುವುದು ಮತ್ತು ಅವರಿಗೆ ಸೇವಾಕೇಂದ್ರವನ್ನು ತೋರಿಸುವುದು
ಅವನು ತಾನಾಗಿಯೇ ಎಲ್ಲರೊಂದಿಗೆ ಮಾತನಾ ಡುತ್ತಾನೆ. ಸೇವಾಕೇಂದ್ರಕ್ಕೆ ಹೊಸತಾಗಿ ಯಾರಾದರೂ ಬಂದರೆ ಅವನು ಅವರೊಂದಿಗೆ ತಕ್ಷಣ ಸ್ನೇಹ ಬೆಳೆಸು ತ್ತಾನೆ. ಅವರು ಅವನಿಗಿಂತ ವಯಸ್ಸಿನಲ್ಲಿ ದೊಡ್ಡ ವರಾಗಿದ್ದರೂ ಅವನು ಅವರೊಂದಿಗೆ ಬೆರೆತು ಕೊಂಡು ಆತ್ಮೀಯತೆಯನ್ನು ಬೆಳೆಸುತ್ತಾನೆ. ಅವರ ಭಾಷೆ ಬರ ದಿದ್ದರೂ ಅವನಿಗೆ ಅದರ ಅಡಚಣೆ ಅನಿಸುವುದಿಲ್ಲ.
೫ ಇ. ಅನಾರೋಗ್ಯದಿಂದ ಬಳಲುತ್ತಿದ್ದ ಸಾಧಕಿಯ ವಿಚಾರಣೆ ಮಾಡುವುದು
ಒಮ್ಮೆ ಓರ್ವ ಸಾಧಕಿಯು ಅನಾರೋಗ್ಯದಿಂದ ಕೋಣೆಯಲ್ಲಿ ಮಲಗಿದ್ದಳು. ಆಗ ಗುರುದಾಸನು ಅಲ್ಲಿ ಬಂದು ಅವಳ ಕಾಯಿಲೆಯ ಬಗ್ಗೆ ವಿಚಾರಿಸಿದನು. ಹಾಗೆಯೇ ಊಟ ತಂದು ಕೊಡಲೇನು, ಎಂದೂ ಕೇಳಿದನು. ಆಗ ಅವನ ಮಾತುಗಳಲ್ಲಿ ಇತರರ ಬಗ್ಗೆ ತುಂಬಾ ಕಾಳಜಿ ಇದೆ ಎಂದು ಅನಿಸಿತು.
೬. ಸೇವಾಭಾವ
ಶಾರೀರಿಕ ಸೇವೆಯಲ್ಲಿ ಸಹಾಯ ಮಾಡುವುದು : ಗುರುದಾಸನಿಗೆ ಶಾರೀರಿಕ ಸೇವೆಗಳನ್ನು ಮಾಡಲು ತುಂಬಾ ಇಷ್ಟವಾಗುತ್ತದೆ. ಅವನು ಸೇವಾಕೇಂದ್ರದಲ್ಲಿನ ವಾಹನಗಳ ಸ್ವಚ್ಛತೆ ಮತ್ತು ಇತರ ಸ್ವಚ್ಛತೆಯ ಸೇವೆಗಳನ್ನು ಮಾಡುವ ಸಾಧಕರಿಗೆ ಸಹಾಯ ಮಾಡುತ್ತಾನೆ. ಇತರರಿಗೆ ಸಹಾಯ ಮಾಡುವಾಗ ಅವನಿಗೆ ತುಂಬಾ ಆನಂದವಾಗುತ್ತದೆ. ಸೇವಾಕೇಂದ್ರದಲ್ಲಿ ಒಂದು ವಿವಾಹ ಸಮಾರಂಭವಿದ್ದ ನಿಮಿತ್ತ ಗುರುದಾಸನಿಗೆ ಸೇವಾಕೇಂದ್ರದ ಮೆಟ್ಟಿಲುಗಳ ಸ್ವಚ್ಛತೆಯ ಸೇವೆಯನ್ನು ಕೊಡಲಾಗಿತ್ತು. ಅವನೊಂದಿಗೆ ಓರ್ವ ಬಾಲಸಾಧಕನೂ ಇದ್ದನು. ಅವರಿ ಬ್ಬರೂ ಸೇರಿ ಆ ಸ್ವಚ್ಛತೆಯನ್ನು ಚೆನ್ನಾಗಿ ಮಾಡಿದರು. ಗುರುದಾಸನು ಆ ಸೇವೆಗಾಗಿ ಬೇಕಾಗುವ ವಸ್ತುಗಳನ್ನು ಮತ್ತು ಆವಶ್ಯಕ ಸಹಾಯವನ್ನು ಇತರ ಸಾಧಕರಿಂದ ಪಡೆದುಕೊಂಡನು.
೭. ಭಾವ
ಅವನು ರಾಮನಾಥಿ ಆಶ್ರಮಕ್ಕೆ ಹೋದಾಗ ಅವನಲ್ಲಿ ‘ಪ.ಪೂ. ಗುರುದೇವರನ್ನು ನೋಡಬೇಕು, ಸದ್ಗುರು ಬಿಂದಾ ಅಕ್ಕನವರನ್ನು ಭೇಟಿ ಯಾಗಬೇಕು’, ಎಂಬ ತಳಮಳ ನಿರ್ಮಾಣವಾಗಿತ್ತು. ಅಲ್ಲಿ ಅವನು ಸಾಧಕರಿಗೆ ಸ್ವತಃ ಕೇಳಿ ಸದ್ಗುರು ಬಿಂದಾತಾಯಿಯವರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿ ಬಂದನು.
- ಸೌ. ಮಂಜುಳಾ ರಮಾನಂದ ಗೌಡ (ತಾಯಿ) ಹಾಗೂ ಮಂಗಳೂರು ಸೇವಾಕೇಂದ್ರದ ಸಾಧಕರು, (೨೯.೪.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜಿಜ್ಞಾಸೆ, ಪ್ರೇಮಭಾವ ಹಾಗೂ ಸಹನಶೀಲ ವೃತ್ತಿಯ ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಮಂಗಳೂರಿನ ಕು. ಗುರುದಾಸ ಗೌಡ (೮ ವರ್ಷ) !