ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಫಲಕ ಪ್ರಸಿದ್ಧಿಗಾಗಿ
. ಹಿಂದೂಗಳು ಬಹುಸಂಖ್ಯೆಯಲ್ಲಿರುವ ಭಾರತದಲ್ಲಿ ಹಿಂದೂಗಳೇ ಅಸುರಕ್ಷಿತರು !
ಕಾಶ್ಮೀರದ ಪೂಂಛನ್ ಬೂಢಾ ಅಮರನಾಥ ಯಾತ್ರೆಯ ಮೇಲೆ ಆಗಸ್ಟ್ ೧೩ ರಂದು ಜಿಹಾದಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ೧೪ ಕ್ಕಿಂತ ಅಧಿಕ ಶಿವಭಕ್ತರು ಗಾಯಗೊಂಡರು. ಇಲ್ಲಿಯ ದಶನಾಮಿ ಆಖಾಡಾದ ಪ್ರವೇಶದ್ವಾರದ ಸಮೀಪ ಈ ಗ್ರೆನೇಡ್ ಎಸೆಯಲಾಯಿತು. ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ.
. ಕಾಶ್ಮೀರದಲ್ಲಿ ಹಿಂದೂಗಳ ಸಂಭಾವ್ಯ ವಂಶವಿಚ್ಛೇದನೆಯನ್ನು ಯಾರು ತಡೆಯುವರು ?
ಕಾಶ್ಮೀರ ಕಣಿವೆಯಲ್ಲಿ ಕಲ್ಲು ಎಸೆಯುವವರ ಕುರಿತು ಮಾತನಾಡಿದ ಪ್ರಧಾನಿ ಮೋದಿಯವರು ನಮ್ಮ ಬಗ್ಗೆ ಒಂದು ಮಾತೂ ಆಡದ ಕಾರಣ ನಮಗೆ ನಿರಾಶೆಯಾಯಿತು’, ಎಂದು ಕಾಶ್ಮೀರದಲ್ಲಿ ನೆಲೆಸಿದ ೭೦೦ ಹಿಂದೂ ಕಾರ್ಮಿಕರು ಹೇಳಿದರು. ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರಿಂದ ಅವರು ಕಾಶ್ಮೀರದಿಂದ ಜಮ್ಮುವಿಗೆ ಪಲಾಯನಗೊಂಡಿದ್ದಾರೆ.

. ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂ ದೇವಾಲಯಗಳ ಸುರಕ್ಷಿತತೆಯ ದಯನೀಯ ಸ್ಥಿತಿ !
ಕೇರಳದ ತಿರುವನಂತಪುರಂನ ಜಗತ್ಪ್ರಸಿದ್ಧ ಪದ್ಮನಾಭಸ್ವಾಮಿ ದೇವಸ್ಥಾನದ ಖಜಾನೆಯಿಂದ ಬೆಲೆಬಾಳುವ ವಜ್ರ ಮತ್ತು ಒಡವೆಗಳು ನಾಪತ್ತೆಯಾದ ಘಟನೆ ಬಹಿರಂಗವಾಗಿದೆ. ಈ ಘಟನೆಯ ತನಿಖೆಗಾಗಿ ದೇವಸ್ಥಾನ ಸಮಿತಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲು ನಿರ್ಧರಿಸಿದೆ.
. ಹಿಂದೂಗಳೇ, ಪಾಕಿಸ್ತಾನದಲ್ಲಿರುವ ಹಿಂದೂಗಳ ದಯನೀಯ ಸ್ಥಿತಿಯನ್ನು ಅರಿತುಕೊಳ್ಳಿರಿ !
ಪಾಕಿಸ್ತಾನದಲ್ಲಿ ಸಂತ್ರಸ್ತ ಹಿಂದೂಗಳು ಆಗಸ್ಟ್ ೧೨ ರಂದು ಜರುಗಿದ ‘ಅಲ್ಪಸಂಖ್ಯಾತ ದಿನ’ದಂದು ಮಾಜಿ ಸಾಂಸದ ಅಬ್ದುಲ್ ಹಕ್ ಉರ್ಫ್ ಮಿಯಾಂ ಮಿಠ್ಠು ವಿರುದ್ಧ ಎಲ್ಲ ನಗರಗಳಲ್ಲಿ ಆಂದೋಲನ ಮಾಡಿದರು. ಹಿಂದೂ ಹುಡುಗಿಯರನ್ನು ಅಪಹರಿಸಿ ಅವರನ್ನು ಮತಾಂತರಿಸುವ ಆರೋಪ ಅವರ ಮೇಲಿದೆ. ಪಾಕಿಸ್ತಾನದಲ್ಲಿ ಪ್ರತೀವರ್ಷ ೩೦೦ ಹಿಂದೂ ಹುಡುಗಿಯರ ಅಪಹರಣವಾಗುತ್ತದೆ.
. ಗೋಮಾತೆಯ ರಕ್ಷಣೆಗಾಗಿ ಶ್ರಮಿಸುವ ಸರಕಾರ ಬೇಕು !
ರಾಜಸ್ಥಾನದ ನಂತರ ಈಗ ಮಧ್ಯಪ್ರದೇಶದ ಗ್ವಾಲಿಯರ್‌ನ ಒಂದು ಸರಕಾರಿ ಗೋಶಾಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ೧ ಸಾವಿರದ ೨೦೦ ಕ್ಕಿಂತ ಹೆಚ್ಚು ಆಕಳುಗಳು ಮೃತಪಟ್ಟಿರುವ ಘಟನೆ ಬಯಲಾಗಿದೆ. ಈ ಗೋಶಾಲೆಯಲ್ಲಿ ಕ್ಷಮತೆಗಿಂತಲೂ ಅಧಿಕ ಆಕಳುಗಳಿದ್ದು, ಹುಲ್ಲು ಮತ್ತು ಔಷಧಿಗಳ ಪೂರೈಕೆಯ ಸಮಸ್ಯೆಗಳಿರುವುದಾಗಿ ಚರ್ಚಿಸಲಾಗುತ್ತಿದೆ.
. ಚಿಕ್ಕ ವಿಯೆಟ್ನಾಮ್‌ನಿಂದ ಭಾರತ ಏನಾದರೂ ಪಾಠ ಕಲಿಯುವುದೇ ?
ದಕ್ಷಿಣ ಚೀನಾ ಸಮುದ್ರದ ವಿಯೆಟ್ನಾಮ್‌ನ ದ್ವೀಪಗಳ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲು ಈ ದ್ವೀಪಗಳ ಮೇಲೆ ವಿಯೆಟ್ನಾಮ್ ‘ಮೊಬೈಲ್ ರಾಕೇಟ್ ಲಾಂಚರ್ಸ್’ಗಳನ್ನು ನೇಮಿಸಲಿದೆ. ಸಮುದ್ರದಲ್ಲಿ ಚೀನಾ ಸೈನ್ಯವಿರುವ ದ್ವೀಪಗಳ ಮೇಲೆ ಇಲ್ಲಿಂದ ಗಮನವಿಡಲು ಸಾಧ್ಯ ವಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
. ಗಣೇಶ ಭಕ್ತರೇ, ಗಣೇಶೋತ್ಸವದಲ್ಲಿ ವಿವಿಧ ರೀತಿಯಿಂದಾಗುವ ಶ್ರೀ ಗಣೇಶನ ವಿಡಂಬನೆ ತಡೆಯಿರಿ !
ಹಿಂದೂಗಳೇ, ಗಣೇಶೋತ್ಸವದ ಕಾಲಾವಧಿಯಲ್ಲಿ ದಿನಪತ್ರಿಕೆಗಳಲ್ಲಿ ವಿವಿಧ ಸಂಸ್ಥೆಗಳಿಂದ ಶುಭಾಶಯ ಕೊಡಲು ಶ್ರೀ ಗಣೇಶನ ವಿಡಂಬನಾತ್ಮಕ ಚಿತ್ರ ಉಪಯೋಗಿಸಿ ಜಾಹೀರಾತು ಮುದ್ರಿಸಲಾಗುತ್ತದೆ. ನಿಮ್ಮ ಶ್ರದ್ಧಾಸ್ಥಾನಗಳ ವಿಡಂಬನೆಯನ್ನು ಕಾನೂನುಮಾರ್ಗದಲ್ಲಿ ತಡೆಗಟ್ಟಿರಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !