ಶ್ರೀ ಗಣೇಶ ಚತುರ್ಥಿ (೫ ಸೆಪ್ಟೆಂಬರ್ ೨೦೧೬)

. ಮಹತ್ವ
ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುರ್ಣಿಮೆ ಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ಈ ಕಾಲದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದ ರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ. (ಈ ಲಹರಿಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಸನಾತನದ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.)

ಶ್ರೀ ಗಣೇಶ ಚತುರ್ಥಿಯ ದಿನ ಹಾಗೆಯೇ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ದಿನನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ಸಮಯದಲ್ಲಿ ಮಾಡಿದ ಗಣೇಶನ ಉಪಾಸನೆಯಿಂದ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ.
. ಕುಟುಂಬದಲ್ಲಿ ಯಾರು ಆಚರಿಸಬೇಕು ?
ಗಣೇಶ ಚತುರ್ಥಿ ಆಚರಿಸಲಾಗುವ ವ್ರತವನ್ನು ‘ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ಇದನ್ನು ಎಲ್ಲ ಕುಟುಂಬಗಳಲ್ಲಿಯೂ ಆಚರಿಸಬೇಕು. ಅಣ್ಣ ತಮ್ಮಂದಿ ರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ (ಖಜಾನೆ) ಮತ್ತು ಪಾಕಶಾಲೆಯು ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕ ಶಾಲೆಯು ಯಾವುದೇ ಕಾರಣದಿಂದಾಗಿ ವಿಭಕ್ತ (ಬೇರೆ
ಬೇರೆ)ವಾಗಿದ್ದರೆ ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶ ಮೂರ್ತಿಯನ್ನು ಪೂಜಿಸಬೇಕು.
ಪ್ರಶ್ನೆ : ದ್ರವ್ಯಕೋಶ ಮತ್ತು ಪಾಕಶಾಲೆಯು ಬೇರೆಬೇರೆಯಾಗಿದ್ದರೆ, ಪ್ರತಿಯೊಬ್ಬರು ಸ್ವತಂತ್ರವಾಗಿ ಗಣಪತಿಯನ್ನು ಕೂರಿಸುವುದು ಯೋಗ್ಯವಾಗಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ; ಆದರೆ ಕೆಲವು ಕುಟುಂಬಗಳಲ್ಲಿ ಕುಲಾಚಾರದಂತೆ ಅಥವಾ ಮೊದಲಿ ನಿಂದಲೂ ನಡೆದುಬಂದಿರುವ ಪದ್ಧತಿಯಂತೆ ಒಂದೇ ಗಣಪತಿಯನ್ನು ಕೂರಿಸುವ ದೃಢ ಪರಂಪರೆಯಿದೆ. ಇಂತಹ ಕಡೆಗಳಲ್ಲಿ ಗಣಪತಿಯನ್ನು ಪ್ರತಿವರ್ಷ ಒಬ್ಬೊಬ್ಬ ಸಹೋದರನ ಮನೆಯಲ್ಲಿ ಕೂರಿಸುತ್ತಾರೆ. ಇದು ಯೋಗ್ಯವಾಗಿದೆಯೋ, ಅಯೋಗ್ಯವಾಗಿದೆಯೋ ?
.ಪೂ. ಡಾ. ಜಯಂತ ಆಠವಲೆ : ಕುಲಾಚಾರ ದಂತೆ ಅಥವಾ ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿಯಂತೆ ಒಂದೇ ಗಣಪತಿಯನ್ನು ಕೂರಿಸುವ ದೃಢ ಪರಂಪರೆಯನ್ನು ಮುರಿಯುವುದು ಬೇಡ ವಾಗಿದ್ದರೆ, ಯಾವ ಸಹೋದರನಲ್ಲಿ ಭಾವವಿದೆಯೋ, ಅವನ ಮನೆಯಲ್ಲಿ ಗಣಪತಿಯನ್ನು ಕೂರಿಸುವುದು ಯೋಗ್ಯವಾಗಿದೆ.
. ಹೊಸ ಮೂರ್ತಿಯ ಲಾಭ
ಮನೆಯಲ್ಲಿ ಗಣಪತಿಯನ್ನು ಪೂಜೆಯಲ್ಲಿ ಇಟ್ಟಿರು ವಾಗಲೂ ನೂತನ ಮೂರ್ತಿಯನ್ನು ತರುವ ಉದ್ದೇಶವು ಹೀಗಿದೆ. ಶ್ರೀ ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಬಹಳ ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ನಿತ್ಯದ ಮನೆಯಲ್ಲಿ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳ ಶಕ್ತಿಯು ಬರುತ್ತದೆ. ಇಂತಹ ಹೆಚ್ಚಿನ ಶಕ್ತಿ ಇರುವ ಮೂರ್ತಿಯ ವಿಧಿಪೂರ್ವಕ ವಾದ ಪೂಜೆ-ಅರ್ಚನೆಯನ್ನು ವರ್ಷಪೂರ್ತಿ ಸರಿ ಯಾಗಿ ಮಾಡುವುದು ಕಠಿಣವಾಗುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದಲ್ಲಿನ ಎಲ್ಲ ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಗಣೇಶಲಹರಿಗಳನ್ನು ಆವಾಹನೆ ಮಾಡಲು ನೂತನ ಮೂರ್ತಿಯನ್ನು ಉಪಯೋಗಿಸಿ, ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶಲಹರಿಗಳಲ್ಲಿ ಸತ್ತ್ವ, ರಜ ಮತ್ತು ತಮಗಳ ಪ್ರಮಾಣವು ೫ : : ೫ ಹೀಗಿದ್ದರೆ ಸಾಮಾನ್ಯ ವ್ಯಕ್ತಿಗಳಲ್ಲಿ ಅವುಗಳ ಪ್ರಮಾಣವು ೧ : : ೫ ಹೀಗಿದೆ; ಆದುದರಿಂದ ಸಾಮಾನ್ಯ ವ್ಯಕ್ತಿಯು ಗಣೇಶಲಹರಿಗಳನ್ನು ಹೆಚ್ಚು ಸಮಯ ಗ್ರಹಿಸಲಾರನು.
. ಶ್ರೀ ಗಣೇಶ ಚತುರ್ಥಿಯಂದು ಪೂಜಿಸುವ ಮೂರ್ತಿ ಹೇಗಿರಬೇಕು?
ಇತ್ತೀಚೆಗೆ ಧರ್ಮಶಾಸ್ತ್ರವನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ತಮ್ಮ ಇಷ್ಟ ಮತ್ತು ಕಲ್ಪನಾ ಸೌಂದರ್ಯಕ್ಕನುಸಾರ ವಿವಿಧ ಆಕಾರಗಳಲ್ಲಿ ಮತ್ತು ವಿವಿಧ ರೂಪಗಳಲ್ಲಿ (ಉದಾ. ಗರುಡನ ಮೇಲೆ ಕುಳಿತ ಗಣಪತಿ, ಶ್ರೀಕೃಷ್ಣನ ವೇಷದಲ್ಲಿನ ಗಣಪತಿ, ನರ್ತಿಸುವ ಗಣಪತಿ ಮುಂತಾದವುಗಳು) ಶ್ರೀ ಗಣೇಶನ ಮೂರ್ತಿಯನ್ನು ಪೂಜಿಸಲಾಗುತ್ತದೆ. ಶ್ರೀ ಗಣೇಶ ಚತುರ್ಥಿಯ ಸಮಯದಲ್ಲಿ ಮನೆಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿಯೂ ಬಹಳ ದೊಡ್ಡ ಪ್ರಮಾಣ ದಲ್ಲಿ ಗಣೇಶನ ಮೂರ್ತಿಗಳನ್ನು ಪೂಜಿಸಲಾಗುತ್ತದೆ. ಆ ಸಮಯದಲ್ಲಿ ಮೂರ್ತಿಗಳ ಈ ಅಯೋಗ್ಯ ಪದ್ಧತಿಯು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಶ್ರೀ ಗಣೇಶಮೂರ್ತಿ ಶಾಸ್ತ್ರಕ್ಕನುಸಾರ ಹೇಗಿರಬೇಕು ಎಂಬುದನ್ನು ಮುಂದೆ ಕೊಡಲಾಗಿದೆ.
. ಶ್ರೀಗಣಪತಿ ಅಥರ್ವಶೀರ್ಷದಲ್ಲಿ ವರ್ಣಿ ಸಿದ ಶ್ರೀ ಗಣೇಶನ ಮೂರ್ತಿವಿಜ್ಞಾನ : ಶ್ರೀಗಣಪತಿ ಅಥರ್ವಶೀರ್ಷದಲ್ಲಿ ಶ್ರೀ ಗಣೇಶನ (ಮೂರ್ತಿವಿಜ್ಞಾನ) ರೂಪವು ಹೀಗಿದೆ - ‘ಏಕದಂತಂ ಚತುರ್ಹಸ್ತಂ’ ಎಂದರೆ ಏಕದಂತನು, ಚತುರ್ಭುಜನು, ಪಾಶ ಮತ್ತು ಅಂಕುಶವನ್ನು ಧರಿಸಿರುವವನು, ಒಂದು ಕೈಯಲ್ಲಿ (ಮುರಿದಿರುವ) ದಂತವನ್ನು ಧರಿಸಿರುವವನು ಮತ್ತು ಇನ್ನೊಂದು ಕೈಯು ವರದ ಮುದ್ರೆಯಲ್ಲಿ ಇರುವವನು, ಯಾರ ಧ್ವಜದ ಮೇಲೆ ಮೂಷಕ ಚಿಹ್ನೆಯಿದೆಯೋ ಅಂತಹವನು, ರಕ್ತ (ಕೆಂಪು) ವರ್ಣದವನು, ಲಂಬೋದರನು, ಮೊರದಂತಹ ಕಿವಿಗಳಿರು ವವನು, ರಕ್ತ (ಕೆಂಪು) ವಸ್ತ್ರವನ್ನು ಉಟ್ಟು ಕೊಂಡಿರುವವನು, ಮೈಗೆ ರಕ್ತ (ಕೆಂಪು) ಚಂದನದ ಲೇಪವನ್ನು ಹಚ್ಚಿಕೊಂಡಿರುವವನು ಮತ್ತು ರಕ್ತಪುಷ್ಪ ಗಳಿಂದ ಪೂಜಿಸಲ್ಪಟ್ಟಿರುವವನು.
ಟಿಪ್ಪಣಿ : ಶ್ರೀ ಗಣೇಶನು ಒಂದು ಕೈಯಲ್ಲಿ (ಮುರಿದ) ದಂತವನ್ನು ಧರಿಸಿದವನಾಗಿದ್ದಾನೆ ಎಂದು ಅಥರ್ವಶೀರ್ಷದಲ್ಲಿ ಅವನ ರೂಪದ ಬಗ್ಗೆ ಹೇಳಲಾಗಿದೆ. ಶ್ರೀ ಗಣೇಶನು ಮುಖ್ಯವಾಗಿ ಜ್ಞಾನದ (ವಿದ್ಯೆಯ) ದೇವತೆ ಯಾಗಿದ್ದಾನೆ. ‘ಮೋದಕ’ವು ಜ್ಞಾನದ ಪ್ರತೀಕವಾಗಿದೆ. ಈ ಕಾರಣದಿಂದಾಗಿ ಶ್ರೀ ಗಣೇಶನ ಕೈಯಲ್ಲಿ ಮುರಿದ ದಂತದ ಬದಲಿಗೆ ಮೋದಕವನ್ನು ತೋರಿಸುವ ಪದ್ಧತಿ ಬಂದಿರಬೇಕು.
. ಜೇಡಿಮಣ್ಣು ಅಥವಾ ಆವೆ ಮಣ್ಣಿನಿಂದ ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿಧಿಯಿದೆ : ಪಾರ್ವತಿಯು ನಿರ್ಮಿಸಿದ ಶ್ರೀ ಗಣೇಶನು ಮಹಾಗಣಪತಿಯ ಅವತಾರವಾಗಿದ್ದಾನೆ. ಅವಳು ಮಣ್ಣಿನಿಂದ ಆಕಾರ ಮಾಡಿ ಅದರಲ್ಲಿ ಶ್ರೀ ಗಣೇಶನನ್ನು ಆವಾಹನೆ ಮಾಡಿದಳು. (ಪುರಾಣದಲ್ಲಿ ಶ್ರೀ ಗಣೇಶನು ಮಣ್ಣಿನಿಂದ ತಯಾರಾಗಿದ್ದಾನೆ ಎನ್ನಲಾಗಿದೆ.) ‘ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಮಣ್ಣಿನ ಗಣೇಶಮೂರ್ತಿ ತಯಾರಿಸ ಬೇಕು’ ಎಂದು ಶಾಸ್ತ್ರವಿಧಿಯಿದೆ.
(ಆಧಾರ : ಸನಾತನ ನಿರ್ಮಿತ ಗ್ರಂಥ ಶ್ರೀ ಗಣಪತಿ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀ ಗಣೇಶ ಚತುರ್ಥಿ (೫ ಸೆಪ್ಟೆಂಬರ್ ೨೦೧೬)