ಬುರ್ಹಾನ್ ಅಡಗಿರುವ ಮಾಹಿತಿ ದೊರೆತಿದ್ದರೆ, ಅವನನ್ನು ಕೊಲ್ಲುತ್ತಿರಲಿಲ್ಲ ! - ಮೆಹಬೂಬಾ ಮುಫ್ತಿ

ಭಯೋತ್ಪಾದನೆಯನ್ನು ಪೋಷಿಸುವ ರಾಜಕಾರಣಿಗಳಿರುವ
ದೇಶವು ಎಂದಾದರೂ ಭಯೋತ್ಪಾದನೆಯನ್ನು ನಾಶಗೊಳಿಸಬಲ್ಲದೇ ?
ಶ್ರೀನಗರ : ಕೊಕೆರನಾಗದ ಒಂದು ಮನೆಯಲ್ಲಿ ೩ ಭಯೋತ್ಪಾದಕರು ಅಡಗಿರುವ ಮಾಹಿತಿಯು ಸೈನ್ಯಕ್ಕೆ ದೊರ ಕಿತ್ತು. ಅದರ ಆಧಾರದಲ್ಲಿ ಸೈನ್ಯವು ಅಲ್ಲಿ ಕಾರ್ಯಾಚರಣೆ ಮಾಡಿತು; ಆದರೆ ಬುರ್ಹಾನ್ ಆ ಮನೆಯಲ್ಲಿದ್ದನು ಎನ್ನುವುದು ಸೈನ್ಯಕ್ಕೆ ಹಾಗೂ ಪೊಲೀಸರಿಗೂ ತಿಳಿದಿರಲಿಲ್ಲ. ಬುರ್ಹಾನ್ ಅಲ್ಲಿರು ವುದು ತಿಳಿದಿದ್ದರೆ ಅವನನ್ನು ಕೊಲ್ಲುತ್ತಿರಲಿಲ್ಲ. ಅವನಿಗೆ ಒಂದು ಅವಕಾಶ ಕೊಡುತ್ತಿದ್ದೆವು ಎಂದು ಸೇನೆಯವರೇ ನಮಗೆ ತಿಳಿಸಿದ್ದಾರೆಂದು ಜಮ್ಮೂ-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಾಹಿತಿ ನೀಡಿದರು. ಪಿಡಿಪಿಯ ೧೭ನೇ ಸಂಸ್ಥಾಪನಾ ದಿನಾಚರಣೆಯ ಕುರಿತು ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಹಾಗೆಯೇ ಬುರ್ಹಾನ್ ಕುರಿತು ನಡೆದ ಪ್ರತಿಭಟನೆಯಲ್ಲಿ ಕೊಲ್ಲಲ್ಪಟ್ಟವರ ಬಲಿದಾನ ವ್ಯರ್ಥವಾಗುವುದಿಲ್ಲವೆಂದೂ ಮೆಹಬೂಬಾ ಮುಫ್ತಿ ಈ ಸಂದರ್ಭದಲ್ಲಿ ಹೇಳಿದರು. (ಗಲಭೆಕೋರರ ಬಗ್ಗೆ ಸಹಾನುಭೂತಿ ಇರುವ ಮೆಹಬೂಬಾ ಮುಫ್ತಿ ವಿರುದ್ಧ ಕೇಂದ್ರ ಸರಕಾರ ಕ್ರಮಕೈಗೊಳ್ಳುವುದೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬುರ್ಹಾನ್ ಅಡಗಿರುವ ಮಾಹಿತಿ ದೊರೆತಿದ್ದರೆ, ಅವನನ್ನು ಕೊಲ್ಲುತ್ತಿರಲಿಲ್ಲ ! - ಮೆಹಬೂಬಾ ಮುಫ್ತಿ