ಸನಾತನ ಸಂಸ್ಥೆಗೆ ಸಂತರ ಆಶೀರ್ವಾದ

ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠದ ಶ್ರೀ ವೀರೇಂದ್ರಸ್ವಾಮಿ (ಕುಳಿತವರು) ಇವರಿಗೆ ಮನವಿ ನೀಡುತ್ತಿರುವ ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಮತ್ತು ಧರ್ಮಾಭಿಮಾನಿ ಶ್ರೀ.ಮುರಳಿ
ಸರಕಾರ ಸನಾತನ ಸಂಸ್ಥೆಯನ್ನು ನಿರ್ಬಂಧಿಸುವುದನ್ನು ಕೈ ಬಿಡಬೇಕು !
- ಶ್ರೀ ವೀರೇಂದ್ರಸ್ವಾಮಿ, ನವಲಗುಂದ
ನವಲಗುಂದ : ಸನಾತನ ಸಂಸ್ಥೆಯು ಒಂದು ಧರ್ಮಜಾಗೃತಿ ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಆಧ್ಯಾತ್ಮಿಕ ಸಂದೇಶ, ಮೌಲ್ಯಗಳ ವರ್ಧನೆ, ಜೀವನಪದ್ಧತಿ ಮುಂತಾದ ಜನೋಪಯೋಗಿ ವಿಚಾರಗಳನ್ನು ಬಿತ್ತರಿಸುತ್ತಿದೆ. ಈ ಸಂಸ್ಥೆ ದೇಶಕ್ಕಾಗಿ ಸಮಾಜಕ್ಕಾಗಿ ತನ್ನದೇ ಆದ ಸೇವೆ ಸಲ್ಲಿಸುತ್ತಿದ್ದು, ಅದು ಇನ್ನಷ್ಟು ಹೆಚ್ಚಿನ ದೇಶ ಸೇವೆ ಮಾಡಲು ಅವಶ್ಯಕತೆಯಿದೆ. ಕೆಲದಿನಗಳಿಂದ ಈ ಸಂಸ್ಥೆ ಮೇಲೆ ಅಪವಾದಗಳು ಕಂಡುಬರುತ್ತಿವೆ. ಅವು ಗಳಲ್ಲಿ ಸುಳ್ಳುಗಳೇ ಹೆಚ್ಚಿವೆ. ಈ ಸಂಸ್ಥೆಯಿಂದ ಅನೇಕ ದೇಶಸೇವೆಗಳು ಆಗಲಿವೆ. ಆದ್ದರಿಂದ ಸರಕಾರ ಸನಾತನ ಸಂಸ್ಥೆಯನ್ನು ಯಾವುದೇ ಒತ್ತಡಗಳಿಂದ ನಿರ್ಬಂಧಿಸುವುದನ್ನು ಕೈ ಬಿಡಬೇಕೆಂದು ಇಲ್ಲಿನ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠದ
ಶ್ರೀ ವೀರೇಂದ್ರ ಸ್ವಾಮಿಯವರು ಹೇಳಿದ್ದಾರೆ.
ಗಮರ್ನಾಹ ಅಂಶ :
ನವಲಗುಂದದ ಎಲ್ಲ ಮಠಾಧೀಶರನ್ನು ಸೇರಿಸಿ, ನಾವು ಈ ವಿಷಯದ ಬಗ್ಗೆ ಒಂದು ಬೈಠಕ್ ಮಾಡುತ್ತೇವೆ ಎಂದು ಶ್ರೀ ವೀರೇಂದ್ರಸ್ವಾಮಿಯವರು ಈ ಸಂದರ್ಭ ದಲ್ಲಿ ಹೇಳಿದರು.


ಶ್ರೀ ಕಾಶಿ ಸಿಂಹಾಸನಾಧೀಶ್ವರ ಶಾಖಾ (ಕುಳಿತವರು) ಇವರಿಗೆ ಮನವಿ ನೀಡುತ್ತಿರುವ
ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ
ಸನಾತನ ಸಂಸ್ಥೆಯನ್ನು ನಿಷೇಧಿಸುವುದು ಸತ್ಯಕ್ಕೆ ದೂರವಾಗಿದೆ !
- ಶ್ರೀ ಕಾಶಿ ಸಿಂಹಾಸನಾಧೀಶ್ವರ ಶಾಖಾ
ಸನಾತನ ಸಂಸ್ಥೆಯು ಸಮಾಜದ ಹಿತದೃಷ್ಟಿಯಿಂದ ಕಾರ್ಯವನ್ನು ಮಾಡುತ್ತಿದೆ. ಸಮಾಜದಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆ, ಅಧ್ಯಾತ್ಮವನ್ನು ಶಾಸ್ತ್ರೀಯ ಭಾಷೆಯಲ್ಲಿ ತಿಳಿಸಿಕೊಟ್ಟು ಜನರನ್ನು ಅಧ್ಯಾತ್ಮಿಕ ವಾಗಿ ಜೀವಿಸುವುದನ್ನು ಕಲಿಸಿಕೊಡುತ್ತಿದೆ. ಹಿಂದಿನಿಂದ ಇಂದಿನವರೆಗೆ ಸಂಸ್ಥೆಯು ಇದೇ ಕಾರ್ಯವನ್ನು ಮಾಡುತ್ತಿದೆ. ಆದ್ದರಿಂದ ಅದು ಮುಂದುವರೆ ಯಬೇಕು, ಬೆಳೆಯಬೇಕು. ಇಂತಹ ಸಂಸ್ಥೆಯನ್ನು ನಿಷೇಧಿಸಿ ಸಮಾಜದ ಪ್ರಗತಿಯನ್ನು ನಿಲ್ಲಿಸುವುದು ಸತ್ಯಕ್ಕೆ ದೂರವಾಗಿದೆ. ಹಾಗಾಗಿ ಸನಾತನ ಸಂಸ್ಥೆಯನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸಬಾರದೆಂದು ಗೃಹ ಮಂತ್ರಿಗಳಿಗೆ ಪತ್ರದ ಮೂಲಕ ವಿನಂತಿಸಿಕೊಳ್ಳುತ್ತೇನೆ. ಸನಾತನ ಸಂಸ್ಥೆಯು ಸಮಾಜಕ್ಕಾಗಿ ನಿಸ್ವಾರ್ಥವಾಗಿ ಪರಿಶ್ರಮ ಪಡುತ್ತಿದೆ. ಅದಕ್ಕಾಗಿ ನಮ್ಮೆಲ್ಲರ ಸಂಪೂರ್ಣ ಸಹಕಾರ ತಮ್ಮೊಂದಿಗೆ ಇದೆ.

ಶ್ರೀ ಮಲ್ಲಯ್ಯ ಸ್ವಾಮೀಜಿಯವರಿಗೆ ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ಸಂಚಿಕೆಯನ್ನು ಉಡುಗೊರೆಯಾಗಿ ನೀಡುತ್ತಿರುವ ಸನಾತನದ ಸೌ. ವಿದುಲಾ ಹಳದೀಪುರ ಮತ್ತು ಸಾಧಕರು ಹಾಗೂ ಪತಂಜಲಿಯ ಕಾರ್ಯಕರ್ತರು
ಸನಾತನ ಸಂಸ್ಥೆಯು ಸಮಾಜದಲ್ಲಿ ಅಧ್ಯಾತ್ಮದ ಚೇತನವನ್ನು
ಮೂಡಿಸುತ್ತಿದೆ ! - ಶ್ರೀ ಮಲ್ಲಯ್ಯ ಸ್ವಾಮೀಜಿ, ಸಿದ್ಧಾರೂಢ ಮಠ,ರಾಣೆಬೆನ್ನೂರು
ರಾಣೆಬೆನ್ನೂರು : ಸನಾತನ ಸಂಸ್ಥೆಯು ನಮಗೆ ಬಹಳ ವರ್ಷಗಳಿಂದ ಪರಿಚಯವಿದೆ. ಈ ಸಂಸ್ಥೆಗೆ ನಾನು ಹತ್ತಿರದಿಂದ ಸಂಪರ್ಕದಲ್ಲಿದ್ದೇನೆ. ಈ ಸಂಸ್ಥೆಯು ಸಮಾಜ, ರಾಷ್ಟ್ರ ಹಾಗೂ ಸನಾತನ ಭಾರತೀಯ ಸಂಸ್ಕ್ರತಿಗಾಗಿ ಬಹಳಷ್ಟು ಕಾರ್ಯಗಳನ್ನು ಮಾಡುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಮೂಡಿಸುವ ಬಾಲಸಂಸ್ಕಾರ ವರ್ಗಗಳನ್ನು ತೆಗೆದು ಕೊಂಡು ಅವರಲ್ಲಿ ಉತ್ತಮ ಸಂಸ್ಕಾರವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಸಮಾಜದಲ್ಲಿ ಅಧ್ಯಾತ್ಮದ ಚೇತನವನ್ನು ಮೂಡಿಸುತ್ತಿದೆ. ನಿರಪೇಕ್ಷ ವಾಗಿ ಹಾಗೂ ಪ್ರಾಮಾಣಿಕವಾಗಿ ಸಮಾಜದ ಸೇವೆಯನ್ನು ಮಾಡುತ್ತಿರುವ ಸನಾತನ ಸಂಸ್ಥೆಯ ಕಾರ್ಯವು ತುಂಬಾ ಶ್ಲಾಘನೀಯವಾಗಿದ್ದು, ನಮಗೆ ಹರ್ಷವನ್ನು ತಂದಿದೆ. ಈ ಸಂಸ್ಥೆಯ ಕಾರ್ಯವು ಹೀಗೆ ನಿರಂತರವಾಗಿ ಸಾಗುತ್ತಿರಲಿ ಎಂದು ಅಶಿಸುತ್ತೇನೆ, ಎಂದು ರಾಣೆಬೆನ್ನೂರಿನ ಶ್ರೀ ಸಿದ್ದಾರೂಢ ಮಠ ಶ್ರೀ ಮಲ್ಲಯ್ಯ ಸ್ವಾಮೀಜಿಯವರು ಸನಾತನ ಸಂಸ್ಥೆಗೆ ಆಶೀರ್ವಾದ ನೀಡಿದ್ದಾರೆ. ಕೆಲವು ಹಿಂದೂ ವಿರೋಧಿಗಳು ಸನಾತನ ಸಂಸ್ಥೆಯನ್ನು ನಿಷೇಧಿಸಲು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಾಧಕರು ಮತ್ತು ಪತಂಜಲಿ ಯೋಗ ಸಮಿತಿಯ ಕಾರ್ಯಕರ್ತರು ಸ್ವಾಮೀಜಿಯವರನ್ನು ಭೇಟಿಯಾಗಿದ್ದರು. ಆಗ ಸ್ವಾಮೀಜಿಯವರು ಮಾತನಾಡುತ್ತಿದ್ದರು.

ಶ್ರೀ ಪ್ರಕಾಶನಂದ ಜೀ ಮಹಾರಾಜ್, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ರಾಣೆಬೆನ್ನೂರು
 ಇವರಿಗೆ  ಮನವಿ ನೀಡುತ್ತಿರುವ ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಇತರರು
ಹಿಂದೂ ಸಂಸ್ಕೃತಿಯ ಪ್ರಸಾರಕ್ಕಾಗಿ ಸನಾತನ ಸಂಸ್ಥೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ !
- ಶ್ರೀ ಪ್ರಕಾಶನಂದ ಜೀ ಮಹಾರಾಜ್, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ರಾಣೆಬೆನ್ನೂರು
ರಾಣೆಬೆನ್ನೂರು : ಸನಾತನ ಸಂಸ್ಥೆಯು ಹಿಂದೂ ಸಂಸ್ಕೃತಿಯ ಪ್ರಸಾರ ಮಾಡುವುದು ಜೊತೆಗೆ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಳೆದ ೧೫ ವರ್ಷಗಳಿಂದ ಈ ಸಂಸ್ಥೆಯ ಕಾರ್ಯವನ್ನು ನಾವು ಹತ್ತಿರದಿಂದ ಗಮನಿಸಿದ್ದೇವೆ. ಈ ಸಂಸ್ಥೆಯಿಂದ ಧರ್ಮ ಮತ್ತು ಸಂಸ್ಕೃತಿಯ ಕಾರ್ಯ ಮುಂದುವರೆಯಲಿ ಮತ್ತು ಯಶ್ವಸಿಯಾಗಲಿ ಎಂದು ಅಶಿಸುತ್ತೇನೆ. ಭಗವಂತನ ಕೃಪೆ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ’, ಎಂದು ರಾಣೆಬೆನ್ನೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಪ್ರಕಾಶನಂದ ಜೀ ಮಹಾರಾಜರು ಸನಾತನ ಸಂಸ್ಥೆಗೆ ಆಶೀರ್ವಾದ ನೀಡಿದ್ದಾರೆ. ಸನಾತನ ಸಂಸ್ಥೆಯ ಸಾಧಕರು ಮತ್ತು ಪತಂಜಲಿಯ ಸಂಸ್ಥೆಯ ಸದ್ಯಸರು ಭೇಟಿಯಾದಾಗ ಅವರು ಸನಾತನ ಸಂಸ್ಥೆಯ ಮೇಲಿನ ನಿರ್ಬಂಧದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ವ್ಯಕ್ತಪಡಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಗೆ ಸಂತರ ಆಶೀರ್ವಾದ