ಸ್ವಾತಂತ್ರ್ಯ ದೊರೆತು ೬೯ ವರ್ಷಗಳಾದರೂ ಭಯಭೀತ ವಾತಾವರಣದಲ್ಲಿ ಸ್ವಾತಂತ್ರ್ಯದಿನವನ್ನು ಆಚರಿಸುವ ನಿರ್ಲಜ್ಜ ಭಾರತ !

ಪ್ರತಿಯೊಂದು ರಾಷ್ಟ್ರೀಯ ಹಬ್ಬದಂದು ನಡೆಸುವ ಕಾರ್ಯಕ್ರಮಗಳನ್ನು ಧ್ವಂಸಗೊಳಿಸುವ ಹಾಗೂ ಭಯೋತ್ಪಾದಕ ಕಾರ್ಯಾಚರಣೆ ಗಳಾಗುವ ಬೆದರಿಕೆಗಳು ಬರುತ್ತವೆ. ಆದುದರಿಂದ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಮಾಡಲು ಕೋಟಿಗಟ್ಟಲೆ ರೂಪಾಯಿಯನ್ನು ಖರ್ಚು ಮಾಡ ಲಾಗುತ್ತದೆ. ಆದುದರಿಂದ ಜನತೆ ಒತ್ತಡಗ್ರಸ್ತ ಹಾಗೂ ಭಯಗ್ರಸ್ತವಾಗಿರುತ್ತದೆ. ಈಶಾನ್ಯ ಭಾರತ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದಕರು ತಮ್ಮ ಕುಕೃತ್ಯಗಳನ್ನು ಮಾಡುವುದರಲ್ಲಿ ಸಫಲರಾಗುತ್ತಾರೆ. ಹೀಗಿರುವಾಗ ರಾಷ್ಟ್ರೀಯ ಹಬ್ಬವನ್ನು ಆಚರಿಸುವ ಆನಂದವು ಜನತೆಗೆ ಸಿಗಬಹುದೇ ? ತಿಥಿಗನುಸಾರ ಶ್ರಾವಣ ಕೃಷ್ಣ ಚತುರ್ದಶಿಯು ದೇಶದ ಸ್ವಾತಂತ್ರ್ಯ ದಿನವಾಗಿದೆ. ಆದರೆ ಆಂಗ್ಲರ ಮಾನಸಿಕತೆಯಿಂದಾಗಿ ಹಾಗೂ ಕ್ರೈಸ್ತ ಕಾಲಗಣನೆಯಂತೆ ಇದನ್ನು ೧೫ ಆಗಸ್ಟ್ ಎಂದು ಆಚರಿಸಲಾಗುತ್ತದೆ. ಭಾರತೀಯರೇ, ಈ ಮಾನಸಿಕತೆಯನ್ನು ತ್ಯಜಿಸಿ ಸ್ವಾತಂತ್ರ್ಯದಿನ ವನ್ನು ಆಗಸ್ಟ್ ೧೫ ರ ಬದಲು ತಿಥಿಗನುಸಾರ ಶ್ರಾವಣ ಕೃಷ್ಣ ಚರ್ತುದಶಿಯಂದು ಆಚರಿಸಿ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯುತಿಥಿಗನುಸಾರ ೩೧.೮.೨೦೧೬ ರಂದು ಬರುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ವಾತಂತ್ರ್ಯ ದೊರೆತು ೬೯ ವರ್ಷಗಳಾದರೂ ಭಯಭೀತ ವಾತಾವರಣದಲ್ಲಿ ಸ್ವಾತಂತ್ರ್ಯದಿನವನ್ನು ಆಚರಿಸುವ ನಿರ್ಲಜ್ಜ ಭಾರತ !