ವಾರಾಣಾಸಿಯಲ್ಲಿ ರೋಡ್ ಶೋ ಬಳಿಕ ಆಕಸ್ಮಿಕ ಜ್ವರದಿಂದಾಗಿ ಸೋನಿಯಾ ಗಾಂಧಿ ಶ್ರೀ ಕಾಶಿ ವಿಶ್ವನಾಥನ ದರ್ಶನವನ್ನು ಪಡೆಯದೇ ವಾಪಸ್ !

ವಾರಾಣಾಸಿ : ಇಲ್ಲಿ ಆಗಸ್ಟ್ ೨ ರಂದು ಬೆಳಗ್ಗೆ ರೋಡ್ ಶೋ ಏರ್ಪಡಿಸಿದ್ದ ಸೋನಿಯಾ ಗಾಂಧಿಗೆ ಅಕಸ್ಮಿಕವಾಗಿ ಜ್ವರ ಬಂದಿತು. ಇದರಿಂದ ಅವರು ಸಾಯಂಕಾಲ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳದೇ ಹಿಂದಿರು ಗಲು ನಿರ್ಧರಿಸಿರುವ ವಿಷಯವನ್ನು ಕಾಂಗ್ರೆಸ್ ಮುಖಂಡರಾದ ಅಜಯ ರಾಯ್ ತಿಳಿಸಿದರು. ಅಕಸ್ಮಿಕವಾಗಿ ಜ್ವರ ಬಂದಿದ್ದರಿಂದ ಅವರು ಶ್ರೀ ಕಾಶಿವಿಶ್ವನಾಥನ ದೇವಸ್ಥಾನಕ್ಕೆ ತೆರಳಲು ಆಯೋಜಿಸಿದ್ದ ಕಾರ್ಯಕ್ರಮವನ್ನು ಸಹ ರದ್ದುಪಡಿಸಬೇಕಾಯಿತು ಹಾಗೂ ಅವರು ಹಿಂತಿರುಗಬೇಕಾಯಿತು. ಅವರು ೨೦೦೪ ರ ಬಳಿಕ ಮೊದಲ ಬಾರಿಗೆ ವಾರಣಾಸಿಗೆ ಬಂದಿದ್ದರು. ವಾರಣಾಸಿಯ ಶ್ರೀ ಕಾಶಿ-ವಿಶ್ವನಾಥನ ದೇವಸ್ಥಾನದಲ್ಲಿ ಕೇವಲ ಹಿಂದೂಗಳಿಗೆ ಪ್ರವೇಶವಿದೆ. ಸೋನಿಯಾ ಗಾಂಧಿಯವರು ತಮ್ಮನ್ನು ಕ್ರೈಸ್ತರೆಂದು ಭಾವಿಸುತ್ತಾರೆ. ಹೀಗಿರುವಾಗಲೂ ಅವರು ಆ ದೇವಸ್ಥಾನಕ್ಕೆ ಹೋಗುವವರಿದ್ದರು; ಆದರೆ ಆಕಸ್ಮಿಕವಾಗಿ ಬಂದಂತಹ ಜ್ವರದಿಂದಾಗಿ ಅವರಿಗೆ ಹೋಗಲು ಸಾಧ್ಯವಾಗಲಿಲ್ಲ; ಅಂದರೆ ಒಂದರ್ಥದಲ್ಲಿ ದೇವರೇ ಅವರನ್ನು ದೇವಸ್ಥಾನಕ್ಕೆ ಬರುವುದರಿಂದ ತಡೆದನು. ಹಿಂದೂಗಳೇ, ಧರ್ಮಹಾನಿಯ ಇಂತಹ ಪ್ರಕರಣಗಳಲ್ಲಿ ಈ ರೀತಿ ಮಾಡಲು ದೇವರಿಗೆ ಬಿಡದೇ, ನೀವೇ ಮುಂದುವರೆದು ಇಂತಹವರ ದೇವಸ್ಥಾನದ ಪ್ರವೇಶವನ್ನು ನ್ಯಾಯೋಚಿತ ಮಾರ್ಗದಿಂದ ತಡೆಗಟ್ಟಿರಿ ! - ಸಂಪಾದಕರು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಾರಾಣಾಸಿಯಲ್ಲಿ ರೋಡ್ ಶೋ ಬಳಿಕ ಆಕಸ್ಮಿಕ ಜ್ವರದಿಂದಾಗಿ ಸೋನಿಯಾ ಗಾಂಧಿ ಶ್ರೀ ಕಾಶಿ ವಿಶ್ವನಾಥನ ದರ್ಶನವನ್ನು ಪಡೆಯದೇ ವಾಪಸ್ !