ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರಾಜ್ಯದ ವಿವಿಧೆಡೆಯಲ್ಲಿ ಹಿಂದೂ ಸಂಘಟನಾ ಮೇಳ

ಶಿರಸಿಯಲ್ಲಿ ನಡೆದ ಹಿಂದೂ ಸಂಘಟನಾ ಮೇಳದಲ್ಲಿ (ಎಡದಿಂದ) ರಣರಾಗಿಣಿ ಶಾಖೆಯ
ಕು. ಸ್ಪೂರ್ತಿ ಬೆನಕನವಾರಿ, ಶ್ರೀ. ದಿವಾಕರ ಭಟ್ ಮತ್ತು ಶ್ರೀ. ವಿವೇಕ ಪೈ
ಸುಳ್ಯದಲ್ಲಿ ನಡೆದ ಹಿಂದೂ ಸಂಘಟನಾ ಮೇಳದಲ್ಲಿ (ಎಡದಿಂದ) ರಣರಾಗಿಣಿ ಶಾಖೆಯ
ಕು. ಮೇಘಾ ಬಾಂದೇಕರ್, ಶ್ರೀ. ಸುಬ್ರಹ್ಮಣ್ಯ ನಟ್ಟೋಜ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ
‘ಗುರು-ಶಿಷ್ಯ’ ಪರಂಪರೆಯು ಹಿಂದೂಗಳ ಲಕ್ಷಗಟ್ಟಲೆ ವರ್ಷಗಳ ಚೈತನ್ಯಮಯ ಸಂಸ್ಕೃತಿಯ ಅದ್ವಿತೀಯ ಪರಂಪರೆಯಾಗಿದೆ ! ಗುರುಪೂರ್ಣಿಮೆಯು ಕೇವಲ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವಲ್ಲದೆ ಅಂದು ಗುರುಗಳಿಗೆ ಅಪೇಕ್ಷಿತವಿರುವ ಗುರುಸೇವೆಯನ್ನು ಮಾಡುವುದು ಕೂಡ ಅಷ್ಟೇ ಮಹತ್ವದ್ದಾಗಿದೆ. ಹಾಗಾಗಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆ ಮಾಡಲು ಗುರುಗಳ ಆಶೀರ್ವಾದದೊಂದಿಗೆ ‘ಹಿಂದೂ ರಾಷ್ಟ್ರದ’ ಸ್ಥಾಪನೆಗಾಗಿ ಪ್ರಯತ್ನಿಸುವುದು ಕಾಲಾನುಸಾರ ಸರ್ವೋತ್ತಮ ಗುರುಸೇವೆಯಾಗಿದೆ. ಈ ಸಂದೇಶ ನೀಡಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರಾಜ್ಯದ ಅಲ್ಲಲ್ಲಿ ಹಿಂದೂ
ಸಂಘಟನಾ ಮೇಳವನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಕ್ತಾರರು ಮಾಡಿದ ಮಾರ್ಗದರ್ಶನವನ್ನು ನಮ್ಮ ವಾಚಕರಿಗಾಗಿ ನೀಡುತ್ತಿದ್ದೇವೆ.

ಉಜಿರೆ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾಲಾನುಸಾರ ಎಲ್ಲಾ ಹಿಂದೂಗಳು ಕಟಿಬದ್ಧರಾಗಬೇಕು !
- ಶ್ರೀ. ಗುರುಪ್ರಸಾದ, ಹಿಂದೂ ಜನಜಾಗೃತಿ ಸಮಿತಿ,
ಕರ್ನಾಟಕ ರಾಜ್ಯ ಸಮನ್ವಯಕರು
ಎಲ್ಲ ಹಿಂದೂಗಳು ತಮ್ಮ ಸ್ವಾರ್ಥವನ್ನು ಬಿಟ್ಟು ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಮುಂದಾಗಬೇಕು. ನಮ್ಮ ಸುತ್ತ ಮುತ್ತಲು ನಡೆಯುತ್ತಿರುವ ಸಮಾಜಘಾತಕ ಚಟುವಟಿಕೆಗಳನ್ನು ಬಯಲಿಗೆಳೆದು ವ್ಯವಸ್ಥೆಯನ್ನು ಸರಿಪಡಿಸಬೇಕು. ನಮ್ಮ ಮುಂದಿರುವ ರಾಷ್ಟ್ರೀಯ ಮತ್ತು ಧಾರ್ಮಿಕ ಸಮಸ್ಯೆಗಳನ್ನು ದೂರಮಾಡಬೇಕಾದರೆ ಇರುವ ಏಕೈಕ ಉಪಾಯವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ. ೮೦ ಕೋಟಿಯಷ್ಟು ಜನಸಂಖ್ಯೆಯಿರುವ ಭಾರತಕ್ಕೆ, ಹಿಂದೂ ರಾಷ್ಟ್ರದ ಆವಶ್ಯಕತೆ ಇದೆ. ಆದ್ದರಿಂದ ನಾವು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಮ್ಮದೇ ಆದ ಯೋಗದಾನ ನೀಡುವುದೂ ಆವಶ್ಯಕವಾಗಿದೆ ಮತ್ತು ಈ ಧ್ಯೇಯದ ಕಡೆಗೆ ಸಾಗಲು ಪ್ರತಿಯೊಬ್ಬರೂ ಪ್ರತಿದಿನ ಪ್ರಯತ್ನಿಸಬೇಕು ಎಂದು ಉಜಿರೆಯ ಶ್ರೀ. ಜನಾರ್ಧನ ದೇವಸ್ಥಾನದಲ್ಲಿ ನಡೆದ ಹಿಂದೂ ಸಂಘಟನಾ ಮೇಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ ಇವರು ಮಾತನಾಡಿದರು.
ಸಮಾಜ, ರಾಷ್ಟ್ರ,ಹಾಗೂ ಧರ್ಮವನ್ನು ರಕ್ಷಿಸುವುದು
ಅತ್ಯಗತ್ಯ ! - ಸೌ. ಲಕ್ಷ್ಮೀ ಪೈ, ರಣರಾಗಿಣಿ ಶಾಖೆ
ಸಮಾಜವೇ ಅಸುರಕ್ಷಿತವಾಗಿದ್ದರೆ, ವ್ಯಕ್ತಿಯು ಸುರಕ್ಷಿತವಾಗಿರಲು ಸಾಧ್ಯವೇ ಇಲ್ಲ, ರಾಷ್ಟ್ರವು ಅಸುರಕ್ಷಿತವಾಗಿದ್ದರೆ ಸಮಾಜವು ಸುರಕ್ಷಿತ ವಾಗಿರಲು ಸಾಧ್ಯವಿಲ್ಲ, ಅದೇ ರೀತಿ ಧರ್ಮವು ರಾಷ್ಟ್ರದ ಪ್ರಾಣವಾಗಿದೆ ಆದ್ದರಿಂದ ಧರ್ಮವು ಅಸುರಕ್ಷಿತವಾಗಿದ್ದರೆ ರಾಷ್ಟ್ರವು ಸುರಕ್ಷಿತವಾಗಿರಲು ಸಾಧ್ಯವಿಲ್ಲ, ಸ್ವಲ್ಪದರಲ್ಲಿ ಹೇಳುವುದಾದರೆ ತಮ್ಮೊಂದಿಗೆ, ಸಮಾಜ,ರಾಷ್ಟ್ರ ಹಾಗೂ ಧರ್ಮವನ್ನು ರಕ್ಷಿಸಬೇಕಾದರೆ ನಾಗರಿಕರು ಸ್ವಯಂ ಸಿಧ್ಧರಾಗದೇ ಬೇರೆ ಪರ್ಯಾಯವಿಲ್ಲ.
ಸುಳ್ಯ
ನಮ್ಮ ಮಕ್ಕಳಿಗೆ ನಾವು ಸಂಸ್ಕಾರ-ಸಂಸ್ಕೃತಿಯ ಶಿಕ್ಷಣ ನೀಡುವುದು ಅತ್ಯಗತ್ಯ ! - ಶ್ರೀ. ಸುಬ್ರಹ್ಮಣ್ಯ ನಟ್ಟೋಜ,
ಅಂಬಿಕಾ ವಿದ್ಯಾಲಯದ ಸಂಚಾಲಕರು ಮತ್ತು ಪ್ರಾಂಶುಪಾಲರು.
ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ಇಂದಿನ ಮಕ್ಕಳು ಪಾಶ್ಚಾತ್ಯರಂತೆ ಉಡುಪುಗಳನ್ನು ಧರಿಸುವುದು, ಅವರಂತೆ ಸ್ವೇಚ್ಛಾಚಾರದ ಜೀವನ ನಡೆಸುತ್ತಿದ್ದಾರೆ. ಆದರೆ ನಾವು ನಮ್ಮ ಮಕ್ಕಳಿಗೆ ನಮ್ಮ ಋಷಿ-ಮುನಿಗಳು ಹೇಳಿಕೊಟ್ಟ ಹಿಂದೂ ಸಂಸ್ಕೃತಿಯ ಸಂಸ್ಕಾರವನ್ನು ಅವರ ಮನಸ್ಸಿನಲ್ಲಿ ಬಿಂಬಿಸುವ ಮಹತ್ತರವಾದ ಜವಾಬ್ದಾರಿ ಎಲ್ಲ ಪೋಷಕರ ಮೇಲಿದೆ; ಪ್ರತಿಯೊಬ್ಬ ತಾಯಿಯ ಗರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು, ಸ್ವಾಮಿ ವಿವೇಕಾನಂದರು ಜನಿಸಬೇಕಾಗಿದೆ, ಇಡೀ ಭಾರತದಾದ್ಯಂತದ ಪ್ರತಿ ಶಾಲೆಗಳು ಭಾರತೀಯ ಸಂಸ್ಕೃತಿ, ಯೋಗ, ಆಚರಣೆ ಇತ್ಯಾದಿ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಬೇಕು, ಆ ಮೂಲಕ ಎಲ್ಲರೂ ಅತ್ಯಂತ ಶ್ರೇಷ್ಠವಾದ ಅಧ್ಯಾತ್ಮ ಭಾರತದ ರಕ್ಷಣೆಗೆ ಮುಂದಾಗಬೇಕಿದೆ, ಎಂದರು.
ತಮ್ಮ ರಕ್ಷಣೆಯ ಜೊತೆಯಲ್ಲಿ ಸಮಾಜ, ರಾಷ್ಟ್ರ,ಹಾಗೂ ಧರ್ಮವನ್ನು ರಕ್ಷಿಸುವುದು ಅತ್ಯಗತ್ಯ !
- ಕು. ಮೇಘಾ ಬಾಂದೇಕರ್, ರಣರಾಗಿಣಿ ಶಾಖೆ
ಜೀವನದಲ್ಲಿ ಅನ್ಯಾಯದ ಅಥವಾ ದೌರ್ಜನ್ಯದ ವಿರುದ್ಧ ಪ್ರತೀಕಾರ ಮಾಡುವ ಸಮಯವು ಯಾರನ್ನೂ ಹೇಳಿ ಕೇಳಿ ಬರುವುದಿಲ್ಲ; ಇಂದು ಹಲವಾರು ಮಹಿಳೆಯರು ಬಸ್ಸು, ಮಾರುಕಟ್ಟೆಯಂತಹ ಸಾರ್ವಜನಿಕ ಸ್ಥಳಗಳಲ್ಲಿ ಪುಂಡರು, ಸಮಾಜಕಂಟಕರು ಆಡುವ ಅಶ್ಲೀಲ ಭಾಷೆ ಹಾಗೂ ವರ್ತನೆಯನ್ನು ಕೇವಲ ನಾಚಿಕೆ ಹಾಗೂ ಅಂಜಿಕೆಯಿಂದ ಸಹಿಸಿಕೊಳ್ಳುತ್ತಾರೆ. ಆದರೆ ಹಿಂದೂ ಸ್ತ್ರೀಯರು ಅಲ್ಲೆೀ ತಕ್ಷಣವೇ ಆ ಸಮಾಜಕಂಟಕರಿಗೆ ಪಾಠಕಲಿಸಬೇಕಾದುದು ಅತ್ಯಂತ ಅವಶ್ಯಕವಿದೆ. ತಮ್ಮೊಂದಿಗೆ, ಸಮಾಜ, ರಾಷ್ಟ್ರ ಹಾಗೂ ಧರ್ಮವನ್ನು ರಕ್ಷಿಸಬೇಕಾದರೆ ನಾಗರಿಕರು ಸ್ವಯಂ ಸಿದ್ಧರಾಗದೇ ಬೇರೆ ಪರ್ಯಾಯವಿಲ್ಲ.
ಶಿಕಾರಿಪುರ
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮೇಲೆ ಸುಳ್ಳು 
ಆರೋಪಗಳನ್ನು ಹೊರಿಸುತ್ತಿದ್ದು, ಇದರ ರಕ್ಷಣೆಗಾಗಿ ನಾವು ಸಂಘಟಿತರಾಗಿ ಹೋರಾಡೋಣ !
- ಶ್ರೀ. ಪುಂಡಲೀಕ ಪೈ, ಧರ್ಮಾಭಿಮಾನಿ
ಇಂದು ಅನೇಕ ಬುದ್ಧಿಜೀವಿಗಳು, ವಿಚಾರವಾದಿಗಳು ಮತ್ತು ಹಿಂದೂದ್ವೇಷಿಗಳು ಸೇರಿಕೊಂಡು ಧರ್ಮಪ್ರೇಮಿಯಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮೇಲೆ ವಿನಾಕಾರಣ ಸುಳ್ಳು ಆರೋಪ ಹೋರಿಸಿ ಈ ಸಂಸ್ಥೆಯನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಕ್ಷಣೆಗೆ ನಾವು ಸಂಘಟಿತರಾಗಿ ಹೋರಾಡೋಣ, ಎಂದು ಶ್ರೀ. ಪುಂಡಲೀಕ ಪೈ ಇವರು ಉಪಸ್ಥಿತ ಜಿಜ್ಞಾಸುಗಳಿಗೆ ಕರೆ ನೀಡಿದರು.
ಸಮಾಜದಲ್ಲಿನ ದುಷ್ಟ ಪ್ರವೃತ್ತಿಯನ್ನು ನಾಶ ಮಾಡಿ ಹಿಂದೂ ಧರ್ಮಸಂಸ್ಥಾಪನೆ ಮಾಡೋಣ !
- ಶ್ರೀ. ವಿಜಯ ರೇವಣ್ಕರ್, ಹಿಂದೂ ಜನಜಾಗೃತಿ ಸಮಿತಿ
ಸಮಾಜಿಕ ದುಷ್ಟ ಪ್ರವೃತ್ತಿಗಳ ಸಂಘಟಿತ ಪ್ರತೀಕಾರ ಮತ್ತು ಸಮಾಜದಲ್ಲಿ ಅಧರ್ಮಾಚರಣೆ ಹೆಚ್ಚಾಗಿದ್ದರಿಂದ ಆಧ್ಯಾತ್ಮಿಕ ಬಲ ಕಡಿಮೆಯಾಗಿ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಧರ್ಮಾದ್ರೋಹಿ ಕೃತ್ಯಗಳು ಹೆಚ್ಚಾದ್ದರಿಂದ ಹರಿಹರ-ಬುಕ್ಕರು ಮತ್ತು ವಿದ್ಯಾರಣ್ಯರು, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸಮರ್ಥ ರಾಮದಾಸ ಸ್ವಾಮಿಗಳು, ಹೀಗೆ ಅನೇಕ ಗುರು-ಶಿಷ್ಯ ಪರಂಪರೆಯು ಅಧರ್ಮವನ್ನು ನಾಶ ನಾಡಿ ಧರ್ಮಸಂಸ್ಥಾಪನೆಯನ್ನು ಮಾಡಿತು, ಪ್ರಸ್ತುತ ಕಾಲದಲ್ಲಿಯೂ ಗುರುಗಳ ಮಾರ್ಗದರ್ಶನದಿಂದ ಸಮಾಜದಲ್ಲಿನ ದುಷ್ಟ ಪ್ರವೃತ್ತಿಯನ್ನು ನಾಶ ಮಾಡಿ ಹಿಂದೂ ಧರ್ಮಸಂಸ್ಥಾಪನೆ ಮಾಡೋಣ.
ಸಮಾಜದಲ್ಲಿನ ದುಃಸ್ಥಿತಿಯಿಂದ ನಮ್ಮನ್ನು ನಾವು
 ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಸ್ವರಕ್ಷಣೆಯನ್ನು ಕಲಿಯುವುದು ಅನಿವಾರ್ಯ !
- ಸೌ. ಕಾಂಚನಾ ಶೇಟ್, ರಣರಾಗಿಣಿ ಶಾಖೆ
ಸದ್ಯ ರಾಷ್ಟ್ರ ಮತ್ತು ಧರ್ಮದ ಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ದೌರ್ಜನ್ಯ ಮಾಡುವವರ ಸಂಖ್ಯೆಯು ತುಂಬ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ನಮ್ಮನ್ನು ಇತರರು ರಕ್ಷಿಸುತ್ತಾರೆ ಎಂದು ಕಾಯುವುದಕ್ಕಿಂತ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಸ್ವಸಂರಕ್ಷಣೆಯನ್ನು ಕಲಿಯಲೇಬೇಕು ಎಂದು ಸೌ. ಕಾಂಚನ ಶೇಟ್ ಇವರು ಕರೆ ನೀಡಿದರು.
ಶಿರಸಿ
ಪಾಲಕರು ತಮ್ಮ ಮಕ್ಕಳನ್ನು ಧರ್ಮಶಿಕ್ಷಣ ವರ್ಗಕ್ಕೆ ಕಳುಹಿಸಿ !
- ಶ್ರೀ. ದಿವಾಕರ ಭಟ್, ಭಾರತ ಸ್ವಾಭಿಮಾನ್ ಟ್ರಸ್ಟ್
ಇಂದು ಸಮಾಜದಲ್ಲಿ ಅರಾಜಕತೆ ನಿರ್ಮಾಣವಾಗಿದೆ ಇಂತಹ ಸ್ಥಿತಿಯಲ್ಲಿ ನಾನು ಹಿಂದೂ ಎಂದು ಎದೆ ತಟ್ಟಿ ಹೇಳುವ ಏಕೈಕ ಸಮಿತಿ ಎಂದರೆ ಅದು ಹಿಂದೂ ಜನಜಾಗೃತಿ ಸಮಿತಿ. ಸಮಾಜಕ್ಕೆ ಧರ್ಮದ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಸಂಸ್ಥೆ ಸನಾತನ ಸಂಸ್ಥೆ. ಇಂದು ಮಕ್ಕಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗುತ್ತಿಲ್ಲ. ಅದಕ್ಕೆ ತಮ್ಮ ಮಕ್ಕಳನ್ನು ಧರ್ಮಶಿಕ್ಷಣಕ್ಕೆ ಕಳುಹಿಸಿ ಎಂದು ಭಾರತ ಸ್ವಾಭಿಮಾನ ಟ್ರಸ್ಟ್‌ನ ಚಿಕ್ಕಮಗಳೂರಿನ ಶ್ರೀ. ದಿವಾಕರ ಭಟ್ ಇವರು ಉಪಸ್ಥಿತರಿಗೆ ಕರೆ ನೀಡಿದರು. ಇವರು ಇಲ್ಲಿನ ಕರ್ಜಗಿ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಸಂಘಟನಾ ಮೇಳದಲ್ಲಿ ಮಾತನಾಡಿದರು. ಶ್ರೀ. ದಿವಾಕರ ಭಟ್ ಇವರು ಮುಂದೆ ಮಾತನಾಡುತ್ತಾ, ‘ಸಾಮಾಜಿಕ ಕಾರ್ಯ ಮಾಡುವ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಪ್ರಯತ್ನ ನಡೆಯುತ್ತಿದೆ. ಭಾರತದಲ್ಲಿ ಮಾತೆಯರನ್ನು ದೇವಿ ಸ್ವರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಅಂತಹ ಸನಾತನದ ಸಾಧಕ ಮಾತೆ ಭಗಿನಿಯರ ವಿಚಾರಣೆ ನಡೆಸುವುದನ್ನು ನಾನು ಸಹಿಸಿಕೊಳ್ಳುವುದಿಲ್ಲ. ನಾವೆಲ್ಲರೂ ಸಂಘಟಿತರಾಗಿ ಉತ್ತರವನ್ನು ಕೊಡುವೆವು’ ಎಂದರು.
ಭಾರತೀಯ ಸಂವಿಧಾನವು ನಾಗರಿಕರಿಗೆ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವ ಅಧಿಕಾರ ನೀಡಿದೆ !
- ಕು. ಸ್ಪೂರ್ತಿ ಬೆನಕನವಾರಿ, ರಣರಾಗಿಣಿ ಶಾಖೆ
‘ಭಾರತೀಯ ಸಂವಿಧಾನದಲ್ಲಿ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವ ಅಧಿಕಾರವನ್ನು ನೀಡಿದೆ. ಅದರಲ್ಲಿ ತನ್ನ ಶರೀರ ಹಾಗೂ ಸಂಪತ್ತಿನ ರಕ್ಷಣೆ, ಕುಟುಂಬದವರ ರಕ್ಷಣೆ, ಅಂಗವಿಕಲರ ರಕ್ಷಣೆ, ದಿಕ್ಕಿಲ್ಲದ ವ್ಯಕ್ತಿಯ ರಕ್ಷಣೆ ಇತ್ಯಾದಿಗಳು ಒಳಗೊಂಡಿವೆ’ ಎಂದು ಸ್ವಸಂರಕ್ಷಣೆಗೆ ಸಂವಿಧಾನವು ನೀಡಿರುವ ಹಕ್ಕು ಮತ್ತು ವ್ಯಾಪ್ತಿಯನ್ನು ವಿವರಿಸಿದರು.
ವಿಜಯಪುರ
ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ !
- ಡಾ. ಆನಂದ ಕುಲಕರ್ಣಿ, ಸಂಶೋಧಕರು
ದೇಶದಲ್ಲಿ ಹಿಂದೂ ಮುಖಂಡರಿಗೆ, ಹಿಂದೂಪರ ಸಂಘಟಕರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಹಿಂದೂ ಮುಖಂಡರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿರುವುದು ನೋವಿನ ಸಂಗತಿ. ‘ವಂದೇ ಮಾತರಂ’ಅನ್ನು ರಾಷ್ಟ್ರಗೀತೆಯನ್ನಾಗಿ ಮತ್ತು ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಯನ್ನಾಗಿ ಘೋಷಿಸಬೇಕು, ಡಾ. ಆನಂದ ಕುಲಕರ್ಣಿಯವರು ಹೇಳಿದರು.
ಈ ವೇಳೆ ರಣರಾಗಿಣಿ ಶಾಖೆಯ ಸೌ. ವಿದುಲಾ ಹಳದೀಪುರ, ಸಮಿತಿಯ ಶ್ರೀ. ವೆಂಕಟರಮಣ ನಾಯ್ಕ್ ಮಾರ್ಗದರ್ಶನ ಮಾಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರಾಜ್ಯದ ವಿವಿಧೆಡೆಯಲ್ಲಿ ಹಿಂದೂ ಸಂಘಟನಾ ಮೇಳ