ಹಾಸ್ಯಾಸ್ಪದ ಹೇಳಿಕೆ !

ಪಾರಂಪರಿಕ ಮೂರ್ತಿಯನ್ನು ಕಲ್ಲು, ಮರದಿಂದ ಮಾಡುತ್ತಾರೆ ! ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಯನ್ನು ದೊಡ್ಡ ಅಚ್ಚಿನಿಂದ ತಯಾರಿಸುತ್ತಾರೆ ! ಅದನ್ನು ಪಾರಂಪರಿಕ ಮೂರ್ತಿಯೆಂದು ಕರೆಯಲು ಸಾಧ್ಯವೇ ? ಶಿಲ್ಪಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮೂರ್ತಿಯನ್ನು ತಯಾರಿಸುತ್ತಾರೆ. ಆದುದರಿಂದ ಮೂರ್ತಿಯನ್ನು ತಯಾರಿಸಲು ನಿರ್ಬಂಧ ಹೇರಿದರೆ ಶಿಲ್ಪಿಗರ ಪರಂಪರಾಗತ ವ್ಯವಸಾಯ ನಿಂತು ಹೋಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. - ನ್ಯಾಯವಾದಿ ಪ್ರಸನ್ನ ಕುಟ್ಟಿ, ಸಂಭಾಜಿನಗರ (೧೬..೨೦೧೬)

ಈಶ್ವರನ ಸಹಾಯವಿಲ್ಲದೆ ಯಾವುದೇ ಕಾರ್ಯವೂ ಗುರಿ ಮುಟ್ಟಲು ಸಾಧ್ಯವಿಲ್ಲ,
ಎಂಬುದನ್ನು ಅರಿತು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸುವ ಲೋಕಮಾನ್ಯ ತಿಲಕರು !
ಲೋಕಮಾನ್ಯ ತಿಲಕರು ಹ... ಶ್ರೀಪತಿಬುವಾ ಭಿಂಗಾರಕರ್‌ರನ್ನು, ನಾನು ಸ್ವರಾಜ್ಯಪ್ರಾಪ್ತಿಗಾಗಿ ಪ್ರಯತ್ನಿಸುತ್ತಿದ್ದೇನೆ; ಆದರೆ ಈಶ್ವರನ ಸಹಾಯವಿಲ್ಲದೆ ಯಾವುದೇ ಕಾರ್ಯವು ಗುರಿ ಮುಟ್ಟುವುದಿಲ್ಲ, ಆದ್ದರಿಂದ ಈ ಸ್ವರಾಜ್ಯದ ಕಾರ್ಯವನ್ನು ರಾಷ್ಟ್ರದಾದ್ಯಂತ ಪ್ರಚಾರ ಮಾಡಲು ಯಾರನ್ನು ಆರಾಧಿಸಬೇಕು ? ಎಂದು ಕೇಳಿದರು.
ಬುವಾರವರು, ನೀವು ಶ್ರೀ ಗಣೇಶನ ಮಣ್ಣಿನ ಮೂರ್ತಿಯನ್ನು ಪೂಜಿಸಲು ಪ್ರಾರಂಭಿಸಿರಿ, ಅದ ರಿಂದ ನಿಮ್ಮ ಉದ್ದೇಶ ಸಫಲವಾಗುವುದು, ಎಂದು ಹೇಳಿದರು. ಅದಕ್ಕೆ ಲೋಕಮಾನ್ಯ ತಿಲಕರು ಆ ಪೂಜೆಯನ್ನು ನಾನೊಬ್ಬನೇ ಮಾಡಿದರೆ ಸಾಲದು. ರಾಷ್ಟ್ರದಲ್ಲೆಲ್ಲೆಡೆ ಅದನ್ನು ಮಾಡ ಬೇಕು. ನಮ್ಮಲ್ಲಿ ಹಿಂದಿನಿಂದಲೂ ಭಾದ್ರಪದ ಶುಕ್ಲ ಚತುರ್ಥಿಯಂದು ಮನೆ ಮನೆಯಲ್ಲಿಯೂ ಶ್ರೀಗಣೇಶನ ಮಣ್ಣಿನ ಮೂರ್ತಿಗೆ ಪೂಜೆ ಮಾಡುವ ಪರಂಪರೆಯಿದೆ. ಈಗ ಅದನ್ನು ಇಡೀ ದೇಶದಲ್ಲಿ ಪ್ರಾರಂಭಿಸೋಣ, ಎಂದರು. ಅಂದಿನಿಂದ ಲೋಕಮಾನ್ಯ ತಿಲಕರ ಪ್ರೇರಣೆಯಿಂದ ಸಾರ್ವಜನಿಕ ಗಣೇಶೋತ್ಸವಗಳು ಪ್ರಾರಂಭವಾದವು ! - . ತ್ರ್ಯಂ. ದೇಸಾಯಿ (ಗುಣಸಾಗರ ತಿಲಕ್)
ಹಿಂದೂಗಳೇ, ನಮ್ಮ ಪೂರ್ವಜರು ಆಚರಿಸುತ್ತಿದ್ದ ಗಣೇಶೋತ್ಸವದ ಹಿಂದಿನ ಕಾರಣವನ್ನು ಗಮನದಲ್ಲಿಡಿ !
ನಮ್ಮ ಧರ್ಮಬುದ್ಧಿ ಜಾಗೃತವಾಗಿರಲಿ, ನಮ್ಮ ರಾಜಕೀಯ ಮನೋವೃತ್ತಿ ತಯಾರಾಗಿರಲಿ, ನಮ್ಮ ರಾಷ್ಟ್ರೀಯತ್ವದ ಜ್ಯೋತಿ ಎಂದಿಗೂ ಪ್ರಕಾಶ ನೀಡು ವಂತಹದ್ದಾಗಿರಲಿ; ಎಂದು ನಮ್ಮ ತಾತ ಮುತ್ತಾಂದಿರು ಉತ್ಸವಗಳನ್ನು ರೂಪಿಸಿದ್ದಾರೆ ! - ಲೋಕಮಾನ್ಯ ತಿಲಕರು (ಕೇಸರಿ, ೧೮..೧೮೯೪)
ಗಣೇಶೋತ್ಸವದ ಸಮಯದಲ್ಲಿ ಜನತೆಯ ನೈತಿಕ ಅಧಃಪತನ 
ಮಾಡಲು ಯತ್ನಿಸುತ್ತಿರುವ ನೀತಿಹೀನ ಗಣೇಶೋತ್ಸವ ಮಂಡಳಿಗಳು
ಕ್ರಿಸ್ತಶಕ ೨೦೧೧ರಲ್ಲಿ ಗೋವಾದಲ್ಲಿ ಹಲವಾರು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ನಾಗರಿಕರನ್ನು ಆಕರ್ಷಿಸಲು ಲಾಟರಿಯ ಮೇಲೆ ದೊಡ್ಡ ಮೊತ್ತದ ಬಹುಮಾನವನ್ನಿಟ್ಟಿದ್ದರು. ಹಲವಾರು ಮಂಡಳಿ ಗಳು ಕೇವಲ ಬಹುಮಾನಕ್ಕಾಗಿ ೪೦ ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರು. ಟ್ರಕ್, ವಿವಿಧ ಮಾದರಿಯ ನಾಲ್ಕು ಚಕ್ರ ವಾಹನಗಳು, ದ್ವಿಚಕ್ರ ವಾಹನಗಳು, ಬಂಗಾರ, ನಗದು ಮೊತ್ತ, ಈ ರೀತಿ ಬಹುಮಾನಗಳ ಮಳೆ ಸುರಿಸಲಾಯಿತು.
ವಿನಾಶಕಾರಿ ಪಟಾಕಿಗಳನ್ನು ನಿಷೇಧಿಸಿ !
ಕಿವಿಯ ತಮಟೆಯನ್ನು ಹರಿಯುವ, ರೋಗಿಗಳ ಮರಣಪ್ರಾಯ ವಾಗಿರುವ, ಮಕ್ಕಳನ್ನು ಬೆಚ್ಚಿ ಬೀಳಿಸುವ ಹಾಗೂ ಗದ್ದಲದೊಂದಿಗೆ ದೊಡ್ಡ ಪ್ರಮಾಣದಲ್ಲಿ ಪ್ರದೂಷಣೆಯನ್ನು ಹೆಚ್ಚಿಸುವ ಪಟಾಕಿಗಳನ್ನು ಶ್ರೀ ಗಣೇಶಚತುರ್ಥಿ, ದೀಪಾವಳಿ, ಕ್ರಿಕೆಟ್ ಪಂದ್ಯದಲ್ಲಿ ಜಯ ಪಡೆದಾಗ ಹಾಗೂ ಧಾರ್ಮಿಕ ಹಾಗೂ ರಾಜಕೀಯ ಮೆರವಣಿಗೆಯಲ್ಲಿ ಸಿಡಿಸುವುದು ಅವುಗಳ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.
ಗಣಪತಿಯ ಮುಖವಾಡ ತೊಟ್ಟು ಹುಡುಗರು ನೃತ್ಯ 
ಮಾಡುತ್ತಿರುವಾಗ ಕೇವಲ ಮೂಕವೀಕ್ಷಕರಾಗಿರುವ ಗಣೇಶೋತ್ಸವ
 ಮಂಡಳಿಗಳು ಹಾಗೂ ಪೊಲೀಸರನ್ನು ಬೆಂಬತ್ತಿ ಆ ವಿಡಂಬನೆಯನ್ನು ನಿಲ್ಲಿಸುವ ಧರ್ಮಾಭಿಮಾನಿಗಳು !
ನಿಪ್ಪಾಣಿಯಲ್ಲಿ ವಿಸರ್ಜನೆಯ ಮೆರವಣಿಗೆಯಲ್ಲಿ ಗಣೇಶನ ಮುಖವಾಡವನ್ನು ತೊಟ್ಟು ಒಬ್ಬ ಹುಡುಗನು ನೃತ್ಯ ಮಾಡುತ್ತಿರುವುದು ಶ್ರೀ. ಅನಿರುದ್ಧ ಪಟ್ಟಣಶೆಟ್ಟಿಯವರ ಗಮನಕ್ಕೆ ಬಂದಿತು. ತಕ್ಷಣ ಅವರು ಗಣೇಶೋತ್ಸವ ಮಂಡಳಿಯ ಸದಸ್ಯರನ್ನು ಭೇಟಿಯಾಗಿ ಅದನ್ನು ನಿಲ್ಲಿಸಲು ವಿನಂತಿಸಿದರು; ಆದರೆ ಅವರು ಅದನ್ನು ಅಸಡ್ಡೆ ಮಾಡಿದರು. ಶ್ರೀ ಪಟ್ಟಣಶೆಟ್ಟಿಯವರಿಗೆ ಪೋಲೀಸರು ಸಹ ಸರಿಯಾದ ಸ್ಪಂದಿಸುತ್ತಿಲಿಲ್ಲ. ಕೊನೆಗೆ ಅವರು ಮತ್ತೊಮ್ಮೆ ಮಂಡಳಿಯ ಅಧ್ಯಕ್ಷರಿಗೆ ನಡೆಯುತ್ತಿರುವ ವಿಡಂಬನೆಯನ್ನು ತಿಳಿಸಿದ ಬಳಿಕ ಅವರು ಸಂಬಂಧಪಟ್ಟ ಹುಡುಗನನ್ನು ನೃತ್ಯ ಮಾಡುವುದನ್ನು ನಿಲ್ಲಿಸಿ ಅವನನ್ನು ಅಲ್ಲಿಯೇ ಕೂರಿಸಿದರು.’ (೧೨..೨೦೧೪)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಾಸ್ಯಾಸ್ಪದ ಹೇಳಿಕೆ !