ಕಾಶ್ಮೀರಿ ಹಿಂದೂಗಳಿಗೆ ಅವರ ನ್ಯಾಯಾಧಿಕಾರ ಪಡೆಯಲು ಭಾರತದ ಹಿಂದುತ್ವನಿಷ್ಠ ಸಂಘಟನೆಗಳ ಪ್ರಯತ್ನಕ್ಕೆ ವೇಗ !

ಇಂದೂರ್ (ತೆಲಂಗಾಣ) ನಲ್ಲಿ ಭವ್ಯ ಸಭೆಯ ಮೂಲಕ ಹಿಂದೂಗಳ ಮನಸ್ಸಿನಲ್ಲಿ ಧರ್ಮಬಾಂಧವ್ಯಕ್ಕೆ ಚೇತನ !
ಸಭೆಯಲ್ಲಿ ದೀಪಪ್ರಜ್ವಲಿಸುತ್ತಿರುವಾಗ ಹಿಂದುತ್ವನಿಷ್ಠರು (ಎಡದಿಂದ) ಶಿವಸೇನೆಯ ಶ್ರೀ. ಅರ್ಜುನ ಯಾದವ್,
 ಶಿವಸೇನೆಯ ಕರ್ನೂಲ್ ಜಿಲ್ಲಾಧ್ಯಕ್ಷ ಶ್ರೀ. ಪ್ರಕಾಶ ರೆಡಿ, ನ್ಯಾಯವಾದಿ ಶ್ರೀ. ವಿಷ್ಣುಶಂಕರ ಜೈನ್, ಶ್ರೀ. ರಮೇಶ ಶಿಂದೆ, ನ್ಯಾಯವಾದಿ ಶ್ರೀ. ಗಂಗಾಧರ ಗೌಡ, ಶ್ರೀ. ಟಿ.ಎನ್.ಮುರಾರಿ,ಶ್ರೀ. ತಪನ್ ಘೋಷ್, ಗುರು ಸತ್ತಾ ಸಂಘಟನೆಯ
ಶ್ರೀ. ರುದ್ರ ವರ್ಮಾ, ಶ್ರೀ. ಮುರಲಿ ಮನೋಹರ ಶರ್ಮಾ, ಶ್ರೀ. ಅನಿಲ್ ಧೀರ್ ಮತ್ತು ಶ್ರೀ. ಗೋಪಿ ಕಿಶನ್ ಗೌಡ
ಇಂದೂರ್ (ತೆಲಂಗಾಣ) : ೧೯೯೦ ರಲ್ಲಿ ನಿರಾಶ್ರಿತರಾದ ನಾಲ್ಕುವರೆ ಲಕ್ಷ ಕಾಶ್ಮೀರಿ ಪಂಡಿತರಿಗೆ ಅವರ ನ್ಯಾಯಯುತ ಅಧಿಕಾರವನ್ನು ಪುನಃ ದೊರಕಿಸಿಕೊಡಲು ತೆಲಂಗಾಣ ರಾಜ್ಯದ ಇಂದೂರ್ (ನಿಜಾಮಾಬಾದ)ನಲ್ಲಿ ಜುಲೈ ೩೧ ರಂದು ಹಿಂದುತ್ವನಿಷ್ಠ ಸಂಘಟನೆಗಳ ವತಿಯಿಂದ ಒಂದು ಭವ್ಯವಾದ ಸಭೆಯನ್ನು ಆಯೋಜಿಸಲಾಗಿತ್ತು. ನಗರದ ಸಾಧೂಲಾ ಜನಾರ್ಧನ ಗಾರ್ಡನ್‌ನಲ್ಲಿ ನೆರವೇರಿದ ಈ ಸಭೆಗೆ ದೇಶದ ಅನೇಕ ರಾಜ್ಯಗಳ ಹಿಂದುತ್ವನಿಷ್ಠ ಮುಖಂಡರು ಕಾಶ್ಮೀರಿ ಪಂಡಿತರ ಅಧಿಕಾರಕ್ಕಾಗಿ ಸಂಘಟಿತರಾಗಿ ಒಕ್ಕೊರಳಿನಿಂದ ಧ್ವನಿಯೆತ್ತಿದರು. ಸಭೆಯ ಸಮಯದಲ್ಲಿ ಧಾರಾಕಾರ ಮಳೆ ಬರುತ್ತಿದ್ದರೂ, ೯೦೦ ಕ್ಕಿಂತಲೂ ಹೆಚ್ಚು ಧರ್ಮಾಭಿಮಾನಿ ಹಿಂದೂಗಳು ಸಭೆಯಲ್ಲಿ ಉಪಸ್ಥಿತರಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರಿ ಹಿಂದೂಗಳಿಗೆ ಅವರ ನ್ಯಾಯಾಧಿಕಾರ ಪಡೆಯಲು ಭಾರತದ ಹಿಂದುತ್ವನಿಷ್ಠ ಸಂಘಟನೆಗಳ ಪ್ರಯತ್ನಕ್ಕೆ ವೇಗ !