ಸಾರ್ವಜನಿಕ ಉತ್ಸವಗಳನ್ನು ಆದರ್ಶ ರೀತಿಯಲ್ಲಿ ಆಚರಿಸಲು ಮಾಡಬೇಕಾದ ಪ್ರಯತ್ನ !

ಶ್ರೀ. ಸುನಿಲ್ ಘನವಟ್
ಸಾರ್ವಜನಿಕ ಉತ್ಸವ ಮತ್ತು ಹಬ್ಬ ಇವುಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾಗಿವೆ. ಉತ್ಸವವೆಂದರೆ ಆನಂದವನ್ನು ನೀಡುವ ಸಾರ್ವಜನಿಕ ಸಮಾರಂಭ ! ದೈನಂದಿನ ಜೀವನವನ್ನು ಆನಂದದಾಯಕಗೊಳಿಸುವುದೇ ಧಾರ್ಮಿಕ ಉತ್ಸವಗಳ ಉದ್ದೇಶವಾಗಿರುತ್ತದೆ. ಆದರೆ ಇಂದು ನಾವು ಆಚರಿಸುವ ಧಾರ್ಮಿಕ ಉತ್ಸವಗಳಿಂದ ಆನಂದ ಸಿಗುತ್ತದೆಯೆ ? ಇಲ್ಲವಲ್ಲ ! ಇದರ ಏಕೈಕ ಕಾರಣವೆಂದರೆ, ಹಿಂದೂಗಳ ಉತ್ಸವಗಳಲ್ಲಿ ನುಸುಳಿದ ಅಯೋಗ್ಯ ಕೃತಿಗಳು ! ರಾಮರಾಜ್ಯದ ಅನುಭೂತಿಯನ್ನು ನೀಡುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ನಮ್ಮೆಲ್ಲರ ಧ್ಯೇಯವಾಗಿದೆ.
ಈ ಭಾವೀ ಹಿಂದೂ ರಾಷ್ಟ್ರದಲ್ಲಿ ನಾವು ನಮ್ಮ ಉತ್ಸವವನ್ನು ಮದ್ಯಪಾನ ಮಾಡಿ, ಜೂಜಾಡಿ ಅಥವಾ ಚಂದಾ ವಸೂಲು ಮಾಡಿ ಆಚರಿಸಲಿಕ್ಕಿದ್ದೇವೆಯೇ? ಇಲ್ಲವಲ್ಲ ! ಆದ್ದರಿಂದ ಓರ್ವ ಧರ್ಮಪ್ರೇಮಿಯೆಂಬ ಕಾರಣದಿಂದ ಉತ್ಸವದಲ್ಲಿನ ಅಯೋಗ್ಯ ಆಚರಣೆಗಳನ್ನು ತಡೆಯುವ ಸಲುವಾಗಿ ಹಾಗೂ ಉತ್ಸವ ಆದರ್ಶ ರೀತಿಯಲ್ಲಿ ಆಚರಣೆಯಾಗುವ ಸಲುವಾಗಿ ನಾವೆಲ್ಲರೂ ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ. ನಾವು ಉತ್ಸವಗಳಲ್ಲಿನ ಅಯೋಗ್ಯ ಆಚರಣೆಗಳನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಈಗ ನೋಡೋಣ.
. ಇಂದು ಧಾರ್ಮಿಕ ಉತ್ಸವಗಳಲ್ಲಿ ಹಿಂದೂಗಳಿಂದಲೇ ಆಗುವ ಧರ್ಮಹಾನಿ !
ಧಾರ್ಮಿಕ ಉತ್ಸವಗಳಲ್ಲಿ ಹಿಂದೂಗಳಿಂದ ಅಯೋಗ್ಯ ಕೃತಿಗಳಾಗುವುದು ಹಿಂದೂ ಧರ್ಮದ ಹಾನಿಯೇ ಆಗಿದೆ ಎಂಬುದನ್ನು ನಾವು ಸಮಾಜ ಮನಸ್ಸಿನಲ್ಲಿ ಬಿಂಬಿಸಲಿಕ್ಕಿದೆ. ಅದಕ್ಕಾಗಿ ಧಾರ್ಮಿಕ ಉತ್ಸವಗಳಲ್ಲಿ ಅಯೋಗ್ಯ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸುವ ಆವಶ್ಯಕತೆಯಿದೆ.
೧ ಅ. ಬಲವಂತದಿಂದ ಆಗುವ ನಿಧಿಸಂಕಲನ ಮತ್ತು ಸುಲಿಗೆ : ನಾವೆಲ್ಲರೂ ನೋಡಿರುವಂತೆ, ಮೊಸರುಕುಡಿಕೆ, ಗಣೇಶೋತ್ಸವ, ನವರಾತ್ರ್ಯೋತ್ಸವ, ಹೋಳಿ ಇತ್ಯಾದಿಗಳಲ್ಲಿ ಬಲವಂತವಾಗಿ ಚಂದಾವಸೂಲಿ ಮಾಡುತ್ತಾರೆ. ಸಾರ್ವಜನಿಕ ಉತ್ಸವಗಳಲ್ಲಿ ಚಂದಾ ಸಂಗ್ರಹಿಸುವಂತೆಯೇ ಹೋಳಿ ಅಥವಾ ರಂಗ ಪಂಚಮಿಯ ಸಮಯದಲ್ಲಿ ಬಣ್ಣ ಹಚ್ಚುವ ಭಯ ತೋರಿಸಿ ಹಣ ಸುಲಿಗೆ ಮಾಡುತ್ತಾರೆ. ಇದರಿಂದ ಇತ್ತೀಚೆಗೆ ಜನಸಾಮಾನ್ಯರಿಗೆ ಈ ಉತ್ಸವ ಬೇಡವೆಂದೆನಿ ಸುತ್ತದೆ ಹಾಗೂ ಅವರು ಸಾರ್ವಜನಿಕ ಉತ್ಸವ ಮಂಡಳಿ ಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಂದ ದೂರ ಹೋಗುತ್ತಾರೆ.
ನಾವು ಉತ್ಸವಕ್ಕಾಗಿ ಜನರಿಂದ ಐಚ್ಛಿಕ ಚಂದಾ ಸ್ವೀಕರಿಸಿರಿ, ಎಂದು ಸಾರ್ವಜನಿಕ ಉತ್ಸವ ಮಂಡಳಿ ಗಳಿಗೆ ಮತ್ತು ಸಮಾಜಕ್ಕೆ ಕರೆ ನೀಡಿದರೆ ಈ ಅಯೋಗ್ಯ ವೃತ್ತಿಯನ್ನು ತಡೆಗಟ್ಟಬಹುದು.
೧ ಆ. ಮಹಿಳೆಯರೊಂದಿಗೆ ಅಸಭ್ಯ ವರ್ತನೆ : ಸಾರ್ವಜನಿಕ ಉತ್ಸವಗಳಲ್ಲಿ ಜನಸಂದಣಿಯ ಲಾಭ ಪಡೆದು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಪ್ರಸಂಗ ಗಳು ನಡೆಯುತ್ತವೆ. ದೇವರಿಗೆ ಈ ಕೃತ್ಯ ಇಷ್ಟವಾಗಬಹುದೇ ? ಹೀಗೆ ವರ್ತಿಸುವುದರಿಂದ ಸುಸಂಸ್ಕೃತ ಮಹಿಳೆಯರಿಗೆ ಇಂತಹ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಂಕೋಚ ವೆನಿಸುತ್ತದೆ ಅದಕ್ಕಾಗಿ ನಾವು ಮಹಿಳೆ ಯರೊಂದಿಗೆ ಅಸಭ್ಯವಾಗಿ ವರ್ತಿಸುವ ಕಾರ್ಯಕರ್ತರು ಮತ್ತು ದರ್ಶನಾರ್ಥಿಗಳನ್ನು ಪೊಲೀಸರ ವಶಕ್ಕೊಪ್ಪಿಸಿ, ಮಹಿಳೆಯರನ್ನು ಬೇರೆಯೇ ಸಾಲಿನಲ್ಲಿ ನಿಲ್ಲಿಸಿ, ಎಂದು ಉತ್ಸವ ಮಂಡಳಿಗಳಿಗೆ ಕರೆ ನೀಡಬಹುದು.
೧ ಇ. ಅಶಾಸ್ತ್ರೀಯ ಮೂರ್ತಿ : ಗಣೇಶೋತ್ಸವದಲ್ಲಿ ನಾವು ಶ್ರೀ ಗಣಪತಿಯ ಮೂರ್ತಿಯನ್ನು ಕ್ರಿಕೆಟ್ ಪಟು, ಸೈನಿಕ, ರಾಜಕಾರಣಿ ಇತ್ಯಾದಿ ರೂಪಗಳಲ್ಲಿ ಮಾಡಿರುವುದು ನೋಡಲು ಸಿಗುತ್ತದೆ. ಮೂರ್ತಿಯ ಆಕಾರವೂ ದೊಡ್ಡದಾಗಿರುವುದರಿಂದ ಕೆಲವೊಮ್ಮೆ ಮೂರ್ತಿ ಭಂಗವಾಗುತ್ತದೆ. ಅನೇಕ ಸ್ಥಳಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಕೆಲವು ಸ್ಥಳಗಳಲ್ಲಿ ತೆಂಗಿನಕಾಯಿ, ಪಾತ್ರೆ, ಆಸ್ಪತ್ರೆಯ ವಸ್ತುಗಳು ಮುಂತಾದವುಗಳಿಂದ ದೇವತೆಯ ಮೂರ್ತಿಯನ್ನು ತಯಾರಿಸಲಾಗುತ್ತದೆ. ಮೂರ್ತಿಯನ್ನು ಮಾನವನ ರೂಪದಲ್ಲಿ, ವಿಪರೀತ ದೊಡ್ಡ ಆಕಾರದಲ್ಲಿ ತಯಾರಿಸುವುದು ಹಾಗೂ ಆವೆ ಮಣ್ಣಿನಿಂದ ಮಾಡದಿರುವುದು, ಇದೆಲ್ಲ ಮೂರ್ತಿ ಶಾಸ್ತ್ರದ ವಿರುದ್ಧವಾಗಿದೆ. ಇಂತಹ ಮೂರ್ತಿಯಲ್ಲಿ ದೇವತೆಯ ತತ್ತ್ವ ಬರುವುದಾದರೂ ಹೇಗೆ ?
ನಾವು ಉತ್ಸವಗಳಿಂದ ದೇವರ ತತ್ತ್ವದ ನಿಜವಾದ ಲಾಭ ಪಡೆಯಲು ಉತ್ಸವಮೂರ್ತಿಯನ್ನು ಮೂರ್ತಿ ಶಾಸ್ತ್ರಕ್ಕನುಸಾರ ತಯಾರಿಸಿ, ಎಂದು ಮೂರ್ತಿಕಾರರಿಗೆ ಹಾಗೂ ಉತ್ಸವ ಮಂಡಳಿಗಳಿಗೆ ಕರೆ ನೀಡಬಹುದು.
೧ ಈ. ಧ್ವನಿಪ್ರದೂಷಣೆ : ಉತ್ಸವಗಳಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಹಣ ಪೋಲಾಗುತ್ತದೆ ಹಾಗೂ
ಧ್ವನಿಪ್ರದೂಷಣೆ ಮತ್ತು ವಾಯುಪ್ರದೂಷಣೆಯೂ ಹೆಚ್ಚಾಗುತ್ತದೆ. ಉತ್ಸವಗಳಲ್ಲಿ ಚಿತ್ರಗೀತೆಗಳನ್ನು ಹಾಕಲು
ಡಾಲ್ಬೀ ಧ್ವನಿವರ್ಧಕ ಉಪಯೋಗಿಸುವುದರಿಂದಲೂ ಧ್ವನಿಪ್ರದೂಷಣೆಯಾಗುತ್ತದೆ. ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕವನ್ನು ಹಚ್ಚುವುದರಿಂದ ಜನಸಾಮಾನ್ಯರ ನಿದ್ರೆ ಮಾಡುವ ಮೂಲಭೂತ ಅಧಿಕಾರ ಭಂಗವಾಗುತ್ತದೆ. ಈ ರೀತಿ ಯಲ್ಲಿ ಧ್ವನಿಪ್ರದೂಷಣೆ ಮತ್ತು ವಾಯುಪ್ರದೂಷಣೆ ಮಾಡುವುದರಿಂದ ನಮಗೆ ಉತ್ಸವದ ಆನಂದ ಸಿಗ ಬಹುದೇ ? ನಾವು ದೇಶ ಆರ್ಥಿಕ ಸಂಕಟದಲ್ಲಿರುವಾಗ ಪಟಾಕಿಗಳಿಗಾಗಿ ಹಣ ಖರ್ಚು ಮಾಡಬೇಡಿ, ಉತ್ಸವಗಳಲ್ಲಿ ಡಾಲ್ಬಿಯಲ್ಲಿ ತಮೋಗುಣಿ ಚಿತ್ರಗೀತೆಗಳನ್ನು ಹಾಕಬೇಡಿ, ಎಂದು ಉತ್ಸವ ಮಂಡಳಿಗಳಿಗೆ ಕರೆ ನೀಡಬಹುದು.
೧ ಉ. ಮಂಟಪಗಳಲ್ಲಿನ ತಪ್ಪು ಆಚರಣೆಗಳು : ಕೆಲವೆಡೆ ಉತ್ಸವದ ಮಂಟಪದಲ್ಲಿಯೇ ದೇವತೆಯ ಮೂರ್ತಿಯ ಎದುರಿಗೆ ಮದ್ಯಪಾನ ಮಾಡುವುದು, ರಾತ್ರಿ ಜೂಜಾಡುವುದು ಇತ್ಯಾದಿ ನಡೆಯುತ್ತದೆ. ಇಂತಹ ಪ್ರಸಂಗಗಳು ನಡೆಯುವುದರಿಂದ ಅಲ್ಲಿ ದೇವರು ವಾಸಿಸಬಹುದೇ ?
ನಾವು ಮದ್ಯಪಾನ ಮಾಡುವ ಹಾಗೂ ಜೂಜಾಡುವ ಮಂಡಳಿಗಳ ಕಾರ್ಯಕರ್ತರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಬಹುದು.
೧ ಊ. ಅಯೋಗ್ಯ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು : ಅನೇಕ ಸ್ಥಳಗಳಲ್ಲಿ ಉತ್ಸವದ ನಿಮಿತ್ತ ಫ್ಯಾಶನ್ ಶೋ, ಫ್ಯಾನ್ಸಿ ಡ್ರೆಸ್, ಆರ್ಕೆಸ್ಟ್ರಾ, ಅಶ್ಲೀಲ ನಟಿಯರನ್ನು ಕುಣಿಸುವುದು, ರಾಷ್ಟ್ರ-ಧರ್ಮದ ಗಂಧಗಾಳಿಯೇ ಇಲ್ಲದ ಚಲನಚಿತ್ರ-ನಾಟಕ ಗಳನ್ನು ತೋರಿಸುವುದು ಇತ್ಯಾದಿ ಅಯೋಗ್ಯ ಕೃತಿ ಗಳು ನಡೆಯುತ್ತವೆ. ಇಂತಹ ಕಾರ್ಯಕ್ರಮಗಳಿಂದ ಧಾರ್ಮಿಕ ಆನಂದ ಪಡೆಯಲು ಸಾಧ್ಯವೇ ?
ನಾವು ಮನೋರಂಜನಾತ್ಮಕ ಕಾರ್ಯಕ್ರಮ ಗಳನ್ನು ಆಯೋಜಿಸುವುದಕ್ಕಿಂತ ರಾಷ್ಟ್ರ-ಧರ್ಮದ ವಿಷಯದಲ್ಲಿ ಜಾಗೃತಿ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಿರಿ, ಎಂದು ಉತ್ಸವಮಂಡಳಿಗಳಿಗೆ ಕರೆ ನೀಡಬಹುದು.
೧ ಎ. ಸಮಾಜಘಾತಕ ವಿಷಯಗಳ ಪ್ರಸಾರ : ಉತ್ಸವ ಮೂರ್ತಿ ಇರುವ ಮಂಟಪದಲ್ಲಿ ಸಿಗರೇಟ್, ಗುಟ್ಖಾ, ಮದ್ಯ ಮುಂತಾದ ಹಾನಿಕಾರಿ ಪದಾರ್ಥಗಳ ಜಾಹೀರಾತುಗಳನ್ನು ಹಾಕುತ್ತಾರೆ. ಅದಕ್ಕಾಗಿ ಉತ್ಪಾದಕರಿಂದ ದೊಡ್ಡ ಮೊತ್ತದ ದೇಣಿಗೆಗಳನ್ನು ಸ್ವೀಕರಿಸ ಲಾಗುತ್ತದೆ. ಇಂತಹ ಜಾಹೀರಾತುಗಳನ್ನು ಸಾರ್ವಜನಿಕ ಉತ್ಸವಗಳಲ್ಲಿ ಹಾಕುವುದನ್ನು ನಾವು ವಿರೋಧಿಸಬೇಕು.
೧ ಏ. ಮೆರವಣಿಗೆಯಲ್ಲಿನ ಅಯೋಗ್ಯ ವರ್ತನೆ ಗಳು : ಮೆರವಣಿಗೆಗಳಲ್ಲಿಯೂ ಮದ್ಯಪಾನ, ಚಿತ್ರಗೀತೆ ಗಳ ತಾಳದಲ್ಲಿ ಅಶ್ಲೀಲ ಕುಣಿತ, ಮಹಿಳೆಯರೊಂದಿಗೆ ಅಸಭ್ಯ ವರ್ತನೆ, ಶಿಸ್ತು ಇಲ್ಲದಿರುವುದು ಇತ್ಯಾದಿ ಅಯೋಗ್ಯ ಕೃತಿಗಳು ನಡೆಯುತ್ತದೆ. ಮೆರವಣಿಗೆ ನಾಮಜಪ ಸಹಿತ, ಸಮಯಮಿತಿಯಲ್ಲಿ ಮತ್ತು ಆದರ್ಶ ರೀತಿಯಲ್ಲಿ ಆಗುವಂತೆ ನಾವು ಉತ್ಸವ ಮಂಡಳಿಗಳಿಗೆ ಪ್ರಬೋಧನೆ ಮಾಡಬಹುದು.
. ಈ ಧರ್ಮಹಾನಿಯನ್ನು ತಡೆಯಲು ಏನು ಮಾಡಬಹುದು ?
ಉತ್ಸವಗಳಲ್ಲಿ ಧರ್ಮಹಾನಿಯನ್ನು ತಡೆಯಲು ನಾವು ಹಿಂದುತ್ವನಿಷ್ಠ ಸಂಘಟನೆಯೆಂದು ವಿವಿಧ ಮಾರ್ಗಗಳಿಂದ ಪ್ರಯತ್ನಿಸಬಹುದು.
೨ ಅ. ಜಾಗೃತಿ : ಉತ್ಸವಗಳಲ್ಲಿನ ಅಯೋಗ್ಯ ಕೃತಿಗಳ ವಿಷಯದಲ್ಲಿ ಸಾರ್ವಜನಿಕ ಉತ್ಸವಮಂಡಳಿ ಗಳನ್ನು ಭೇಟಿಯಾಗಿ ಅವರಿಗೆ ಪ್ರಬೋಧನೆ ಮಾಡು ವುದು, ಭಿತ್ತಿಪತ್ರಗಳು, ಫ್ಲೆಕ್ಸ್ ಫಲಕಗಳು ಇತ್ಯಾದಿಗಳ ಮೂಲಕ ಸಮಾಜದಲ್ಲಿ ಜಾಗೃತಿ ಮಾಡುವುದು, ಉತ್ಸವಗಳ ಮೊದಲು ಅಥವಾ ಉತ್ಸಗಳ ಸಮಯದಲ್ಲಿ ವಿವಿಧ ವ್ಯಾಸಪೀಠಗಳಲ್ಲಿ ಪ್ರಬೋಧನೆಯ ವಿಷಯ ಗಳನ್ನು ಮಂಡಿಸುವುದು, ದಿನಪತ್ರಿಕೆಗಳಲ್ಲಿ ಲೇಖನ ಗಳನ್ನು ಬರೆಯುವುದು ಇತ್ಯಾದಿ ಜಾಗೃತಿಪರ ಕೃತಿ ಮಾಡಬಹುದು. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ತಮಗೆ ಜಾಗೃತಿಗೆ ಸಂಬಂಧಿಸಿದ ಸಾಹಿತ್ಯಗಳನ್ನು ಒದಗಿಸುವುದು.
೨ ಆ. ಪತ್ರಕರ್ತರ ಪರಿಷತ್ತು : ಉತ್ಸವಗಳಲ್ಲಿನ ಅಯೋಗ್ಯ ಕೃತಿಗಳನ್ನು ತಡೆಗಟ್ಟುವ ವಿಷಯದಲ್ಲಿ ಪತ್ರಕರ್ತರ ಪರಿಷತ್ತಿನಿಂದ ಕರೆ ನೀಡಬಹುದು. ಪತ್ರಕರ್ತರ ಪರಿಷತ್ತಿನಿಂದ ದಿನಪತ್ರಿಕೆಗಳ ಮೂಲಕ ಜಾಗೃತಿಯಾಗುತ್ತದೆ. ಹಿಂದೂ ಜನಜಾಗೃತಿ ಸಮಿತಿ ನಡೆಸುವ ಪತ್ರಕರ್ತರ ಪರಿಷತ್ತಿನಿಂದ ಅನೇಕ ಜಿಲ್ಲೆ ಗಳ ಪೊಲೀಸರು ಸಮಿತಿಯ ಕಾರ್ಯಕರ್ತರನ್ನು ಗಣೇಶೋತ್ಸವಕ್ಕೆ ಸಂಬಂಧಿಸಿದ ಮಂಡಳಿಗಳ ಬೈಠಕ್
ನಲ್ಲಿ ಮಾರ್ಗದರ್ಶನ ಮಾಡಲು ತಪ್ಪದೇ ಕರೆಯುತ್ತಾರೆ. ಅಷ್ಟೇ ಅಲ್ಲ ಅವರು ಸಮಿತಿಯು ಪ್ರಬೋಧನೆ ಗಾಗಿ ತಯಾರಿಸಿದ ‘ಗಣೇಶೋತ್ಸವ : ವಾಸ್ತವ ಮತ್ತು
ಆದರ್ಶ’ ಎಂಬ ವಿಡಿಯೋ ಸಿಡಿಯನ್ನು (ಧ್ವನಿಚಿತ್ರ ಮುದ್ರಿಕೆ) ಸಾರ್ವಜನಿಕ ಉತ್ಸವ ಮಂಡಳಿಗಳಿಗೆ ತೋರಿಸುತ್ತಾರೆ.
೨ ಇ. ಪ್ರತ್ಯಕ್ಷ ಕೃತಿ : ಉತ್ಸವಗಳಲ್ಲಿನ ಅಯೋಗ್ಯ ಕೃತಿಗಳನ್ನು ತಡೆಗಟ್ಟಲು ಪ್ರಸಂಗ ಬಂದರೆ ಪೊಲೀಸರಲ್ಲಿ ದೂರು ನೀಡುವುದು, ಉತ್ಸವ ಮಂಡಳಿಗಳನ್ನು ಬಹಿಷ್ಕರಿಸಲು ಕರೆ ನೀಡುವುದು, ಜೂಜು ಇತ್ಯಾದಿಗಳನ್ನು ತಡೆಗಟ್ಟಲು ಪೊಲೀಸರ ಜೊತೆಗೆ ಕಾವಲು ನೀಡುವುದು ಇತ್ಯಾದಿ ಪ್ರತ್ಯಕ್ಷ ಕೃತಿ ಮಾಡಬಹುದು. ಮಹಾರಾಷ್ಟ್ರದ ಪುಣೆಯಲ್ಲಿ ಕುಡಿಯುವ ನೀರು ಶೇಖರಣೆಯ ಖಡಕವಾಸಲಾ ಜಲಾಶಯದಲ್ಲಿ ರಂಗ ಪಂಚಮಿಯಂದು ಬಣ್ಣದ ಹೋಳಿ ಆಡಲಾಗುತ್ತಿತ್ತು. ಇದನ್ನು ತಡೆಗಟ್ಟಲು ಕಳೆದ ೧೪ ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ರಂಗ ಪಂಚಮಿಯಂದು ಜಲಾಶಯದ ಸುತ್ತಲೂ ಮಾನವೀ ಸರಪಳಿಯನ್ನು ನಿರ್ಮಿಸಿ ನಿಲ್ಲುತ್ತಾರೆ. ಈ ಆಂದೊಲನಕ್ಕೆ ಇಂದಿನವರೆಗೆ ಶೇ. ೧೦೦ ರಷ್ಟು ಯಶಸ್ಸು ಲಭಿಸಿದೆ.
೨ ಈ. ಆದರ್ಶ ಉತ್ಸವವನ್ನು ಆಚರಿಸಿ ತೋರಿಸುವುದು : ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಕೆಲವು ಜಾಗರೂಕ ಗಣೇಶೋತ್ಸವ ಹಾಗೂ ಶಿವಾಜಿ ಜಯಂತಿ ಉತ್ಸವ ಮಂಡಳಿಗಳಿಗೆ ಪ್ರಬೋಧನೆ ಮಾಡಿ ಅವರಿಗೆ ಉತ್ಸವಗಳನ್ನು ಆದರ್ಶ ರೀತಿಯಲ್ಲಿ ಹೇಗೆ ಆಚರಿಸುವುದು, ಎಂಬುದನ್ನು ಕಲಿಸಿತು. ಅದರಿಂದ ಮಂಡಳಿಗಳ ಕಾರ್ಯಕರ್ತರಿಗೆ ಧರ್ಮಾಚರಣೆಯ ಅನುಭೂತಿ ಬಂದಿದೆ ಹಾಗೂ ಅವರು ಸಮಿತಿಯ ಕಾರ್ಯದೊಂದಿಗೆ ಜೋಡಿಸಲ್ಪ ಟ್ಟರು. ಈಗ ಶಿವಾಜಿ ಜಯಂತಿ, ಗಣೇಶೋತ್ಸವ ಇತ್ಯಾದಿಗಳಲ್ಲಿ ರಾಷ್ಟ್ರ ಮತ್ತು ಧರ್ಮದ ವಿಷಯದ ವ್ಯಾಖ್ಯಾನಕ್ಕಾಗಿ ಸಮಿತಿಯ ಕಾರ್ಯಕರ್ತರನ್ನು ಕರೆಯುತ್ತಾರೆ. ತಾವು ಸಹ ತಮ್ಮ ಪರಿಸರದಲ್ಲಿ ಇಂತಹ ಕಾರ್ಯಗಳನ್ನು ಮಾಡಬಹುದು !
. ಗ್ರಾಮದೇವತೆಗಳ ಉತ್ಸವಗಳಲ್ಲಿನ ಅಯೋಗ್ಯ ಕೃತಿಗಳನ್ನೂ ತಡೆಗಟ್ಟಿರಿ !
ಸಾರ್ವಜನಿಕ ಉತ್ಸವಗಳ ಹಾಗೆಯೇ ಪ್ರತಿ ಯೊಂದು ಊರಿನಲ್ಲಿ ಆಚರಿಸುವ ಗ್ರಾಮದೇವತೆಗಳ ಉತ್ಸವಗಳಲ್ಲಿಯೂ ಇಂತಹ ಎಲ್ಲ ಅಯೋಗ್ಯ ಕೃತಿಗಳು ಕಂಡುಬರುತ್ತವೆ. ಈ ಅಯೋಗ್ಯ ಕೃತಿಗಳನ್ನು ತಡೆಗಟ್ಟಲು ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳು ಮುಂದಾಳತ್ವ ವಹಿಸಿದರೆ ಅವರ ಊರಿನ ಜನರಿಗೆ ಆಧಾರವೆನಿಸುವುದು. ಅಷ್ಟು ಮಾತ್ರವಲ್ಲ ಈ ಉತ್ಸವಗಳ ಸುನಿಯೋಜನೆ ಮಾಡಲು, ಉದಾ. ಗ್ರಾಮದೇವತೆಯ ದೇವಸ್ಥಾನ ಹಾಗೂ ಅದರ ಪರಿಸರಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಜನಸಂದಣಿ ನಿಯಂತ್ರಣ, ಪ್ರಸಾದ ವಿತರಣೆ, ಪ್ರಥಮೋಪಚಾರ ಸೇವೆ ಇತ್ಯಾದಿ ಕೃತಿ ಮಾಡಲು ಹಿಂದೂ ಸಂಘಟನೆಗಳು ಮುಂದಾಳತ್ವ ವಹಿಸಿದರೆ ಅದರ ಮೂಲಕ ಅನೇಕ ಗ್ರಾಮಸ್ಥರನ್ನು ಸಂಘಟಿಸಬಹುದು.
ತಮ್ಮೆಲ್ಲರಿಗೂ ಸಾರ್ವಜನಿಕ ಉತ್ಸವ ಆದರ್ಶ ರೀತಿಯಲ್ಲಿ ಆಚರಿ ಸಲು ಪ್ರೇರಣೆ ಸಿಗಲಿ ಹಾಗೂ ಅದರ ಮೂಲಕ ಹಿಂದೂ ರಾಷ್ಟ್ರ ಸ್ಥಾಪನೆಯ ಅಡಿಪಾಯದ ರಚನೆಯಾಗಲಿ, ಎಂದು ಶ್ರೀಗುರುಚರಣ ಗಳಲ್ಲಿ ಪ್ರಾರ್ಥಿಸುತ್ತೇನೆ. ನಮಸ್ಕಾರ !
- ಶ್ರೀ. ಸುನಿಲ್ ಘನವಟ್, ಮಹಾರಾಷ್ಟ್ರ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾರ್ವಜನಿಕ ಉತ್ಸವಗಳನ್ನು ಆದರ್ಶ ರೀತಿಯಲ್ಲಿ ಆಚರಿಸಲು ಮಾಡಬೇಕಾದ ಪ್ರಯತ್ನ !