ಋಷಿಪಂಚಮಿ (ಸೆಪ್ಟೆಂಬರ್ ೬)

ತಿಥಿ : ಭಾದ್ರಪದ ಶುಕ್ಲ ಪಂಚಮಿ
ಋಷಿ : ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.
ಉದ್ದೇಶ
. ‘ತಮ್ಮ ತಪೋಬಲದಿಂದ ಜಗತ್ತಿನಲ್ಲಿನ ಮಾನವರಿಗೆ ಅನಂತ ಉಪಕಾರವನ್ನು ಮಾಡಿದ ಮತ್ತು ಮಾನವನ ಜೀವನಕ್ಕೆ ಯೋಗ್ಯದಿಶೆ ತೋರಿಸಿದ ಋಷಿಗಳನ್ನು ಈ ದಿನ ಸ್ಮರಿಸಲಾಗುತ್ತದೆ.’ - .ಪೂ. ಪರಶರಾಮ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
. ಮಾಸಿಕ ಸರದಿ, ಅಶೌಚ ಮತ್ತು ಸ್ಪರ್ಶಾಸ್ಪರ್ಶಗಳಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ ಹಾಗೂ ಗೋಕುಲಾಷ್ಟಮಿಯ ದಿನ ಮಾಡಿದ ಉಪವಾಸದಿಂದ ಕಡಿಮೆಯಾಗುತ್ತದೆ. (ಪುರುಷರ ಮೇಲಾಗುವ ಪರಿಣಾಮಗಳು, ಕ್ಷೌರ ಮುಂತಾದ ಪ್ರಾಯಶ್ಚಿತ್ತ ಕರ್ಮದಿಂದ ಮತ್ತು ವಾಸ್ತುವಿನ ಮೇಲಾಗುವ ಪರಿಣಾಮವು ಉದಕಶಾಂತಿಯಿಂದ ಕಡಿಮೆಯಾಗುತ್ತದೆ.)

ವ್ರತವನ್ನು ಆಚರಿಸುವ ಪದ್ಧತಿ
. ಈ ದಿನ ಸ್ತ್ರೀಯರು ವನಸ್ಪತಿಯ (ಆಘಾಡಾ) ಕಡ್ಡಿಯಿಂದ ಹಲ್ಲುಜ್ಜಬೇಕು.
. ಸ್ನಾನವಾದ ನಂತರ ‘ಮಾಸಿಕ ಸರದಿಯ ಸಮಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಆಗಿರುವ ಸ್ಪರ್ಶದಿಂದ ಉಂಟಾದ ದೋಷಗಳ ನಿವಾರಣೆಗಾಗಿ, ಅರುಂಧತಿ ಸಮೇತ ಸಪ್ತರ್ಷಿಗಳನ್ನು ಪ್ರಸನ್ನ
ಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ’ ಎಂದು ಪೂಜೆಯ ಮುಂಚೆ ಸಂಕಲ್ಪ ಮಾಡಬೇಕು.
. ಮಣೆಯ ಮೇಲೆ ಅಕ್ಕಿಯ ಎಂಟು ರಾಶಿಗಳನ್ನು ಹಾಕಿ ಅವುಗಳ ಮೇಲೆ ಎಂಟು ಅಡಿಕೆಗಳನ್ನಿಟ್ಟು ಕಶ್ಯಪಾದಿ ಸಪ್ತರ್ಷಿ ಮತ್ತು ಅರುಂಧತಿಯ ಆವಾಹನೆಯನ್ನು ಮಾಡಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
. ಈ ದಿನ ಕೇವಲ ಗೆಡ್ಡೆಗೆಣಸುಗಳ ಆಹಾರವನ್ನು ಸೇವಿಸಬೇಕು. ಎತ್ತುಗಳ ಶ್ರಮದಿಂದಾದ ಏನನ್ನೂ ತಿನ್ನಬಾರದೆಂದು ಹೇಳಲಾಗಿದೆ.
. ಮರುದಿನ ಕಶ್ಯಪಾದಿ ಸಪ್ತರ್ಷಿ ಮತ್ತು ಅರುಂಧತಿ ಇವರ ವಿಸರ್ಜನೆಯನ್ನು ಮಾಡಬೇಕು.
೧೨ ವರ್ಷಗಳ ನಂತರ ಅಥವಾ ವಯಸ್ಸಿನ ೫೦ ನೇ ವರ್ಷದ ನಂತರ ಈ ವ್ರತದ ಸಮಾಪ್ತಿಯನ್ನು (ಉದ್ಯಾಪನೆ) ಮಾಡಬಹುದು. ಬೇಕಿದ್ದಲ್ಲಿ ಉದ್ಯಾಪನೆಯ ನಂತರವೂ ವ್ರತವನ್ನು ಮುಂದುವರಿಸಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಋಷಿಪಂಚಮಿ (ಸೆಪ್ಟೆಂಬರ್ ೬)