ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವವರನ್ನು ಬಿಟ್ಟು ಗೋರಕ್ಷಕರ ಮೇಲೆ ಕಾರ್ಯಾಚರಣೆ ಮಾಡುವ ಅಕಾಲಿದಳ - ಭಾಜಪ ಸರಕಾರದ ಭ್ರಷ್ಟ ಮತ್ತು ಹಿಂದೂದ್ವೇಷಿ ಪಂಜಾಬ್ ಪೊಲೀಸರು !

ಪಂಜಾಬ್ ಗೋರಕ್ಷಕ ದಳದ ಮುಖ್ಯಸ್ಥ ಸತೀಶ ಕುಮಾರ ಪ್ರಧಾನ್ ಬಂಧನ !
ಕಸಾಯಿ ಮತ್ತು ಗೋಕಳ್ಳರನ್ನು ಬಿಟ್ಟು, ಗೋರಕ್ಷಕರನ್ನು ಸೆರೆಮನೆಗೆ ಹಾಕಲಾಗುತ್ತದೆ, ಇದು ಪೊಲೀಸರ ಮೊಗಲಾಡಳಿತವಲ್ಲವೇ ?
ರಾಜಕಾರಣಿಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯತ್ತಲೇ ಇದೆ. ಹಾಗಾಗಿ ಹಿಂದೂಗಳಿಗೆ ೬೯ ವರ್ಷಗಳ ನಂತರವೂ ಯೋಗ್ಯ ರಾಜ್ಯಕರ್ತರ ಆಯ್ಕೆ ಮಾಡಲು ಆಗಲಿಲ್ಲ, ಎಂದು ಹೇಳಬಹುದು ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಸ್ಥಾಪನೆಗೆ ಪರ್ಯಾಯವಿಲ್ಲ !
ಪಟಿಯಾಲಾ (ಪಂಜಾಬ್) : ಪಂಜಾಬ್ ಗೋರಕ್ಷಕ ದಳದ ಮುಖ್ಯಸ್ಥ ಶ್ರೀ. ಸತೀಶ ಕುಮಾರ ಪ್ರಧಾನರನ್ನು ಆಗಸ್ಟ್ ೨೧ ರಂದು ಪಟಿಯಾಲಾ ಪೊಲೀಸರು ಬಂಧಿಸಿದರು.
(ಪಂಜಾಬ್‌ನಲ್ಲಿ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅಲ್ಲಿಯ ನಾಗರಿಕರು ಈ ಕಳ್ಳಸಾಗಾಣಿಕೆ ಮಾಡುವವರ ಮೇಲೆ ಕ್ರಮಕೈಗೊಳ್ಳಲು ಆಗ್ರಹಿಸುತ್ತಿರುವಾಗ ನಿಷ್ಕ್ರಿಯರಾಗಿದ್ದ ಭ್ರಷ್ಟ ಪಂಜಾಬ್ ಪೊಲೀಸರು ಗೋರಕ್ಷಕರ ಮೇಲೆ ಮಾತ್ರ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದಾರೆ. ಹಿಂದೂಗಳು ಮತ್ತು ಗೋರಕ್ಷಕರು ಪಂಜಾಬ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ಮತ ಪೆಟ್ಟಿಗೆಯ ಮೂಲಕ ತಮ್ಮ ಖಂಡನೆಯನ್ನು ವ್ಯಕ್ತಪಡಿಸ ಬೇಕು ! - ಸಂಪಾದಕರು) ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶನಗೊಳಿಸಿದ ವಿಡಿಯೋದಲ್ಲಿ ಶ್ರೀ. ಸತೀಶ ಕುಮಾರ ಇವರ ಸಂಘಟನೆಯ ಸದಸ್ಯರು ಕೆಲವು ಗೋಕಳ್ಳರನ್ನು ಹೊಡೆಯುತ್ತಿರುವುದು ಕಾಣಿಸುತ್ತಿದ್ದರಿಂದ ಅವರ ಮೇಲೆ ಅಪಹರಣ ಮತ್ತು ಜನರಿಗೆ ತೊಂದರೆ ಕೊಡುವುದು ಇಂತಹ ಆರೋಪಗಳನ್ನು ಹೊರಿಸಲಾಗಿದೆ. ಕೆಲವು ಗೋಕಳ್ಳರು ಶ್ರೀ. ಸತೀಶಕುಮಾರ ಪ್ರಧಾನ ರವರು ನಮ್ಮನ್ನು ಕಟ್ಟಿಟ್ಟರು, ಲೂಟಿ ಮಾಡಿದರು ಮತ್ತು ಅನೈಸರ್ಗಿಕವಾಗಿ ಸಂಭೋಗ ಮಾಡಿದರೆಂದು, ಪೊಲೀಸ ರಿಗೆ ಹೇಳಿದರು. ಹೀಗಾಗಿ ಪೊಲೀಸರು
 ಶ್ರೀ. ಸತೀಶ ಕುಮಾರರವರ ಮೇಲೆ ಈ ಬಗ್ಗೆಯೂ ದೂರು ದಾಖಲಿಸಿದ್ದಾರೆ. ಶ್ರೀ. ಸತೀಶ ಕುಮಾರರ ಮೇಲೆ ಆಗಸ್ಟ್ ೮ ರಂದು ದೂರು ದಾಖಲಾದ ನಂತರ ಅಂದಿನಿಂದ ಅವರು ಪರಾರಿಯಾಗಿದ್ದರು, ಎಂದು ಪೊಲೀಸರು ಹೇಳಿದ್ದಾರೆ. ಪ್ರಧಾನಿ ಮೋದಿಯವರು ಕೆಲವು ದಿನಗಳ ಹಿಂದೆ ಶೇ. ೮೦ ರಷ್ಟು ಗೋರಕ್ಷಕರು ಸಮಾಜಕಂಟಕರಾಗಿದ್ದಾರೆ ಎಂದು ಹೇಳಿದ ನಂತರ ಶ್ರೀ. ಸತೀಶ ಕುಮಾರ ಮೇಲೆ ಅಪರಾಧ ದಾಖಲಾಗಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವವರನ್ನು ಬಿಟ್ಟು ಗೋರಕ್ಷಕರ ಮೇಲೆ ಕಾರ್ಯಾಚರಣೆ ಮಾಡುವ ಅಕಾಲಿದಳ - ಭಾಜಪ ಸರಕಾರದ ಭ್ರಷ್ಟ ಮತ್ತು ಹಿಂದೂದ್ವೇಷಿ ಪಂಜಾಬ್ ಪೊಲೀಸರು !