ಆಗಸ್ಟ್ ೧೫ ರ ನಿಮಿತ್ತ ರಾಜ್ಯಾದ್ಯಂತ ‘ರಾಷ್ಟ್ರಧ್ವಜದ ಗೌರವ ಕಾಪಾಡಿ’ ಆಂದೋಲನ !

ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಜ್ಯದಲ್ಲಿ ಈ ವರ್ಷ ‘ರಾಷ್ಟ್ರಧ್ವಜದ ಗೌರವ ಕಾಪಾಡಿ’ ಅಭಿಯಾನವು ಸುಮಾರು ೧ ತಿಂಗಳ ಕಾಲ ನಡೆಯಿತು. ಇದರಲ್ಲಿ ೩೫೦ ಕ್ಕೂ ಹೆಚ್ಚು ಶಾಲೆಗಳು ಮತ್ತು ೩೦೦ ಕ್ಕೂ ಹೆಚ್ಚು ಕಾಲೇಜುಗಳಿಗೆ ಮನವಿಯನ್ನು ನೀಡಿದ್ದಲ್ಲದೇ ಸಮಾಜದಲ್ಲಿ ಕರಪತ್ರಗಳು, ಭಿತ್ತಿಪತ್ರಗಳ ಮೂಲಕ ಪ್ರಬೋಧನೆ ಮಾಡಲಾಯಿತು. ೮೦ ಕ್ಕೂ ಹೆಚ್ಚು ಶಾಲೆಗಳಲ್ಲಿ ಪ್ರಶ್ನಮಂಜೂಷದ ಮೂಲಕ ಇದರ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜದ ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ಪ್ರಬೋಧನೆ ಯನ್ನು ಮಾಡಲಾಯಿತು.
ಅನೇಕ ಪೊಲೀಸ್, ಶಿಕ್ಷಣ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆ ಗಳು ಸೇರಿ ಒಟ್ಟು ೧೦೭ ಕಡೆ ಮನವಿ ನೀಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿ, ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೇ ಕ್ರಮಕೈಗೊಳ್ಳುತ್ತೇವೆಂದು ತಿಳಿಸಿದರು.
ಶಿವಮೊಗ್ಗದ ಪೊಲೀಸ್ ಗ್ರೌಂಡ್ ಮತ್ತು ವಿಜಯಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ನಡೆಯುವ ಅಗೌರವವನ್ನು ತಡೆಯಲು ಪ್ಲಾಸ್ಟಿಕ್ ರಾಷ್ಟ್ರಧ್ವಜ ಮತ್ತು ರಾಷ್ಟ್ರ ಧ್ವಜದ ಚಿಹ್ನೆಗಳನ್ನು ಸಂಗ್ರಹಿಸಲಾಯಿತು ಹಾಗೂ ವಿಜಯಪುರದಲ್ಲಿ ಕ್ರಾಂತಿಕಾರರ ಮತ್ತು ಸಾಮಾಜಿಕ ಉಪಕ್ರಮದ ಫ್ಲೆಕ್ಸ್‌ಗಳನ್ನು ಪ್ರದರ್ಶನ ಮಾಡಲಾಯಿತು.
ಶಿವಮೊಗ್ಗದಲ್ಲಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಮತ್ತು ಇತರ ಆಕಾರದ ಧ್ವಜದ ಬಗ್ಗೆ ಆರಕ್ಷಕ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ ಕ್ರಮಕೈಗೊಂಡರು.
ಪ್ರಸಾರಮಾಧ್ಯಮಗಳ ಮೂಲಕ ಪ್ರಬೋಧನೆ : ಮಂಗಳೂರಿನ V೪ ಕೇಬಲ್ ವಾಹಿನಿಯಲ್ಲಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಕು. ಭವ್ಯಾ ಗೌಡ ಮತ್ತು ಹುಬ್ಬಳ್ಳಿಯ ಕೆಲ್ಇ ಧ್ವನಿ FM ೯೦.೪ ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸೌ. ವಿದುಲಾ ಹಳದೀಪುರ ಮತ್ತು ಕು. ಸ್ಪೂರ್ತಿ ಇವರು ಪ್ರಬೋಧನೆ ಮಾಡಿದರು.
ಹುಬ್ಬಳ್ಳಿಯ ಕನಕದಾಸ್ ಶಿಕ್ಷಣ ಸಮಿತಿಯ ವಿಜಯನಗರ ಮಹಾವಿದ್ಯಾಲಯದಲ್ಲಿ ಮಾರ್ಗದರ್ಶನ ಮಾಡುತ್ತಿರುವ ಸಮಿತಿಯ ಶ್ರೀ. ಅಶೋಕ ಭೋಜ್

ಕೆಲ್ಇ ಧ್ವನಿ FM ೯೦.೪ ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ
ವತಿಯಿಂದ (ಎಡದಿಂದ) ಕು. ಸ್ಪೂರ್ತಿ ಮತ್ತು ಸೌ. ವಿದುಲಾ ಹಳದೀಪುರ

ಉಡುಪಿಯ ಕಮಲಾಬಾಯಿ ಪ್ರೌಢಶಾಲೆಯಲ್ಲಿ ಸಮಿತಿಯ
ಶ್ರೀ. ರಾಮ ಶೆಟ್ಟಿಗಾರ್ ಮಾಹಿತಿ ನೀಡಿದ ಸಮಯದಲ್ಲಿ ಉಪಸ್ಥಿತ ಮಕ್ಕಳು
V೪ ಕೇಬಲ್ ವಾಹಿನಿಯಲ್ಲಿ ರಣರಾಗಿಣಿ ಶಾಖೆಯ ಕು. ಭವ್ಯಾ ಗೌಡ

ಜನಶ್ರೀ ವಾಹಿನಿಯ ಚರ್ಚಾಕೂಟದಲ್ಲಿ ರಣರಾಗಿಣಿ ಶಾಖೆಯ ಸಹಭಾಗ

ರಣರಾಗಿಣಿ ಶಾಖೆಯ ಸೌ. ಸುಮಾ ಮಂಜೇಶ (ಎಡಗಡೆ)
ಬೆಂಗಳೂರು : ಆಗಸ್ಟ್ ೭ ರಂದು ‘ಜನಶ್ರೀ’ ವಾಹಿನಿಯಲ್ಲಿ ‘ದೇವಸ್ಥಾನಕ್ಕೆ ಹೋಗಬೇಕಾದರೆ ವಸ್ತ್ರಸಂಹಿತೆಯ ಪಾಲನೆ’ ಈ ವಿಷಯ ದಲ್ಲಿ ಚರ್ಚಾಕೂಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ‘ರಣರಾಗಿಣಿ’ಯ ಬೆಂಗಳೂರಿನ ಸಮನ್ವಯಕಿ ಕು. ಭವ್ಯಾ ಗೌಡ ಹಾಗೂ ಸೌ. ಸುಮಾ ಮಂಜೇಶ ಇವರು ಪಾಲ್ಗೊಂಡಿದ್ದರು. ಅದೇ ರೀತಿ ಆಧ್ಯಾತ್ಮಿಕ ಚಿಂತಕರಾದ ಶ್ರೀ. ಬಸವರಾಜ ಗುರೂಜಿ ಮತ್ತು ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ವಿದ್ಯಾ ದಿನಕರ ಇವರು ಉಪಸ್ಥಿತರಿದ್ದರು.
ಜನಶ್ರೀ’ ವಾಹಿನಿಯಲ್ಲಿ ಮಾತನಾಡುತ್ತಿರುವ


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಗಸ್ಟ್ ೧೫ ರ ನಿಮಿತ್ತ ರಾಜ್ಯಾದ್ಯಂತ ‘ರಾಷ್ಟ್ರಧ್ವಜದ ಗೌರವ ಕಾಪಾಡಿ’ ಆಂದೋಲನ !