ಅಂಜುಬುರುಕರ ಅಹಿಂಸೆಯ ನಿರರ್ಥಕ ವಿಷಯಗಳಿಂದ ಸ್ವಾತಂತ್ರ್ಯ ಲಭಿಸುವುದಿಲ್ಲ, ಎಂಬುದನ್ನು ಸ್ಪಷ್ಟಪಡಿಸುವ ನೇತಾಜಿ ಸುಭಾಶ್ಚಂದ್ರ ಬೋಸ್ !

ಆಗಸ್ಟ್ ೧೮ ರಂದು ಇರುವ ನೇತಾಜಿ ಸುಭಾಶ್ಚಂದ್ರ ಬೋಸ್ ಇವರ ೭೧ ನೇ ಸ್ಮೃತಿದಿನದ ನಿಮಿತ್ತ...
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಸರ್ವಸ್ವವನ್ನೂ ನೀಡಿರುವ ನೇತಾಜಿ ಯವರ ಹೆಸರನ್ನು ಸ್ವಾತಂತ್ರ್ಯ ಹೋರಾಟದ ಪಟ್ಟಿಯಿಂದ ತೆಗೆಯಲು ನೆಹರು ಜೀವನಪೂರ್ತಿ ಪ್ರಯತ್ನಿಸಿದರು ಹಾಗೂ ಇಂದು ಅವರ ಪರಿವಾರವು ಅವರ ಹೆಸರನ್ನು ಮರೆತಿದೆ. ನೆನಪಿಟ್ಟು ಮಾಡುವುದಾದರೂ ಏನು ? ನೆಹರು ಹೇಳಿರುವಂತೆ ಶಿಕ್ಷಣದ ದೃಷ್ಟಿಯಿಂದ ಅವರು ಆಂಗ್ಲ, ವಿಚಾರಗಳಿಂದ ಅಂತರಾಷ್ಟ್ರೀಯ, ಸಭ್ಯತೆಯಿಂದ ಮುಸಲ್ಮಾನರಾಗಿದ್ದು ಕೇವಲ ಜನ್ಮದಿಂದ ಹಿಂದೂ ಆಗಿದ್ದಾರೆ. ನೆಹರು ಇವರಿಗೆ ತಮ್ಮ ಸಂಸ್ಕೃತಿ, ಉತ್ತರಾಧಿಕಾರ, ಸನಾತನ ಮತ್ತು ಸಮೃದ್ಧ ಭಾರತೀಯತೆ ಬಗ್ಗೆ ಸ್ವಲ್ಪವೂ ಅಭಿಮಾನವಿರಲಿಲ್ಲ. ಬಹುಶಃ ಅದರಲ್ಲಿ ಅವರ ಪೂರ್ವಜರ ಸತ್ಯ ಅಡಗಿತ್ತು, ಅಂದರೆ ಹೇಗೆ ಅವರ ಅಜ್ಜ ‘ಗ್ಯಾಸುದ್ದೀನ್ ಗಾಜಿ’ ಆಂಗ್ಲರಿಂದ ರಕ್ಷಿಸಿಕೊಳ್ಳುವ ಸಲುವಾಗಿ ‘ಗಂಗಾಧರ ನೆಹರು’ ಆದರೋ ಅದೇ ರೀತಿ ರಾಹುಲ್ ಗಾಂಧಿಯ ಅಜ್ಜನ ಹೆಸರು ‘ನವಾಬ ಅಲೀ ಖಾನ್’ ಎಂದಿತ್ತು. ದುರ್ದೈವದಿಂದ ಹಿಂದೂ ಆಗಿರುವುದು ಅವರ ರಾಜನೈತಿಕ ಅಡಚಣೆಯಾಗಿದೆ. ಒಂದು ವೇಳೆ ಯಾವುದೋ ದುರ್ದೈವದಿಂದ ನೆಹರು ಹಿಂದೂ ಆಗಿದ್ದರೂ, ಅವರಿಗೆ ತಮ್ಮ ಹೆಸರಿನ ಮುಂದೆ ‘ಪಂಡಿತ್’ ಎಂಬ ಬಿರುದನ್ನು ಸೇರಿಸಿಕೊಳ್ಳುವ ಅವಶ್ಯಕತೆಯೇನಿತ್ತು
ಭಾರತೀಯ ಸಂಸ್ಕೃತಿಯನ್ನು ನಿಂದಿಸುವ ಬ್ರಿಟೀಷ್ 
ಪ್ರಾಧ್ಯಾಪಕನ ಕೆನ್ನೆಗೆ ಬಾರಿಸಿದ ನೇತಾಜಿ ಆದರ್ಶಪ್ರಾಯ
ತದ್ವಿರುದ್ಧ ನೇತಾಜಿ ಸುಭಾಶ್ಚಂದ್ರ ಬೋಸ್ ಇವರ ಸಂಪೂರ್ಣ ಶಿಕ್ಷಣವು ಯುರೋಪ್‌ನ ಪಾಠಶಾಲೆಯಲ್ಲಿ ಆಗಿದ್ದರೂ ಅವರಿಗೆ ತಮ್ಮ ಸ್ವಂತದ ಸಮೃದ್ಧ ಸಾಂಸ್ಕೃತಿಕ ವಂಶಾಧಿಕಾರ ಮತ್ತು ಧರ್ಮದ ಬಗ್ಗೆ ಅಚಲ ಶ್ರದ್ಧೆಯಿತ್ತು. ಅವರಿಗೆ ಆಂಗ್ಲ ಭಾಷೆಯ ಜ್ಞಾನ ಚೆನ್ನಾಗಿತ್ತು. ಪ್ರೆಸಿಡೆನ್ಸಿ ಮಹಾವಿದ್ಯಾಲಯದ ಓರ್ವ ಪ್ರಾಧ್ಯಾಪಕ ಮಿ. ಓಟೆನ್ ಇವರಿಗೆ ಅವರ ಬಗ್ಗೆ ಬಹಳ ಅಸೂಯೆಯಿತ್ತು. ಮಿ. ಓಟೆನ್ ಇವರು ಯಾವಾಗಲೂ ಭಾರತೀಯ ಸಂಸ್ಕೃತಿ ಮತ್ತು ಸಮಾಜವು ಹಳೆಯ ವಿಚಾರದ್ದಾಗಿದೆಯೆಂದು ಟೀಕಿಸುತ್ತಿದ್ದರು. ನೇತಾಜಿ ಇವರು ಅನೇಕ ವೇಳೆ ಅವರಿಗೆ ಹಾಗೆ ಹೇಳಬಾರದೆಂದು ವಿರೋಧಿಸಿದ್ದರು; ಆದರೆ ಅವರು ಕೇಳಲಿಲ್ಲ. ಒಮ್ಮೆ ಭಾರತೀಯ ಸಂಸ್ಕೃತಿಯನ್ನು ನಿಂದಿಸುತ್ತಿರುವಾಗ ದುರ್ಗಾದೇವಿಯ ಪ್ರತಿಮೆಯ ಪೂಜೆಯ ಸಮಯದಲ್ಲಿ ಅವರು ಕೆಲವು ಅವಮಾನಕಾರಿ ಶಬ್ದಗಳನ್ನು ಉಪಯೋಗಿಸಿದಾಗ ನೇತಾಜಿಯವರಿಗೆ ಬಹಳ ಕೋಪ ಬಂತು. ನೇತಾಜಿಯವರು ಅವರಿಗೆ ತಮ್ಮ ಶಬ್ದವನ್ನು ಹಿಂತೆಗೆದುಕೊಳ್ಳಲು ಹೇಳಿದರು; ಆದರೆ ಮಿ. ಓಟೆನ್ ಇವರು ಉದ್ಧಟತನ ತೋರಿಸಿದರು. ಆಗ ನೇತಾಜಿಯವರು ಎಷ್ಟು ಜೋರಾಗಿ ಅವರ ಕೆನ್ನೆಗೆ ಬಾರಿಸಿದರೆಂದರೆ, ಅದರ ಪ್ರತಿಧ್ವನಿ ಸಂಪೂರ್ಣ ಕೋಲಕಾತಾದ ಓಣಿಕೇರಿಗಳಿಂದ ಹಾಯ್ದು ಬ್ರಿಟೀಷ್ ಕ್ರೌನ್ ಲಂಡನ್‌ನಲ್ಲಿ ಮೊಳಗಿತು. ಸುಭಾಶ್ ಬಾಬೂ ಇವರಿಗೆ ಮಹಾವಿದ್ಯಾಲಯ ಬಿಡಬೇಕಾಯಿತು; ಆದರೆ ಅನಂತರ ಮಿ. ಓಟೆನ್ ಮತ್ತು ಅವರಂತಹ ಇತರರ ಬಾಯಿ ಮುಚ್ಚಿತು. (ತಥಾಕಥಿತ ಪುರೋಗಾಮಿ, ಧರ್ಮದ್ರೋಹಿಗಳು ಸಹ ಸ್ವತಂತ್ರ ಭಾರತದ ಕಪ್ಪು ಆಂಗ್ಲರೇ ಆಗಿದ್ದಾರೆ. ಅವರಿಂದಾಗುವ ಹಿಂದೂ ಧರ್ಮದ ತಿರಸ್ಕಾರ ಮತ್ತು ಅವಮಾನವನ್ನು ತಡೆಗಟ್ಟಲು ಯಾರಾದರೂ ನೇತಾಜಿಯವರಂತಹ ಭೂಮಿಕೆಯನ್ನು ಅಂಗೀಕರಿಸಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ ! - ಸಂಪಾದಕರು) ಯಾವುದೇ ದುರ್ಘಟನೆಯಿಂದ ಅಥವಾ ಅಂಜುಬುರುಕರ ಅಹಿಂಸೆಯ ನಿರರ್ಥಕ ವಿಷಯಗಳಿಂದ ಸ್ವಾತಂತ್ರ್ಯ ಲಭಿಸುವುದಿಲ್ಲ. ಸ್ವಾತಂತ್ರ್ಯದ ಗಿಡ ಕ್ರಾಂತಿಕಾರಿಗಳ ರಕ್ತದಿಂದ ಒದ್ದೆಯಾದಾಗಲೇ ಸ್ವಾತಂತ್ರ್ಯ ಲಭಿಸುತ್ತದೆ. ವಿಷವಿರುವ ಸರ್ಪವನ್ನು ಮಾತ್ರ ಕ್ಷಮಿಸುವುದು ಯೋಗ್ಯವೆನಿಸುತ್ತದೆ, ಯಾವುದರಲ್ಲಿ ವಿಷವಿಲ್ಲವೋ, ಹಲ್ಲುಗಳಿಲ್ಲವೋ ಹಾಗೂ ನಮ್ರ ಹಾಗೂ ಸರಳವಾಗಿದೆಯೋ, ಅದಕ್ಕೆ ಅದು ಶೋಭಿಸುವುದಿಲ್ಲ.
- ಎಲ್. ಆರ್. ಗಾಂಧಿ
ಜಿಗುಟುತನವಿರುವ ನೇತಾಜಿ ಸುಭಾಶ್ಚಂದ್ರ ಬೋಸ್
ನೇತಾಜಿ ಸುಭಾಶ್ಚಂದ್ರ ಬೋಸ್ ಇವರು ‘ಫೋರ್ಮೋಸಾ’ ಎಂಬ ಚೀನಾದ ತೈಪಹೆ ಈ ವಿಮಾನ ನಿಲ್ದಾಣದಲ್ಲಿ ೧೮ ಆಗಸ್ಟ್ ೧೯೪೫ ರ ರಾತ್ರಿ ೧೧.೩೦ ಕ್ಕೆ ಅಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟರೆಂಬ ವಾರ್ತೆಯನ್ನು ಬಿ.ಬಿ.ಸಿ. ನೀಡಿತ್ತು; ಆದರೆ ೧೯೪೨ ರ ಡಿಸೆಂಬರ್‌ನಲ್ಲಿ ಮತ್ತು ೧೯೪೩ ರಲ್ಲಿ ಹೀಗೆ ಎರಡು ಬಾರಿ ಬಿ.ಬಿ.ಸಿ.ಯು ನೇತಾಜಿಯವರ ಮರಣದ ವಾರ್ತೆಯನ್ನು ನೀಡಿತ್ತು. ಆ ವಾರ್ತೆ ಸುಳ್ಳು ಎಂದು ಸಿದ್ಧವಾದಾಗ ಬೋಸ್ ಇವರ ಸಂಬಂಧಿಕರು ಮತ್ತು ಅವರ ತಾಯಿ ಈ ವಾರ್ತೆಯನ್ನು ಯಾವತ್ತೂ ಒಪ್ಪಿಕೊಳ್ಳಲಿಲ್ಲ. ನೇತಾಜಿ ಸುಭಾಶ್ಚಂದ್ರ ಬೋಸ್ ಇವರು ೧೪ ಆಗಸ್ಟ್ ೧೯೪೫ ರ ರಾತ್ರಿ ೧೦ ಗಂಟೆಗೆ ಜಗತ್ತಿಗೆ ಮತ್ತು ಭಾರತೀಯರನ್ನು ಉದ್ದೇಶಿಸಿ ಮಾಡಿದ ಕೊನೆಯ ಭಾಷಣದಲ್ಲಿ ಅವರು ಹೀಗೆಂದಿದ್ದರು, ‘‘ನಮ್ಮ ಮಿತ್ರರಾಷ್ಟ್ರಗಳ ಪರಾಜಯವಾಗಿದೆ. ಆಝಾದ್ ಹಿಂದ್ ಸೈನ್ಯದ ಪರಾಜಯವಾಗಿಲ್ಲ. ಸಮಯ ಬಂದ ತಕ್ಷಣ ನಾವು ಪುನಃ ಯುದ್ಧ ಆರಂಭಿಸಿ ಭಾರತವನ್ನು ಸ್ವತಂತ್ರಗೊಳಿಸುವೆವು.’’
(ದೈನಿಕ ‘ತರುಣ ಭಾರತ’, ೨೩..೨೦೧೫)


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಂಜುಬುರುಕರ ಅಹಿಂಸೆಯ ನಿರರ್ಥಕ ವಿಷಯಗಳಿಂದ ಸ್ವಾತಂತ್ರ್ಯ ಲಭಿಸುವುದಿಲ್ಲ, ಎಂಬುದನ್ನು ಸ್ಪಷ್ಟಪಡಿಸುವ ನೇತಾಜಿ ಸುಭಾಶ್ಚಂದ್ರ ಬೋಸ್ !