ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸನಾತನವು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಆಧ್ಯಾತ್ಮಿಕ ಸಂಶೋಧನೆ


ಸದ್ಗುರು (ಸೌ.) ಅಂಜಲಿ ಗಾಡಗೀಳ
೧೯೯೦ ರಿಂದ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸನಾತನದ ವತಿಯಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಲಾಗುತ್ತಿದೆ. ಕೆಟ್ಟ ಶಕ್ತಿಗಳು, ವಾಸ್ತುಗಳಲ್ಲಿ ಆದ ಬದಲಾವಣೆಗಳು, ದೈವೀ ಕಣಗಳು ಈ ವಿಷಯಗಳ ಬಗ್ಗೆ ನೂರಾರು ಧ್ವನಿಚಿತ್ರಸುರುಳಿಗಳನ್ನು ಸನಾತನವು ನಿರ್ಮಿಸಿದೆ. ಈಗ ಸನಾತನ ಸಂಸ್ಥೆಯ ಈ ಸಂಶೋಧನಾಕಾರ್ಯಕ್ಕೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಹಾಯವೂ ದೊರೆಯುತ್ತ್ತಿದೆ. ಈ ಸಂಶೋಧನೆಯನ್ನು ಈಗ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಾಶಿಸಲಾಗಿದೆ. ಯಾವುದಾದರೊಂದು ಆಧ್ಯಾತ್ಮಿಕ ಸಂಸ್ಥೆಯು ಈ ರೀತಿಯಲ್ಲಿ ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಘಟನೆಗಳ ಸಂಶೋಧನೆಯನ್ನು ಮಾಡುವುದು ಅದ್ವಿತೀಯವಾಗಿದೆ. ಸನಾತನವು ಬರುವ ಹಲವಾರು ಪೀಳಿಗೆಗಳಿಗಾಗಿ ಈ ಅಮೂಲ್ಯವಾದ ಸಂಪತ್ತನ್ನು ಸಂಗ್ರಹಿಸಿಡುತ್ತಿದೆ. ಇದಕ್ಕಾಗಿ ಸಮಾಜವು ಸನಾತನಕ್ಕೆ ಚಿರಋಣಿಯಾಗಿರಲಿದೆ.
ಸಂಕಲನಕಾರರು : ಸದ್ಗುರು (ಸೌ.) ಅಂಜಲಿ ಗಾಡಗೀಳ

. ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಪರಿಹಾರೋಪಾಯ ಮಾಡುವ ಪದ್ಧತಿಗಳ ಸಂಶೋಧನೆ
ಮನುಷ್ಯನ ಬಹಳಷ್ಟು ಸಮಸ್ಯೆಗಳಿಗೆ ಕೆಟ್ಟ ಶಕ್ತಿಗಳ ತೊಂದರೆಯೆಂಬುದು ಮೂಲಭೂತ ಕಾರಣವಾಗಿ ರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಕೆಟ್ಟ ಶಕ್ತಿಗಳಿಗೆ ಸಂಬಂಧಪಟ್ಟಂತೆ ‘ನ ಭೂತೋ ನ ಭವಿಷ್ಯತಿ’ ಎಂಬಂತಹ ಸಂಶೋಧನೆಯನ್ನು ನಡೆಸಿದ್ದು ಆಧ್ಯಾತ್ಮಿಕ ಕಾರಣಗಳಿಂದ ಆಗುವ ತೊಂದರೆಗಳಿಗೆ ಭೂಮಿಯ ಮೇಲೆ ಉಪಲಬ್ಧವಿಲ್ಲದಿರುವ ಆಧ್ಯಾತ್ಮಿಕ ಉಪಾಯಗಳನ್ನು ಕಂಡುಹಿಡಿದಿದ್ದಾರೆ. (ಆಧ್ಯಾತ್ಮಿಕ ಉಪಾಯಗಳ ಬಗೆಗಿನ ವಿಸ್ತೃತವಾದ ಮಾಹಿತಿಯನ್ನು ಸನಾತನವು ನಿರ್ಮಿಸಿರುವ ‘ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಪರಿಹಾರೋಪಾಯಗಳು’ ಎಂಬ ಗ್ರಂಥಮಾಲಿಕೆಯಲ್ಲಿ ನೀಡಲಾಗಿದೆ.)
 
. ವಿವಿಧ ಚಿಕಿತ್ಸಾಪದ್ಧತಿಗಳ ಮಾಧ್ಯಮದಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಸಂಶೋಧನೆ ಮಾಡುವುದು 
ಪರಾತ್ಪರ ಗುರು ಡಾ. ಆಠವಲೆಯವರು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತೊಂದರೆಗಳ ನಿವಾರಣೆ
ಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ, ಸ್ಪರ್ಶರಹಿತ ಬಿಂದುಒತ್ತಡ ಹಾಗೂ ಪ್ರಾಣಶಕ್ತಿಯ (ಚೇತನಾ) ವಹನ ಸಂಸ್ಥೆಯಲ್ಲಿನ ಅಡಚಣೆಗಳಿಂದ ನಿರ್ಮಾಣವಾಗುವ ತೊಂದರೆಗಳಿಗೆ ಪರಿಹಾರೋಪಾಯಗಳು ಮುಂತಾದ ಹಲವು ಹೊಸ ಆಧ್ಯಾತ್ಮಿಕ ಪರಿಹಾರೋಪಾಯ ಪದ್ಧತಿಗಳನ್ನು ಕಂಡುಹಿಡಿದಿದ್ದಾರೆ. 
. ವಿವಿಧ ಸಂತರ ದೇಹ ಹಾಗೂ ಅವರು ಬಳಸುವ 
ವಸ್ತುಗಳಲ್ಲಿನ ದೈವಿ ಬದಲಾವಣೆಗಳ ಬಗ್ಗೆ ಸನಾತನವು ಮಾಡಿರುವ ಸಂಶೋಧನಾಕಾರ್ಯ
ಸನಾತನವು ವಿವಿಧ ಸಂತರ ದೇಹ, ಚರ್ಮ, ಕೂದಲು, ಉಗುರುಗಳು ಮತ್ತು ವಸ್ತುಗಳಲ್ಲಿ ಆಗುತ್ತಿರುವ ದೈವಿ ಬದಲಾವಣೆಗಳ ಬಗ್ಗೆ ಆಗಾಗ ಛಾಯಾಚಿತ್ರಗಳನ್ನು ತೆಗೆದುಕೊಂಡು ಹಾಗೂ ಲೇಖನ ಮಾಡಿ, ಆ ಬದಲಾವಣೆಗಳನ್ನು ಶಾರೀರಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನಗಳಿಂದ ಅಭ್ಯಾಸ ಮಾಡಿದೆ. ಈ ಸಂಶೋಧನೆಯ ಮೂಲಕ ಅವರು ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಿ ಹೊಂದಿ ರುವವರಿಗೆ ಸಂಬಂಧಪಟ್ಟಂತೆ ಆಗುವ ದೈವಿ ಬದಲಾವಣೆಗಳ ಶಾಸ್ತ್ರವನ್ನು ಬಹಿರಂಗ ಪಡಿಸಿದ್ದಾರೆ.
. ಮಹಾಮೃತ್ಯುಯೋಗದ ಬಗ್ಗೆ ಸನಾತನವು ಮಾಡಿರುವ ಸಂಶೋಧನಾತ್ಮಕ ಅಭ್ಯಾಸ
ಜ್ಯೊತಿಷ್ಯಶಾಸ್ತ್ರಕ್ಕನುಸಾರವಾಗಿ ೧೯೯೮ ನೇ ಇಸವಿಯಿಂದ ಇದುವರೆಗೆ ಪರಾತ್ಪರ ಗುರು ಡಾ. ಆಠವಲೆಯವರ ಜೀವನದಲ್ಲಿ ಹಲವಾರು ಮಹಾಮೃತ್ಯುಯೋಗಗಳು ಬಂದಿವೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವರ ದೇಹಧಾರಿ ಅಸ್ತಿತ್ವವು ಅವಶ್ಯಕವಾಗಿರುವುದರಿಂದ ಅವರ ಮಹಾಮೃತ್ಯು ಯೋಗವನ್ನು ತಪ್ಪಿಸುವುದಕ್ಕಾಗಿ ವಿವಿಧ ಸಂತರು, ಮಹರ್ಷಿಗಳೂ ತಾವಾಗಿಯೇ ಸಹಾಯ ಮಾಡು ತ್ತಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಈ ಮಹಾಮೃತ್ಯುಯೋಗದ ಕಾಲಾವಧಿಯಲ್ಲಿ ತಮ್ಮ ಪ್ರಕೃತಿಯನ್ನು ಆಧುನಿಕ ವೈದ್ಯಕೀಯ ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರಗಳ ದೃಷ್ಟಿ ಯಿಂದ ತುಲನಾತ್ಮಕವಾಗಿ ಅಧ್ಯಯನ ಮಾಡಿ ಅಧ್ಯಾತ್ಮದ ಶ್ರೇಷ್ಠತೆಯನ್ನು ತೋರಿಸಿಕೊಟ್ಟರು.
ಸನಾತನ ಆಶ್ರಮದ
 ನೆಲ (ಟೈಲ್ಸ್)ದಲ್ಲಿ ಮೂಡಿದ á
. ವಿವಿಧ ಆಶ್ರಮಗಳಲ್ಲಿ ತನ್ನಷ್ಟಕ್ಕೆ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸಂಶೋಧನೆ
ಪರಾತ್ಪರ ಗುರು ಡಾ. ಆಠವಲೆಯವರ ನಿವಾಸ ಸ್ಥಾನವಾಗಿರುವ ವಾಸ್ತು ಎಂದರೆ ರಾಮನಾಥಿ, ಗೋವಾದಲ್ಲಿನ ಸನಾತನ ಸಂಸ್ಥೆಯ ಆಶ್ರಮ ! ಈ ಆಶ್ರಮದಲ್ಲಿ ಆಗುವ ದೈವಿ ಬದಲಾವಣೆಗಳು (ಉದಾ. ನೆಲದ ಮೇಲೆ á ಕಾಣಿಸಿಕೊಳ್ಳುವುದು) ಹಾಗೂ ಕೆಟ್ಟ ಶಕ್ತಿಗಳ ಮುಖಗಳು ಕಾಣಿಸಿ ಕೊಳ್ಳುವುದು, ಇವುಗಳ ಬಗ್ಗೆ ವೈಜ್ಞಾನಿಕ ಪದ್ಧತಿಯಿಂದ ಸಂಶೋಧನೆ ಮಾಡಲಾಗುತ್ತಿದೆ. ಸಂತರ ವಾಸ್ತುವಿನಲ್ಲಾಗುತ್ತಿರುವ ಬದಲಾವಣೆಯ ಶಾಸ್ತ್ರವು ಸಮಾಜಕ್ಕೆ ತಿಳಿಯಬೇಕು ಎಂಬ ಉದ್ದೇಶದಿಂದ ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನೆಯನ್ನು ಮಾಡಿಸುತ್ತಿದ್ದಾರೆ. ಸನಾತನದ ಇತರ ಆಶ್ರಮಗಳಲ್ಲಿಯೂ ಇಂತಹ ದೈವೀ ಬದಲಾವಣೆ ಗಳು ಆಗುತ್ತಿವೆ.

ಶ್ರೀರಾಮತತ್ತ್ವ ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿ
. ಸಾತ್ತ್ವಿಕ ಕಲೆಯ ಪ್ರಸ್ತುತೀಕರಣಕ್ಕಾಗಿ ಸಂಶೋಧನೆ
ಪರಾತ್ಪರ ಗುರು ಡಾ. ಆಠವಲೆ ಯವರ ಮಾರ್ಗದರ್ಶನದಲ್ಲಿ ವಿವಿಧ ಕಲೆಗಳಲ್ಲಿ ಕೌಶಲ್ಯ ಹೊಂದಿದ ಸಾಧಕ-ಕಲಾವಿದರು ತಮ್ಮ ಕಲೆಯ ಸಾತ್ತ್ವಿಕತೆಯ ಪ್ರಸ್ತುತೀಕರಣದ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.

೬ ಅ. ಚಿತ್ರಕಲೆ ಮತ್ತು ಶಿಲ್ಪಕಲೆ : ಪರಾತ್ಪರ ಗುರು ಡಾ. ಆಠವಲೆಯವರು ಸಾಧಕ-ಕಲಾವಿದರುತಯಾರಿಸಿರುವ ವಿಷ್ಣು, ಲಕ್ಷ್ಮೀ, ಶ್ರೀರಾಮ, ಮಾರುತಿ, ಶ್ರೀಕೃಷ್ಣ, ಶಿವ, ದುರ್ಗಾದೇವಿ, ಗಣಪತಿ ಮತ್ತು ದತ್ತ ಈ ೯ ದೇವತೆಗಳ ಚಿತ್ರಗಳು, ವಿವಿಧ ದೇವತೆಗಳ ತತ್ತ್ವಗಳಿರುವ ರಂಗೋಲಿಗಳು, ಹಾಗೂ ಶ್ರೀ ಗಣೇಶನ ಮೂರ್ತಿ ಇವುಗಳಲ್ಲಿ ಆಯಾ ದೇವತೆಯ ತತ್ತ್ವ ಹಾಗೂ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಹೆಚ್ಚು-ಹೆಚ್ಚು ಬರಬೇಕು ಎಂಬುದ ಕ್ಕಾಗಿ ಪ್ರತಿಯೊಂದರ ಬಗ್ಗೆಯೂ ಹಂತಹಂತವಾಗಿ ಮಾರ್ಗದರ್ಶನವನ್ನು ಮಾಡಿದರು. ಮುಂಬರುವ ೧-೨ ವರ್ಷಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಶಿಲ್ಪಕಾರ-ಸಾಧಕರು ಶ್ರೀ ದುರ್ಗಾದೇವಿಯ ಮಾರಕ ತತ್ತ್ವವಿರುವ ಮೂರ್ತಿಯನ್ನು ತಯಾರಿಸಲಿದ್ದಾರೆ. (ಈ ಬಗೆಗಿನ ವಿಸ್ತೃತ ಮಾಹಿತಿಯನ್ನು ಸನಾತನ-ನಿರ್ಮಿತ ‘ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳು’ ಮತ್ತು ‘ಶ್ರೀ ಗಣೇಶಮೂರ್ತಿಯು ಶಾಸ್ತ್ರಕ್ಕನುಸಾರವಾಗಿರಬೇಕು !’ ಈ ಗ್ರಂಥದಲ್ಲಿ ಕೊಡಲಾಗಿದೆ.)
೬ ಆ. ಸಾತ್ತ್ವಿಕ ಅಕ್ಷರಗಳು ಮತ್ತು ಅಂಕೆಗಳು ಹಾಗೂ ಸಾತ್ತ್ವಿಕ ಮೆಹಂದಿ : ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾತ್ತ್ವಿಕ ಅಕ್ಷರಗಳು ಮತ್ತು ಅಂಕೆಗಳನ್ನು ನಿರ್ಮಿಸಲಾಗಿದೆ. ಅಂತೆಯೇ ಸಾತ್ತ್ವಿಕ ಮೆಹಂದಿಯ ಕಲಾಕೃತಿಯನ್ನು ಸಹ ನಿರ್ಮಾಣ ಮಾಡಲಾಗಿದೆ. (ಈ ಬಗ್ಗೆ ಮಾಹಿತಿಯನ್ನು ಸನಾತನದ ಸಾತ್ತ್ವಿಕ ಮರಾಠಿ ಅಕ್ಷರಗಳು ಮತ್ತು ಅಂಕಿಗಳನ್ನು ಬರೆಯುವ ಪದ್ಧತಿ ಮತ್ತು ಸಾತ್ತ್ವಿಕ ಮೆಹಂದಿ ಈ ಗ್ರಂಥದಲ್ಲಿ ಕೊಡಲಾಗಿದೆ.)
೬ ಇ. ಸಂಗೀತ : ಪರಾತ್ಪರ ಗುರು ಡಾ. ಆಠವಲೆ ಯವರು ವಿವಿಧ ದೇವತೆಗಳ ನಾಮಜಪಗಳಿಗೆ ಆಯಾಯ ದೇವತೆಗಳ ತತ್ತ್ವ ಹಾಗೂ ಭಾವ ಮತ್ತು ಕ್ಷಾತ್ರಗೀತೆಗಳಿಗೆ ಕ್ಷಾತ್ರತೇಜ ಜಾಗೃತವಾಗುವಂತೆ ಸನಾತನದ ಸಾಧಕರಿಗೆ ಸೂಚಿಸಿದರು. (ಈ ಬಗೆಗಿನ ವಿಸ್ತೃತ ಮಾಹಿತಿಯನ್ನು ದೇವತೆಗಳ ನಾಮಜಪ ಮತ್ತು ಉಪಾಸನೆಯಶಾಸ್ತ್ರ (೩ ಭಾಗಗಳು) ಮತ್ತು ಕ್ಷಾತ್ರಗೀತೆಗಳು ಈ ಧ್ವನಿಸುರುಳಿಯಲ್ಲಿ (ಆಡಿಯೋ ಸಿಡಿಯಲ್ಲಿ) ಕೊಡಲಾಗಿದೆ.)
 ೬ ಈ. ನೃತ್ಯಕಲೆ : ನೃತ್ಯಕಲೆಯಲ್ಲಿನ ವಿವಿಧ ಶಾರೀರಿಕ ಸ್ಥಿತಿ ಮತ್ತು ಮುದ್ರೆಗಳ ಬಗ್ಗೆ ಸಾಧಕರಿಂದ ಆಧ್ಯಾತ್ಮಿಕ ದೃಷ್ಟಿಯಿಂದ ಅಭ್ಯಾಸ ಮಾಡಿಸಿಕೊಂಡರು.
ಸನಾತನದ ಆಶ್ರಮದಲ್ಲಿ ನಿರ್ಮಾಣವಾದ ಅತ್ತರ
. ಪಂಚಮಹಾಭೂತಗಳಿಂದ ನಡೆಯುವ ಬುದ್ಧಿಅಗಮ್ಯ 
ಘಟನೆಗಳ ಅಭ್ಯಾಸ ಹಾಗೂ ವೈಜ್ಞಾನಿಕ ಸಾಧನಗಳಿಂದ ಸಂಶೋಧನೆ
ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳಿಂದ ನಡೆಯುವ ಬುದ್ಧಿಅಗಮ್ಯ ವಾದ ಘಟನೆಗಳು, ಉದಾ. ಸಾಧಕರ ವಸ್ತುಗಳಿಗೆ ದೈವಿ ಸುಗಂಧ ಬರುವುದು, ಕಂಚಿನ ಬಟ್ಟಲಿನಲ್ಲಿ ತನ್ನಿಂದ ತಾನೇ ಸುಗಂಧದ್ರವ್ಯ ನಿರ್ಮಾಣ ವಾಗುವುದು, ದೈವಿಕಣಗಳು ಕಾಣಿಸುವುದು, (ಟಿಪ್ಪಣಿ) ದೇವತೆಗಳ ಹಾಗೂ ಇನ್ನಿತರ ಚಿತ್ರಗಳ ಬಣ್ಣ ಬದಲಾಗುವುದು, ವೈಶಿಷ್ಟ್ಯಪೂರ್ಣ ನಾದಗಳು ಕೇಳುವುದು, ವಾಸ್ತುವಿನಲ್ಲಿನ ನೆಲ ಪಾರದರ್ಶಕವಾಗು ವುದು ಇವುಗಳ ಬಗ್ಗೆ ವೈಜ್ಞಾನಿಕ ಪದ್ಧತಿಯ ಮಾಧ್ಯಮದಿಂದ ಸಂಶೋಧನೆಯಾಗಬೇಕು ಎಂಬುದ ಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರಯತ್ನಶೀಲರಾಗಿದ್ದಾರೆ. (ಟಿಪ್ಪಣಿ : ದೈವೀ ಕಣಗಳು - ಸಾತ್ತ್ವಿಕ ವ್ಯಕ್ತಿ, ಸ್ಥಾನ ಮುಂತಾದ ಕಡೆಗಳಲ್ಲಿ ಚಿನ್ನದ, ಬೆಳ್ಳಿಯ ಇತ್ಯಾದಿ ಹಲವು ಬಣ್ಣಗಳಲ್ಲಿ ಕಾಣಿಸುವ ಈ ಕಣಗಳನ್ನು ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಪ್ರತ್ಯೇಕೀಕರಣ ಮಾಡಲಾಯಿತು. ಐಐಟಿ ಮುಂಬೈಯಲ್ಲಿ ಮಾಡಿದ ಪರೀಕ್ಷೆಗನುಸಾರವಾಗಿ ಈ ಕಣಗಳಲ್ಲಿ ಕಾರ್ಬನ್, ನೈಟ್ರೋಜನ್ ಮತ್ತು ಆಮ್ಲಜನಕ ಈ ಘಟಕಗಳಿರುವುದು ಸಿದ್ಧವಾಗಿದೆ. ಈ ಘಟಕಗಳ ಮೂಲ ದ್ರವ್ಯಗಳ ಪ್ರಮಾಣದಿಂದ ಕಂಡುಹಿಡಿದಿರುವ ಅವುಗಳ ‘ಫಾರ್ಮುಲಾಗಳು’ ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಕಣಗಳ ಫಾರ್ಮುಲಾಗಳೊಂದಿಗೆ ಹೊಂದುವುದಿಲ್ಲ. ಆದ್ದರಿಂದ ಈ ಕಣಗಳು ಹೊಸತಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಸಾಧಕರು ಈ ಕಣಗಳನ್ನು ‘ದೈವಿ ಕಣಗಳು’ ಎಂದು ಸಂಬೋಧಿಸುತ್ತಾರೆ.)
ಲೇಕರ್ ಆ್ಯಂಟಿನಾ
೭ ಅ. ವೈಜ್ಞಾನಿಕ ಸಲಕರಣೆಗಳ ಮೂಲಕ ನಡೆಯುತ್ತಿರುವ ಸಂಶೋಧನಾಕಾರ್ಯ : ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗ ದರ್ಶನದಲ್ಲಿ ಹಿಂದೂ ಆಚಾರ, ಆಹಾರ, ವೇಶಭೂಷಣ, ಕೇಶ ರಚನೆ, ಧಾರ್ಮಿಕ ಕೃತಿ,ಯಜ್ಞ, ನಾಮಜಪ, ಮುದ್ರೆ, ನ್ಯಾಸ, ಶ್ರೀಯಂತ್ರ ಇತ್ಯಾದಿಗಳಿಂದ ವ್ಯಕ್ತಿ, ವಸ್ತು, ವಾಸ್ತು ಮತ್ತು ವಾತಾವರಣ ಇವೆಲ್ಲವುಗಳ ಮೇಲಾಗುವ ಪರಿಣಾಮಗಳ ಬಗ್ಗೆ ವಿವಿಧ ವೈಜ್ಞಾನಿಕ ಸಲಕರಣೆಗಳ ಮಾಧ್ಯಮದಿಂದ ಸಂಶೋಧನೆಯು ನಡೆಯುತ್ತಿದೆ. ಇದರಲ್ಲಿ ‘ಎಲೆಕ್ಟ್ರೋ ಸೊಮೆಟೋ ಗ್ರಾಫಿಕ್ ಸ್ಕ್ಯಾನಿಂಗ್’, ‘ರೆಝೊನೆಂಟ್ ಫೀಲ್ಡ್ ಇಮೇಜಿಂಗ್’, ‘ಇಲೆಕ್ಟ್ರೋ ಮೆಗ್ನೆಟಿಕ್ ಫೀಲ್ಡ್’, ‘ಲೆಕರ್ ಆ್ಯಂಟಿನಾ’, ‘ಕಿರ್ಲೀಯನ್’, ಫೊಟೊಗ್ರಫಿ’, ‘ಯುನಿವರ್ಸಲ್ ಥರ್ಮಲ್ ಸ್ಕ್ಯಾನರ್’, ‘ಥರ್ಮಲ್ ಇಮೇಜಿಂಗ್, ‘ಪೀಪ್’ ಇತ್ಯಾದಿ ವೈಜ್ಞಾನಿಕ ಸಲಕರಣೆ ಗಳ ಸಮಾವೇಶವಿದೆ.
ಎಸ್.ಎಸ್.ಆರ್.ಎಫ್.ನ 
ಸಾಧಕಿ ಕು. ಅನಸ್ತಾಸಿಯಾ ವಾಲೆ
 (೧೨ ವರ್ಷಇವಳ ಕೈಯಲ್ಲಿ ಕುಳಿತ ಚಿಟ್ಟೆ
. ಸಾತ್ತ್ವಿಕತೆಯ ದೃಷ್ಟಿ ಯಿಂದ
ಪ್ರಾಣಿ ಹಾಗೂ  ವನಸ್ಪತಿಗಳ ಅಭ್ಯಾಸ
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಚಿಟ್ಟೆಗಳು, ಹುಂಜ, ಗಿಣಿ, ಹಸು, ಕುದುರೆ ಇವುಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಸಾಧನಗಳ ಮೂಲಕ ಸಂಶೋಧನೆ ಮಾಡಲಾಗಿದೆ. ಅದರಂತೆ ತುಳಸಿ, ಕುರುಕ್ಷೇತ್ರದಲ್ಲಿನ ಅಕ್ಷಯ ವೃಕ್ಷ (ಅಕ್ಷಯ ಆಲದ ಮರ), ಶುಕತಾಲದ ವಟವೃಕ್ಷ ಇತ್ಯಾದಿ ವೃಕ್ಷಗಳನ್ನು ಸಾತ್ತ್ವಿಕತೆಯ ದೃಷ್ಟಿಯಿಂದ ಅಭ್ಯಾಸ ಮಾಡಲಾಗಿದೆ.

. ದೈವಿ ಬಾಲಕರನ್ನು ಗುರುತಿಸುವುದು ಮತ್ತು ಅದಕ್ಕೆ ಸಂಬಂಧಪಟ್ಟ ಸಂಶೋಧನೆ
ಸಾತ್ತ್ವಿಕ ಕೃತಿಗಳು, ಸಾಧನೆ, ದೇವತೆ ಗಳು ಮುಂತಾದ ಆಧ್ಯಾತ್ಮಿಕ ಆಸಕ್ತಿಯನ್ನು ಹೊಂದಿರುವ ಬಾಲಕರ ದೈವಿ ಗುಣಗಳನ್ನು ನೋಡಿ ಈ ಬಾಲಕರು ಸ್ವರ್ಗ, ಮಹರ್, ಜನಾದಿ ಉಚ್ಚ ಲೋಕಗಳಿಂದ ಪ್ಲಥ್ವಿಯ ಮೆಲೆ ಜನ್ಮ ತಾಳಿರುವುದನ್ನು ಪರಾತ್ಪರ ಗುರು ಡಾ. ಆಠವಲೆ ಇವರು ಮೊದಲಬಾರಿ ಹೇಳಿದರು. ಅವರು ಇಂತಹ ಬಾಲಕರ, ಆಯಾ ವಯಸ್ಸಿನ ಆಧ್ಯಾತ್ಮಿಕ ಮಟ್ಟದ ಅಸಾಮಾನ್ಯವಾದ ವಿಚಾರಗಳು ಹಾಗೂ ಆಚರಣೆಯು ಎಲ್ಲರಿಗೂ ತಿಳಿಯ ಬೇಕೆಂಬುದಕ್ಕಾಗಿ ಅವರ ಬಗೆಗಿನ ಚಿತ್ರ-ಸುರುಳಿ (ಡಿ.ವಿ.ಡಿ)ಗಳನ್ನು ಪ್ರಕಾಶಿಸಿದ್ದಾರೆ. ಸದ್ಯ ಬಾಲಕರ ಗುಣವೈಶಿಷ್ಯಗಳ ಆಧಾರದಲ್ಲಿ ಅವರು ಯಾವ ಉಚ್ಚಲೋಕದಿಂದ ಪೃಥ್ವಿಯ ಮೇಲೆ ಜನಿಸಿದ್ದಾರೆ, ಯೋಗ್ಯವಾದ ಮಾರ್ಗದರ್ಶನವು ಲಭಿಸಿದರೆ ಅವರು ಎಷ್ಟನೇ ವರ್ಷದಲ್ಲಿ ಸಂತರಾಗಬಹುದು ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆದಿದೆ. ಪರಾತ್ಪರ ಗುರು ಡಾ. ಆಠವಲೆಯವರು ಇಂತಹ ಬಾಲಸಾಧಕರ ಮಾಧ್ಯಮದಿಂದ ಹಿಂದೂ ರಾಷ್ಟ್ರವನ್ನು ನಡೆಸುವ ಭಾವೀ ಪೀಳಿಗೆಯನ್ನು ಸಿದ್ಧಪಡಿಸುತ್ತಿದ್ದಾರೆ.
೧೦. ಜ್ಯೋತಿಷ್ಯಶಾಸ್ತ್ರ ಮತ್ತು ನಾಡಿ ಜ್ಯೋತಿಷ್ಯಗಳಿಂದ ಸಂಶೋಧನಾಕಾರ್ಯ
ಮಹರ್ಷಿ ನಾಡಿಪಟ್ಟಿ
೧೦ ಅ. ಜ್ಯೋತಿಷ್ಯಶಾಸ್ತ್ರದ ಮೂಲಕ ಸಂಶೋಧನೆ : ದೈವಿಕ ಬಾಲಕರು, ಸನಾತನದ ಸಂತರು, ಆಧ್ಯಾತ್ಮಿಕ ತೊಂದರೆ ಇರುವವರು ಇವರೆಲ್ಲರ ಜಾತಕಗಳ ಅಭ್ಯಾಸ ಮಾಡಿ ಅವರ ಜೀವನದಲ್ಲಿನ ವಿಶೇಷ ಯೋಗದ ಅಭ್ಯಾಸವನ್ನು ಮಾಡುವುದು, ದೇಶದಾದ್ಯಂತ ಘಟಿಸುವ ವಿವಿಧ ಆಧ್ಯಾತ್ಮಿಕ ಘಟನೆಗಳ ಜ್ಯೋತಿಷ್ಯ ಶಾಸ್ತ್ರೀಯ ಕಾರಣ ಮೀಮಾಂಸೆ ಯನ್ನು ಮಾಡು ವುದು ಈ ರೀತಿಯ ವಿವಿಧ ಸಂಶೋಧನಾ ಕಾರ್ಯವು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
೧೦ ಆ. ಹಸ್ತಸಾಮುದ್ರಿಕೆ ಮತ್ತು ಪಾದಸಾ ಮುದ್ರಿಕೆಗಳ ಬಗ್ಗೆ ಶಾಸ್ತ್ರೀಯ ಸಂಶೋಧನೆ : ಮನುಷ್ಯನ ಶರೀರದ ಮೇಲಿನ ಬೇರೆಬೇರೆ ಲಕ್ಷಣಗಳನ್ನು ನೋಡಿ ಆತನ ಸ್ವಭಾವ, ಗುಣದೋಷಗಳು, ಭೂತಕಾಲ ಮತ್ತು ಭವಿಷ್ಯತ್ಕಾಲ ಇವುಗಳ ಬಗ್ಗೆ ಪರಿಹಾರ ನೀಡುವ ‘ಸಾಮುದ್ರಿಕೆ’ ವಿದ್ಯೆಯು ಪ್ರಾಚೀನ ಕಾಲದಿಂದ ಭಾರತದಲ್ಲಿ ಪ್ರಚಲಿತವಾಗಿದೆ. ಹಸ್ತಸಾಮುದ್ರಿಕೆ ಶಾಸ್ತ್ರದಲ್ಲಿ ಕೈ ಹಾಗೂ ಪಾದಸಾಮುದ್ರಿಕ ಶಾಸ್ತ್ರದಲ್ಲಿ ಕಾಲಿನ ಕೆಳಭಾಗದ ಮೇಲಿನ ರೇಖೆಗಳು, ಉಬ್ಬುಗಳು ಹಾಗೂ ಇತರ ಚಿಹ್ನೆಗಳನ್ನು ಅಭ್ಯಾಸ ಮಾಡುತ್ತಾರೆ. ಈ ಶಾಸ್ತ್ರಗಳ ಮೂಲಕ ಆಧ್ಯಾತ್ಮಿಕ ಸಂಶೋಧನೆ ಮಾಡುವುದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಇವರ ಮಾರ್ಗದರ್ಶನದಲ್ಲಿ ಅಭ್ಯಾಸವು ನಡೆಯುತ್ತಿದೆ.
೧೦ ಇ. ನಾಡಿಜ್ಯೋತಿಷ್ಯಶಾಸ್ತ್ರದ ಮೂಲಕ ಸಂಶೋಧನೆ : ಪ್ರಾಚೀನ ಕಾಲದಲ್ಲಿ ವಿವಿಧ ಋಷಿ ಮುನಿಗಳು ನಾಡಿಪಟ್ಟಿಗಳಲ್ಲಿ ಬರೆದಿಟ್ಟಿರುವ ಭವಿಷ್ಯಕ್ಕನುಸಾರವಾಗಿ ಮಾನವೀ ಜೀವನದಲ್ಲಿ ನಡೆಯುವ ಘಟನೆಗಳ ಅಭ್ಯಾಸ, ಎರಡು ಬೇರೆಬೇರೆ ನಾಡಿಪಟ್ಟಿ ಗಳಲ್ಲಿ ಮಹರ್ಷಿಗಳು ಒಂದೇ ವ್ಯಕ್ತಿಯ ಬಗ್ಗೆ ಬರೆದಿರುವ ಭವಿಷ್ಯದ ತುಲನಾತ್ಮಕ ಅಭ್ಯಾಸ, ಜೀವನದಲ್ಲಿನ ಸಂಭಾವ್ಯ ಅಪ್ರಿಯವಾದ ಘಟನೆಗಳನ್ನು ತಪ್ಪಿಸಲು ಸಾಧ್ಯವಾಗಬೇಕು ಎಂಬುದಕ್ಕಾಗಿ ನಾಡಿ ಭವಿಷ್ಯದಲ್ಲಿ ಹೇಳಿರುವ ಪರಿಹಾರೋಪಾಯಗಳಿಂದ ಆಗುವ ಲಾಭಗಳು ಇತ್ಯಾದಿಗಳ ಬಗ್ಗೆ ಸಂಶೋಧನೆ ಮಾಡುವುದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಯವರ ಮಾರ್ಗದರ್ಶನ ದಲ್ಲಿ ೪-೫ ಸಾಧಕರ ಒಂದು ತಂಡವು ಭಾರತದಾದ್ಯಂತ ಸಂಚಾರ ಮಾಡುತ್ತಿದ್ದಾರೆ.
(ಆಧಾರ : ಸನಾತನದ ಗ್ರಂಥ ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಸಂಕ್ಷಿಪ್ತವಾದ ಪರಿಚಯ ಮತ್ತು ಸಂತರು ನೀಡಿರುವ ಗೌರವ)

ಯು.ಟಿ.ಎಸ್. ಉಪಕರಣದಿಂದ ಮಹಾರಾಷ್ಟ್ರದ ನಾಂದೇಡ್‌ನ ಮಾಹೂರಗಡದಲ್ಲಿ
 ಇರುವ ಶ್ರೀ ರೇಣುಕಾದೇವಿಯ ದೇವಸ್ಥಾನದ ಪ್ರಭಾವಲಯ ನೋಡುತ್ತಿರುವ ಸಾಧಕ
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಂಗ್ರಹಾಲಯ ನಿರ್ಮಿಸ ಲಾಗುತ್ತಿದೆ. ಸಂಗ್ರ ಹಾಲಯಕ್ಕಾಗಿ ಭಾರತದ ತೀರ್ಥಕ್ಷೇತ್ರಗಳು, ದೇವ ಸ್ಥಾನಗಳು, ಸಂತರ ಸಮಾಧಿ ಸ್ಥಳ, ಐತಿಹಾಸಿಕ ಸ್ಥಳಗಳು ಇವೇ ಮುಂತಾದ ಕಡೆಗಳ ಆಧ್ಯಾತ್ಮಿಕ ದೃಷ್ಟಿಯಿಂದ ವೈಶಿಷ್ಟ್ಯಪೂರ್ಣವಾಗಿರುವ ವಸ್ತುಗಳು, ಮಣ್ಣು, ನೀರು ಇತ್ಯಾದಿ ಹಾಗೂ ಪಂಚಮಹಾಭೂತಗಳ ಪರಿಣಾಮ ತೋರಿಸುವ ಸಾವಿರಾರು ವಸ್ತು, ಭಾವಚಿತ್ರ ಮತ್ತು ೧೬ ಸಾವಿರಕ್ಕೂ ಹೆಚ್ಚು ಧ್ವನಿಚಿತ್ರಸುರುಳಿಗಳನ್ನು ಕಾಪಾಡಿದ್ದೇವೆ. ಇಂತಹ ವಿವಿಧ ಆಧ್ಯಾತ್ಮಿಕ ಮೌಲ್ಯವಿರುವ ವಸ್ತು ಗಳನ್ನು ಕಾಪಾಡಿ ಸನಾತನ ಸಂಸ್ಥೆಯು ಅಧ್ಯಾತ್ಮವಿಶ್ವವಿದ್ಯಾಲಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸನಾತನವು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಆಧ್ಯಾತ್ಮಿಕ ಸಂಶೋಧನೆ