ನಾನು... ಸನಾತನದ ಗ್ರಂಥವಿಶ್ವ... ಪರಾತ್ಪರ ಗುರು ಡಾ. ಆಠವಲೆಯವರ ಧರ್ಮದೂತ !

ಪೂ. ಸಂದೀಪ ಆಳಶಿ
ಶಿವನ ಜಟೆಯಿಂದ ಹೇಗೆ ಗಂಗಾ ಮಾತೆಯು ಪೃಥ್ವಿಯನ್ನು ಪಾವನಗೊಳಿಸಲು ಅವತರಿಸಿದಳೋ, ಹಾಗೆಯೇ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಪ್ರೇರಣೆಯಿಂದ ಅಖಿಲ ಮನುಕುಲವನ್ನು ಉದ್ಧರಿಸಲು ಸನಾತನದ ಗ್ರಂಥಗಳ ಮಾಧ್ಯಮದಿಂದ ಜ್ಞಾನಗಂಗೆಯು ಅವತರಿಸಿದ್ದಾಳೆ ! ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಧರ್ಮಜಾಗೃತಿ, ರಾಷ್ಟ್ರರಕ್ಷಣೆ, ಬಾಲಸಂಸ್ಕಾರ, ಆಯುರ್ವೇದ, ಸ್ವಭಾಷಾ, ಮುಂಬರುವ ಆಪತ್ಕಾಲದ ಸಂಜೀವನಿಯಾಗಲಿರುವ ಬಿಂದುಒತ್ತಡ ಮುಂತಾದ ಉಪಚಾರ ಪದ್ಧತಿಗಳ ವಿಷಯಗಳ ಬಗ್ಗೆ ೨೯೩ ಗ್ರಂಥಗಳು ೧೫ ಭಾಷೆಗಳಲ್ಲಿ ಸುಮಾರು ೬೬,೨೯,೦೦೦ ಪ್ರತಿಗಳು ಜುಲೈ ೨೦೧೬ ರವರೆಗೆ ಮುದ್ರಣಗೊಂಡಿದೆ. ಸನಾತನದ ರಜತ ಮಹೋತ್ಸದ ನಿಮಿತ್ತ ಸನಾತನದ ಗ್ರಂಥಸಂಪತ್ತಿನ ಅದ್ವಿತೀಯತೆಯನ್ನು ಪ್ರದರ್ಶಿಸುವ ಲೇಖನ...
ಶಬ್ದಗಳ ಆಕರ : ಸನಾತನದ ೧೧ ನೇ ಸಂತರಾಗಿರುವ 
(ಪೂ.) ಶ್ರೀ. ಸಂದೀಪ ಆಳಶಿ, ಸನಾತನದ ಗ್ರಂಥಗಳ ಪ್ರಮುಖ ಸಂಕಲನಕಾರರು


ಪರಾತ್ಪರ ಗುರು ಡಾ. ಆಠವಲೆ
ನನ್ನ ವಂಶಾವಳಿ !
ನನ್ನ ವಂಶಪರಂಪರೆ ಪ್ರಾಚೀನವಾಗಿದೆ. ನನ್ನ ಪೂರ್ವಜರ ಜನನ ಅಖಿಲ ಮನುಕುಲದ ಕಲ್ಯಾಣ ಕ್ಕಾಗಿಯೇ ಆಗಿತ್ತು. ತಪಸ್ವಿ ಋಷಿಮುನಿಗಳಿಗೆ ಆತ್ಮಸಾಕ್ಷಾತ್ಕಾರವಾಯಿತು ಮತ್ತು ಪ್ರಪ್ರಥಮವಾಗಿ ಧರ್ಮಜ್ಞಾನ ನೀಡುವ ವೇದಗಳ ಉತ್ಪತ್ತಿಯಾಯಿತು. ಮುಂದೆ ಯುಗಗಳು ಕಳೆದಂತೆ, ದರ್ಶನಗಳು, ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ, ಪುರಾಣಗಳು ಹೀಗೆ ನಮ್ಮ ವಂಶಾವಳಿಯು ಬೆಳೆ ಯಿತು. ಆಯಾ ಕಾಲಕ್ಕೆ ಆವಶ್ಯಕವಿರುವ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದಿಂದ ಕೂಡಿರುವ ಧರ್ಮಗ್ರಂಥಗಳ ನಿರ್ಮಿತಿ ಭಾರತವರ್ಷದಲ್ಲಿ ಆಗತೊಡಗಿತು.
ನನ್ನ ಗ್ರಂಥ : ಬ್ರಾಹ್ಮತೇಜ ಮತ್ತು ಕ್ಷಾತ್ರತೇಜಗಳ ಸಮಾವೇಶಗೊಂಡಿರುವ ಆಧುನಿಕ ಕಾಲದ ‘ಗೀತೆ’ !
ಶ್ರೀಮದ್ಭಗವದ್ಗೀತೆ’ ಗ್ರಂಥದ ವೈಶಿಷ್ಟ್ಯವೇನು ? ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ’ ಎಂದರೆ ‘ಸರ್ವಧರ್ಮವನ್ನು, ಷಡ್ರಿಪುಗಳನ್ನು ಮತ್ತು ಅಹಂಅನ್ನು ಪರಿತ್ಯಜಿಸಿ ನನಗೆ ಶರಣಾಗಿರಿ’ ಎನ್ನುವ ಉಪದೇಶವನ್ನು ಮಾಡುವ ಗುರು ಶ್ರೀಕೃಷ್ಣನು ಶಿಷ್ಯ ಅರ್ಜುನನಿಗೆ ಭಗವಂತನ ಪ್ರಾಪ್ತಿಯ ರಹಸ್ಯ ಮತ್ತು ಮಾರ್ಗವನ್ನು ತೋರಿಸುತ್ತಾನೆ. ಭಗವಂತನ ಈ ‘ಗೀತೆ’ ಎಂದರೆ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜಗಳ ಆದರ್ಶ ಸಮಾವೇಶವಾಗಿದೆ.
ಸಮಾಜವು ಧರ್ಮಾಚರಣೆಯನ್ನು ಪಾಲಿಸಿ ಅಧ್ಯಾತ್ಮದ ಮಾರ್ಗದಲ್ಲಿ ಮುಂದುವರಿದರೆ, ನೀತಿ ವಂತ, ಚಾರಿತ್ರ್ಯಶೀಲ, ಬಂಧುಭಾವನೆ, ಕರ್ತವ್ಯದಕ್ಷತೆ ಮುಂತಾದ ಗುಣಗಳು ಅದರಲ್ಲಿ ವಿಕಸನಗೊಂಡು ಸಾಮಾಜಿಕ ಸ್ಥೈರ್ಯ ಲಭಿಸುತ್ತದೆ. ಅದರೊಂದಿಗೆ ಅನ್ಯಾಯ, ಅಧರ್ಮ ಮುಂತಾದವುಗಳ ವಿರುದ್ಧ ಯೋಗ್ಯ ಮಾರ್ಗದಿಂದ ಧ್ವನಿಯೆತ್ತಿದರೆ ಮಾತ್ರ ರಾಷ್ಟ್ರೀಯ ಜೀವನದಲ್ಲಿ ಭ್ರಷ್ಟಾಚಾರ, ಗೂಂಡಾಗಿರಿ, ಸಾಮಾಜಿಕ ಭೇದಭಾವಗಳಂತಹ ದುರ್ಗುಣಗಳನ್ನು ಹೊಡೆದೋಡಿಸಿ, ರಾಷ್ಟ್ರ ಸುರಕ್ಷತೆ ಮತ್ತು ಸುವ್ಯವಸ್ಥೆಯು ಸ್ಥಾಪನೆಗೊಳ್ಳುತ್ತದೆ. ಇದಕ್ಕಾಗಿಯೇ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜಗಳ ಸರಿಯಾದ ಸಮನ್ವಯತೆ ಅವಶ್ಯಕವಾಗಿರುತ್ತದೆ.
ಗೀತೆಯಂತೆಯೇ ನನ್ನ ಗ್ರಂಥಗಳು ಚೈತನ್ಯಮಯ ಮತ್ತು ಪ್ರಾಸಬದ್ಧವಾಗಿವೆ !
ಇಂದು ಗೀತೆಯು ಎಷ್ಟೋ ಜನರ ಉಪಾಸನೆಯ ಗ್ರಂಥವಾಗಿದೆ. ಎಷ್ಟೋ ಜನರ ಧ್ಯೇಯಮಂತ್ರವಾಗಿದೆ. ಎಷ್ಟೋ ಜನರ ಜೀವನಾದರ್ಶವಾಗಿದೆ. ಯುಗಗಳೇ ಕಳೆದರೂ, ಗೀತೆಯ ಸ್ಥಾನ ಹಿಂದೂಗಳ ಮನಸ್ಸಿನಲ್ಲಿ ಅಚಲವಾಗಿದೆ. ಇದರ ಏಕೈಕ ಕಾರಣವೆಂದರೆ ಗೀತೆಯು ಚೈತನ್ಯದ ಪ್ರತ್ಯಕ್ಷ ಸ್ವರೂಪ ಮತ್ತು ಪ್ರಾಸಬದ್ಧವಾಗಿದೆ. ‘ಪರಾತ್ಪರ ಗುರು ಡಾ. ಆಠವಲೆಯವರು ಸದ್ಯದ ಕಲಿಯುಗದಲ್ಲಿ ಶ್ರೀಕೃಷ್ಣನ ಸಾಕ್ಷಾತ್ ಅವತಾರವೇ ಆಗಿದ್ದಾರೆ’ ಎಂದು ಇದುವರೆಗೂ ಅನೇಕ ಸಂತರು ಹೇಳಿದ್ದಾರೆ ಮತ್ತು ಸನಾತನದ ನೂರಾರು ಸಾಧಕರಿಗೆ ಇದರ ಅನುಭೂತಿಯೂ ಬಂದಿದೆ ! ಸನಾತನದ ಗ್ರಂಥಗಳು ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯಮಯ ಲೇಖನಿಯಿಂದ ಸಿದ್ಧಗೊಳ್ಳುತ್ತಿವೆ. ಸಮಾಜಕ್ಕೆ ಅಧ್ಯಾತ್ಮದ ಮಾರ್ಗವನ್ನು ತೋರಿಸು ವುದು ಮತ್ತು ಸಾಧಕರನ್ನು ಮೋಕ್ಷಪ್ರಾಪ್ತಿಯೆಡೆಗೆ ಕರೆ ದೊಯ್ಯುವ ಈ ಗ್ರಂಥವೆಂದರೆ ಆಧುನಿಕ ಗೀತೆಯ ವಿವಿಧ ಶ್ಲೋಕಗಳೇ ಆಗಿವೆ.
ಕೃತಿಯ ವಿನಃ ಪಾಂಡಿತ್ಯವು ವ್ಯರ್ಥ !’ ಎನ್ನುವ ಒಂದು ವಚನವಿದೆ. ಸ್ವತಃ ಆದರ್ಶಮಯ ಕೃತಿಯನ್ನು ಮಾಡದೇ ಕೇವಲ ಬಾಯಿಯಿಂದ ಮಾತನಾಡುವವರ ಶಬ್ದಗಳಿಗೆ ಮೌಲ್ಯಗಳಿರುವುದಿಲ್ಲ. ಆದ್ದರಿಂದಲೇ ಆ ಉಪದೇಶಗಳಲ್ಲಿ ಶಬ್ದಶಕ್ತಿ ಮತ್ತು ಚೈತನ್ಯಶಕ್ತಿಗಳು ಉಳಿಯದ ಕಾರಣ ಆ ಉಪದೇಶಗಳು ಜನರ ಮನಸ್ಸಿನ ಮೇಲೆ ಪ್ರಭಾವ ಬೀರುವುದಿಲ್ಲ. ಇದಕ್ಕಾಗಿಯೇ , ‘ಬೋಲೆ ತೈಸಾ ಚಾಲೆ, ತ್ಯಾಚಿ ವಂದಾವಿ ಪಾವುಲೆ !’ ಅಂದರೆ ‘ವಚನದಂತೆ ನಡೆಯುವವನ ಚರಣಗಳಿಗೆ ವಂದಿಸಬೇಕು’ ನನ್ನ ಗ್ರಂಥಗಳೂ ಅದರಂತೆಯೇ ಇವೆ. ಸಾಧಕರಿಗೆ ಕಾಲಕ್ಕನುಸಾರ ಯೋಗ್ಯ ಸಾಧನೆಯನ್ನು ಕಲಿಸುವ ಪರಾತ್ಪರ ಗುರು ಡಾ. ಆಠವಲೆಯವರು ಮೊದಲು ಸ್ವತಃ ಅದನ್ನು ಆಚರಣೆಯಲ್ಲಿ ತಂದಿದ್ದಾರೆ. ಆದುದರಿಂದಲೇ ಅವರ ಉಪದೇಶಗಳು ಮನಸ್ಸಿನ ಮೇಲೆ ದೃಢವಾದ ಸಂಸ್ಕಾರವನ್ನು ಬಿಂಬಿಸುತ್ತವೆ ಮತ್ತು ಓದುವವನು ಅದನ್ನು ಕಾರ್ಯರೂಪಕ್ಕೆ ತರಲು
ಉದ್ಯುಕ್ತನಾಗುತ್ತಾನೆ. ಸತ್ಯದ ಮಾರ್ಗದಲ್ಲಿ ಕರೆದೊ ಯ್ಯುವ ಸನಾತನ ಸಂಸ್ಥೆಯು ಈಶ್ವರನ ಸ್ಥೂಲ ರೂಪದ ಶರೀರವಾಗಿದ್ದು, ನನ್ನ ಎಲ್ಲ ಗ್ರಂಥಗಳು ಆ ಶರೀರದ ಚೈತನ್ಯಮಯ ಪರಮೇಶ್ವರನ ಶಕ್ತಿಯೇ ಆಗಿದೆ !
ಗ್ರಂಥಗಳಲ್ಲಿನ ವಿಷಯಗಳ ಮಂಡನೆಯು ಕಾಲಾನುಸಾರ ವೈಜ್ಞಾನಿಕ ಪರಿಭಾಷೆಯಲ್ಲಿ !
ಸಂತ ಜ್ಞಾನೇಶ್ವರ, ಸಂತ ತುಕಾರಾಮ, ಸಂತ ಏಕನಾಥ, ಸಮರ್ಥ ರಾಮದಾಸಸ್ವಾಮಿ ಮುಂತಾದ ಸಂತರು ಅಭಂಗ, ಭಜನೆ, ಶ್ಲೋಕ ಮುಂತಾದವು ಗಳನ್ನು ನಿರ್ಮಿಸಿ ಸಮಾಜಕ್ಕೆ ಈಶ್ವರಪ್ರಾಪ್ತಿ ಕುರಿತು ಅಮೂಲ್ಯವಾದ ಮಾರ್ಗದರ್ಶನವನ್ನು ಮಾಡಿದರು. ಆ ಕಾಲದಲ್ಲಿ ಇಂದಿನ ತುಲನೆಯಲ್ಲಿ ಸಮಾಜದ ಸಾತ್ತ್ವಿಕತೆ ಅಧಿಕವಾಗಿತ್ತು. ಆದುದರಿಂದ ಕಡಿಮೆ ಶಬ್ದಗಳಲ್ಲಿಯೂ ಸಮಾಜಕ್ಕೆ ಅಧ್ಯಾತ್ಮವು ತಿಳಿಯುತ್ತಿತ್ತು. ಇಂದು ಸಮಾಜದ ಸಾತ್ತ್ವಿಕತೆ ಕಡಿಮೆ ಮಟ್ಟಕ್ಕೆ ಮುಟ್ಟಿ ರುವುದರಿಂದ, ಆಧ್ಯಾತ್ಮವನ್ನು ತಿಳಿದುಕೊಳ್ಳುವ ಸಮಾಜದ ಕ್ಷಮತೆಯೂ ಅತ್ಯಲ್ಪವಾಗಿದೆ. ಆದ ಕಾರಣ, ಸಮಾಜಕ್ಕೆ ಆಧ್ಯಾತ್ಮದ ಎಲ್ಲ ಅಂಗಗಳನ್ನು ವಿಶ್ಲೇಷಣೆಯೊಂದಿಗೆ ತಿಳಿಸಬೇಕಾಗುತ್ತದೆ. ಇದರ ಒಂದು ಉದಾಹರಣೆಯನ್ನು ಮುಂದೆ ನೀಡಲಾಗಿದೆ..
ಸಂತ ತುಕಾರಾಮ ಮಹಾರಾಜರು ಒಂದು ಅಭಂಗದಲ್ಲಿ ‘ನುಡಿಯಬೇಕು ವಿಠ್ಠಲ, ನೋಡಬೇಕು ವಿಠ್ಠಲ ಮಾಡಬೇಕು ವಿಠ್ಠಲ ಜೀವ ದಿಂದ ’ ಎಂದು ಹೇಳಿದ್ದಾರೆ. ಇದನ್ನೇ ಇಂದಿನ ಸಮಾಜಕ್ಕೆ ತಿಳಿಸಲು ಮುಂದಿನಂತೆ ವಿಶ್ಲೇಷಣೆ ಮಾಡಿ ಹೇಳಬೇಕಾಗುತ್ತದೆ -
. ನುಡಿಯಬೇಕು ವಿಠ್ಠಲ : ಯಾವ ನಾಮಜಪವನ್ನು ಮಾಡಬೇಕು ? ಅದನ್ನು ಮಾಡುವ ಯೋಗ್ಯ ಪದ್ಧತಿ ಯಾವುದು ? ಇತ್ಯಾದಿ.
. ನೋಡಬೇಕು ವಿಠ್ಠಲ : ಇನ್ನೊಬ್ಬರಲ್ಲಿ ದೇವರನ್ನು ನೋಡಲು ತನ್ನಲ್ಲಿ ಯಾವ ರೀತಿ ಭಾವವನ್ನು ನಿರ್ಮಾಣ ಮಾಡಬೇಕು ? ಅದಕ್ಕಾಗಿ ತನ್ನಲ್ಲಿರುವ ಸ್ವಭಾವದೋಷ ಮತ್ತು ಅಹಂ ನಾಶಗೊಳಿಸಲು ನಿಯಮಿತವಾಗಿ ಯಾವ ರೀತಿ ಪ್ರಯತ್ನಿಸಬೇಕು ? ಇತ್ಯಾದಿ.
. ಮಾಡಬೇಕು ವಿಠ್ಠಲ ಜೀವದಿಂದ : ತನ್ನಲ್ಲಿ ದೈವತ್ವ ನಿರ್ಮಾಣವಾಗಲು ಸಾಧನೆಯನ್ನು ಹಂತ ಹಂತವಾಗಿ ಹೇಗೆ ಮಾಡಬೇಕು ? ಇತ್ಯಾದಿ.
ನನ್ನ ಗ್ರಂಥಗಳು ವೈಜ್ಞಾನಿಕ ಭಾಷೆಯಲ್ಲಿ ಆಧ್ಯಾತ್ಮವನ್ನು ಕಲಿಸುತ್ತಿವೆ. ಆದ್ದರಿಂದ ಈ ದೃಷ್ಟಿ ಯಿಂದಲೂ ಅದು ಸದ್ಯದ ಸಮಾಜಕ್ಕೆ ಉತ್ಕೃಷ್ಟ ಮಾರ್ಗದರ್ಶನ ಮಾಡುತ್ತವೆ.
ಇಲ್ಲಿಯವರೆಗೆ ಪೃಥ್ವಿಯ ಮೇಲೆ ಎಲ್ಲಿಯೂ ಉಪಲಬ್ಧವಿರದ ಏಕಮೇವಾದ್ವಿತೀಯ ಜ್ಞಾನ !
ಜ್ಞಾನವು ಅನಾದಿ ಮತ್ತು ಅನಂತವಾಗಿದೆ. ಪ್ರತಿ ಯೊಂದು ಯುಗದಲ್ಲಿ ಕಾಲದ ಅವಶ್ಯಕತೆಗನುಸಾರ ಅದು ಬ್ರಹ್ಮಾಂಡದಲ್ಲಿ ಅವತರಿಸುತ್ತದೆ. ಮನುಕುಲದ ಕಲ್ಯಾಣಕ್ಕಾಗಿ ಋಷಿಮುನಿಗಳು ಅದನ್ನು ಗ್ರಹಿಸಿ, ಗ್ರಂಥರೂಪದಲ್ಲಿ ಸಂಕಲನ ಮಾಡುತ್ತಾರೆ. ಸದ್ಯದ ಕಲಿಯುಗದ ಆಧುನಿಕ ಋಷಿ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನದ ಸಾಧಕರಿಗೆ ಹೊಸ ಜ್ಞಾನವು ದೊರೆಯುತಿದ್ದು, ಅದು ಗ್ರಂಥರೂಪದಲ್ಲಿ ಸಂಕಲನಗೊಳ್ಳುತ್ತಿದೆ. ಸನಾತನದ ಬಹಳಷ್ಟು ಗ್ರಂಥದಲ್ಲಿ ಶೇ. ೩೦ ರಿಂದ ೮೦ ರಷ್ಟು ಜ್ಞಾನವು ಇಲ್ಲಿಯವರೆಗೆ ಪೃಥ್ವಿಯ ಮೇಲೆ ಎಲ್ಲಿಯೂ ಉಪಲಬ್ಧವಿರದ ಏಕಮೇವಾದ್ವಿತೀಯ ಜ್ಞಾನವಾಗಿದೆ. ಶಬ್ದರೂಪದ ಜ್ಞಾನ, ಆಕೃತಿಗಳು, ವಿಷಯಗಳು, ಸೂಕ್ಷ್ಮ-ಜ್ಞಾನ ವಿಷಯದಲ್ಲಿನ ಚಿತ್ರಗಳು, ಸೂಕ್ಷ್ಮ-ಪರೀಕ್ಷಣೆ, ಸೂಕ್ಷ್ಮಕ್ಕೆ ಸಂಬಂಧಿಸಿದ ಪ್ರಯೋಗಗಳು ಇತ್ಯಾದಿ ವಿವಿಧ ರೂಪಗಳಲ್ಲಿ ಈ ಜ್ಞಾನವು ಗ್ರಂಥಗಳಲ್ಲಿ ಸಾಕಾರ ಗೊಂಡಿದೆ.
ಮುಂಬರುವ ಭೀಕರ ಆಪತ್ಕಾಲದ ವಿಚಾರ !
ಎಲ್ಲ ಸಂತರು ಮತ್ತು ಜ್ಯೋತಿಷಿಗಳ ಅಭಿಪ್ರಾಯ ದಂತೆ ಆಪತ್ಕಾಲವು ಪ್ರಾರಂಭವಾಗಿದೆ ಮತ್ತು ಅದರ
ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುವುದು. ಭೂಕಂಪ, ಬಿರುಗಾಳಿ, ತ್ಸುನಾಮಿ ಮುಂತಾದ ನೈಸರ್ಗಿಕ ವಿಪತ್ತುಗಳು ಮತ್ತು ಅರಾಜಕತೆ, ಅಣು ಯುದ್ಧ ಇಂತಹ ಮಾನವ ನಿರ್ಮಿತ ವಿಪತ್ತುಗಳನ್ನು ಈಗ ಎದುರಿಸಬೇಕಾಗಿ ಬರುವುದು. ಇಂತಹ ಭೀಕರ ಆಪತ್ಕಾಲದಲ್ಲಿ ‘ಭಾವಿ ಆಪತ್ಕಾಲದ ಸಂಜೀವನಿ’ ಈ ಗ್ರಂಥ ಮಾಲಿಕೆಯಲ್ಲಿಯ ನನ್ನ ಗ್ರಂಥ, ರೋಗಪೀಡಿತರಿಗೆ, ತೊಂದರೆಗೊಳಗಾದವರಿಗೆ ಸಂಜೀವನಿಯಾಗಲಿದೆ. ಮುಂಬರುವ ಕಾಲದ ಹೆಜ್ಜೆಯನ್ನು ಅರಿತುಕೊಂಡು ಮನುಕುಲದ ಕಲ್ಯಾಣಕ್ಕಾಗಿ ಇಷ್ಟೊಂದು ದೂರದೃಷ್ಟಿಯ ವಿಚಾರವನ್ನು ಸರ್ವಜ್ಞರಾದ ಮತ್ತು ಭವಿಷ್ಯವನ್ನು ಅರಿತ ಪ.ಪೂ. ಡಾಕ್ಟರರೇ ಮಾಡಬಲ್ಲರು.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಅಡಿಪಾಯವಾಗಿರುವ ಗ್ರಂಥ !
ಪ್ರಭು ಶ್ರೀರಾಮಚಂದ್ರರು ವಸಿಷ್ಠ ಋಷಿಗಳಿಂದ ಶ್ರೇಷ್ಠ ನೈತಿಕಮೌಲ್ಯಗಳ ಶಿಕ್ಷಣವನ್ನು ಪಡೆದರು ಮತ್ತು ಅವರು ಆದರ್ಶ ‘ರಾಮರಾಜ್ಯ’ವನ್ನು ಸ್ಥಾಪಿಸಿದರು. ಇದರಂತೆಯೇ, ಮುಂಬರುವ ಸಮಯದಲ್ಲಿ ಶಿಕ್ಷಣವನ್ನು ನೀಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುವುದು. ನನ್ನ ಗ್ರಂಥವು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮೂಲಾಧಾರ ಗ್ರಂಥವಾಗಿದೆ. ಇದಕ್ಕಾಗಿ ಧರ್ಮಶಾಸ್ತ್ರದ ಜೊತೆಯಲ್ಲಿಯೇ ರಾಜನೀತಿ ಶಾಸ್ತ್ರ, ಅರ್ಥಶಾಸ್ತ್ರ, ನ್ಯಾಯಶಾಸ್ತ್ರ ಹೀಗೆ ಎಲ್ಲ ವಿಭಾಗಗಳ ವಿಚಾರಗಳನ್ನು ಮಾಡುವ ಗ್ರಂಥವನ್ನು ಸಿದ್ಧಗೊಳಿಸುವುದು ಸನಾತನದ ಧ್ಯೇಯವಾಗಿದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದಿಂದ ಶಿಕ್ಷಣವನ್ನು ಪಡೆದು ಹೊರಬರುವ ವಿದ್ಯಾರ್ಥಿಗಳು ಕೇವಲ ಸಂತರಷ್ಟೇ ಅಲ್ಲ, ಅವರು ರಾಷ್ಟ್ರ ಸಂತರಾಗುವರು. ಹಾಗೂ ‘ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)’ ನಿಷ್ಕಳಂಕಿತವಾಗಿರಲು ಅದರ ತೇಜ ಮತ್ತು ಗೌರವವನ್ನು ಹೆಚ್ಚಿಸುವ ಮಹಾಪುರುಷರಾಗುವರು.
ನನ್ನ ಗ್ರಂಥದ ಪ್ರಸಾರ ಮಾಡಿ ನೀವು ಸಹ ಈಶ್ವರನ ಕೃಪೆಗೆ ಪಾತ್ರರಾಗಿ !
ನನ್ನ ಗ್ರಂಥವನ್ನು ಮನೆಮನೆಗೆ, ಶಾಲೆಗಳಿಗೆ ಮತ್ತು ವಾಚನಾಲಯ ಗಳಿಗೆ ತಲುಪಿಸುವುದು, ಅದನ್ನು ಇತರರಿಗೆ ಉಡುಗೊರೆಯ ರೂಪದಲ್ಲಿ ನೀಡುವುದು; ಅದಕ್ಕಾಗಿ ಪ್ರಾಯೋಜಕರಾಗುವುದು ಅಥವಾ ಜಾಹೀರಾತು ಗಳನ್ನು ನೀಡುವುದು ಇಂತಹ ವಿವಿಧ ರೀತಿಗಳಿಂದ ನೀವು ಸಹ ಪ್ರಸಾರ ಮಾಡಬಹುದು. ಇದರ ಮುಖಾಂತರ ನೀವು ರಾಷ್ಟ್ರ ಮತ್ತು ಧರ್ಮದ ಪವಿತ್ರ ಕಾರ್ಯದಲ್ಲಿ ಸಹಭಾಗಿಗಳಾಗುವಿರಿ ಹಾಗೂ ಇದರಿಂದ ಈಶ್ವರನ ಕೃಪೆಯ ಫಲವು ನಿಮಗೆ ದೊರೆಯುವುದೆಂದು ದೃಢವಾಗಿ ತಿಳಿಯಿರಿ !
- (ಪೂ.) ಶ್ರೀ ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ (..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಾನು... ಸನಾತನದ ಗ್ರಂಥವಿಶ್ವ... ಪರಾತ್ಪರ ಗುರು ಡಾ. ಆಠವಲೆಯವರ ಧರ್ಮದೂತ !