ಪ.ಪೂ. ಡಾಕ್ಟರರ ಸೇವೆಯಲ್ಲಿರುವಾಗ ಶ್ರೀ. ರೂಪೇಶ ಗೋಕರ್ಣ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಶ್ರೀ. ರೂಪೇಶ ಗೋಕರ್ಣ 
೧. ಮನಸ್ಸಿನ ಮಾಲೀಶು ೨೪ ಗಂಟೆಗಳ ಕಾಲ ಮಾಡಬೇಕಾಗುತ್ತದೆ !
‘ಶರೀರದ ಮಾಲೀಶು ಮಾಡಲು ೧-೨ ಗಂಟೆಗಳಷ್ಟು ಸಮಯ ಸಾಕಾಗುತ್ತದೆ; ಆದರೆ ಮನಸ್ಸನ್ನು ೨೪ ಗಂಟೆ ಮಾಲೀಶು ಮಾಡಬೇಕಾಗುತ್ತದೆ’ ಎಂದು ಪ.ಪೂ. ಗುರು ದೇವರು ಹೇಳಿದರು. ‘ನಾವು ಎಲ್ಲಿ ಕಡಿಮೆ ಬೀಳುತ್ತೇವೆ ? ನಾವು ಎಲ್ಲಿ ತಪ್ಪಿದೆವು ? ಏನು ಪರಿಹಾರ ಕಂಡು ಹುಡುಕಿ ದೆವು, ಎಂಬ ವಿಚಾರವಾಗಬೇಕು. ಸತತ ನಾಮಜಪ ಮಾಡುತ್ತಿರಬೇಕು.’
೨. ಸಾಧಕರ ಸಲುವಾಗಿಯೇ ಎಲ್ಲವನ್ನು ಮಾಡುವ ಪ.ಪೂ. ಡಾಕ್ಟರರು !
ಓರ್ವ ಸಾಧಕನು ಪ.ಪೂ. ಡಾಕ್ಟರರ ಕೈಗೆ ಮಾಲೀಶು ಮಾಡುವುದಕ್ಕೆಂದು ಒಂದು ಉಪಕರಣ ಕೊಟ್ಟನು. ಅದನ್ನು ನೋಡಿ ಪ.ಪೂ. ಡಾಕ್ಟರರು,‘ಈ ಉಪಕರಣವು ಚೆನ್ನಾಗಿದೆ ಇದನ್ನು ಸಾಧಕರು ಬಳಸಲಿ’ ಎಂದು ಹೇಳಿ ಆ ಉಪಕರಣವನ್ನು ಮರಳಿ ಕೊಟ್ಟರು. ಆಗ ಪ.ಪೂ. ಡಾಕ್ಟರರು ಎಲ್ಲವನ್ನೂ ಸಾಧಕರಿಗಾಗಿಯೇ ಮಾಡುತ್ತಾರೆ, ತಮಗಾಗಿ ಏನೂ ಮಾಡುವುದಿಲ್ಲ. ಅವರ ಬಳಿ ಇರುವ ಎಲ್ಲವನ್ನೂ, ಅವರು ಸಾಧಕರಿಗಾಗಿಯೇ ಕೊಡುತ್ತಾರೆ ಎಂದು ಗಮನಕ್ಕೆ ಬಂತು.

೩. ‘ಆಜ್ಞಾಪಾಲನೆ ಹೇಗೆ ಮಾಡುವುದು ?’, ಎಂಬುದನ್ನು ಸ್ವತಃ ಕೃತಿಯಿಂದ ಕಲಿಸುವುದು
ಒಂದು ದಿನ ಪ.ಪೂ. ಡಾಕ್ಟರರು ಮಾಲೀಶು ಆದ ನಂತರ ಸ್ನಾನ ಮಾಡಲು ಸ್ನಾನಗೃಹಕ್ಕೆ ಹೋದರು; ಆದರೆ ಅವರು ತಕ್ಷಣ ಮರಳಿ ಹೊರಗೆ ಬಂದು ನಿಮಿಷ್ ಅಣ್ಣನವರಲ್ಲಿ, (ಶ್ರೀ. ನಿಮಿಷ್ ಮ್ಹಾತ್ರೆ) ‘ಸ್ವಲ್ಪ ಸಮಯ ಕಾಯಬೇಕೇ ಅಥವಾ ಕೂಡಲೇ ಸ್ನಾನ ಮಾಡಬಹುದೇ ?’ ಎಂದು ಕೇಳಿದರು. ಆಗ ನಿಮಿಷ್ ಅಣ್ಣನವರು, ಕೂಡಲೇ ಸ್ನಾನ ಮಾಡಬಹುದು, ಎಂದು ಹೇಳಿದರು. ಆಗ ಪ.ಪೂ. ಡಾಕ್ಟರರು, ‘ಆಜ್ಞಾಪಾಲನೆ ! ನಾನು ಕೂಡಲೇ ಸ್ನಾನಕ್ಕೆ ಹೋಗುತ್ತೇನೆ’ ಎಂದರು. ಸೇವೆ ಮಾಡುವಾಗ, ಸಹ ಸಾಧಕರಿಗೆ ಕೇಳಿ ಸೇವೆ ಮಾಡಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ, ನನ್ನ ಮನಸ್ಸಿನ ಸಂಘರ್ಷವಾಗುತ್ತಿತ್ತು. ಇಲ್ಲಿ ಮಾತ್ರ ಪ.ಪೂ. ಡಾಕ್ಟರರು ಸಾಕ್ಷಾತ್ ಭಗವಂತನೇ ಆಗಿದ್ದಾರೆ. ಹಾಗಿದ್ದರೂ ಅವರು ಸಹ ಪ್ರತಿಯೊಂದು ಮಾತನ್ನು ಕೇಳಿ ಮಾಡುತ್ತಾರೆ ಮತ್ತು ಆಜ್ಞಾಪಾಲನೆಯನ್ನೂ ಮಾಡುತ್ತಾರೆ.
೪. ಮನಸ್ಸಿನಲ್ಲಿ ಬರುವ ವಿಚಾರವನ್ನು ತಕ್ಷಣ ಬರೆದಿಡುವುದು
ಪ.ಪೂ. ಡಾಕ್ಟರರು ಮನಸ್ಸಿನಲ್ಲಿ ಬರುವ ವಿಚಾರವನ್ನು ತಕ್ಷಣ ಬರೆದಿಡುತ್ತಾರೆ. ಒಮ್ಮೆ ಮಾಲೀಶು ಮಾಡುವಾಗ ಅವರ ಮನಸ್ಸಿನಲ್ಲಿ ಒಂದು ವಿಚಾರ ಬಂತು, ಆಗ ಅವರು ತಕ್ಷಣ ಎದ್ದು ಅದನ್ನು ಬರೆದಿಟ್ಟರು. ಅನಂತರ ಅವರು ಮಾಲೀಶು ಮಾಡಿಸಿಕೊಳ್ಳಲು ಮಲಗಿದರು. ವೈಯಕ್ತಿಕ ಕೃತಿಗಳನ್ನು ಮಾಡುವಾಗಲು ಸಹ ಅವರ ಮನಸ್ಸಿನಲ್ಲಿ ಬರುವ ವಿಚಾರವನ್ನು ಅವರು ತಕ್ಷಣ ಬರೆದಿಡುತ್ತಾರೆ. ನಂತರವೇ ಕೆಲಸದ ಕಡೆಗೆ ಗಮನ ನೀಡುತ್ತಾರೆ.
೫. ಮುಂದೆ ಆಪತ್ಕಾಲದಲ್ಲಿ ‘ದಿಂಬು ಸಿಗುವುದೋ ಇಲ್ಲವೋ?’ ಎಂಬುದು 
ಹೇಳಲು ಆಗುವುದಿಲ್ಲವೆಂದು ದಿಂಬು ತೆಗೆದುಕೊಳ್ಳದೇ ಮಾಲೀಶು ಮಾಡಿಕೊಳ್ಳಲು ಮಲಗುವುದು
ಪ.ಪೂ. ಡಾಕ್ಟರರು ಮಾಲೀಶು ಮಾಡಿಸಿಕೊಳ್ಳುವಾಗ ದಿಂಬು ಬಳಸುತ್ತಾರೆ. ಆ ದಿನ ಅವರು ದಿಂಬು ತೆಗೆದುಕೊಳ್ಳದೇ ಮಲಗಿದರು ಮತ್ತು ‘ಈಗ ನಾನು ಮಾಲೀಶು ಮಾಡಿಕೊಳ್ಳಲು ದಿಂಬನ್ನು ತೆಗೆದುಕೊಳ್ಳದೇ ಮಲಗಲು ಪ್ರಯತ್ನಿಸುತ್ತೇನೆ; ಏಕೆಂದರೆ ಮುಂದೆ ಆಪತ್ಕಾಲ ಬರಲಿದೆ. ಆಗ ದಿಂಬು ಸಿಗುವುದೋ ಇಲ್ಲವೋ ಎಂಬುದು ಹೇಳಲು ಬರುವುದಿಲ್ಲ. ಆದುದರಿಂದ ನಾನು ಈಗಿನಿಂದಲೇ ಅಭ್ಯಾಸ ಮಾಡುತ್ತಿದ್ದೇನೆ’ ಎಂದರು.
೬. ಸತತ ಕಲಿಯುವ ಸ್ಥಿತಿಯಲ್ಲಿರುವ ಪ.ಪೂ. ಡಾಕ್ಟರರು !
ಪ.ಪೂ. ಡಾಕ್ಟರರು ಸತತ ಕಲಿಯುವ ಸ್ಥಿತಿಯಲ್ಲಿರುತ್ತಾರೆ. ಅವರೇ ನನಗೆ ಮಾಲೀಶು ಹೇಗೆ ಮಾಡುವುದು, ಎಂಬುದನ್ನು ಕಲಿಸಿಕೊಟ್ಟರು. ಆದರೆ ಅವರು, ‘ಮಾಲೀಶು ಹೇಗೆ ಮಾಡುವುದು’, ಎಂಬುದು ನನಗೆ ಈಗ ತಿಳಿಯಿತು. ನಾವು ಹೀಗೆಯೇ ಕಲಿಯುತ್ತಾ ಮುಂದೆ ಹೋಗಲಿಕ್ಕಿದೆ’ ಎಂದರು. ಪ.ಪೂ. ಗುರುಗಳ ಕೃಪೆಯಿಂದ ನನಗೆ ಕಲಿಯಲು ಸಿಕ್ಕಿತು. ಇದಕ್ಕಾಗಿ ನಾನು ಅವರ ಚರಣಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.’- ಶ್ರೀ. ರೂಪೇಶ ಗೋಕರ್ಣ, ಸನಾತನ ಆಶ್ರಮ, ರಾಮನಾಥಿ, ಗೋವಾ.( ೨೨.೪.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ.ಪೂ. ಡಾಕ್ಟರರ ಸೇವೆಯಲ್ಲಿರುವಾಗ ಶ್ರೀ. ರೂಪೇಶ ಗೋಕರ್ಣ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು