ಹಿಂದೂ ಧರ್ಮದ ಪುನರುತ್ಥಾನ ಮತ್ತು ರಾಷ್ಟ್ರದ ನವನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಸನಾತನ ಸಂಸ್ಥೆ !

. ಸನಾತನದ ಸ್ಥಾಪನೆ ಮತ್ತು ಉದ್ದೇಶ
.ಪೂ. ಡಾ. ಜಯಂತ ಬಾಳಾಜಿ ಆಠವಲೆ ಇವರು ತಮ್ಮ ಸದ್ಗುರು ಪ.ಪೂ. ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಪರಿಚಯಿಸುವುದು, ಸಾಧಕರಿಗೆ ವೈಯಕ್ತಿಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡುವುದು ಮತ್ತು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಮೂಲಕ ಧರ್ಮಾಧಾರಿತ ಸುರಾಜ್ಯವನ್ನು (ಪ್ರತಿಯೊಂದು ಜೀವಿಯ ಆಧ್ಯಾತ್ಮಿಕ ಉನ್ನತಿಗೆ ಸಹಾಯಕವಾಗಿರುವ ರಾಜ್ಯ) ಸ್ಥಾಪಿಸುವುದು, ಇದೇ ಸಂಸ್ಥೆಯ ಕಾರ್ಯದ ಮುಖ್ಯ ಉದ್ದೇಶವಾಗಿದೆ.

. ಸನಾತನ ಸಂಸ್ಥೆಯ ಹೆಸರಿನ ಅರ್ಥ
ನಿತ್ಯ ನೂತನಃ ಸನಾತನಃ ’ ಎಂದರೆ ಯಾವುದು ನಿತ್ಯ ನೂತನವಾಗಿರುತ್ತದೆಯೋ ಚೈತನ್ಯಮಯವಾಗಿ ರುತ್ತದೆಯೋ, ಎಂದಿಗೂ ಹಳೆಯದಾಗುವುದಿಲ್ಲವೋ, ಅದೆಂದರೆ ಸನಾತನ ! ಸನಾತನ ಸಂಸ್ಥೆ ಎಂದರೆ ಜಗತ್ತಿನಾದ್ಯಂತ ಸರ್ವಧರ್ಮ ಮತ್ತು ಪಂಥಗಳ ಸಾಧಕರ ಆಧ್ಯಾತ್ಮಿಕ ಉನ್ನತಿಗಾಗಿ ಕಾರ್ಯನಿರತ ವಾಗಿರುವ ಚೈತನ್ಯಮಯ ಸಂಸ್ಥೆ ! ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ‘ಸನಾತನ’ ಈ ಶಬ್ದವನ್ನು ಅತ್ಯಂತ ತಿರಸ್ಕಾರದಿಂದ ಉಪಯೋಗಿಸಿ, ಅದಕ್ಕೆ ಸಾಂಪ್ರದಾಯಿಕ, ಬದಲಾವಣೆಯನ್ನು ಸ್ವೀಕರಿಸುವ ಸಿದ್ಧತೆಯಿಲ್ಲದಿರುವ ಶಬ್ದ ಎನ್ನುವ ಅರ್ಥ ವನ್ನು ನೀಡಲಾಗುತ್ತದೆ. ‘ಸನಾತನ’ ಈ ಶಬ್ದಕ್ಕೆ ಈ ರೀತಿ ಅರ್ಥ ನೀಡುವುದು ಅಯೋಗ್ಯವಾಗಿದ್ದು, ಅದು ಆತ್ಮವಂಚನೆಯಾಗಿದೆ !
. ಸನಾತನದ ಬೋಧಚಿಹ್ನೆ
ಶ್ರೀಗುರುಗಳಿಗೆ ವಂದಿಸುವ ಶಿಷ್ಯ ಇದು ಸನಾತನದ ಬೋಧಚಿಹ್ನೆಯಾಗಿದೆ. ‘ಗುರುಕೃಪಾ ಹಿ ಕೇವಲಂ ಶಿಷ್ಯಪರಮ ಮಂಗಲಮ್ ’ ಅಂದರೆ ‘ಶಿಷ್ಯನ ಪರಮ ಮಂಗಲ, ಅಂದರೆ ಮೋಕ್ಷಪ್ರಾಪ್ತಿಯು ಕೇವಲ ಗುರುಕೃಪೆಯಿಂದಲೇ ಸಾಧ್ಯವಾಗುವುದು.’

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಧರ್ಮದ ಪುನರುತ್ಥಾನ ಮತ್ತು ರಾಷ್ಟ್ರದ ನವನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಸನಾತನ ಸಂಸ್ಥೆ !