ಪ್ರಗತಿಪರರೇ, ಹಿಂದೂಗಳ ಧ್ವನಿ ಅಡಗಿಸಲು ಪ್ರಯತ್ನಿಸಿದರೆ ತೀವ್ರ ಪ್ರತಿಕ್ರಿಯೆ ಏಳುವುದು ! - ನ್ಯಾಯವಾದಿ ಸಂಜೀವ ಪುನಾಳೆಕರ, ಹಿಂದೂ ವಿಧಿಜ್ಞ ಪರಿಷತ್ತು

ನ್ಯಾಯವಾದಿ ಪುನಾಳೆಕರರ ಸನ್ಮಾನ ನಡೆಯುತ್ತಿರುವಾಗ ಹಿಂದುತ್ವನಿಷ್ಠರು ಸ್ವಯಂಸ್ಫೂರ್ತಿಯಿಂದ ಎದ್ದು ನಿಂತ ಕ್ಷಣ !
ಸನಾತನ ಸಂಸ್ಥೆಯನ್ನು ಬೆಂಬಲಿಸಿ ಆಯೋಜಿಸಿದ್ದ ಹಿಂದೂಐಕ್ಯತಾ ಸಮಾವೇಶದ 
ಮಾಧ್ಯಮದಿಂದ ೧೫೦ ಹಿಂದುತ್ವನಿಷ್ಠ ಸಂಘಟನೆಗಳ ಘಂಟಾಘೋಷ!
ಕೊಲ್ಹಾಪೂರ : ಇಂದಿನ ಸಭೆಯು ಕೌರವ-ಪಾಂಡವರ ಕಾಲದ ಯುದ್ಧ ಪ್ರಾರಂಭವಾಗುವ ಮೊದಲು ದ್ರುಪದ ರಾಜನು ಕರೆದಿದ್ದ ಸಭೆಯಂತಿದೆ. ಇದು ಕುರುಕ್ಷೇತ್ರವಾಗಿದೆ. ಡಾ. ಧಾಬೋಳಕರ, ಕಾ. ಪಾನ್ಸರೆ ಹಾಗೂ ಕಲ್ಬುರ್ಗಿ ಇವರು ಧರ್ಮದ ವಿರುದ್ಧ ಸಾಕಷ್ಟು ಕೆಂಡ ಕಾರಿದ್ದಾರೆ. ಸಮಾಜ ಸೇವೆ ಮಾಡುತ್ತಿದ್ದ ಡಾ. ವೀರೇಂದ್ರ ಸಿಂಹ ತಾವಡೆಯಂತಹ ಸನಾತನದ ಅಮಾಯಕ ಸಾಧಕನನ್ನು ಬಂಧಿಸಲಾಗಿದೆ. ಇವರು ಪ್ರಗತಿಪರರಲ್ಲ, ಭೋಗವಾದಿಗಳಾಗಿದ್ದಾರೆ. ಇದು ಸಾಮಾಜಿಕ ಯುದ್ಧವೇ ಆಗಿದೆ. ಡಾ. ಧಾಬೋಳಕರರ ಸಂಘಟನೆಯ ಅನೇಕ ಭ್ರಷ್ಟಾಚಾರಗಳನ್ನು ನಾವು ಬಯಲಿಗೆಳದಿದ್ದೇವೆ. ಈ ಕಾರಣದಿಂದಲೇ ಸನಾತನ ಸಂಸ್ಥೆಯ ಮೇಲೆ ಪ್ರಗತಿಪರ ಸಂಘಟನೆಗಳು ಆರೋಪ ವನ್ನು ಹೊರಿಸಿ, ಸಂಸ್ಥೆಯನ್ನು ನಿಷೇಧಿಸುವಂತೆ ಮನವಿ ಸಲ್ಲಿಸುತ್ತಿವೆ.
ಪ್ರಗತಿಪರರು ಸನಾತನ ಸಂಸ್ಥೆಯನ್ನು ಪೀಡಿಸುವುದನ್ನು ಸ್ಥಗಿತಗೊಳಿಸದಿದ್ದರೆ, ಹಿಂದೂಗಳು ಈಗ ಸುಮ್ಮನೇ ಕುಳಿತುಕೊಳ್ಳುವುದಿಲ್ಲ, ಪ್ರಗತಿಪರರೇ, ಹಿಂದೂಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದಲ್ಲಿ, ಬೃಹತ್ ಪ್ರತಿಭಟನೆಯನ್ನು ಎದುರಿಸಬೇಕಾಗಬಹುದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಯಾದ ನ್ಯಾಯವಾದಿ ಶ್ರೀ. ಸಂಜೀವ ಪುನಾಳೆಕರರು ಎಚ್ಚರಿಕೆ ಯನ್ನು ನೀಡಿದರು. ಅವರು ಕೊಲ್ಹಾಪುರದಲ್ಲಿ ಜರುಗಿದ ಸಮಾವೇಶದಲ್ಲಿ ಮಾರ್ಗದರ್ಶನ ಮಾಡಿದರು. ಹಿಂದೂ ಐಕ್ಯ ಸಮಾವೇಶವು ಆಗಸ್ಟ್ ೪ ರಂದು ಕರವೀರನಗರದ ರಾಜಾರಾಮಪುರಿಯ ಇಂದ್ರಪ್ರಸ್ಥ ಸಾಂಸ್ಕೃತಿಕ ಭವನದಲ್ಲಿ ಜರುಗಿತು. ಇಂದಿನಿಂದ ನಾವು ಒಂದು ಹೊಸ ಘೋಷಣೆಯನ್ನು ಮಾಡುವವರಿದ್ದೇವೆ, ಅದುವೇ ನಾವೆಲ್ಲರೂ ಸನಾತನ, ಸನಾತನ, ಸನಾತನ ! ಎಂದು ನ್ಯಾಯವಾದಿ ಶ್ರೀ. ಸಂಜೀವ ಪುನಾಳೆಕರರು ಹಿಂದೂ ಐಕ್ಯ ಸಮಾವೇಶದಲ್ಲಿ ನುಡಿದಾಗ ಸಭಾಗೃಹದಲ್ಲಿರುವ ಎಲ್ಲ ಹಿಂದುತ್ವನಿಷ್ಠರು ಅದಕ್ಕೆ ಉತ್ಸಾಹದಿಂದ ಸ್ಪಂದಿಸಿದರು ಹಾಗೂ ಸಮಾವೇಶ ಮುಗಿಯುವ ವರೆಗೆ ಎಲ್ಲ ಹಿಂದುತ್ವನಿಷ್ಠರು ಇದನ್ನು ಘೋಷಿಸುತ್ತಿದ್ದರು.
ಸಂತರ ವಂದನೀಯ ಉಪಸ್ಥಿತಿ !
ಪೂ. ಈಶ್ವರಬುವಾ ರಾಮದಾಸಿ ಉರ್ಫ ದಾದಾ ಮಹಾರಾಜರು, ಸನಾತನದ ಸಂತರಾದ ಸದ್ಗುರು (ಕು.) ಸ್ವಾತಿ ಖಾಡ್ಯೆ
ನ್ಯಾಯವಾದಿ ಶ್ರೀ. ಸಂಜೀವ ಪುನಾಳೆಕರರ ವಾಗ್ಬಾಣಗಳು !
೧. ಪ್ರಗತಿಪರರು ಈ ದೇಶದಲ್ಲಿ ಹೊಸ ಪರಂಪರೆಯನ್ನು ಹುಟ್ಟು ಹಾಕಲು ಪ್ರಯತ್ನಿಸು ತ್ತಿದ್ದಾರೆ. ಇಂದಿನ ಪ್ರಗತಿ ಪರರು ಪ್ರಗತಿಪರ ಎಂಬ ವ್ಯಾಖ್ಯಾನಕ್ಕೆ ಕಪ್ಪು ಚುಕ್ಕೆಯಾಗಿದ್ದಾರೆ. ಅವರು ಪ್ರಗತಿಪರರಾಗಿರದೇ ಭೌತಿಕವಾದಿಗಳಾಗಿದ್ದಾರೆ. ಇಂದು ಪ್ರಗತಿಪರ ಎನ್ನುವುದು ಒಂದು ಬೈಗುಳವಾಗಿದೆ.
೨. ಮುಷ್ಠಿಯಷ್ಟಿರುವ ಪ್ರಗತಿಪರರು ಸರಕಾರವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟು ಸನಾತನವನ್ನು ನಿಷೇಧಿಸಲು ನೋಡುತ್ತಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರಗತಿಪರರೇ, ಹಿಂದೂಗಳ ಧ್ವನಿ ಅಡಗಿಸಲು ಪ್ರಯತ್ನಿಸಿದರೆ ತೀವ್ರ ಪ್ರತಿಕ್ರಿಯೆ ಏಳುವುದು ! - ನ್ಯಾಯವಾದಿ ಸಂಜೀವ ಪುನಾಳೆಕರ, ಹಿಂದೂ ವಿಧಿಜ್ಞ ಪರಿಷತ್ತು