ರಕ್ಷಾಬಂಧನದ ನಿಮಿತ್ತ ಎಲ್ಲೆಡೆಯ ಹಿಂದೂ ಬಾಂಧವರಿಗೆ ಕರೆ !

ರಕ್ಷಾಬಂಧನದ ನಿಮಿತ್ತ ಸಹೋದರಿಗೆ ಅಶಾಶ್ವತ
ಉಡುಗೊರೆ ನೀಡುವ ಬದಲು ಶಾಶ್ವತ ತತ್ತ್ವದ ಪ್ರಸಾರ ಮಾಡುವ ನಿಯತಕಾಲಿಕೆ
ಸನಾತನ ಪ್ರಭಾತದ ವಾಚಕರನ್ನಾಗಿಸಿ ಮತ್ತು ಜ್ಞಾನಾಮೃತರೂಪೀ ಆರತಿಯನ್ನು ಬೆಳಗಿಸಿ!
೧. ರಕ್ಷಾಬಂಧನದ ಮಹತ್ವ !
ಶ್ರಾವಣ ಹುಣ್ಣಿಮೆ, ಎಂದರೆ ರಕ್ಷಾಬಂಧನ ! ಈ ವರ್ಷ ೧೮.೮.೨೦೧೬ ರಂದು ರಕ್ಷಾಬಂಧನವಿದೆ. ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ವಿಶೇಷ ಮಹತ್ವವಿದೆ. ಸಹೋದರಿಯು ಸಹೋದರನು ತನ್ನ ರಕ್ಷಣೆ ಮಾಡಬೇಕೆಂದು ಈ ದಿನದಂದು ಅವನಿಗೆ ಆರತಿ ಬೆಳಗುತ್ತಾಳೆ ಮತ್ತು ರಾಖಿ ಕಟ್ಟುತ್ತಾಳೆ. ಸಹೋದರಿ ಆರತಿ ಬೆಳಗಿದ್ದಕ್ಕಾಗಿ ಸಹೋದರನು ಹಣ ಅಥವಾ ಉಪಯುಕ್ತ ವಸ್ತುವನ್ನು ನೀಡುತ್ತಾನೆ.
೨. ಮುಂಬರುವ ಕಾಲವನ್ನು ಧೈರ್ಯದಿಂದ ಎದುರಿಸಲು
ತಮ್ಮ ಸಹೋದರಿಯನ್ನು ಸಕ್ಷಮಗೊಳಿಸಲು ಅವಳನ್ನು ಸನಾತನ ಪ್ರಭಾತದ ವಾಚಕಳನ್ನಾಗಿಸಿ !
ಸದ್ಯದ ಸ್ಥಿತಿಯಲ್ಲಿ ಸಾಮಾಜಿಕ ಪರಿಸ್ಥಿತಿ ಬಿಕ್ಕಟ್ಟಿನಲ್ಲಿರುವುದರಿಂದ ಸ್ತ್ರೀಯರು ನಾನಾವಿಧದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ.ಈ ಸಮಸ್ಯೆಗಳ ಬಗ್ಗೆ ಅವರಿಗೆ ಕಲ್ಪನೆ ನೀಡಿ ಜಾಗರೂಕಗೊಳಿಸುವುದು, ಕಾಲದ ಆವಶ್ಯಕತೆಯಾಗಿದೆ. ಇಂದು ಸಮಾಜೋಪಯೋಗಿ ಕಾರ್ಯ ಮಾಡಲು ನಿಯತಕಾಲಿಕೆ ಸನಾತನ ಪ್ರಭಾತವು ಅವಿರತವಾಗಿ ಕಾರ್ಯ ಮಾಡುತ್ತಿದೆ.
ಸ್ತ್ರೀಯರಲ್ಲಿ ಜಾಗರೂಕತೆ ಹೆಚ್ಚಿಸುವ, ಅವರನ್ನು ಸ್ವಸಂರಕ್ಷಣೆ ಗಾಗಿ ಉದ್ಯುಕ್ತಗೊಳಿಸುವ, ಕಠಿಣ ಪ್ರಸಂಗವನ್ನು ಎದುರಿಸಲು ಸಾಧನೆಯ ಆಧಾರ ನೀಡುವ ಲೇಖನಗಳನ್ನು ಈ ನಿಯತಕಾಲಿಕೆಯಲ್ಲಿ ನಿಯಮಿತವಾಗಿ ಪ್ರಸಿದ್ಧಗೊಳಿಸಲಾಗುತ್ತದೆ. ಆದ್ದರಿಂದ ಯಾವುದೇ ಕಠಿಣ ಪರಿಸ್ಥಿತಿ ಯನ್ನು ಎದುರಿಸುವ ಮನೋಧೈರ್ಯ ಅವರಲ್ಲಿ ನಿರ್ಮಾಣವಾಗುತ್ತದೆ. ಹೆಚ್ಚುತ್ತಿರುವ ಅಸುರಕ್ಷಿತತೆಯಿಂದಾಗಿ ಭಯದ ನೆರಳಿನಲ್ಲಿ ಓಡಾಡುವ ತಮ್ಮ ಪ್ರೀತಿಯ ಸಹೋದರಿಗೆ ಸನಾತನ ಪ್ರಭಾತ ನಿಯತಕಾಲಿಕೆಯ ಚಂದಾದಾರರನ್ನಾಗಿಸಿ ಅದರಲ್ಲಿನ ಅಮೂಲ್ಯ ಮಾಹಿತಿಯನ್ನು ಓದಲು ಪ್ರವೃತ್ತಗೊಳಿಸುವುದಕ್ಕಿಂತ ಬೇರೆ ಶ್ರೇಷ್ಠ ಆರತಿ ಯಾವುದಿರಬಹುದು ?
- (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೫.೮.೨೦೧೬)
ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ತಮ್ಮ 
ಸಹೋದರಿಯನ್ನು ವಾಚಕರನ್ನಾಗಿಸಲು ಇಚ್ಛಿಸಿದರೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು
ದೈನಿಕ ವಿತರಣೆಗಾಗಿ ನಿಯೋಜಿಸಲಾಗಿರುವ ಸ್ಥಳದಲ್ಲಿ ಪತ್ರಿಕೆ ಆರಂಭಿಸಲು ಪ್ರಾಧಾನ್ಯತೆ ನೀಡಬೇಕು. ಆ ರೀತಿ ಸಾಧ್ಯವಿಲ್ಲದಿದ್ದರೆ ಇತರ ಭಾಷೆಗಳ ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸಿಕ ಸನಾತನ ಪ್ರಭಾತವನ್ನು ಆರಂಭಿಸಬಹುದು. ನಿಯತಕಾಲಿಕೆ ವಿತರಣೆಗಾಗಿ ವ್ಯವಸ್ಥೆ ಇಲ್ಲದಿದ್ದರೆ ಹಿತಚಿಂತಕರಿಗೆ ಅಂಚೆಯ ಮೂಲಕ ಸಂಚಿಕೆ ಯನ್ನು ಕಳುಹಿಸಬಹುದು. ನಿಯತಕಾಲಿಕೆ ಆರಂಭಿಸುವಾಗ ಅವರ ಭಾಷೆಯ ವಿಚಾರ ಮಾಡುವುದು ಅಪೇಕ್ಷಿತವಿದೆ.

ಸನಾತನ ಪ್ರಭಾತದ ನೂತನ ಜಾಲತಾಣದಿಂದ ವಾಚಕರಾಗಲು ಇಚ್ಛೆಯಿರುವ ಜಿಜ್ಞಾಸುಗಳು ಚಂದಾದಾರರಾಗಬಹುದು ಹಾಗೂ ವಾಚಕರು ಅವರ ಸಂಚಿಕೆಯನ್ನು ನವೀಕರಣಗೊಳಿಸಬಹುದು. ಈ ಆನ್‌ಲೈನ್ ಸೌಲಭ್ಯದ ಲಾಭ ಪಡೆಯಲು ಅವರನ್ನು ಉದ್ಯುಕ್ತಗೊಳಿಸಬೇಕು. ಆನ್‌ಲೈನ್ ಚಂದಾ ಅರ್ಜಿ ತುಂಬಿಸಲು ಸಾಧ್ಯವಿಲ್ಲದಿದ್ದರೆ ಸ್ಥಳೀಯ ಸಾಧಕರು ಅವರನ್ನು ಸಂಪರ್ಕಿಸಬೇಕು. ಈ ಸೌಲಭ್ಯ ದೈನಿಕ ಬಿಟ್ಟು ಇತರ ನಿಯತಕಾಲಿಕೆಗಳಿಗಾಗಿ ಇದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಕ್ಷಾಬಂಧನದ ನಿಮಿತ್ತ ಎಲ್ಲೆಡೆಯ ಹಿಂದೂ ಬಾಂಧವರಿಗೆ ಕರೆ !