ವಿದ್ಯುತ್ ದೀಪಾಲಂಕಾರ ಬೇಡ, ಎಣ್ಣೆ-ತುಪ್ಪದ ದೀಪಗಳನ್ನು ಹಚ್ಚಿರಿ !

ಇತ್ತೀಚಿಗೆ ಹಬ್ಬಹರಿದಿನಗಳಲ್ಲಿ ಮಂಗಲದ ಪ್ರತೀಕವೆಂದು ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ಎಣ್ಣೆ-ತುಪ್ಪದ ದೀಪಗಳಿಂದ ಅಲಂಕಾರವನ್ನು ಮಾಡಲಾಗುತ್ತಿತ್ತು. ವಿದ್ಯುತ್ ಅಲಂಕಾರ ಆಕರ್ಷಕವಾಗಿದೆ; ಆದರೆ ಸಾತ್ತ್ವಿಕತೆಯ ದೃಷ್ಟಿಯಿಂದ ಎಣ್ಣೆ-ತುಪ್ಪದ ದೀಪಗಳಿಂದ ಮಾಡಿದ ಅಲಂಕಾರವೇ ಹೆಚ್ಚು ಲಾಭದಾಯಕ ಮತ್ತು ಕಣ್ಣುಗಳಿಗೆ ಆನಂದದಾಯಕವಾಗಿದೆ. ಏಕೆಂದರೆ ವಿದ್ಯುತ್ ದೀಪಗಳಲ್ಲಿ ಎಣ್ಣೆ-ತುಪ್ಪದ ದೀಪಗಳಿಗಿಂತ ರಜ-ತಮ ಹೆಚ್ಚಿರುತ್ತದೆ ಮತ್ತು ಅದು ವಾತಾವರಣದಲ್ಲಿ ಪಸರಿಸುತ್ತದೆ. ಆದ್ದರಿಂದ ಧಾರ್ಮಿಕ ವಿಧಿಗಳ ಸ್ಥಳಗಳಲ್ಲಿ ವಾತಾವರಣ ದಲ್ಲಿ ಸಾತ್ತ್ವಿಕತೆ ಉಳಿಯಬೇಕೆಂದು ಎಣ್ಣೆ-ತುಪ್ಪದ ದೀಪಗಳನ್ನು ಹಚ್ಚಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಿದ್ಯುತ್ ದೀಪಾಲಂಕಾರ ಬೇಡ, ಎಣ್ಣೆ-ತುಪ್ಪದ ದೀಪಗಳನ್ನು ಹಚ್ಚಿರಿ !