ಮೆಕ್ಸಿಕೋದಲ್ಲಿ ಮತಾಂಧರಿಂದ ಹಿಂದೂಗಳ ದೇವಸ್ಥಾನ ಧ್ವಂಸ : ಹಿಂದೂಗಳಿಂದ ಪ್ರತಿಭಟನೆ !

ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತ !
ನೇವಾಡಾ (ಅಮೇರಿಕಾ) : ಮೆಕ್ಸಿಕೋದ ಹಿದಾಲ್ಗೋದಲ್ಲಿ ಹಿಂದೂಗಳ ಒಂದು ದೇವಸ್ಥಾನ ವನ್ನು ಕೆಲವು ಮತಾಂಧರು ಧ್ವಂಸ ಮಾಡಿದರು. ಮತಾಂಧರು ದೇವಸ್ಥಾನದ ಕಟ್ಟಡವನ್ನು ಕೆಡವಿದರು ಹಾಗೂ ದೇವಸ್ಥಾನದ ಮೂರ್ತಿ ಮತ್ತು ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದರು. ಈ ಬಗ್ಗೆ ಮೆಕ್ಸಿಕೋದ ಶಾಪಿಂಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲುಯಿಸ್ ಪೆರೆಜ್ ಲ್ಯೂಗೋ ಇವರು, ಈ ಆಕ್ರಮಣವನ್ನು ಕೆಲವು ಮತಾಂಧ ಜೆಹೋವಾ ವಿಟ್‌ನೆಸೆಸ್ (ಏಸು ಕ್ರೈಸ್ತನನ್ನು ಈಶ್ವರನೇ ನಿರ್ಮಿ ಸಿದ್ದು ಇತರ ಎಲ್ಲ ಜೀವಸೃಷ್ಟಿಯನ್ನು ಏಸು ನಿರ್ಮಿಸಿ ದ್ದಾನೆಂದು ನಂಬುವ ಕ್ರೈಸ್ತರು) ಇವರು ಮಾಡಿದ್ದಾರೆ. ಪ್ರಾಧ್ಯಾಪಕ ಲುಯಿಸ್ ಪೆರೆಜ್ ಲ್ಯೂಗೋ ಇವರ ಈ ಆರೋಪವನ್ನು ಮೆಕ್ಸಿಕೋದ ಕ್ರೈಸ್ತ ಸಮಾಜದ ವಕ್ತಾರರು ತಳ್ಳಿ ಹಾಕಿದ್ದಾರೆ. ಅಮೇರಿಕಾದ ಹಿಂದೂ ಗಳು ದೇವಸ್ಥಾನದ ಮೇಲಿನ ಆಕ್ರಮಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಮೆಕ್ಸಿಕೋದ ರಾಷ್ಟ್ರಾಧ್ಯಕ್ಷ ಮತ್ತು ರಾಜ್ಯಪಾಲರು ಈ ಪ್ರಕರಣದಲ್ಲಿ ಗಮನಹರಿಸಿ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಹಿಂದೂಗಳು ವಿನಂತಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮೆಕ್ಸಿಕೋದಲ್ಲಿ ಮತಾಂಧರಿಂದ ಹಿಂದೂಗಳ ದೇವಸ್ಥಾನ ಧ್ವಂಸ : ಹಿಂದೂಗಳಿಂದ ಪ್ರತಿಭಟನೆ !