ಶ್ರೀ ಗಣೇಶನ ಮೂರ್ತಿಯನ್ನು ಕೃತಕ ಕೊಳದಲ್ಲಿ ಏಕೆ ವಿಸರ್ಜಿಸಬಾರದು ?

ಪ್ರದೂಷಣೆ ಮುಕ್ತ ವಿಸರ್ಜನೆಯ ಹೆಸರಿನಲ್ಲಿ ಮಹಾಪಾಲಿಕೆಯವರು ಅಲ್ಲಲ್ಲಿ ನೀರಿನ ಕೊಳಗಳನ್ನು ನಿರ್ಮಿಸುತ್ತಾರೆ. ಆ ಕೊಳದಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ವಿಸರ್ಜಿಸುವುದು ಅಯೋಗ್ಯ; ಏಕೆಂದರೆ ಕೃತಕ ಕೊಳದಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಿದಾಗ ಅದು ಕರಗುವ ಮೊದಲೇ ಪಾಲಿಕೆಯ ಸಿಬ್ಬಂದಿಗಳು ಅದನ್ನು ಕೊಳದಿಂದ ಹೊರಗೆ ತೆಗೆದಿಡುತ್ತಾರೆ. ಇದು ಧರ್ಮಬಾಹಿರವಾಗಿದೆ.
ಕೊಳದಲ್ಲಿ ವಿಸರ್ಜಿಸಿದ ಮೂರ್ತಿಯನ್ನು ಪಾಲಿಕೆಯ ಕಸದ ವಾಹನದಲ್ಲಿ ಕೊಂಡೊಯ್ಯುತ್ತಾರೆ ಹಾಗೂ ಗಣೇಶನ ಮೂರ್ತಿಗಳನ್ನು ತೆಗೆದುಕೊಂಡ ಬಳಿಕ ಪಾಲಿಕೆಯು ಕೊಳವನ್ನು ಮುಚ್ಚುವ ಮೊದಲು ಅದರಲ್ಲಿನ ನೀರನ್ನು ಚರಂಡಿಗೆ ಬಿಡುತ್ತಾರೆ. ಇದು ಸಹ ಒಂದು ರೀತಿಯಲ್ಲಿ ಶ್ರೀ ಗಣೇಶನ ವಿಡಂಬನೆಯೇ ಆಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀ ಗಣೇಶನ ಮೂರ್ತಿಯನ್ನು ಕೃತಕ ಕೊಳದಲ್ಲಿ ಏಕೆ ವಿಸರ್ಜಿಸಬಾರದು ?