ರಾಜ್ಯದಲ್ಲಿ ಸರಕಾರೀಕರಣವಾದ ದೇವಸ್ಥಾನದ ವ್ಯಾಪಾರಿ ಸ್ಥಳವನ್ನು ಗುತ್ತಿಗೆಗೆ ನೀಡುವಾಗ ಹಿಂದುಳಿದವರಿಗೆ ಶೇ. ೨೫ ರಷ್ಟು ಮೀಸಲಾತಿ !

ಹಿಂದೂಗಳ ದೇವಸ್ಥಾನದ ಕಾರುಬಾರಿನಲ್ಲಿ ಸರಕಾರದ ಹಸ್ತಕ್ಷೇಪ ಏತಕ್ಕಾಗಿ ?
ಸರಕಾರ ಇತರ ಧರ್ಮೀಯರ ಧಾರ್ಮಿಕ ಸ್ಥಳಗಳ ಸರಕಾರೀಕರಣ ಮಾಡಿ
ಹೀಗೆ ಹಂಚಿಕೆ ಮಾಡುವಾಗ ಎಂದಾದರೂ ಮೀಸಲಾತಿ ಕೊಡುವುದೇ ?
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರವು ರಾಜ್ಯದ ದೇವಸ್ಥಾನದ ವ್ಯಾಪಾರಿ ಸ್ಥಳವನ್ನು ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡುವಾಗ ಅದರಲ್ಲಿ ಪರಿಶಿಷ್ಟ ಜಾತಿಗಾಗಿ ಶೇ. ೨೦ ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕಾಗಿ ಶೇ. ೫ ರಷ್ಟು ಮೀಸಲಾತಿ ಕೊಡುವ ನಿರ್ಧಾರ ಮಾಡಿದ್ದಾರೆ. ರಾಜ್ಯ ಸರಕಾರದ ಧಾರ್ಮಿಕದತ್ತಿ ಖಾತೆಯ ಅಂತರ್ಗತ ೩೪ ಸಾವಿರ ೪೫೩ ದೇವಸ್ಥಾನಗಳಿವೆ. ಆರಂಭದಲ್ಲಿ ಅವುಗಳ ಪೈಕಿ ೮ ದೇವಸ್ಥಾನಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸ ಲಾಗುವುದು.
ದೇವಸ್ಥಾನದ ದೇವಸ್ಥಾನದ ಒಡೆತನದ ಸ್ಥಳವನ್ನು ವಿವಿಧ ವ್ಯಾಪಾರಿಗಳಿಗಾಗಿ ಬಾಡಿಗೆಗೆ ನೀಡಲಾಗು ತ್ತದೆ. ಅದರಲ್ಲಿ ಶೇ. ೨೫ ರಷ್ಟು ಸ್ಥಾನ ಹಿಂದುಳಿದ ವರ್ಗಗಳಿಗೆ ನೀಡಬೇಕು, ಈ ಬಗ್ಗೆ ನಿಯಮ ಮೊದಲಿನಿಂದಲೇ ಸಿದ್ಧವಿತ್ತು; ಆದರೆ ಕಳೆದ ೮ ವರ್ಷಗಳಿಂದ ಅದರ ಪಾಲನೆಯಾಗಲಿಲ್ಲ. ಏಕೆಂದರೆ ಆ ಸ್ಥಳದ ಬಾಡಿಗೆ ಹಿಂದುಳಿದವರ್ಗದವ ರಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಈ ಬಾಡಿಗೆಯಿಂದ ಬರುವ ಹಣವು ದೇವಸ್ಥಾನದ ಆದಾಯದ ದೊಡ್ಡ ಮೂಲ ವಾಗಿತ್ತು. ಆದರೆ ಈಗ ಕಾಂಗ್ರೆಸ್ ಪಕ್ಷವು ಈ ಅಂಶವನ್ನು ಎತ್ತಿ ಹಿಡಿದಿದ್ದರಿಂದ ಸರಕಾರವು ಧಾರ್ಮಿಕದತ್ತಿ ಇಲಾಖೆಗೆ ಈ ನಿಯಮಗಳನ್ನು ಪಾಲಿಸುವ ಆದೇಶ ನೀಡಿದೆ. ಇವೆಲ್ಲವನ್ನು ೨೦೧೮ ರಲ್ಲಿ ನಡೆ ಯುವ ಚುನಾವಣೆಯನ್ನು ಕಣ್ಣೆದುರು ಇಟ್ಟುಕೊಂಡು ತೆಗೆದುಕೊಳ್ಳಲಾಗಿದೆ ಎನ್ನ ಲಾಗುತ್ತಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಜ್ಯದಲ್ಲಿ ಸರಕಾರೀಕರಣವಾದ ದೇವಸ್ಥಾನದ ವ್ಯಾಪಾರಿ ಸ್ಥಳವನ್ನು ಗುತ್ತಿಗೆಗೆ ನೀಡುವಾಗ ಹಿಂದುಳಿದವರಿಗೆ ಶೇ. ೨೫ ರಷ್ಟು ಮೀಸಲಾತಿ !