ಹಿಂದೂ ಧರ್ಮವನ್ನು ಅವಮಾನಿಸುವ ಮಲಯಾಳಂ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಬೋರ್ಡ್ ನಕಾರ !

ಹಿಂದೂ ಧರ್ಮದ ಅವಮಾನವನ್ನು ತಡೆಯುವ ಸೆನ್ಸಾರ್ ಬೋರ್ಡ್‌ನ ಅಭಿನಂದನೀಯ ನಿರ್ಣಯ
ನವ ದೆಹಲಿ : ನ್ಯೂಯೋರ್ಕ್‌ನಲ್ಲಿನ ಮಲಯಾಳಂ ಚಲನಚಿತ್ರ ನಿರ್ಮಾಪಕ ಜಯನ್ ಚೆರಿಯನ್ ಇವರ ಕಾಬಾಡಿಸ್ಕೆಪ್ಸ್ ಈ ಚಲನಚಿತ್ರದಲ್ಲಿ ಹಿಂದೂ ಧರ್ಮದ ಅವಮಾನ ಮತ್ತು ಅಶ್ಲೀಲತೆ ಇರುವುದರಿಂದ ಅದಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಸೆನ್ಸಾರ್ ಬೋರ್ಡ್ ನಿರಾಕರಿಸಿದೆ. ಈ ಚಲನಚಿತ್ರವು ಸಲಿಂಗ ವ್ಯಕ್ತಿ ಮತ್ತು ಮಹಿಳೆ ಇವರ ಸಂಬಂಧದ ಬಗ್ಗೆ ತಯಾರಿಸಲಾಗಿದೆ. ಸೆನ್ಸಾರ್ ಬೋರ್ಡ್ ಚೆರಿಯನ್ ಇವರಿಗೆ ಈ ವಿಷಯದಲ್ಲಿ ಕಳುಹಿಸಿದ ಪತ್ರದಲ್ಲಿ, ಈ ಚಲನಚಿತ್ರದ ಸಂಪೂರ್ಣ ಪ್ರಸಂಗಗಳು ಹಿಂದೂ ಧರ್ಮಕ್ಕೆ ಅವಮಾನಕಾರಿಯಾಗಿದೆ. ಇದರಲ್ಲಿ ಹಿಂದೂ ಧರ್ಮಕ್ಕೆ ಚೇಷ್ಟೆ ಮಾಡಲಾಗಿದೆ.
ವಿಶೇಷವಾಗಿ ದೇವಿ-ದೇವತೆಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ. ಭಗವಾನ್ ಹನುಮಾನನನ್ನು ಸಲಿಂಗದ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ. ಅದರಲ್ಲಿನ ಒಂದು ಪುಸ್ತಕದ ಶಿರ್ಷಿಕೆಯು ‘ಐ ಆಮ್ ಗೇ’ (ನಾನು ಸಮಲೈಂಗಿಕನಾಗಿದ್ದೇನೆ) ಎಂದಿದೆ. ಚೆರಿಯನ್ ಇವರು ಸೆನ್ಸಾರ್ ಬೋರ್ಡ್‌ನ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಧರ್ಮವನ್ನು ಅವಮಾನಿಸುವ ಮಲಯಾಳಂ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಬೋರ್ಡ್ ನಕಾರ !