ವಿಶೇಷ ಸಂಪಾದಕೀಯ

ಸನಾತನ ಮತ್ತು ಸನಾತನ ಪ್ರಭಾತ !  
೧೯೯೮ ರ ಜಾತ್ಯತೀತ ವಾತಾವರಣದಲ್ಲಿ ಹಿಂದೂವಿರೋಧವು ಹೆಚ್ಚಾಗಿ ಹಿಂದುತ್ವವು ಇಕ್ಕಟ್ಟಿನಲ್ಲಿ ಸಿಲುಕಿತ್ತು. ಆಗ ಕೇವಲ ಹಿಂದುತ್ವನಿಷ್ಠ ವಿಚಾರ ಗಳ ನಿಯತಕಾಲಿಕೆಯನ್ನು ಆರಂಭಿಸುವುದು, ಅದನ್ನು ನಿಯಮಿತವಾಗಿ ಯಶಸ್ವಿಯಾಗಿ ಹಾಗೂ ಧ್ಯೇಯನಿಷ್ಠೆಯಿಂದ ನಡೆಸುವುದು ಒಂದು ಸವಾಲೇ ಆಗಿತ್ತು. ಈಗ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಹಿಂದುತ್ವದ ಚರ್ಚೆ ನಡೆಯುತ್ತಿದೆ, ಅನೇಕ ಸಂಘಟನೆಗಳ ವ್ಯಾಸಪೀಠದಿಂದ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡಲಾಗುತ್ತದೆ; ಆದರೆ ೧೯೯೮ ರಲ್ಲಿಯೇ ಪ್ರಸ್ತುತ ಪ್ರಜಾಪ್ರಭುತ್ವದ ಪರಾಜಯವನ್ನು ಸಮಾಜದ ಮುಂದಿಟ್ಟು ಈಶ್ವರೀ ರಾಜ್ಯದ ಸ್ಥಾಪನೆಯ ಅಂದರೆ ಆದರ್ಶ ರಾಜ್ಯದ ಧ್ಯೇಯವನ್ನು ಸಮಾಜದ ಮುಂದಿಡುವಂತಹ ಶಿವಧನುಷ್ಯವನ್ನು ಎತ್ತುವುದು ಕಠಿಣವಾಗಿತ್ತು.
ಅಂತಹ ಶಿವಧನುಷ್ಯವನ್ನು ಎತ್ತಿರುವವರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ! ೧೯೯೦ ರಿಂದ ಅಧ್ಯಾತ್ಮ ಪ್ರಸಾರದ ಕಾರ್ಯ ಮಾಡುವಾಗ ಅನೇಕ ಸಿಹಿ-ಕಹಿ ಪ್ರಸಂಗಗಳ ಅನುಭವವಾಗು ವಾಗ ಪರಾತ್ಪರ ಗುರು ಡಾ. ಆಠವಲೆಯವರಿಗೆ ಒಂದು ವಿಷಯವು ಸ್ಪಷ್ಟ ವಾಗಿ ಅರಿವಾಯಿತು. ಅದೇನೆಂದರೆ, ಇಂದು ಸನಾತನ ಹಿಂದೂ ಧರ್ಮದ ಪಕ್ಷವನ್ನು ವಹಿಸುವ, ಧರ್ಮದ ತತ್ತ್ವಗಳನ್ನು ಜಾಗೃತಗೊಳಿಸುವ ಹಾಗೂ ಸಮಾಜವನ್ನು ಧರ್ಮಾಚರಣೆಗಾಗಿ ಉತ್ತೇಜಿಸುವ ಒಂದೇಒಂದು ನಿಯತಕಾಲಿಕೆ ಇಲ್ಲದಿರುವುದು.
ಯಾವುದಾದರೂ ರಾಜಕೀಯ ಪಕ್ಷದ ಪ್ರಚಾರ ಮಾಡಲು, ವಿರೋಧಿ ಗಳಿಗೆ ಟೀಕಿಸಲು ಅಥವಾ ದೊಡ್ಡ ದೊಡ್ಡ ಉದ್ಯಮಿಗಳು ಕಪ್ಪುಹಣವನ್ನು ಬಿಳಿ ಮಾಡಲು ಆರಂಭಿಸಿದ ದೈನಿಕಗಳು ಆ ಸಮಯದಲ್ಲಿ ಸಮಾಜದ ಮೇಲೆ ವರ್ಚಸ್ಸನ್ನು ಬೀರುತ್ತಿದ್ದವು. ಈ ಪರಿಸ್ಥಿತಿಯನ್ನು ಬದಲಾಯಿಸಲು ಅಂತಹದ್ದೇ ಮಾಧ್ಯಮದ ಅವಶ್ಯಕತೆಯಿತ್ತು. ಆ ವೈಚಾರಿಕ ಪರಿವರ್ತನೆಯ ಧ್ಯೇಯದಿಂದಲೇ ಸನಾತನ ಪ್ರಭಾತದ ನಿರ್ಮಾಣವಾಯಿತು. ಆ ಸಮಯ ದಲ್ಲಿ ಸನಾತನದ ಕಾರ್ಯವು ಅಧ್ಯಾತ್ಮಪ್ರಸಾರ, ಸರ್ವಸಂಪ್ರದಾಯ ಸತ್ಸಂಗ,
ವಿವಿಧ ವಿಷಯಗಳಿಗೆ ಸಂಬಂಧಿಸಿದ ಆಧ್ಯಾತ್ಮಿಕ ಗ್ರಂಥಗಳ ಲೇಖನ ಈ ರೀತಿ ಯಲ್ಲಿ ನಡೆಯುತ್ತಿತ್ತು. ಸನಾತನ ಪ್ರಭಾತದ ಸಂಸ್ಥಾಪಕ ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ನೀಡಿದ ಈಶ್ವರೀ ರಾಜ್ಯದ ಸ್ಥಾಪನೆಯ ಧ್ಯೇಯ ಮತ್ತು ಸನಾತನದ ಕಾರ್ಯವನ್ನು ನೋಡುವಾಗ ಇವು ಪರಸ್ಪರ ಪೂರಕವೇ ಆಗಿದ್ದವು. ಕ್ರಮೇಣ ಈಶ್ವರೀ ರಾಜ್ಯವನ್ನೇ ನಾವು ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ಎಂದು ಹೇಳಲಾರಂಭಿಸಿದೆವು. ಸನಾತನ ಸಂಸ್ಥೆ ಮತ್ತು ಸನಾತನ ಪ್ರಭಾತ ನಿಯತಕಾಲಿಕೆಗಳು ಪರಸ್ಪರ ಪೂರಕ ಧ್ಯೇಯದಿಂದ ಪ್ರೇರೇಪಿಸಲ್ಪಟ್ಟಿವೆ. ಆದ್ದರಿಂದಲೇ ಈಗ ಅದು ವಿಶ್ವದಾದ್ಯಂತದ ಹಿಂದುತ್ವನಿಷ್ಠರ ವ್ಯಾಸಪೀಠವಾಗಿದೆ.
ಆಂದೋಲನಗಳಿಗೆ ಸನಾತನ ಪ್ರಭಾತದ ವೈಚಾರಿಕ ಬಲ !
ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿ ಮಂಡಿಸುವ ಪ್ರತಿಯೊಂದು ಘಟನೆಗಳು ಮತ್ತು ಆ ದೃಷ್ಟಿಯಿಂದ ವಾಸ್ತವಿಕತೆಯ ಕಡೆಗೆ ಸನಾತನದ ದೃಷ್ಟಿಕೋನ ಇವುಗಳಲ್ಲಿನ ಸಂಬಂಧಗಳ ಸ್ಪಷ್ಟೀಕರಣವನ್ನು ನೀಡುವಲ್ಲಿ ಸನಾತನದ ಪತ್ರಿಕಾರಂಗವು ಕೊಂಡಿಯಾಗಿದೆ. ಕಳೆದ ೨೫ ವರ್ಷಗಳಲ್ಲಿ ಘಟಿಸಿದ ವಿವಿಧ ಘಟನೆಗಳಲ್ಲಿ ಧರ್ಮನಿಷ್ಠ ದೃಷ್ಟಿಕೋನವನ್ನು ನೀಡಿ ಸನಾತನವು ಸನಾತನ ಪ್ರಭಾತಕ್ಕೆ ನಿರಂತರ ಸಹಾಯ ಮಾಡಿತು. ತೀರಾ ಇತ್ತೀಚೆಗಿನ ಉದಾಹರಣೆಯನ್ನು ನೀಡುವುದಾದರೆ ಶನಿಶಿಂಗಣಾಪುರದಲ್ಲಿ ಶನಿದೇವರ ಕಟ್ಟೆಯ ಮೇಲೆ ಮಹಿಳೆಯರಿಗೆ ಪ್ರವೇಶ ನೀಡಬೇಕೋ, ಬೇಡವೋ, ಎಂಬ ವಿಷಯದಲ್ಲಿ ಸಾಮಾಜಿಕ ವಾತಾವರಣವು ಕಾವೇರಿತ್ತು. ಸದ್ಯ ಆಧುನಿಕತೆಯ ಹೆಸರಿನಲ್ಲಿ ಮಹಿಳೆಯರ ಸ್ವೈರಾಚಾರಕ್ಕೆ ನೀರುಣಿಸು ವುದು ಫ್ಯಾಶನ್ ಆಗಿರುವುದರಿಂದ ಕೆಲವೇ ಅಪವಾದವನ್ನು ಬಿಟ್ಟರೆ ಉಳಿದ ಎಲ್ಲ ಮಾಧ್ಯಮಗಳು ಮಹಿಳೆಯರ ಅಭಿವ್ಯಕ್ತಿಸ್ವಾತಂತ್ರ್ಯವೆಂದು ಅವರಿಗೆ ಕಟ್ಟೆಯ ಮೇಲೆ ಹೋಗಿ ದರ್ಶನ ತೆಗೆದುಕೊಳ್ಳಲು ಬಿಡಬೇಕು, ಎಂಬ ವಿಚಾರವನ್ನು ಮಂಡಿಸಿದವು. ಏಕೈಕ ಸನಾತನ ಪ್ರಭಾತದ ದೃಷ್ಟಿಕೋನ ಇವರೆಲ್ಲರಿಗಿಂತಲೂ ಭಿನ್ನವಾಗಿತ್ತು. ಅದು ಧರ್ಮನಿಷ್ಠವಾಗಿತ್ತು. ಮಹಿಳೆಯರ ಗೌರವವನ್ನು ಕಾಪಾಡಲೇಬೇಕು; ಅದರೊಂದಿಗೆ ಧಾರ್ಮಿಕ ಪರಂಪರೆಗಳ ಪಾಲನೆಯೂ ಆಗಬೇಕು, ಎಂಬ ಆಗ್ರಹದ ಬೇಡಿಕೆಯನ್ನು ನಾವು ಮಾಡಿದ್ದೆವು. ಅದಕ್ಕೆ ಸನಾತನ, ಹಿಂದೂ ಜನಜಾಗೃತಿ ಸಮಿತಿ ಸಹಿತ ಇತರ ಹಿಂದುತ್ವನಿಷ್ಠ ಸಂಘಟನೆಗಳು ಮಾಡಿದ ಆಂದೋಲನಗಳ ಹಿನ್ನೆಲೆಯಿತ್ತು. ಆಗ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಾರ್ತೆಗಳಿಗೆ ಸನಾತನ ಪ್ರಭಾತದಲ್ಲಿ ಪ್ರಮುಖವಾಗಿ ಪ್ರಸಿದ್ಧಿ ನೀಡಲಾಯಿತು. ಇದು ಯಾರದ್ದೇ ಪಕ್ಷ ವಹಿಸುವುದಲ್ಲ, ಇದು ಧರ್ಮದ ಪಕ್ಷದಲ್ಲಿರುವುದು ಆಗಿತ್ತು.
ಸಮಾಜವನ್ನು ಆಧ್ಯಾತ್ಮೀಕರಣಗೊಳಿಸುವ ಹೊಣೆ !
ಸಂಘಟನೆಗಳ ಸಮಷ್ಟಿ ಕಾರ್ಯದ ಜೊತೆಗೆ ಸನಾತನ ಪ್ರಭಾತ ಮತ್ತು ಸನಾತನ ಇವುಗಳಲ್ಲಿ ಇನ್ನೊಂದು ಸಮಾನ ದಾರವಿದೆ. ಅದೇ ವ್ಯಷ್ಟಿ ಸಾಧನೆ ! ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯದಿಂದ ಸನಾತನ ಪ್ರಭಾತವು ಪ್ರಯಾಣ ಬೆಳೆಸುತ್ತಿದೆ. ಈ ಹಿಂದೂ ರಾಷ್ಟ್ರದಲ್ಲಿ ಸಾಧಕರು ಮತ್ತು ಸಜ್ಜನರು ಇರುವರು, ಎಂದು ನಾವು ಪದೇ ಪದೇ ಹೇಳುತ್ತಾ ಇರುತ್ತೇವೆ. ತನ್ನ ಅಂತರಂಗ ದಲ್ಲಿಯೇ ರಾಮರಾಜ್ಯ ಸ್ಥಾಪನೆಯಾದ ನಂತರವೇ ಸಮಾಜದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ. ಆದ್ದರಿಂದಲೇ ಸಮಾಜದ ಅಂತರಂಗದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಸನಾತನ ಪ್ರಭಾತವು ವಹಿಸಿಕೊಂಡಿದೆ, ಅದಕ್ಕಾಗಿ ಸನಾತನ ಹೇಳುತ್ತಿದ್ದ ಸಾಧನೆಯನ್ನು ಬಹು ದೂರದ ವರೆಗೆ ಪ್ರಸಾರ ಮಾಡುವ ಕಾರ್ಯವನ್ನು ಸನಾತನ ಪ್ರಭಾತ ಮಾಡುತ್ತಿದೆ. ಸನಾತನ ಪ್ರಭಾತದಲ್ಲಿ ಜಗತ್ತಿನಾದ್ಯಂತದ ಸಾಧಕರಿಗೆ ಸಾಧನೆ ಮಾಡುವಾಗ ಬಂದಿರುವ ಅನುಭೂತಿ, ಧರ್ಮಪ್ರಸಾರ ಮಾಡುವಾಗ ಬಂದಿರುವ ಅನುಭವ, ಹಾಗೂ ಸಾಧನೆಯಲ್ಲಿ ಪ್ರಗತಿ ಮಾಡುವ ಸಾಧಕರ ಗುಣವೈಶಿಷ್ಟ್ಯಗಳು ಮುಂತಾದ ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತದೆ. ಮನೋರಂಜನೆ, ರಾಜಕಾರಣಿಗಳನ್ನು ವೈಭವೀಕರಿ ಸುವ ಲೇಖನ ಇತ್ಯಾದಿಗಳನ್ನು ಪ್ರಕಟಿಸಿ ನಮಗೆ ಭೋಗವಾದಿ ಸಮಾಜವನ್ನು ನಿರ್ಮಾಣ ಮಾಡಲಿಕ್ಕಿಲ್ಲ, ಸಂತರ ಆದರ್ಶವನ್ನು ಮುಂದಿಟ್ಟು ಕೊಂಡು ಸಾಧನೆ ಮಾಡುವ ಹಿಂದೂ ರಾಷ್ಟ್ರಕ್ಕೆ ಪೂರಕವಾದ ಸಾಧಕರನ್ನು ನಿರ್ಮಿಸಲಿಕ್ಕಿದೆ. ಹಿತಚಿಂತಕರು, ವಾಚಕರು ಮತ್ತು ಅಖಿಲ ಹಿಂದೂ ಸಮಾಜದ ಜೀವನವನ್ನು ಆಧ್ಯಾತ್ಮೀಕರಣಗೊಳಿಸಲಿಕ್ಕಿದೆ. ಈ ಕಾರ್ಯವು ಸನಾತನದ ಸಹಾಯದಿಂದ ನಿರಂತರ ನಡೆದಿದೆ.
ಸನಾತನ ಸಂಸ್ಥೆ, ಸನಾತನ ಪ್ರಭಾತದ ಪ್ರಯತ್ನದಿಂದ ಹಿಂದೂ ರಾಷ್ಟ್ರ !
ಹಿಂದೂ ರಾಷ್ಟ್ರ ಸ್ಥಾಪನೆಯ ನಮ್ಮ ಧ್ಯೇಯಕ್ಕೆ ಸನಾತನದ ಕಾರ್ಯವು ಪುಷ್ಟಿ ನೀಡುತ್ತದೆ. ಆದ್ದರಿಂದಲೇ ಇಂದು ಸನಾತನದ ರಜತ-ಮಹೋತ್ಸವದ ನಿಮಿತ್ತ ನಮಗೆ ಅತ್ಯಂತ ಆನಂದವಾಗುತ್ತಿದೆ. ಕೇವಲ ೨೫ ವರ್ಷಗಳಲ್ಲಿ ಸನಾತನವು ಮಾಡಿದ ಕಾರ್ಯದ ಮುಂದೆ ನಾವು ನತಮಸ್ತಕರಾಗಿದ್ದೇವೆ. ಸನಾತನದ ಧ್ಯೇಯನಿಷ್ಠ ಪ್ರಯಾಣಕ್ಕೆ ನಾವು ಸಾಕ್ಷಿದಾರರಾಗಿದ್ದೇವೆ. ಆದ್ದರಿಂದಲೇ ಸನಾತನ ಪರಿವಾರ ಮತ್ತು ಸನಾತನ ಪ್ರಭಾತದ ನಿರಂತರ ಪ್ರಯತ್ನದಿಂದಲೇ ಹಿಂದೂ ರಾಷ್ಟ್ರ ಸಾಕಾರವಾಗುವುದೆಂದು ನಾವು ಆತ್ಮವಿಶ್ವಾಸದಿಂದ ಹೇಳಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಿಶೇಷ ಸಂಪಾದಕೀಯ