ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
. ಈಗ ಹಿಂದೂಗಳ ದೇವಸ್ಥಾನದವರೆಗೂ ತಲುಪಿದ ‘ಲವ್ ಜಿಹಾದ್’ !
ಕೇರಳದ ಎರ್ನಾಕುಲಮ್‌ನಲ್ಲಿರುವ ಒಂದು ದೇವಸ್ಥಾನದ ಮಹಾ ಪ್ರಸಾದದ ಸಮಯದಲ್ಲಿ ಕೆಲವು ಮತಾಂಧ ಯುವಕರು ಅಲ್ಲಿಗೆ ಬರುತ್ತಿದ್ದು ಹಿಂದೂ ಹೆಣ್ಣುಮಕ್ಕಳ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಲವ್ ಜಿಹಾದ್‌ನ ಭಯ ನಿರ್ಮಾಣವಾಗಿದ್ದು , ಈ ಸಂದರ್ಭದ ಒಂದು ಪ್ರಕರಣವೂ ಬಹಿರಂಗವಾಗಿದೆ.

. ನ್ಯಾಯಾಲಯದ ಆದೇಶಕ್ಕಿಂತ ಮಹತ್ವದ್ದಾದ ಓಲೈಕೆ !
ಮಸೀದಿಗಳಲ್ಲಿ ಕಾನೂನುಬಾಹಿರ ಧ್ವನಿವರ್ಧಕಗಳನ್ನು ಹಾಕುವುದು, ಮೂಲಭೂತ ಅಧಿಕಾರವಾಗಲು ಸಾಧ್ಯವಿಲ್ಲ. ಆದುದರಿಂದ ಮಸೀದಿಗಳ ಮೇಲಿನ ಕಾನೂನುಬಾಹಿರ ಧ್ವನಿವರ್ಧಕಗಳನ್ನು ತಕ್ಷಣ ತೆಗೆದುಹಾಕಿರಿ’, ಎಂಬ ಆದೇಶ ಮುಂಬಯಿ ಉಚ್ಚ ನ್ಯಾಯಾಲಯವು ಸರಕಾರಕ್ಕೆ ನೀಡಿದೆ. ಪ್ರಸ್ತುತ ಆದೇಶವನ್ನು ಅನೇಕ ಬಾರಿ ನೀಡಿದರೂ ಸರಕಾರ ಯಾವುದೇ ಕಾರ್ಯಾಚರಣೆ ಮಾಡುವುದಿಲ್ಲ.
. ಹಿಂದೂದ್ವೇಷಿ ಚಿತ್ರಕಾರ ಮ.ಫಿ. ಹುಸೇನ್‌ರವರ ಓಲೈಕೆ ಬೇಡ !
ಡಾಗ್ ಮಾಡರ್ನ್’ ಸಂಸ್ಥೆಯಿಂದ ಇತ್ತೀಚೆಗೆ ದೆಹಲಿಯ ಇಂಪೀರಿಯಲ್ ಹೋಟೆಲ್‌ನಲ್ಲಿ ವಿವಿಧ ಚಿತ್ರಕಾರರು ತೆಗೆದ ಚಿತ್ರಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನದಲ್ಲಿ ಮ.ಫಿ.
ಹುಸೇನ್ ಬಿಡಿಸಿದ ‘ಪದ್ಮಿನಿ ಮೋಹಿನಿ ಶಂಖಿನಿ’ ಈ ಅಶ್ಲೀಲಕರ ಚಿತ್ರ ವನ್ನೊಳಗೊಂಡ ಚಿತ್ರಗಳನ್ನೂ ಸಮಾವೇಶಗೊಳಿಸಲಾಗಿತ್ತು.
. ಕಾಶ್ಮೀರಿ ಹಿಂದೂಗಳ ಸಮಸ್ಯೆಗಳ ಬಗ್ಗೆ ಬಾಯಿಮುಚ್ಚಿರುವ ಹಿಂದೂದ್ವೇಷಿ ಕಾಂಗ್ರೆಸ್ !
ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕ್‌ವ್ಯಾಪ್ತ ಕಾಶ್ಮೀರ ಮತ್ತು ಬಲೂಚಿಸ್ತಾನದ ಬಗ್ಗೆ ಹೆಚ್ಚು ಚಿಂತೆಯಾಗಿದೆ. ಆ ಪ್ರದೇಶದಲ್ಲಿನ ಜನರಿಗೆ ಅವರು ಧನ್ಯವಾದಗಳನ್ನು ಸಲ್ಲಿಸುತ್ತಿರುತ್ತಾರೆ; ಆದರೆ ಭಾರತ ದಲ್ಲಿನ ಕಾಶ್ಮೀರಿಗಳೊಂದಿಗೆ ಚರ್ಚೆಮಾಡಲು ಮೋದಿ ಸಿದ್ಧರಿಲ್ಲ’, ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್‌ರವರು ರಾಷ್ಟ್ರದ್ರೋಹಿ ವಿಧಾನವನ್ನು ಮಾಡಿದ್ದಾರೆ.
. ಭಾರತಕ್ಕೆ ಇಂತಹ ಸದೃಢ ಮಾನಸಿಕತೆಯ ರಾಜಕಾರಣಿಗಳ ಆವಶ್ಯಕತೆ !
ಜಿಹಾದಿ ಉಗ್ರರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ, ನಾವು ನಿಮ್ಮನ್ನು ಹುಡುಕಿ ತೆಗೆದು ನಿಮ್ಮನ್ನು ಕೊನೆಗಾಣಿಸುವೆವು ಮತ್ತು ಇದರಲ್ಲಿ ನಾವು ವಿಜಯಿಯಾಗುವೆವು, ಎಂದು ಅಮೇರಿಕಾದ ರಾಷ್ಟ್ರಪತಿ ಪದದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್‌ರವರು ಹೇಳಿಕೆ ನೀಡಿದ್ದಾರೆ.
. ಗೋಮಾತೆಯನ್ನು ಪೂಜಿಸುವ ಹಿಂದೂಗಳ ದೇಶದಲ್ಲಿ ಗೋರಕ್ಷಕರೇ ಬಂಧನದಲ್ಲಿ !
ಗೋರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಗೋರಕ್ಷಣಾದಳದ ಪ್ರಮುಖರಾದ ಶ್ರೀ. ಸತೀಶಕುಮಾರ ಪ್ರಧಾನ ಇವರನ್ನು ಆಗಸ್ಟ್ ೨೧ ರಂದು ಪಟಿಯಾಲಾ ಪೊಲೀಸರು ಬಂಧಿಸಿದರು. ಅವರ ಸಂಘಟನೆಯ ಸದಸ್ಯರು ಕೆಲವು ಹಸುಗಳ ಕಳ್ಳಸಾಗಾಣಿಕೆಯನ್ನು ಮಾಡುತ್ತಿರುವಾಗಿನ ಒಂದು ವೀಡಿಯೋ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
. ಭಕ್ತರೇ, ಇದರಿಂದ ಗಣೇಶನು ಒಲಿಯುವನೇ ?
ಗಣೇಶನ ವಿಸರ್ಜನೆಯ ನಂತರ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಗಣೇಶ ಮೂರ್ತಿಗಳು ನೀರಿನಲ್ಲಿ ಸಂಪೂರ್ಣ ಕರಗದೇ ಭಗ್ನ ಸ್ವರೂಪದಲ್ಲಿ ಸಮುದ್ರದ ದಡಕ್ಕೆ ಬಂದು ಬೀಳುತ್ತವೆ. ಅಲ್ಲದೇ ಅವುಗಳನ್ನು ‘ಜೆಸಿಬಿ’ಯಂತ್ರದಿಂದ ಸಾಗಿಸಲಾಗುತ್ತದೆ. ಹಿಂದೂಗಳೇ, ಮೂರ್ತಿಯ ವಿಸರ್ಜನೆ ಯೋಗ್ಯವಾಗಿ ಮಾಡುವುದು ನಮ್ಮೆಲ್ಲರ ಧರ್ಮಕರ್ತವ್ಯವಾಗಿದೆ, ಎಂಬುದು ನೆನಪಿರಲಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !