ಶಾಹಜಾಪುರ (ಮಹಾರಾಷ್ಟ್ರ)ದ ಆಗೆಬಾಬಾ ಮಂದಿರದಲ್ಲಿನ ಸಮಾಧಿಯ ಮೇಲೆ ಹಸಿರು ಹೊದಿಕೆ ತೆಗೆದು ಪಾರಂಪಾರಿಕ ಕೇಸರಿ ವಸ್ತ್ರ ಸಲ್ಲಿಕೆ !

ಹಿಂದುತ್ವವಾದಿಗಳು ಮಾಡಿದ ಪ್ರಬೋಧನೆಯ ಪರಿಣಾಮ
ಶಾಹಜಾಪುರ : ಇಲ್ಲಿನ ಪಾರನೇರ ತಾಲೂಕಿನ ಶಾಹಜಾಪುರ ಎಂಬ ಊರಿನ ಆಗೆಬಾಬಾ ಮಂದಿರದಲ್ಲಿನ ಸಮಾಧಿಯ ಮೇಲೆ ಕೆಲವು ದಿನಗಳಿಂದ ವಿನಾಕಾರಣ ಹಸಿರು ಹೊದಿಕೆಯನ್ನು ಹಾಕಲಾಗುತ್ತಿತ್ತು. ಈ ವಿಷಯದಲ್ಲಿ ಹಿಂದುತ್ವವಾದಿಗಳು ಗ್ರಾಮಸ್ಥರ ಪ್ರಬೋಧನೆ ಮಾಡಿದರು. ಅನಂತರ ಸಮಾಧಿಯ ಮೇಲೆ ಜಲಾಭಿಷೇಕ ಮಾಡಿ ವೇದಪಠಣದೊಂದಿಗೆ ವಿಧಿಪೂರ್ವಕ ಪೂಜೆ-ಆರತಿ ಮಾಡಿ ಕೇಸರಿ ಹೊದಿಕೆಯನ್ನು ಹಾಕಲಾಯಿತು. ಜುಲೈ ೧೪ ರಂದು ಈ ಕಾರ್ಯಕ್ರಮ ನೆರವೇರಿತು. (ಕೆಲವೊಮ್ಮೆ ಬಲವಂತದಿಂದ, ಕೆಲವೊಮ್ಮೆ ಮುಗ್ಧ ಜನರನ್ನು ಮೋಸಗೊಳಿಸಿ ಮಾಡುವಂತಹ ಭಾರತದ ಹಸಿರುಕರಣವನ್ನು ತಡೆಯುವ ಜಾಗೃತ ಧರ್ಮಾಭಿಮಾನಿಗಳಿಗೆ ಅಭಿನಂದನೆ ! ಇತರರು ಸಹ ಇವರಿಂದ ಪ್ರೇರಣೆ ಪಡೆದು ಕೃತಿಶೀಲರಾಗಬೇಕು. - ಸಂಪಾದಕರು)

೧. ಕೆಲವು ವರ್ಷಗಳ ಹಿಂದೆ ಊರಿಗೆ ಬಂದಿದ್ದ ಫಕೀರ ನಂತರ ಅಲ್ಲಿಯೇ ನೆಲೆಸಿದರು. ಊರಿನ ಮಸ್ಕೆಬಾಬಾ ಮತ್ತು ಮಾಂಗೀರಬಾಬಾ ಇವರು ಅವರ ಶಿಷ್ಯರಾದರು. ಈ ಮೂವರ ಸಮಾಧಿ ಒಂದೇ ಸ್ಥಳದಲ್ಲಿ ನಾಥಪಂಥೀಯರ ಹಾಗೆ ಇರುವುದು ಕಂಡು ಬರುತ್ತದೆ.
೨. ಹಿಂದೆ ಸಮಾಧಿಯ ಮೇಲೆ ಬಿಳಿ ವಸ್ತ್ರ ಹಾಕಲಾಗುತ್ತಿತ್ತು. ನಂತರ ಹರಕೆ ಹೇಳಿ ಆಡುಗಳನ್ನು ಬಲಿಕೊಡುವ ಪರಂಪರೆ ಆರಂಭವಾಯಿತು. ಮುಂದೆ ಆಡುಗಳ ಬಲಿಕೊಡಲು ಪಕ್ಕದ ಊರಿನ ಮುಸಲ್ಮಾನರು ಇಲ್ಲಿಗೆ ಬರಲು ಆರಂಭಿಸಿದರು. ಅವರು ಸಮಾಧಿ ಮೇಲೆ ಸೂಚನೆಯನ್ನು ಬರೆದು ಹಸಿರು ಚಾಂದ್ ತಾರಾ ಇರುವ ಹೊದಿಕೆಯನ್ನು ಹಾಕಲು ಆರಂಭಿಸಿದರು.
೩. ಕೇಸರಿ ಧ್ವಜದ ಬದಲು ಅಲ್ಲಿ ಹಸಿರು ಧ್ವಜ ವನ್ನು ಹಚ್ಚಲಾಯಿತು; ಆದರೆ ಅದನ್ನು ಯಾರೂ ವಿರೋಧಿಸಲಿಲ್ಲ. ಈ ವಿಷಯದಲ್ಲಿ ಜಾಗೃತ ಧರ್ಮಾಭಿಮಾನಿಗಳು ಗ್ರಾಮಸ್ತರಿಗೆ ಪ್ರಬೋಧನೆ ಮಾಡಿದ ನಂತರ ಅವರಿಗೂ ಆ ವಿಷಯ ಸರಿಯೆನಿಸಿತು; ಆದರೆ ಅದಕ್ಕನುಸಾರ ಬದಲಾವಣೆ ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ.
೪. ೨ ತಿಂಗಳ ಹಿಂದೆ ರಾತ್ರಿ ಎಲ್ಲ ಹಸಿರು ಧ್ವಜಗಳನ್ನು ತೆಗೆದು ಬಿಳಿ ಧ್ವಜವನ್ನು ಕೇಸರಿಗೊಳಿಸಿ ಹಚ್ಚಲಾಯಿತು. ಹಿಂದೆ ಊರಿನಲ್ಲಿ ಮುಸಲ್ಮಾನರ ಒಂದು ಮನೆಯೂ ಇರಲಿಲ್ಲ, ಇಂದು ಸಹ ಇಲ್ಲ. ಹೀಗಿರುವಾಗ ಸಮಾಧಿ ಮುಸಲ್ಮಾನರದ್ದು ಆಗಲು ಹೇಗೆ ಸಾಧ್ಯ, ಎಂದು ಊರಿನವರಿಗೆ ಪ್ರಬೋಧನೆ ಮಾಡಲಾಯಿತು.
೫. ಈ ವಿಷಯ ಊರಿನವರಿಗೆ ಒಪ್ಪಿಗೆಯಾಗಿ ಎಲ್ಲರೂ ಒಗ್ಗಟ್ಟಾಗಿ ಆಗೆಬಾಬಾ ಸಮಾಧಿ ಮಂದಿರದ ಹಸಿರು ಹೊದಿಕೆಯನ್ನು ತೆಗೆದು ಅಲ್ಲಿ ಕೇಸರಿ ಶಾಲು ಹಾಕಲಾಯಿತು.
೬. ಶ್ರೀ. ಮಾವುಲಿ ಕೃಪಾ ಗೋಶಾಲೆ, ಧರ್ಮ ಜಾಗರಣ, ವಿಶ್ವ ಹಿಂದು ಪರಿಷತ್ತು, ಬಜರಂಗ ದಳ ಮುಂತಾದ ಸಂಘಟನೆಗಳ ಕಾರ್ಯಕರ್ತರು ಈ ಪ್ರಬೋಧನೆಯಲ್ಲಿ ಭಾಗವಹಿಸಿದ್ದರು. ಇನ್ನು ಆಡು ಕಡಿಯುವ ಪದ್ಧತಿಯನ್ನು ನಿಲ್ಲಿಸಲು ಹಾಗೂ ಶಹಾಜಾಪುರವನ್ನು ಶಹಾಜೀಪುರ ಎಂದು ನಾಮಕರಣ ಮಾಡಲು ಸಹ ಪ್ರಯತ್ನಿಸುವೆವು ಎಂದು ಹಿಂದುತ್ವವಾದಿಗಳು ಹೇಳಿದರು. (ಕೃತಿಶೀಲರಾದ ಹಿಂದುತ್ವವಾದಿಗಳಿಗೆ ಅಭಿನಂದನೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಾಹಜಾಪುರ (ಮಹಾರಾಷ್ಟ್ರ)ದ ಆಗೆಬಾಬಾ ಮಂದಿರದಲ್ಲಿನ ಸಮಾಧಿಯ ಮೇಲೆ ಹಸಿರು ಹೊದಿಕೆ ತೆಗೆದು ಪಾರಂಪಾರಿಕ ಕೇಸರಿ ವಸ್ತ್ರ ಸಲ್ಲಿಕೆ !