ದೇವದ್ (ಪನವೇಲ್) ನ ಸನಾತನ ಆಶ್ರಮದ ಸಂತರಾದ ಪ.ಪೂ.ಪಾಂಡೆ ಮಹಾರಾಜರ ಪತ್ನಿ ಸೌ. ಆಶಾ ಪಾಂಡೆಅಜ್ಜಿ ನಿಧನ

ಸೌ. ಆಶಾ ಪಾಂಡೆ ಅಜ್ಜಿ
ದೇವದ್ : ಇಲ್ಲಿನ ಸನಾತನ ಆಶ್ರಮದ ಸಂತರಾದ ಪ.ಪೂ. ಪರಶರಾಮ ಪಾಂಡೆ ಮಹಾರಾಜರ ಪತ್ನಿ ಸೌ. ಆಶಾ ಪಾಂಡೆಅಜ್ಜಿ ೨೨ ಆಗಸ್ಟ್ ೨೦೧೬ ರಂದು ಬೆಳಗ್ಗೆ ೯.೩೦ಕ್ಕೆ ಮಹಾತ್ಮಾ ಗಾಂಧಿ ಮಿಶನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ವಯಸ್ಸು ೮೬ ವರ್ಷ ಆಗಿತ್ತು. ಅವರ ಆಧ್ಯಾತ್ಮಿಕ ಮಟ್ಟ ಶೇ. ೬೪ ರಷ್ಟಿತ್ತು. ಎರಡು ದಿನಗಳ ಹಿಂದೆ ಅವರಿಗೆ ಉಬ್ಬಸದ ಕಾಯಿಲೆ ಉಲ್ಬಣವಾಗಿತ್ತು. ಆಗಸ್ಟ್ ೨೨ ರಂದು ಸಾಯಂಕಾಲ ಪನವೇಲ್‌ನ ಅಮರಧಾಮ ಸ್ಮಶಾನಭೂಮಿಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಅವರ ಪುತ್ರ ಶ್ರೀ. ಅಮೋಲ್ ಪಾಂಡೆ ಅವರಿಗೆ ಅಗ್ನಿ ನೀಡಿದರು. ಈ ಸಂದರ್ಭದಲ್ಲಿ ಪ.ಪೂ. ಪಾಂಡೆ ಮಹಾರಾಜರು ಮತ್ತು ಅವರ ಆಪ್ತಮಿತ್ರರು ಹಾಗೂ ಸನಾತನದ ಸಾಧಕರು ಉಪಸ್ಥಿತರಿದ್ದರು.
ಸೌ. ಆಶಾ ಪಾಂಡೆಅಜ್ಜಿ ಇವರು ಪತಿ ಪ.ಪೂ. ಪಾಂಡೆ ಮಹಾರಾಜ, ಪುತ್ರ ಶ್ರೀ. ಅಮೋಲ್ ಪಾಂಡೆ, ಸೊಸೆ ಸೌ. ದೇವಯಾನಿ ಪಾಂಡೆ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸನಾತನ ಪರಿವಾರವು ಪ.ಪೂ. ಪಾಂಡೆ ಮಹಾರಾಜರ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.
ಸೌ. ಪಾಂಡೆ ಮುಕ್ತರಾದರು ! - .ಪೂ.ಪಾಂಡೆ ಮಹಾರಾಜ
.ಪೂ. ಪಾಂಡೆ ಮಹಾರಾಜರು ಪ್ರತಿದಿನ ಬೆಳಗ್ಗೆ ೯ ಗಂಟೆಗೆ ಸಮಷ್ಟಿಗಾಗಿ ನಾಮಜಪ ಮಾಡುತ್ತಾರೆ. ಆಗಸ್ಟ್ ೨೨ ರಂದು ಅವರು ಎಂದಿನಂತೆ ಬೆಳಗ್ಗೆ ನಾಮಜಪಕ್ಕಾಗಿ ಕುಳಿತಿದ್ದರು. ಸೌ. ಪಾಂಡೆಯವರ ನಿಧನದ ವಾರ್ತೆ ತಿಳಿದ ತಕ್ಷಣ ಅವರು ಮುಕ್ತರಾದರು. ಅವರು ಬಹಳಷ್ಟು ಸಹಿಸಿಕೊಂಡರು. ಅವರು ಸಹನಶೀಲರಾಗಿದ್ದರು, ಎಂದು ಹೇಳುತ್ತಾ ಪ.ಪೂ. ಪಾಂಡೆ ಮಹಾರಾಜರು ಪುನಃ ನಾಮಜಪ ಆರಂಭಿಸಿದರು. ಅವರು ನಾಮಜಪ ನಿಲ್ಲಿಸಲಿಲ್ಲ.
.ಪೂ. ಪಾಂಡೆ ಮಹಾರಾಜರು ಆಗಸ್ಟ್ ೨೧ ರಂದು ರಾತ್ರಿ ಅವರ ಪುತ್ರ ಶ್ರೀ. ಅಮೋಲ್ ಪಾಂಡೆಯವರಿಗೆ ಸೌ. ಪಾಂಡೆಅಜ್ಜಿಗಾಗಿ ಮಹಾಮೃತ್ಯುಂಜಯ ಮಂತ್ರಜಪ ಮಾಡಲು ಹೇಳಿದ್ದರು.
ಕ್ಷಣಚಿತ್ರ
ನಿಧನದ ನಂತರ ಸೌ. ಪಾಂಡೆಅಜ್ಜಿಯವರ ಜಮಖಾನೆಯಲ್ಲಿ ಮೂಡಿರುವುದು ಕಾಣಿಸಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವದ್ (ಪನವೇಲ್) ನ ಸನಾತನ ಆಶ್ರಮದ ಸಂತರಾದ ಪ.ಪೂ.ಪಾಂಡೆ ಮಹಾರಾಜರ ಪತ್ನಿ ಸೌ. ಆಶಾ ಪಾಂಡೆಅಜ್ಜಿ ನಿಧನ