ಹೆಚ್ಚುತ್ತಿರುವ ಚೀನಾದ ಕಿತಾಪತಿ !


ಚೀನಾದ ವಿಸ್ತಾರವಾದಿ ಮಹತ್ವಾಕಾಂಕ್ಷೆ ಹಾಗೂ ಅದನ್ನು ಸಾಧಿಸಲು ಅದು ಮಾಡುತ್ತಿರುವ ದಾದಾಗಿರಿಯು ನೆಲ, ಜಲ ಹಾಗೂ ಆಕಾಶ ಈ ಮೂರು ಸ್ತರಗಳಲ್ಲಿಯೂ ಕಂಡು ಬರುತ್ತಿದೆ. ಕೆಲವು ದಿನಗಳ ಹಿಂದೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದೇಶವು ಯಾವುದೇ ಅಂಜಿಕೆಯಿಲ್ಲದೇ ಕಾನೂನುಬಾಹಿರವಾಗಿ ಮಾನವ-ನಿರ್ಮಿತ ದ್ವೀಪವನ್ನು ನಿರ್ಮಿಸಿ ಅಲ್ಲಿ ಸೇನೆಯನ್ನು ನೇಮಿಸಿ ಅಕ್ಕಪಕ್ಕದ ದೇಶಗಳ ಮೇಲೆ ದಾದಾಗಿರಿ ಮಾಡಲು ಪ್ರಾರಂಭಿಸಿತು. ಚೀನಾದೇಶವು ಸಮುದ್ರದ ಮೇಲೆ ತನ್ನ ಅಧಿಕಾರವನ್ನು ಚಲಾಯಿಸಲು ಪ್ರಾರಂಭಿಸಿದಾಗ ಈ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯಲಾಯಿತು. ಸಮುದ್ರದ ಮೇಲೆ ತನ್ನ ಹಕ್ಕು ಸ್ಥಾಪಿಸುತ್ತಿರುವ ಕುರಿತು ಚೀನಾದೇಶಕ್ಕೆ ನ್ಯಾಯಾಲಯವು ಸರಿಯಾಗಿ ಛೀಮಾರಿ ಹಾಕಿತು. ಆದರೆ ಚೀನಾ ದೇಶ ಯಾರಿಗಾದರೂ ಬಗ್ಗುವುದೇ ? ನ್ಯಾಯಾಲಯದ ಈ ಆದೇಶವನ್ನು ನಿರ್ಭೀಡತೆಯಿಂದ ತಳ್ಳಿಹಾಕಿ ಚೀನಾದೇಶವು ಆದೇಶ ನೀಡಿದ ಮುಂದಿನ ವಾರವೇ ಅದೇ ಸಮುದ್ರದಲ್ಲಿ ಸೈನಿಕ ಕವಾಯತು ನಡೆಸಿತು. ಇದರಿಂದ ಚೀನಾದೇಶದ ಆಕ್ರಮಣಕಾರಿ ಮನೋಭಾವನೆಯನ್ನು ಗಮನಿಸಬಹುದಾಗಿದೆ. ಯಾವುದೇ ಪರಿಸ್ಥಿತಿ ಯಲ್ಲಿಯೂ ನಾವು ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕನ್ನು ಬಿಟ್ಟು ಕೊಡುವುದಿಲ್ಲವೆಂದು ಚೀನಾದೇಶವು ಜಗತ್ತಿಗೆ ತೋರಿಸಿಕೊಟ್ಟಿತು. ಚೀನಾ ದೇಶದ ಈ ದಾದಾಗಿರಿ ಭಾರತಕ್ಕೆ ದೊಡ್ಡ ತಲೆನೋವಾಗಿದೆ.
ಚೀನಾ ದೇಶದ ಸೈನಿಕರು ಉತ್ತರಾಖಂಡದ ಬಾಡಾಹೋತಿ ಭಾಗದಲ್ಲಿ ನುಸುಳಿರುವುದು ಇತ್ತೀಚೆಗಷ್ಟೇ ಬಯಲಾಗಿದೆ. ಈ ಭಾಗದಲ್ಲಿ ಸಮೀಕ್ಷೆಗಾಗಿ ಹೋಗಿದ್ದ ಭಾರತೀಯ ಸರಕಾರಿ ಅಧಿಕಾರಿಗಳಿಗೆ ಅಕಸ್ಮಾತ್ತಾಗಿ ಚೀನಾ ಸೈನಿಕರು ಎದುರಾದರು. ಅಧಿಕಾರಿಗಳನ್ನು ಕಂಡು ಚೀನಾ ಸೈನಿಕರು ಅವರನ್ನೇ ಮರಳಿ ಹೋಗುವಂತೆ ಎಚ್ಚರಿಕೆ ನೀಡಿದರು! ಇದರಿಂದ ಅಧಿಕಾರಿಗಳ ತಂಡವು ಹಿಂದಿರುಗಿತು. ಚೀನಾದೇಶವು ಈ ಭಾಗದಲ್ಲಿ ಹಾಗೂ ಒಟ್ಟಾರೆ ಭಾರತೀಯ ಗಡಿಯಲ್ಲಿ ನುಸುಳುತ್ತಿರುವುದು ಇದೇನು ಮೊದಲ ಬಾರಿಯಲ್ಲ. ಲಢಾಖ, ಅರುಣಾಚಲ ಪ್ರದೇಶ ಮುಂತಾದ ಸ್ಥಳಗಳಲ್ಲಿ ಅವರು ಈ ಮೊದಲೂ ಸಾಕಷ್ಟು ಬಾರಿ ನುಸುಳಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಭಾರತವು ಚೀನಾ ದೇಶಕ್ಕೆ ಅದು ಮಾಡಿರುವ ಒಂದೇ ಒಂದು ನುಸುಳುವಿಕೆಯ ವಿರುದ್ಧ ತಕ್ಕ ಪ್ರತ್ಯುತ್ತರವನ್ನು ನೀಡಿರುವುದು ಕಂಡು ಬಂದಿಲ್ಲ. ಭಾರತದ ಈ ನಡುವಳಿಕೆಯೆಂದರೆ ಮನೆಯಲ್ಲಿ ಹೊಕ್ಕಿರುವ ಕಳ್ಳನನ್ನು ಹಿಡಿಯುವ ಬದಲು ಅವನನ್ನು ಹೊರಟು ಹೋಗುವಂತೆ ಹೇಳಿದಂತಲ್ಲವೇ?
ಪತ್ರಕರ್ತರ ವೇಷದಲ್ಲಿ ಭಾರತದಲ್ಲಿ ಚೀನಾದೇಶದ ಬೇಹುಗಾರಿಕೆ ?
ಇತ್ತೀಚೆಗಷ್ಟೇ ಭಾರತದ ರಕ್ಷಣಾ ಇಲಾಖೆಯು ನೀಡಿದ ಸೂಚನೆಯ ಬಳಿಕ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾವೂ ಕಿಯಾಂಗ, ಲು ತಾಂಗ ಹಾಗೂ ಶೀ ಯೋನಗಾಂಗ ಈ ಚೀನಾ ಪತ್ರಕರ್ತರನ್ನು ಭಾರತದೇಶ ಬಿಡಲು ಹೇಳಿದೆ. ಅವರ ವೀಸಾದ ಅವಧಿ ಏಕೆ ಮುಂದುವರಿಸಿಲ್ಲ, ಈ ವಿಷಯದ ಕುರಿತು ಭಾರತವು ಯಾವುದೇ ನಿರ್ದಿಷ್ಟವಾದ ಕಾರಣವನ್ನು ನೀಡದಿದ್ದರೂ, ಅವರು ರಾಷ್ಟ್ರವಿರೋಧಿ ಕಾರ್ಯದಲ್ಲಿ ಸಕ್ರಿಯರಿದ್ದಾರೆಂದು ಹೇಳಲಾಗುತ್ತಿದೆ. ಭಾರತದ ಈ ಕ್ರಮದಿಂದ ಚೀನಾದೇಶವು ಒಳಗೊಳಗೆ ಕುದಿಯುತ್ತಿದೆಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಭಾರತಕ್ಕೆ ಇದರ ಗಂಭೀರ ಪರಿಣಾಮ ಎದುರಿಸಬೇಕಾಗಬಹುದೆಂದು ಚೀನಾದೇಶವು ತನ್ನ ಸರಕಾರಿ ಪ್ರಸಾರ ಮಾಧ್ಯಮದ ಮೂಲಕ ನೇರವಾಗಿ ಭಾರತಕ್ಕೆ ಎಚ್ಚರಿಕೆ ಯನ್ನು ನೀಡಿದೆ. ಚೀನಾದಲ್ಲಿ ಭಾರತದ ಪತ್ರಿಕಾ ವರದಿಗಾರರು ಕಾರ್ಯನಿರತರಾಗಿ ದ್ದಾರೆ. ಚೀನಾ ದೇಶವು ಈಗ ಭಾರತದ ಮೇಲೆ ಯಾವ ರೀತಿಯಲ್ಲಿ ಪ್ರತೀಕಾರದ ಸೇಡನ್ನು ತೀರಿಸಿಕೊಳ್ಳುವುದೆಂದು ನೋಡಬೇಕಾಗಿದೆ. ವಾಸ್ತವಿಕವಾಗಿ ಚೀನಾದೇಶವು ವಿದೇಶ ಪತ್ರಿಕಾ ವರದಿಗಾರರೊಂದಿಗೆ ಸೌಹಾರ್ದಯುತವಾಗಿಯೇನೂ ವರ್ತಿಸುವುದಿಲ್ಲ. ಡಿಸೆಂಬರ್ ೨೦೧೬ ರಲ್ಲಿ ಒಬ್ಬ ಫ್ರೆಂಚ್ ಪತ್ರಿಕಾ ವರದಿಗಾರನು ಚೀನಾದೇಶವು ಝಿನ್‌ಝಿಯಾಂಗ ಪ್ರಾಂತ್ಯದ ಸಮಸ್ಯೆಯನ್ನು ಬಗೆಹರಿಸುವಾಗ ಕೈಕೊಂಡ ಕಠಿಣವಾದ ನಿರ್ಧಾರದ ಬಗ್ಗೆ ಚೀನಾ ಸರಕಾರವನ್ನು ಟೀಕಿಸಿದ್ದನು. ಇದರಿಂದ ಗಲಿಬಿಲಿಗೊಂಡ ಚೀನಾದೇಶವು ಆ ಫ್ರೆಂಚ್ ಪತ್ರಿಕಾವರದಿಗಾರನನ್ನು ತನ್ನ ದೇಶದಿಂದ ಹೊರದಬ್ಬಿತ್ತು. ಸ್ವಲ್ಪದರಲ್ಲಿ ಹೇಳುವುದಾದರೆ ಚೀನಾದೇಶದ ಈಗಿನ ವರ್ತನೆಯನ್ನು ಗಮನಿಸಿದರೆ, ತನ್ನದಾದರೆ ಸುಂದರವಾಗಿದೆ, ಹಾಗೂ ಮತ್ತೊಬ್ಬರದ್ದು ನಿಷ್ಕೃಷ್ಟ ಮತ್ತು ಕೀಳು ಎನ್ನುವ ವೃತ್ತಿಯಾಗಿದೆ. ಪ್ರತಿಯೊಂದು ಸರಕಾರವು ತನ್ನ ದೇಶದ ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿರುತ್ತದೆ. ಭಾರತವು ಇಂತಹ ನಿರ್ಧಾರವನ್ನು ತೆಗೆದುಕೊಂಡಿರುವುದರಿಂದ ಚೀನಾ ದೇಶವು ಕಾರಣವಿಲ್ಲದೇ ಕುಣಿಯುವುದು ಸರಿಯಾದ ಕ್ರಮವಾಗುವುದಿಲ್ಲ. ಚೀನಾ ದೇಶವು ಭಾರತದಲ್ಲಿ ನಡೆಸುತ್ತಿರುವ ದೇಶದ್ರೋಹಿ ಕಾರ್ಯಗಳು ಈಗ ಗುಪ್ತವಾಗಿ ಉಳಿದಿಲ್ಲ. ಭಾರತದ ನಕ್ಸಲವಾದಿಗಳ ಬಳಿ ಚೀನಾದೇಶದಲ್ಲಿ ತಯಾರಿಸಲಾಗಿರುವ ಶಸ್ತ್ರಾಸ್ತ್ರಗಳು ದೊರೆತಿವೆ. ಈಶಾನ್ಯದ ಪ್ರತ್ಯೇಕತಾವಾದಿ ಗಳಿಗೂ ಅದು ಸಹಾಯವನ್ನು ಮಾಡುತ್ತಿದೆ. ಪಾಕಿಸ್ತಾನದೊಂದಿಗೆ ಚೀನಾ ದೇಶವು ಹೊಂದಿರುವ ಸ್ನೇಹವು ಜಗಜ್ಜಾಹೀರಾಗಿದೆ. ಇವೆಲ್ಲ ವಿಷಯ ಗಳನ್ನು ಗಮನದಲ್ಲಿರಿಸಿಕೊಂಡು ಅವರ ಈ ಕಾರ್ಯಗಳನ್ನು ಸೂಕ್ತವಾದ ರೀತಿಯಲ್ಲಿ ಹದ್ದುಬಸ್ತಿನಲ್ಲಿಡುವುದು ಅವಶ್ಯಕವಾಗಿದೆ.
ಆ ವಿರೋಧವನ್ನು ಮರೆಯಬಾರದು !
ಚೀನಾದೇಶವು ಅನೇಕ ಬಾರಿ ಭಾರತದೊಂದಿಗೆ ವಿಶ್ವಾಸಘಾತ ಮಾಡಿದೆ. ೧೯೬೨ರಲ್ಲಿ ಹಿಂದಿ-ಚೀನಿ ಭಾಯಿ ಭಾಯಿ ಎಂದು ನುಡಿಯುತ್ತ ಭಾರತದ ಬೆನ್ನಿಗೆ ಚೂರಿ ಇರಿಯಿತು. ಅಂದಿನಿಂದ ಅದರ ವಿಶ್ವಾಸಘಾತಕ ಪರಂಪರೆಯು ಮುಂದುವರಿದಿದೆ. ಚೀನಾ ಭಾರತದ ಭೂಭಾಗವನ್ನು ಕೂಡ ಕಬಳಿಸಿದೆ. ಇಷ್ಟೆಲ್ಲ ನಡೆದರೂ ಭಾರತವು ಚೀನಾ ದೇಶವನ್ನು ಶತ್ರುವೆಂದು ಪರಿಗಣಿಸಲು ಸಿದ್ಧವಾಗಿಲ್ಲ. ಭಾರತದ ಈ ಎಲ್ಲರನ್ನೂ ನಂಬುವ ಮನೋಭಾವವು ಚೀನಾದೇಶಕ್ಕೆ ಚೆನ್ನಾಗಿ ಅರಿವಾಗಿದೆ. ಆದ್ದರಿಂದ ಅದು ಭಾರತದ ಹೊಸ ಹೊಸ ಭಾಗಗಳಲ್ಲಿ ಧೈರ್ಯದಿಂದ ನುಸುಳುತ್ತಿದೆ. ಚೀನಾದ ಕಿತಾಪತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚೀನಾದ ರಾಕ್ಷಸೀ ಮಹತ್ವಾಕಾಂಕ್ಷೆಗೆ ಭಾರತ ಏನು ಉತ್ತರಿಸುತ್ತದೆ? ಮತ್ತೊಂದೆಡೆ ಚೀನಾ ಮಾತ್ರ ಭಾರತವನ್ನು ಹೊಸಕಿ ಹಾಕಲು ನೋಡುತ್ತಿದೆ. ಪರಮಾಣು ಪೂರೈಕೆದಾರರ ದೇಶದ ಗುಂಪಿನಲ್ಲಿ (ಎನ್.ಎಸ್.ಜಿ.) ಭಾರತವನ್ನು ಸೇರಿಸಿಕೊಳ್ಳಲು ಚೀನಾ ದೇಶವು ಪ್ರಬಲವಾಗಿ ವಿರೋಧಿಸಿರುವುದನ್ನು ಭಾರತವು ಎಂದಿಗೂ ಮರೆಯಬಾರದು. ನಿಜ ಹೇಳಬೇಕೆಂದರೆ ಚೀನಾದೇಶಕ್ಕೆ ತಕ್ಕ ಪಾಠವನ್ನು ಕಲಿಸಲು ಭಾರತಕ್ಕೆ ಅತ್ಯಂತ ಸುಲಭವಿದೆ. ಭಾರತದಲ್ಲಿ ಎಷ್ಟು ಚೀನಾ ದೇಶದ ಸಾಮಗ್ರಿಗಳು ಬರುತ್ತವೆಯೋ, ಅವೆಲ್ಲವನ್ನು ನೇರವಾಗಿ ನಿಷೇಧಿಸಬೇಕು. ಮೂಗು ಮುಚ್ಚಿದಲ್ಲಿ ಬಾಯಿ ತೆರೆಯುತ್ತದೆ. ಈ ರೀತಿ ಕ್ರಮ ಕೈಗೊಳ್ಳಲು ಅಂತರರಾಷ್ಟ್ರೀಯ ನಿಯಮಗಳನ್ನು ಗಮನಿಸಬೇಕಾದ ಆವಶ್ಯಕತೆಯಿಲ್ಲ. ಕೊನೆಗೆ ಈ ದೇಶವು ಮಹತ್ವದ್ದಾಗಿದೆ. ಚೀನಾದೇಶಕ್ಕೆ ಪಾಠವನ್ನು ಕಲಿಸಲು ಈಗ ಜನಸಾಮಾನ್ಯರೂ ಮುಂದಾಗಬೇಕು. ಭಾರತೀಯರೇ ಚೀನಾ ದೇಶದ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ, ಸರಕಾರಕ್ಕೆ ಮೇಲಿನ ಕ್ರಮ ಕೈಗೊಳ್ಳದೇ ಅನ್ಯ ಮಾರ್ಗವಿಲ್ಲದಂತೆ ಮಾಡಬೇಕು. ಎಷ್ಟೇ ಕಡಿಮೆ ಬೆಲೆಯಿದ್ದರೂ, ಶತ್ರು ರಾಷ್ಟ್ರದ ಉತ್ಪಾದನೆಗಳನ್ನು ಉಪಯೋಗಿಸುವುದಿಲ್ಲ ವೆಂದು ಎಲ್ಲ ಭಾರತೀಯರು ಒಗ್ಗಟ್ಟಿನಿಂದ ಬಹಿಷ್ಕಾರ ಹಾಕಬೇಕು. ನಾಗರಿಕರ ಈ ನಡೆಯು ಚೀನಾ ದೇಶವನ್ನು ಸರಿದಾರಿಗೆ ತರಬಲ್ಲದು. ಚೀನಾದೇಶವನ್ನು ಗಡಿಯಲ್ಲಿ ನೇರವಾಗಿಯಲ್ಲದಿದ್ದರೂ ಆರ್ಥಿಕ ರೀತಿ ಯಿಂದ ಅದಕ್ಕೆ ನಿಶ್ಚಿತವಾಗಿಯೂ ಪಾಠವನ್ನು ಕಲಿಸಬಹುದಾಗಿದೆ. ಅದಕ್ಕಾಗಿ ಯಾದರೂ ಪ್ರತಿಯೊಬ್ಬರೂ ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹೆಚ್ಚುತ್ತಿರುವ ಚೀನಾದ ಕಿತಾಪತಿ !