ಹಿಂದೂಗಳು ಸಂಘಟಿತರಾಗಲೆಂದು : ಗಣೇಶೋತ್ಸವ

ಭಾದ್ರಪದ ಮಾಸವು ಆರಂಭವಾಗು ತ್ತಿದ್ದಂತೆಯೇ, ಎಲ್ಲರ ಮನಸೆಳೆಯುವುದು ಶ್ರೀಗಣೇಶನ ಆಗಮನದೆಡೆಗೆ !
ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತಿನಿಧಿತ್ವ ಮಾಡುವ ಉತ್ಸವವನ್ನು ಪ್ರತಿಯೊಬ್ಬ ಹಿಂದೂಗಳು ಆತುರದಿಂದ ದಾರಿ ಕಾಯುತ್ತಿರುತ್ತಾರೆ. ಆದರೆ ಹಿಂದೂಗಳೇ, ಸ್ವಲ್ಪ ನಮ್ಮ ಅಕ್ಕಪಕ್ಕದ ಮತ್ತು ದೇಶದ ವಿಚಾರ ಮಾಡಿನೋಡಿ ! ಸದ್ಯ ಹಿಂದೂ ಸಮಾಜದ ಮತ್ತು ನಮ್ಮ ರಾಷ್ಟ್ರದ ಸ್ಥಿತಿಯನ್ನು ನೋಡಿದರೆ, ರಾಷ್ಟ್ರದ ನಾಗರಿಕರು ಉತ್ಸವದಲ್ಲಿ ಮಗ್ನರಾಗಬೇಕೇ ? ದುರ್ದೈವದಿಂದ ಇದರ ಉತ್ತರ ಇಲ್ಲ ಎಂದಾಗಿದೆ.

ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹಿಂದೂಗಳು ಒಗ್ಗಟ್ಟಾಗಿರಬೇಕು, ಅವರನ್ನು ಜಾಗೃತಗೊಳಿಸಿ, ಕೃತಿಶೀಲರನ್ನಾಗಿ ಮಾಡಬೇಕು ಎನ್ನುವ ಏಕೈಕ ಉದ್ದೇಶ ದಿಂದ ಲೋಕಮಾನ್ಯ ತಿಲಕರು ಶ್ರೀಗಣೇಶೋತ್ಸವ ವನ್ನು ಸಾರ್ವಜನಿಕ ಉತ್ಸವವನ್ನಾಗಿ ಮಾಡಿದರು ! ಆದರೆ ಇಂದು ಹಿಂದೂಗಳ ಸಾರ್ವಜನಿಕ ಮತ್ತು ಧಾರ್ಮಿಕ ಶ್ರೀಗಣೇಶೋತ್ಸವದ ಸ್ವರೂಪವು ಕೇವಲ ಮನೋರಂಜನೆಯ ಸಲುವಾಗಿ ಮತ್ತು ಐಶ್ವರ್ಯಕ್ಕಾಗಿ ಹಾಗೂ ಧ್ವನಿಪ್ರದೂಷಣೆ ಮಾಡುವ ಕಾರ್ಯಕ್ರಮದ ಸ್ಥಳಗಳಾಗಿ ರೂಪುಗೊಂಡಿವೆ !
ಹಿಂದೂಗಳೇ, ನಾವು ಆದರ್ಶ  ಗಣೇಶೋತ್ಸವವನ್ನು ಆಚರಿಸಿ ಈ ಸ್ಥಿತಿಯನ್ನು ಬದಲಾಯಿಸಬೇಕಾಗಿದೆ
ಗಣೇಶೋತ್ಸವವಿದು ಮನೋರಂಜನೆಗಾಗಿ ಇರು ವುದಲ್ಲ, ನಮ್ಮ ಮನದೊಳಗಿನ ಭಾವಭಕ್ತಿಯನ್ನು ವೃದ್ಧಿಸಿ ಶ್ರೀಗಣೇಶನ ಕೃಪೆಯನ್ನು ಸಂಪಾದಿಸಲು ಇರುತ್ತದೆ, ಎಂಬುದನ್ನು ಗಣೇಶೋತ್ಸವ ಆಚರಿಸುವಾಗ ಸತತವಾಗಿ ಗಮನದಲ್ಲಿಡಬೇಕು. ಇಂದು ಹಿಂದೂ ಗಳು ಮನೋರಂಜನೆ, ಒಳಜಗಳಗಳಲ್ಲಿ ಸಿಲುಕಿದ್ದಾರೆ ಮತ್ತು ಆ ಕಡೆ ರಾಷ್ಟ್ರದ ಮೇಲೆ ಪ್ರತಿದಿನ ಉಗ್ರರಿಂದ ದಾಳಿ ನಡೆಸಲಾಗುತ್ತಿದೆ. ಗಡಿಯಲ್ಲಿ ಪಾಕ್‌ನಿಂದ ಗುಂಡು ಹಾರದಿರುವ ದಿನವೇ ಇಲ್ಲ. ಭ್ರಷ್ಟಾಚಾರ, ಕೊಲೆ, ದರೋಡೆ, ಬಲಾತ್ಕಾರ, ಆತ್ಮಹತ್ಯೆಗಳಂತಹ ವಾರ್ತೆಗಳಿ ಲ್ಲದೇ ಬೆಳಗಾಗುವುದಿಲ್ಲ. ಹಿಂದೂಗಳ ಗಣೇಶೋತ್ಸವವೂ ಇದ ರಿಂದ ಭಿನ್ನವಾಗಿಲ್ಲ. ಕಳೆದ
ಅನೇಕ ಭಯೋತ್ಪಾದನೆಯ ನೆರಳಿನಲ್ಲಿ ಹಿಂದೂಗಳು ಪ್ರತಿಯೊಂದು ಉತ್ಸವವನ್ನು ಆಚರಿಸುತ್ತಿದ್ದಾರೆ. ಅದಕ್ಕಾಗಿ ಗಣೇಶೋತ್ಸವ ಎಂದರೆ ಸಾಕು, ರಾಜ್ಯದ ಸ್ಥಳೀಯ ಪೊಲೀಸ್ ಆಡಳಿತದಿಂದ ಹಿಡಿದು ಉಗ್ರ ನಿಗ್ರಹ ದಳದವರೆಗೆ ಎಲ್ಲರೂ ಜಾಗರೂಕತೆ ಯಿಂದಿದ್ದು ೨೪ ಗಂಟೆಗಳ ಕಾಲ ಜನರ ಭದ್ರತೆಗಾಗಿ ಹೋರಾಡ ಬೇಕಾಗುತ್ತದೆ. ಇಷ್ಟೆಲ್ಲ ಮಾಡಿಯೂ ಕಳೆದ ಕೆಲವು ವರ್ಷಗಳನ್ನು ನೋಡಿದರೆ ಗಣೇಶೋತ್ಸವದಲ್ಲಿ ಎಲ್ಲಿಯೂ ಗಲಭೆಯಾಗಲಿಲ್ಲ, ಎಂದಾಗಲೇ ಇಲ್ಲ. ಇತ್ತೀಚೆಗೆ ಯಾಕೂಬ್‌ನನ್ನು ಗಲ್ಲಿಗೇರಿಸಿದ ನಂತರ ಸಾವಿರಾರು ಸಂಖ್ಯೆಯಲ್ಲಿ ಯಾಕೂಬ್‌ನನ್ನು ಬೆಂಬಲಿ ಸುವ ಸಾವಿರಾರು ಮತಾಂಧರು ಒಟ್ಟಾಗಿ ಸೇರಿದ್ದನ್ನು ಇಡೀ ದೇಶವು ಕಂಡಿತು. ಯಾವುದೇ ಕ್ಷಣ ಕರೆ ನೀಡಿದರೆ ಸಾಕು, ಮತಾಂಧರು ರಸ್ತೆಗಿಳಿಯುತ್ತಾರೆ, ಎಂಬಂತೆ ಇಂದಿನ ಸ್ಥಿತಿ ಇದೆ. ಇಂತಹ ಸಮಯದಲ್ಲಿ ಹಿಂದೂಗಳು ಏನು ಮಾಡಲು ಸಾಧ್ಯ ? ಜೀವನ್ಮರಣದ ಸಮಸ್ಯೆ ಬಂದೆರಗಿದಾಗ ಅವರು ಕೇವಲ ಏಟು ತಿನ್ನುವುದು, ರಕ್ತಪಾತದಲ್ಲಿ ಸಿಲುಕುವುದು ಮತ್ತು ಅವರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವನ್ನು ಕಣ್ಣೆದುರು ನೋಡುತ್ತ ಕುಳಿತುಕೊಳ್ಳಬೇಕೇ ? ಅಥವಾ ಈ ಭಯದ ಒತ್ತಡದಲ್ಲಿದ್ದು ಉತ್ಸವವನ್ನು ಆಚರಿಸಬೇಕೇ ? ಪೊಲೀಸರು ನಮ್ಮ ರಕ್ಷಣೆ ಮಾಡಲು ಅಸಮರ್ಥರು ಎಂಬುದು ಅನೇಕಬಾರಿ ಸಿದ್ಧವಾಗಿದೆ. ಗಣೇಶೋತ್ಸವದಲ್ಲಿ ಪ್ರಚಂಡ ಸಂಖ್ಯೆಯಲ್ಲಿ ಹಿಂದೂ ಯುವಕರು ಒಟ್ಟಿಗೆ ಸೇರುತ್ತಾರೆ. ಇದು ಹಿಂದೂಗಳ ಶಕ್ತಿಯಾಗಿದೆ. ಹಿಂದೂ ಯುವಕರ ಈ ಶಕ್ತಿ ಕೇವಲ ಮೋಜುಮಜಾ ಮಾಡುವುದರಲ್ಲಿ ಕಳೆಯುವುದನ್ನು ತಡೆಯುವುದು ಪ್ರತಿಯೊಂದು ಗಣೇಶೋತ್ಸವ ಮಂಡಳಿಯ ಕಾರ್ಯಕರ್ತರ, ಅವರ ಮುಖಂಡರ, ದೇವಸ್ಥಾನಗಳ ವಿಶ್ವಸ್ಥರ, ಪ್ರತಿಯೊಬ್ಬ ಹಿಂದುತ್ವವಾದಿಯ, ಪ್ರತಿಯೊಬ್ಬ ವಿಚಾರವಂತರ, ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಮತ್ತು ಪ್ರತಿ ಯೊಬ್ಬ ಪಾಲಕರ ಹೊಣೆಯಾಗಿದೆ. ಹಿಂದೂಗಳ ಈ ಉತ್ಸವದ ನಿಮಿತ್ತ ಸಂಘಟಿತರಾಗುವ ಯುವಕರಿಗೆ ರಾಷ್ಟ್ರದ ಮತ್ತು ಧರ್ಮದ ಸ್ಥಿತಿಯ ಬಗ್ಗೆ ಯೋಗ್ಯ ವಿಚಾರ ಮಾಡಲು ಯಾವ ಉಪಕ್ರಮಗಳು ಅಥವಾ ಕಾರ್ಯಕ್ರಮದಿಂದ ಸಾಧ್ಯವಾಗುವುದು ಎಂದು ಗಮನದಲ್ಲಿಟ್ಟು ಆ ರೀತಿಯ ಕಾರ್ಯಕ್ರಮ, ಪ್ರವಚನ, ಚರ್ಚೆಗಳನ್ನು ಏರ್ಪಡಿಸಿ ಅದರಲ್ಲಿ ರಾಷ್ಟ್ರ ಮತ್ತು ಧರ್ಮದ, ಎಂದರೆ ಅವರ ಸಮಸ್ಯೆಗಳ ಕುರಿತು ಗಾಂಭಿರ್ಯವನ್ನು ಮೂಡಿಸಬೇಕು ಮತ್ತು ಅವುಗಳಿಗೆ ಪರಿಹಾರ ಕಾಣುವ ಕೃತಿಶೀಲ ಉಪಾಯಗಳನ್ನು ಅವರ ಮುಂದಿಡಬೇಕು. ಮತಾಂಧರು ನಮ್ಮ ಮೇಲೆ ಒಳಗೂ ಹೊರಗೂ ದಾಳಿ ಮಾಡಲು ಸಿದ್ಧರಾಗಿಯೇ ಇದ್ದಾರೆ. ಈ ಉತ್ಸವದಲ್ಲಿ ಚಿತ್ರಗೀತೆ, ಅಶ್ಲೀಲ ನೃತ್ಯ ಮತ್ತು ಮದ್ಯಪಾನ ಇವುಗಳಲ್ಲಿ ಮಗ್ನರಾದರೆ, ಶತ್ರುಗಳನ್ನು ನಾವು ಎದುರಿಸಲು ಸಾಧ್ಯವೇ ?, ಎಂದು ಪ್ರತಿಯೊಬ್ಬ ಹಿಂದೂಗಳು ವಿಚಾರ ಮಾಡಬೇಕು. ಹಿಂದೂಗಳೇ, ಧರ್ಮಾಚರಣೆಯಿಂದ ಉತ್ಸವವನ್ನು ಆಚರಿಸಿದರೆ, ನಿಮ್ಮ ಮೇಲೆ ಶ್ರೀಗಣೇಶನ ಕೃಪೆಯಾಗುವುದು. ಧರ್ಮಾಚರಣೆ ಹೇಗೆ ಮಾಡುವುದು ಮತ್ತು ಗಣೇಶೋತ್ಸವದಲ್ಲಿ ಹಿಂದೂಗಳ ಸಂಘಟನೆ ಮತ್ತು ಪ್ರಬೋಧನೆ ಹೇಗೆ ಮಾಡುವುದು, ಎನ್ನುವ ಕುರಿತು ಹಿಂದೂ ಜನಜಾಗೃತಿ ಸಮಿತಿಯು ನಿಮಗೆ ಸಹಾಯ ಮಾಡಲು ಸಿದ್ಧವಿದೆ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳು ಸಂಘಟಿತರಾಗಲೆಂದು : ಗಣೇಶೋತ್ಸವ