ಶ್ರೀಕೃಷ್ಣನು ಏಕೆ ಪ್ರಿಯನೆನಿಸುತ್ತಾನೆ ?

‘ವಸುದೇವಸುತಂ ದೇವಂ ಕಂಸಚಾಣೂರ ಮರ್ದನಮ್
ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ॥
ಅರ್ಥ : ವಸುದೇವನ ಪುತ್ರ; ಕಂಸ, ಚಾಣೂರ ಮುಂತಾದವರನ್ನು ನಾಶಗೊಳಿಸುವ, ದೇವಕಿಗೆ ಪರಮಾನಂದವನ್ನು ನೀಡುವ ಮತ್ತು ಸಂಪೂರ್ಣ ಜಗತ್ತಿಗೆ ಗುರುಸ್ಥಾನದಲ್ಲಿರುವ ಭಗವಾನ ಶ್ರೀಕೃಷ್ಣನಿಗೆ ನಾನು ನಮಸ್ಕಾರ ಮಾಡುತ್ತೇನೆ.
೧. ಕೇವಲ ಇಷ್ಟರಿಂದಲೇ ಶ್ರೀಕೃಷ್ಣ ಪ್ರಿಯನಾಗಿ ದ್ದಾನೆ ಎಂದೇನೂ ಇಲ್ಲ.
ಹೇ ಶ್ರೀಕೃಷ್ಣಾ, ನೀನು ಪ್ರೀತಿಯ ಪುತ್ರನಾಗಿದ್ದೀ, ಆದ್ದರಿಂದ ನಂದನ ಪ್ರಿಯ ಕಾನ್ಹಾ ಆಗಿದ್ದೀ, ಹಾಗೆಂದು ನೀನು ನಮಗೆ ಪ್ರಿಯನಾಗಿಲ್ಲ,
ದೇವಕಿಯ ಎಂಟನೇ ಪುತ್ರ ಅಥವಾ ಯಶೋದೆಯ ನೆಚ್ಚಿನ ಕೃಷ್ಣನೆಂದು ನೀನು ನಮಗೆ ಪ್ರಿಯನಾಗಿಲ್ಲ,
ರಾಧೆಯ ಪ್ರೀತಿಯ, ಬಾಲ-ಗೋಪಾಲರ ಸಖ ನೆಂದು ನೀನು ನಮಗೆ ಪ್ರಿಯನಲ್ಲ,
ಪಾಂಡವರ ಬೆಂಬಲಿಗ, ಅರ್ಜುನನ ಸಖಾ, ಎಂದು ನೀನು ಪ್ರಿಯನಾಗಿಲ್ಲ,

ಸುಭದ್ರೆ ಮತ್ತು ದ್ರೌಪದಿಯರ ಸಹೋದರ, ರುಕ್ಮಿಣಿಯ ಪತಿಯೆಂದು ನೀನು ಪ್ರಿಯನಲ್ಲ,
ಕಂಸ-ಚಾಣೂರರಂತಹ ರಾಕ್ಷಸರನ್ನು ಹತ್ಯೆ ಮಾಡಿದೆಯೆಂದು ಪ್ರಿಯನಾಗಿಲ್ಲ, (ಅವರಂತೂ ನಿನ್ನ ಬಿರುದೇ ಆಗಿದ್ದರು. ದುಷ್ಟರನ್ನು ನಾಶಗೊಳಿಸ ಲಿಕ್ಕಾಗಿಯೇ ನೀನು ಬಂದಿದ್ದಿ),
ದೇವಾ ನೀನು ಸುಂದರ, ಬುದ್ಧಿವಂತ, ಚತುರ, ಜ್ಞಾನಿ ಆಗಿದ್ದಿಯೆಂದು ಪ್ರಿಯನಲ್ಲ,
ನೀನು ಸುಂದರವಾದ ಕೊಳಲು ಊದುತ್ತಿದ್ದಿ ಯೆಂದು ಸ್ವಲ್ಪ ಪ್ರಿಯನಾಗಿದ್ದಿ,
ಮಹಾಭಾರತವನ್ನು ನಡೆಸಿ ಅರ್ಜುನನಿಗೆ ‘ಶ್ರೀಮದ್ಭಗವದ್ಗೀತೆ’ಯನ್ನು ಹೇಳಿ ಜ್ಞಾನಾಮೃತವನ್ನು ನೀಡಿದೆ; ಆದ್ದರಿಂದ ನೀನು ಸ್ವಲ್ಪಮಟ್ಟಿಗೆ ಪ್ರಿಯನಾಗಿದ್ದಿ.
೨. ಶ್ರೀಕೃಷ್ಣ ಪ್ರಿಯನಾಗಿರಲು ಎಲ್ಲಕ್ಕಿಂತ ಮಹತ್ವದ ಕಾರಣವೆಂದರೆ...
ಹೇ ಶ್ರೀಕೃಷ್ಣಾ, ನಿನ್ನ ಪ್ರಿಯತ್ವದ ಎಲ್ಲಕ್ಕಿಂತ ಮಹತ್ವದ ಕಾರಣವೆಂದರೆ ನೀನು ಸನಾತನಧರ್ಮ ಸ್ಥಾಪನೆ ಮಾಡಿ ನಮಗೆ ನಾಲ್ಕು ವರ್ಣಕ್ಕನುಸಾರ ಸಾಧನೆಯನ್ನು ಕಲಿಸಿದ್ದಿ. ನಾಲ್ಕೂ ವರ್ಣಗಳಿಂದ ಭಕ್ತಿ ಮಾಡಿ ಮಾನವನಿಗೆ ಮೋಕ್ಷ ಪ್ರಾಪ್ತಿ ಮತ್ತು ಈಶ್ವರಪ್ರಾಪ್ತಿ ಮಾಡಲು ಸಾಧ್ಯವಿದೆ, ಎಂಬುದರ ಜ್ಞಾನವನ್ನು ನೀಡಿ ಕೃತಾರ್ಥಗೊಳಿಸಿದೆ. ಹೇ ಶ್ರೀಕೃಷ್ಣಾ, ನೀನು ಅತ್ಯಂತ ನ್ಯಾಯವಾದಿಯಾಗಿದ್ದಿ. ಆದ್ದರಿಂದ ಅಧಿಕ ಪ್ರಿಯನಾಗಿದ್ದಿ. ನಿನ್ನಕೃಪೆಯ ವೃಷ್ಟಿಯನ್ನು ಸವಿಯುವಾಗ ನಿನ್ನ ಪ್ರೀತಿಯ ಆನಂದದಲ್ಲಿನ ಪ್ರತಿಯೊಂದು ಕ್ಷಣವೆಂದರೆ ನೀನು, ನೀನು ಮತ್ತು ಕೇವಲ ನೀನೇ ಆಗಿದ್ದಿ. ನಿನ್ನ ಈ ಅಗಣಿತ ಉಪಕಾರ ವನ್ನು ಎಷ್ಟು ಸ್ಮರಿಸಬಹುದು ? ನಿನ್ನ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಬೇಕು ? ಯಾವ ಕುಬೇರ ನಮಗೆ ಅದಕ್ಕಾಗಿ ಶಬ್ದಗಳ ಭಂಡಾರವನ್ನು ತೆರೆದು ಕೊಡುವನು ? ಗೋಕುಲಾಷ್ಟಮಿಯ ಶುಭ ಮುಹೂರ್ತದಲ್ಲಿ ಭಕ್ತಿಯ ಸುಂಗಂಧದಲ್ಲಿ ತೇಲಾಡುವ ಶಬ್ದಗಳ ಈ ಪುಷ್ಪಗಳನ್ನು ನಿನ್ನ ಚರಣಗಳಲ್ಲಿ ಸಮರ್ಪಿಸಿ ನಿನ್ನ ಪೂಜೆ ಮಾಡುವೆನು.’

- ಪುಷ್ಪಾಂಜಲಿ (೨೮.೮.೨೦೧೩)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀಕೃಷ್ಣನು ಏಕೆ ಪ್ರಿಯನೆನಿಸುತ್ತಾನೆ ?