ಎಲ್ಲ ದೃಷ್ಟಿಗಳಿಂದಲೂ ಆದರ್ಶವಾಗಿರುವ ಸನಾತನದ ಆಶ್ರಮಗಳ ವೈಶಿಷ್ಟ್ಯಗಳು !

ಸದ್ಗುರು (ಸೌ.) ಬಿಂದಾ ಸಿಂಗಬಾಳ
ಇಂದು ಹಲವಾರು ಸಂತರ ಆಶ್ರಮಗಳು ಶಿಷ್ಯವರ್ಗಕ್ಕೆ ದಿಕ್ಕು ತೋರಿಸುತ್ತಿದ್ದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಆಶ್ರಮಗಳು ದುರ್ಲಭ. ಪರಾತ್ಪರ ಗುರು ಡಾ. ಆಠವಲೆಯವರು ನಿರ್ಮಿಸಿ
ರುವ ಆಶ್ರಮಗಳು ಕೇವಲ ಕಲ್ಲು-ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟ ವಾಸ್ತು ವಾಗಿರದೇ, ಸಾಧನೆಯ ಪರಿಪೂರ್ಣ ಪಾಠವನ್ನು ಕಲಿಸುವ ಹಾಗೂ ಕಣಕಣದಲ್ಲಿಯೂ ಈಶ್ವರನ ಅಸ್ತಿತ್ವದ ಅನುಭೂತಿ ಯನ್ನು ಕೊಡುವ ಆಶ್ರಮಗಳಾಗಿವೆ. ರಾಮನಾಥಿ (ಗೋವಾ)ಯಲ್ಲಿರುವ ಸನಾತನದ ಆಶ್ರಮವೆಂದರೆ ಹಿಂದೂ ರಾಷ್ಟ್ರದ ಚಿಕ್ಕ ಪ್ರತಿಕೃತಿಯೇ ಆಗಿದೆ. ಸನಾತನದ ಆಶ್ರಮಗಳು ಎಲ್ಲ ದೃಷ್ಟಿಯಿಂದಲೂ ಏಕೆ ಆದರ್ಶವಾಗಿವೆ ಎಂಬುದರ ತುಣುಕನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸಂಕಲನಕಾರರು : ಸದ್ಗುರು (ಸೌ.) ಬಿಂದಾ ಸಿಂಗಬಾಳ

ಸನಾತನದ ರಾಮನಾಥಿ ಆಶ್ರಮ !
ರಾಮನಾಥಿ ಆಶ್ರಮ
ಪರಾತ್ಪರ ಗುರು ಡಾ. ಆಠವಲೆ ಇವರ ವಾಸ್ತವ್ಯದಿಂದ ಪಾವನವಾಗಿರುವ, ಹಲವು ಸಂತರು ಮತ್ತು ಗಣ್ಯರು ಗೌರವಿಸಿರುವ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರ ಬ್ರಹ್ಮಾಂಡವ್ಯಾಪಿ ಕಾರ್ಯದ ಮೂಲಕ ಇಡೀ ಜಗತ್ತಿನ ಸಾಧಕರು, ಹಿಂದುತ್ವನಿಷ್ಠರು ಮತ್ತು ಜಿಜ್ಞಾಸುಗಳಿಗೆ ಮಾರ್ಗದರ್ಶಕವಾಗಿರುವ ವಿಶ್ವದೀಪವೆಂದರೆ ಸನಾತನದ ರಾಮನಾಥಿ (ಗೋವಾ) ಆಶ್ರಮ !
ಸಾಧಕಿಯೊಬ್ಬಳು ಕಾವ್ಯವೊಂದರಲ್ಲಿ ‘ಇಲ್ಲಿಂದ ನಡೆಯುತ್ತದೆ ಚೈತನ್ಯದ ಕಾರುಬಾರು’ ಎಂಬ ಪಂಕ್ತಿಯಿಂದ ರಾಮನಾಥಿ ಆಶ್ರಮ ವನ್ನು ಅರ್ಥಪೂರ್ಣವಾಗಿ ವರ್ಣಿಸಿದ್ದಾಳೆ. ಪ್ರತಿಯೊಬ್ಬನೂ ಜೀವನದಲ್ಲಿ ಒಮ್ಮೆಯಾದರೂ ಸನಾತನದ ರಾಮನಾಥಿ ಆಶ್ರಮಕ್ಕೆ ಭೇಟಿ ನೀಡಬೇಕು ಎಂದು ಅನೇಕ ಧರ್ಮಾಭಿಮಾನಿಗಳು, ಹಿತೈಷಿ ಗಳು ಹಾಗೂ ಜಿಜ್ಞಾಸುಗಳು ಉದ್ಗರಿಸಿದ್ದಾರೆ. ಇದು ಸನಾತನ ಸಂಸ್ಥೆಯ ಮುಖ್ಯಾಲಯವಾಗಿದೆ. ಸನಾತನದ ಕಾರ್ಯದ ನೈಜ ಪ್ರತಿಬಿಂಬವನ್ನು ತಿಳಿದುಕೊಳ್ಳುವುದಕ್ಕಾಗಿ, ಸನಾತನದ ಬೋಧನೆ ಏನೆಂಬುದನ್ನು ನೋಡುವುದಕ್ಕಾಗಿಯಾದರೂ ಈ ಆಶ್ರಮಕ್ಕೆ ಅಗತ್ಯವಾಗಿ ಭೇಟಿ ನೀಡಬೇಕು. ಸನಾತನದ ಸಾಧಕರ ಪ್ರೀತಿಯ ತವರಾಗಿರುವ ಈ ಆಶ್ರಮವು ಮೊದಲ ಭೇಟಿಯಲ್ಲಿಯೇ ನಿಮ್ಮನ್ನು ತಮ್ಮದನ್ನಾಸಿಕೊಳ್ಳುವುದು ಎಂಬುದ ರಲ್ಲಿ ಸಂದೇಹವಿಲ್ಲ ! ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾ. ಆಠವಲೆ ಇವರಿಗೆ ೯..೧೯೯೫ ರಂದು ‘ಸನಾತನ ಸಂಸ್ಥೆಯ ಕಛೇರಿಯನ್ನು ಗೋವಾದಲ್ಲಿ ಮಾಡಿ. ಗೋವಾದಲ್ಲಿ ವಿಶ್ವದೀಪವಾಗುವುದು’ ಎಂದು ಹೇಳಿದ್ದರು. ಅವರ ಆಶೀರ್ವಾದದಿಂದಲೇ ಇಂದು ಈ ಅದ್ಭುತವಾದ ಆಶ್ರಮವು ನಮ್ಮೆದುರು ನಿಂತಿದೆ.
. ಸಾತ್ತ್ವಿಕತೆಯ ದೃಷ್ಟಿಯಿಂದ ವಾಸ್ತುರಚನೆಯ ಅಭ್ಯಾಸ
ಆಶ್ರಮದಲ್ಲಿ ಗಣಕಯಂತ್ರದ ಟೇಬಲ್‌ಗಳನ್ನು ಇಡುವಾಗ, ನಿವಾಸಿ ಕೋಣೆಗಳಲ್ಲಿ ಮಂಚಗಳನ್ನು ಇಡುವಾಗ, ಗೋಡೆ-ಬೀರುಗಳ ಬಣ್ಣಗಳನ್ನು ಆಯ್ಕೆ ಮಾಡುವಾಗ ಅಲ್ಲದೇ ಇತರ ಪೀಠೋಪಕರಣಗಳನ್ನು ಇಡುವಾಗ ಸಾತ್ತ್ವಿಕತೆ ಹಾಗೂ ಜೋಡಣೆಯಿಂದ ನಿರ್ಮಾಣವಾಗುವ ಸ್ಪಂದನಗಳ ಅಧ್ಯಯನ ಮಾಡಲಾಗುತ್ತದೆ. ಯಾವುದೇ ಕೆಲಸವನ್ನು ಮಾಡುವಾಗ ಅದು ಕಣ್ಣುಗಳಿಗೆ ಚೆನ್ನಾಗಿ ಕಾಣಿಸುತ್ತದೆಯೇ ಎಂದಷ್ಟೇ ಅಲ್ಲ ಅದನ್ನು ನೋಡಿದಾಗ ಮನಸ್ಸಿಗೆ ಏನನಿಸುತ್ತದೆ ಎಂಬುದರ ಅಧ್ಯಯನ ಮಾಡು ವುದು ಈಗ ಸಾಧಕರಿಗೆ ರೂಢಿಯಾಗಿ ಹೋಗಿದೆ.
. ಗಿಡಗಳಿಂದ ಹೂವುಗಳನ್ನು ಕೀಳುವ ಆದರ್ಶ ಪದ್ಧತಿ !
ಆಶ್ರಮದಲ್ಲಿ ಧ್ಯಾನಮಂದಿರ ಹಾಗೂ ವಿವಿಧ ಕಕ್ಷೆಗಳಲ್ಲಿ ದೇವತೆಗಳ ಪ್ರತಿಮೆಗಳ ಪೂಜೆಗಾಗಿ ತೋಟದಿಂದ ಹೂವುಗಳನ್ನು ತರುತ್ತಾರೆ. ಆ ಹೂವುಗಳನ್ನು ಕೀಳುವಾಗ ಗಿಡದ ದರ್ಶನಿ (ಕಣ್ಣಿಗೆ ಕಾಣಿಸುವ) ಭಾಗದಲ್ಲಿರುವ ಹೂವುಗಳನ್ನು ಗಿಡದ ಮೇಲೆಯೇ ಬಿಡುತ್ತಾರೆ; ಏಕೆಂದರೆ ಅದು ಆ ಗಿಡದ ಸೌಂದರ್ಯವಾಗಿರುತ್ತದೆ. ಒಳಗಿನ, ಕಣ್ಣಿಗೆ ಕಾಣದಿರುವ ಭಾಗದಲ್ಲಿರುವ ಹೂವುಗಳನ್ನು ಕೀಳುತ್ತಾರೆ. ಆಶ್ರಮದಲ್ಲಿ ದೇವತೆಗಳ ಪ್ರತಿಮೆಗಳ ಸಂಖ್ಯೆಗನುಗುಣವಾಗಿಯೇ ಹೂವುಗಳನ್ನು ತರುತ್ತಾರೆ.
. ಕಟ್ಟುನಿಟ್ಟಾಗಿ ಮಾಡುವ ಮಾಸಿಕ ಸ್ವಚ್ಛತೆ
ಆಶ್ರಮದಲ್ಲಿ ಗುಡಿಸುವುದು, ಒರೆಸುವುದು, ಬಲೆ ತೆಗೆಯುವುದು, ಪಂಖ ಮತ್ತು ಕಿಟಕಿಗಳನ್ನೂ ಒರೆಸುವುದು ಮುಂತಾದ ಸೇವೆಗಳನ್ನು ನಿಯಮಿತವಾಗಿ ಕಡ್ಡಾಯವಾಗಿ ಮಾಡುತ್ತಾರೆ. ತಿಂಗಳಿಗೊಮ್ಮೆ ಎಲ್ಲ ವಸ್ತು ಗಳನ್ನೂ ತೊಳೆಯುತ್ತಾರೆ ಅಥವಾ ಒರೆಸುತ್ತಾರೆ. ಅಲ್ಲದೇ ಎಲ್ಲ ವಸ್ತುಗಳನ್ನು ಅತಿ ಸೂಕ್ಷ್ಮವಾಗಿ ಸ್ವಚ್ಛಗೊಳಿಸುತ್ತಾರೆ. ಎಲ್ಲರೂ ತಮ್ಮತಮ್ಮ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯುತ್ತಾರೆ. ಮೂರು ತಿಂಗಳಿಗೊಮ್ಮೆ ಆಶ್ರಮದ ಎಲ್ಲ ಕೋಣೆಗಳ ನೆಲವನ್ನು ತಿಕ್ಕಿ ಒರೆಸುತ್ತಾರೆ. ಸ್ವಚ್ಛತೆಯು ಪಾವಿತ್ರ್ಯದ ಮೊದಲ ಹೆಜ್ಜೆಯಾಗಿದೆ, ಎಂಬ ದೃಷ್ಟಿಯಿಂದ ಅದನ್ನು ನೋಡುತ್ತಾರೆ. ಕಸದ ಬುಟ್ಟಿ ಹಾಗೂ ಕಸವನ್ನು ತೆಗೆಯುವ ಮೊರವನ್ನೂ ಪ್ರತಿದಿನ ತೊಳೆದು ಸ್ವಚ್ಛ ಮಾಡುತ್ತಾರೆ. ಕಸಪೊರಕೆಯ ಮೇಲೆ ಬಂದಿರುವ ಆವರಣವನ್ನು ದೂರಗೊಳಿಸುವುದಕ್ಕಾಗಿ ಅದನ್ನೂ ಹದಿನೈದು ದಿನಗಳಿಗೊಮ್ಮೆ ತೊಳೆಯು ತ್ತಾರೆ. ಕಸದ ಬುಟ್ಟಿಯ ಅಡಿಯಲ್ಲಿ ರದ್ದಿ ಕಾಗದವನ್ನು ಇಟ್ಟು ನಂತರವೇ ಅದರೊಳಗೆ ಕಸವನ್ನು ಹಾಕುತ್ತಾರೆ. ನಿರುಪಯುಕ್ತ ಸಾಮಾನನ್ನು ಸಾತ್ತ್ವಿಕ ರೀತಿಯಲ್ಲಿ ಮಂಡಿಸಿ ಇಡುತ್ತಾರೆ.
. ಕಸದ ನಿರ್ವಹಣೆ
ಆಶ್ರಮದ ಕಸವನ್ನು ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸುತ್ತಾರೆ. ಹಸಿ ಕಸದಿಂದ ಕಂಪೋಸ್ಟ್ ಗೊಬ್ಬರವನ್ನು ತಯಾರಿಸುತ್ತಾರೆ. ಒಣ ಕಸವನ್ನು ಉರುವಲವೆಂದು ಬಳಸುತ್ತಾರೆ. ಆಶ್ರಮದಲ್ಲಿ ನಿರ್ಮಾಣವಾಗುವ ಉರುವಲು ಕಸವನ್ನು ನೀರು ಬಿಸಿ ಮಾಡಲು ಬಳಸುತ್ತಾರೆ.
. ಮಿತವ್ಯಯ
ಸನಾತನದ ಆಶ್ರಮಗಳನ್ನು ಸಾಧಕರು ಹಾಗೂ ಹಿತೈಷಿಗಳು ಕೊಟ್ಟಿರುವ ಅರ್ಪಣೆಯಿಂದ ನಡೆಸಲಾಗುತ್ತದೆ. ಆದ್ದರಿಂದಲೇ ಅರ್ಪಣೆದಾತರು ಶ್ರದ್ಧೆಯಿಂದ ಅರ್ಪಿಸಿರುವ ಹಣದ ಒಂದೊಂದು ಪೈಸೆ ಕೂಡ ಅಪವ್ಯಯವಾಗಬಾರದೆಂದು ಇಲ್ಲಿ ಎಚ್ಚರ ವಹಿಸಲಾಗುತ್ತದೆ. ಮಿತವ್ಯಯ ಎಂಬುದು ಈಶ್ವರನ ಗುಣವೇ ಆಗಿರುವುದರಿಂದ ಅದರ ಪ್ರತಿಬಿಂಬವೂ ಆಶ್ರಮದಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ.
೫ ಅ. ಬರೆಯಲು ಹಾಗೂ ಗಣಕೀಯ ಪ್ರತಿ (ಪ್ರಿಂಟ್) ತೆಗೆಯಲು ಒಂದುಬದಿ ಖಾಲಿ ಕಾಗದದ ಬಳಕೆ : ಆಶ್ರಮದಲ್ಲಿ ವ್ಯವಸ್ಥಾಪನೆಗೆ ಸಂಬಂಧಪಟ್ಟ ಸೇವೆಗಳು ಹಾಗೂ ಸನಾತನ ಪ್ರಭಾತ ನಿಯತಕಾಲಿಕೆಯ ನಿರ್ಮಿತಿಗಾಗಿ ಕಡತಗಳ ಗಣಕೀಯ ಪ್ರತಿಗಳನ್ನು ತೆಗೆಯಬೇಕಾಗುತ್ತದೆ. ಇವುಗಳನ್ನು ಒಂದು ಬದಿ ಉಪಯೋಗಿಸಲಾಗಿರುವ ಕಾಗದಗಳ ಮೇಲೆ ತೆಗೆಯುತ್ತಾರೆ. ಸಾಧಕರು ವಿಷಯಗಳನ್ನು ಬರೆದಿಟ್ಟುಕೊಳ್ಳಲು ಬಳಸುವ ವಹಿಗಳನ್ನು ಸಹ ಇಂತಹ ಕಾಗದಗಳಿಂದಲೇ ಆದರೆ ಅತ್ಯಂತ ಸುಂದರವಾಗಿ ತಯಾರಿಸಲಾಗುತ್ತದೆ.
೫ ಆ. ನೀರಿನ ಉಳಿತಾಯ ಹಾಗೂ ಮಿತವ್ಯಯದಿಂದ ವಿದ್ಯುತ್ತಿನ ಬಳಕೆ : ಆಶ್ರಮಗಳಲ್ಲಿ ನೀರನ್ನು ಮಿತವ್ಯಯದಿಂದ ಬಳಸುತ್ತಾರೆ. ಇದರ ಅಂತರ್ಗತವಾಗಿ ಬೇಸಿನ್‌ನಲ್ಲಿ ಬಾಯಿ ಮುಕ್ಕಳಿಸುವಾಗ ನಲ್ಲಿಯನ್ನು ಪೂರ್ಣ ಬಿಡದೇ ಅಗತ್ಯವಿದ್ದಷ್ಟು ನೀರನ್ನು ಮಾತ್ರ ಬಳಸಿ ನಲ್ಲಿಯನ್ನು ನಿಲ್ಲಿಸುವುದು, ತಿಕ್ಕಿದ ಪಾತ್ರೆಗಳನ್ನು ತೊಳೆಯುವಾಗ ಆಹಾರ ಗಟ್ಟಿಯಾಗಿ ಅಂಟಿರುವ ಪಾತ್ರೆಗಳನ್ನು ಅದರ ಕೆಳಗೆ ನೆನೆಯಲು ಇಡುವುದು ಮುಂತಾದ ಸೂಕ್ಷ್ಮ ವಿಷಯಗಳನ್ನು ದಕ್ಷತೆಯಿಂದ ಪಾಲಿಸಲಾಗುತ್ತದೆ. ವಿದ್ಯುತ್ತನ್ನು ಸಹ ಅತ್ಯಂತ ಮಿತವ್ಯಯದಿಂದ ಬಳಸುತ್ತಾರೆ.
೫ ಇ. ಇತರ ಆಶ್ರಮಗಳಿಗೆ ಹೋಗುವ-ಬರುವ ಸಾಧಕರ ಮೂಲಕ ಸಾಮಾನುಗಳನ್ನು ಕಳುಹಿಸುವುದು : ಸಂಸ್ಥೆಯ ಕಾರ್ಯವು ಇಡೀ ಭಾರತದಲ್ಲಿ ನಡೆಯುತ್ತಿರುವುದರಿಂದ ಪ್ರಸಾರಸಾಹಿತ್ಯ, ಸಾಪ್ತಾಹಿಕ ಇತ್ಯಾದಿಗಳನ್ನು ಒಂದು ಆಶ್ರಮದಿಂದ ಇನ್ನೊಂದು ಆಶ್ರಮಕ್ಕೆ ಕಳುಹಿಸಲೇ ಬೇಕಾಗುತ್ತದೆ. ಇಂತಹ ಸಮಯದಲ್ಲಿ ತುರ್ತಾಗಿ ಕಳುಹಿಸಬೇಕಾಗಿಲ್ಲದಿರುವ ಸಾಮಾನುಗಳನ್ನು ಹೆಚ್ಚಾಗಿ ಬೇರೆ ಆಶ್ರಮಗಳಿಗೆ ಹೋಗುವ ಸಾಧಕರ ಮೂಲಕ ಕಳುಹಿಸಿಕೊಡುತ್ತಾರೆ.
೫ ಈ. ಸೌರಶಕ್ತಿಯಿಂದ ನೀರು ಕಾಯಿಸುವುದು : ಆಶ್ರಮದಲ್ಲಿ ವಾಸಿಸುವ ಸಾಧಕರಿಗೆ ಸ್ನಾನಕ್ಕೆ ಬೇಕಾಗಿರುವ ನೀರನ್ನು ಸೌರಶಕ್ತಿಯಿಂದ ಬಿಸಿ ಮಾಡುತ್ತಾರೆ. ಹೀಗಾಗಿ ಬೆಳಗಿನ ಸಮಯದಲ್ಲಿ ನಿರ್ದಿಷ್ಟ ಕಾಲಾವಧಿಯಲ್ಲಿ ಎಲ್ಲರಿಗೂ ಬಿಸಿ ನೀರು ಸಿಗುತ್ತದೆ. ಅಲ್ಲದೇ ವಿದ್ಯುತ್ತಿನ ಉಳಿತಾಯವಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಬಂಬ್ ಮೂಲಕ ನೀರನ್ನು ಬಿಸಿ ಮಾಡುತ್ತಾರೆ.
. ನಿರುಪಯುಕ್ತದಿಂದ ಉಪಯುಕ್ತ ವಸ್ತುಗಳನ್ನು ನಿರ್ಮಿಸಿ ಅತ್ಯಂತ ಸುಸಜ್ಜಗೊಳಿಸಲಾಗಿರುವ ಆಶ್ರಮಗಳು
ಆಶ್ರಮದಲ್ಲಿ ಬಳಸಲಾಗುವ ಗಣಕಯಂತ್ರದ ಟೇಬಲ್‌ಗಳು, ಮರದ ಕುರ್ಚಿಗಳು, ಕಪಾಟುಗಳು, ಕೋಣೆಗಳಲ್ಲಿನ ಮಂಚಗಳು ಹೆಚ್ಚಾಗಿ ಇತರರು ಅರ್ಪಣೆಯೆಂದು ಕೊಟ್ಟಿರುವ ವಸ್ತುಗಳನ್ನು ಅಥವಾ ಹಲವಾರು ವರ್ಷ ಬಳಸಿ ಗುಜರಿಗೆ ಕೊಟ್ಟಿರುವ ಸಾಮಾನುಗಳನ್ನು ಪುನಃ ದುರಸ್ತಿ ಮಾಡಿ ನಿರ್ಮಿಸಲಾಗಿವೆ. ಸಾಧಕರು ಈ ದುರಸ್ತಿ ಕಾರ್ಯವನ್ನು ಎಷ್ಟು ಸುಂದರವಾಗಿ ಮಾಡುತ್ತಾರೆಂದರೆ ಆಶ್ರಮವನ್ನು ನೋಡುವಾಗ ಈ ಸಂಗತಿಯು ಯಾರ ಗಮನಕ್ಕೂ ಬರುವುದಿಲ್ಲ. ಆದ್ದರಿಂದಲೇ ಸಾಧಕರಿಗೆ ಸೇವೆ ಮಾಡಲು ಬೇಕಾಗಿರುವ ಸೌಕರ್ಯ-ಸೌಲಭ್ಯಗಳನ್ನು ಅತ್ಯಲ್ಪ ಖರ್ಚಿನಲ್ಲಿ ಒದಗಿಸಲಾಗಿದೆ. ಆಶ್ರಮದಲ್ಲಿ ಪ್ರತಿಯೊಂದು ಕಕ್ಷೆಯೆದುರು ಹಾಕಲಾಗುವ ಕಾಲೊರೆಸುವ ಬಟ್ಟೆಗಳನ್ನು ಸಹ ಹತ್ತಿಯ ಹಳೆಯ ಬಟ್ಟೆಗಳು, ಹರಿದ ಬೆಡ್‌ಶೀಟ್ ಗಳು ಮುಂತಾದವುಗಳಿಂದ ತಯಾರಿಸಲಾಗುತ್ತದೆ. ಅವುಗಳನ್ನು ತಯಾರಿಸುವಾಗಲೂ ಸೌಂದರ್ಯದ ದೃಷ್ಟಿಯಿಂದ ವಿಚಾರ ಮಾಡ ಲಾಗುತ್ತದೆ, ಹಾಗಾಗಿ ಅವುಗಳನ್ನು ನಿರುಪಯುಕ್ತ ವಸ್ತುಗಳಿಂದ ತಯಾರಿಸಿ ದ್ದರೂ ಅವು ಆಕರ್ಷಕವಾಗಿ ಕಾಣುತ್ತವೆ.
ಕಸದಿಂದ ರಸ ಈ ಸಂಕಲ್ಪನೆಯನ್ನು ಆಶ್ರಮದಲ್ಲಿ ಮಾತ್ರವಲ್ಲದೇ ಎಲ್ಲೆಡೆಯೂ ಎಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆಂದರೆ ಅವೆಲ್ಲ ಸಂಗತಿಗಳನ್ನೂ ವಿವರಿಸಲು ಬೇರೊಂದು ಲೇಖನವನ್ನು ಬರೆಯ ಬೇಕಾದೀತು.
. ಸ್ವಚ್ಛ ಹಾಗೂ ಸಾತ್ತ್ವಿಕ ಅನ್ನಪೂರ್ಣಾ ಕಕ್ಷೆ
ಆಶ್ರಮದ ಅಡುಗೆಮನೆಯೆಂದರೆ ಸಾಕ್ಷಾತ್ ಅನ್ನಪೂರ್ಣಾ ಕಕ್ಷೆಯೇ ಹೌದು. ಉತ್ತಮ ಆಯೋಜನೆಯಿದ್ದ ಕಾರಣ ಎಂದೂ ಮಹಾಪ್ರಸಾದವು ಸಿದ್ಧವಾಗಲು ತಡವಾಯಿತು ಎಂದಾಗುವುದಿಲ್ಲ.
೭ ಅ. ಪ್ರಸಾದ-ಮಹಾಪ್ರಸಾದ ನಿಖರ ನೋಂದಣಿ : ಭೋಜನ ಸಮಯದಲ್ಲಿ ಹಿಂದಿನ ಆಹಾರ ಪದಾರ್ಥಗಳನ್ನು ಪ್ರಾಧಾನ್ಯತೆಯಿಂದ ಮುಗಿಸುವುದು ಆಶ್ರಮದ ಶಿಸ್ತಾಗಿದೆ. ಸಾಧಕರ ಸಂಖ್ಯೆಯನ್ನು ಊಹಿಸಿ ಒಟ್ಟಾರೆ ಅಡುಗೆಯನ್ನು ಮಾಡದೇ ಹಿಂದಿನ ದಿನವೇ, ಮರುದಿನ ಎಷ್ಟು ಸಾಧಕರು ಪ್ರಸಾದ-ಮಹಾಪ್ರಸಾದಕ್ಕಾಗಿ ಆಶ್ರಮದಲ್ಲಿ ಇರುವರು ಎಂಬುದನ್ನು ನೋಡಿಕೊಂಡು ಅದಕ್ಕನುಸಾರವಾಗಿ ಪೂರ್ವಸಿದ್ಧತೆಯನ್ನು ಮಾಡುತ್ತಾರೆ. ಮರುದಿನ ಯಾರಾದರೂ ಮಹಾಪ್ರಸಾದಕ್ಕೆ ಆಶ್ರಮದಲ್ಲಿ ಇರದಿದ್ದರೆ ಅದರ ಪೂರ್ವಕಲ್ಪನೆಯನ್ನು ಅನ್ನಪೂರ್ಣಾ ಕಕ್ಷೆಗೆ ಕೊಡುತ್ತಾರೆ. ಆಶ್ರಮದಲ್ಲಿ ಆಹಾರ ಅಪವ್ಯಯವಾಗುವ ಪ್ರಸಂಗವು ನಡೆಯುವುದು ಅತ್ಯಂತ ಅಪರೂಪವಾಗಿದೆ.
೭ ಆ. ತಾಯಿಯ ಪ್ರೀತಿಯಿಂದ ಸಾಧಕರ ಪೋಷಣೆ ಮಾಡುವುದು : ಆಶ್ರಮದಲ್ಲಿ ಹಬ್ಬ-ಹರಿದಿನದಂದು ಅಥವಾ ಸಂತಸನ್ಮಾನದಂತಹ ಆನಂದದ ಕ್ಷಣಗಳಲ್ಲಿ ಸಾಧಕರಿಗೆಂದು ಸಿಹಿ ತಿಂಡಿಗಳನ್ನು ಖಂಡಿತ ಮಾಡುತ್ತಾರೆ. ದೀಪಾವಳಿಯ ಸಮಯದಲ್ಲಿ ಹಲವಾರು ಸಾಧಕರು ತಮ್ಮ ಕುಟುಂಬದವರನ್ನು ಭೇಟಿಯಾಗುವುದಿಲ್ಲ ಎಂದು ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ; ಇಂತಹ ಸಮಯದಲ್ಲಿ ಆಶ್ರಮದಲ್ಲಿಯೇ ಉಳಿದುಕೊಳ್ಳುವ ಸಾಧಕರಿಗಾಗಿ ಪ್ರತಿದಿನ ವಿಶೇಷ ಪದಾರ್ಥಗಳನ್ನು ತಯಾರಿಸುವ ಮೂಲಕ ಅವರಿಗೆ ಮನೆಯವರ ಕೊರತೆ ಅನಿಸದಂತೆ ಅವರನ್ನು ನೋಡಿಕೊಳ್ಳಲಾಗುತ್ತದೆ. ಸನಾತನದ ಹಲವು ಸಾಧಕರು ಧರ್ಮಪ್ರಚಾರಕ್ಕೆಂದು ವಿವಿಧ ಜಿಲ್ಲೆ ಗಳಿಗೂ, ರಾಜ್ಯಗಳಿಗೂ ಹೋಗುತ್ತಾರೆ. ಇಂತಹ ಸಮಯದಲ್ಲಿ ಅವರು ಎಲ್ಲಿ ಏನು ಸಿಗುವುದೋ ಅದನ್ನು ಪ್ರಸಾದವೆಂದು ಗ್ರಹಿಸಿ ಆನಂದದಿಂದ ಧರ್ಮಪ್ರಚಾರವನ್ನು ಮಾಡುತ್ತಿರುತ್ತಾರೆ. ಅಖಿಲ ಭಾರತೀಯ ಹಿಂದೂ ಅಧಿವೇಶನ ಅಥವಾ ಸಾಧನಾವಿಷಯದ ಶಿಬಿರದ ಪ್ರಯುಕ್ತ ಎಲ್ಲೆಡೆಗಳಲ್ಲಿರುವ ಸಾಧಕರು ಆಶ್ರಮದಲ್ಲಿ ಸೇರಿದಾಗ, ಯಾವುದಾದರೊಂದು ಕಾರಣದಿಂದ ದೂರ ಹೋಗಿದ್ದ ಮಕ್ಕಳು ಮನೆಗೆ ಹಿಂತಿರುಗಿದಾಗ ತಾಯಿಗೆ ಯಾವ ರೀತಿ ಆನಂದವಾಗುತ್ತದೆಯೋ ಅಂತಹ ಆನಂದವಾಗಿ ವಿವಿಧ ಪದಾರ್ಥಗಳನ್ನು ಮಾಡಲಾಗುತ್ತದೆ. ವರ್ಷದಲ್ಲಿ ಯಾವಾಗಲಾದರೊಮ್ಮೆ ಗುರುಮಾತೆಯ ಮಗ್ಗಲಿಗೆ ಬರುವ ಈ ಸಾಧಕರ ಇಷ್ಟಾನಿಷ್ಟವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಪದಾರ್ಥಗಳನ್ನು ತಯಾರಿಸಿ ಅವರಿಗೆ ಉಣಬಡಿಸುವ ಬೋಧನೆಯೂ ಪರಾತ್ಪರ ಗುರು ಡಾ. ಆಠವಲೆಯವರದ್ದೇ ಆಗಿದೆ ! ಮನೆಯಲ್ಲಿದ್ದುಕೊಂಡು ಪ್ರಚಾರಸೇವೆ ಮಾಡುವ ಅಥವಾ ಅಶ್ರಮದಲ್ಲಿದ್ದುಕೊಂಡು ಧರ್ಮಸೇವೆ ಮಾಡುವ ಸಾಧಕರಿಗೆ ಯಾವುದಾದರೊಂದು ಕಾರಣದಿಂದ ತನ್ನಿಂದ ತಾನೇ ಸಿಹಿ ತಿನಿಸು ಗಳನ್ನು ಕೊಡಲಾಗುತ್ತದೆ. ಹೊರಪ್ರಾಂತಗಳಿಗೆ ಹೋಗಿ ಧರ್ಮಸೇವೆಯನ್ನು ಮಾಡುವ ಸಾಧಕರನ್ನು ಪ.ಪೂ. ಡಾಕ್ಟರರು ವಿಶೇಷವಾಗಿ ಕೊಂಡಾಡುತ್ತಾರೆ.
೭ ಇ. ಸಾಧಕರ ಪಥ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆ ಮಾಡುವುದು : ಸಾಧಕರಿಗೆ ಅವರ ಆರೋಗ್ಯದ ದೃಷ್ಟಿಯಿಂದ ಯಾವ ವಿಧದ ಭೋಜನದ ಅಗತ್ಯವಿದೆಯೋ ಆ ವಿಧದ ಭೋಜನ ಹಾಗೂ ಅಲ್ಪಾಹಾರವನ್ನು ಒದಗಿಸಲಾಗುತ್ತದೆ; ಉದಾಹರಣೆಗೆ, ಕೆಲವು ಸಾಧಕ ರಿಗೆ ಖಾರದ ಪದಾರ್ಥಗಳು ವರ್ಜ್ಯವಾಗಿರುತ್ತವೆ ಅಥವಾ ಕೆಲವು ಸಾಧಕರಿಗೆ ಕೆಲವು ತರಕಾರಿಗಳು ಅಥವಾ ಬೇಳೆಗಳು ವರ್ಜ್ಯವಾಗಿರುತ್ತವೆ; ಕೆಲವರಿಗೆ ಗೋಧಿಯ ಚಪಾತಿ ಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಧಕನಿಗೆ ಆತನ ಪಥ್ಯಕ್ಕನುಸಾರವಾಗಿ ಭೋಜನವನ್ನು ಕೊಡಲಾಗುತ್ತದೆ. ಎಲ್ಲರಿಗೆಂದು ತಯಾರಿಸುವ ಪಲ್ಯ, ಸಾರು ಯಾರಾದರೊಬ್ಬ ಸಾಧಕನಿಗೆ ಆಗುವುದಿಲ್ಲವೆಂದಿದ್ದಲ್ಲಿ ಆತನಿಗಾಗಿ ಬೇರೆ ಪದಾರ್ಥವನ್ನು ತಯಾರಿಸ ಲಾಗುತ್ತದೆ. ಕುಡಿಯುವ ನೀರನ್ನೂ ಕುದಿಸಿ ಆರಿಸಿಡಲಾಗುತ್ತದೆ. ಯಾರಿಗಾ ದರೂ ತುಂಬ ತಣ್ಣಗಾದ ನೀರು ಬೇಕಾದರೆ ಅವರಿಗಾಗಿ ಶೀತಕಪಾಟಿನಲ್ಲಿ ನೀರು ಕೂಡ ಇರುತ್ತದೆ.
೭ ಈ. ಪ್ರತಿಯೊಂದು ವಿಧದ ತಿಂಡಿಯು ಎಲ್ಲರಿಗೂ ಸಿಗುವಂತೆ ಆಯೋಜನೆ : ಆಶ್ರಮದಲ್ಲಿನ ಸಾಧಕರಿಗೆಂದು ಇತರ ಪಟ್ಟಣಗಳಲ್ಲಿನ ಸಾಧಕರು, ಹಿತೈಷಿಗಳು, ಅರ್ಪಣದಾತರು ಕಳಿಸುವ ತಿಂಡಿಗಳ ಪೈಕಿ ಯಾವು ದನ್ನು ಮೊದಲು ಮುಗಿಸಬೇಕಾಗಿದೆಯೋ ಅದನ್ನು ಎಲ್ಲರಿಗೂ ಮೊದಲು ಕೊಡಲಾಗುತ್ತದೆ. ಆಶ್ರಮದಲ್ಲಿ ಯಾವುದಾದರೊಂದು ಪದಾರ್ಥವು ಕಡಿಮೆ ಪ್ರಮಾಣದಲ್ಲಿದ್ದರೆ ಅದರ ಒಂದು ಚೂರಾದರೂ ಎಲ್ಲರಿಗೂ ಸಿಗು ವಂತೆ ಎಚ್ಚರ ವಹಿಸಲಾಗುತ್ತದೆ.
೭ ಉ. ಅಲ್ಪಾಹಾರದ ಸೇವೆಯನ್ನು ಎಲ್ಲ ಸಾಧಕರೂ ಸೇರಿ ಮಾಡುವುದು : ಸಾಧಕರಿಗಾಗಿ ಬೆಳಗಿನ ಅಲ್ಪಾಹಾರವನ್ನು ತಯಾರಿಸುವುದು, ಮಧ್ಯಾಹ್ನದ ಪ್ರಸಾದದ ಸಮಯದಲ್ಲಿ ಚಹಾ ಮತ್ತು ಕಷಾಯ ತಯಾರಿ ಸುವುದು ಈ ಸೇವೆಗಳನ್ನು ಎಲ್ಲ ಸಾಧಕರೂ ಸರದಿಯಂತೆ ಮಾಡುತ್ತಾರೆ. ಅನ್ನಪೂರ್ಣಾ ಕಕ್ಷೆಯಲ್ಲಿರುವ ಸಾಧಕರಿಗೆ ಮಹಾಪ್ರಸಾದವನ್ನು ತಯಾರಿ ಸುವ ಸೇವೆಯಿರುತ್ತದೆ. ಆದ್ದರಿಂದ ಈ ಸೇವೆಗಳ ಹೊರೆ ಅವರ ಮೇಲೆ ಬೀಳಲು ಬಿಡಲಾಗುವುದಿಲ್ಲ.
೭ ಊ. ಪ್ರಸಾದ-ಮಹಾಪ್ರಸಾದದ ಸಮಯವಾಗಿದೆ ಎಂಬುದನ್ನು ಸಾಧಕರಿಗೆ ನೆನಪಿಸುವುದು : ಸಾಧಕರು ಸೇವೆಗಳಲ್ಲಿ ಎಷ್ಟು ಮಗ್ನರಾಗಿ ರುತ್ತಾರೆಂದರೆ ಬಹಳಷ್ಟು ಬಾರಿ ಪ್ರಸಾದ-ಮಹಾಪ್ರಸಾದದ ಸಮಯ ಆಗಿದೆ ಎಂಬುದು ಅವರ ಗಮನಕ್ಕೆ ಬರುವುದಿಲ್ಲ. ಇಂತಹ ಸಮಯದಲ್ಲಿ ಉದ್ಘೋಷಣೆ ಮಾಧ್ಯಮದಿಂದ ಪ್ರಸಾದ-ಮಹಾಪ್ರಸಾದದ ಸಮಯವಾಗಿದೆ ಎಂಬುದನ್ನು ಎಲ್ಲರಿಗೂ ತಿಳಿಸಲಾಗುತ್ತದೆ. ಅಡುಗೆ ಸಿದ್ಧವಾಯಿ ತೆಂದರೆ ಮುಗಿಯಿತು ಎಂದಿರದೆ, ಎಲ್ಲ ಸಾಧಕರೂ ಹೊಟ್ಟೆ ತುಂಬ ಊಟ ಮಾಡಿದರೋ ಇಲ್ಲವೋ ಎಂಬುದರ ಬಗ್ಗೆಯೂ ಪ್ರೀತಿಯಿಂದ ಗಮನ ಕೊಡಲಾಗುತ್ತದೆ.
೭ ಎ. ತರಕಾರಿಗಳನ್ನು ಜೋಡಿಸಿಡುವ ಆದರ್ಶ ರ್ಯಾಕ್ : ಇಲ್ಲಿ ಹಣ್ಣಾಗಿರುವ, ತುರ್ತಾಗಿ ಬಳಸಬೇಕಾಗಿರುವ ತರಕಾರಿಗಳನ್ನು ಮುಂದಿನ ಭಾಗದಲ್ಲಿಟ್ಟು, ಕೆಲವು ದಿನಗಳಾದ ನಂತರ ಬಳಸಬಹುದಾದಂತಹ ತರಕಾರಿಗಳನ್ನು ಹಿಂದೆ ಇಡುತ್ತಾರೆ; ಹಾಗಾಗಿ ತರಕಾರಿಗಳ ಸುಯೋಗ್ಯ ಬಳಕೆಯಾಗದ ಕಾರಣಕ್ಕಾಗಿ ಯಾವ ತರಕಾರಿಯೂ ಹಾಳಾಗುವುದಿಲ್ಲ.
. ಅನಾರೋಗ್ಯದಲ್ಲಿರುವ ಸಾಧಕರ ಕಾಳಜಿ
ಆಶ್ರಮವು ನೂರಾರು ಸದಸ್ಯರಿರುವ ಕುಟುಂಬವೇ ಆಗಿದೆ. ಇಲ್ಲಿ ಅನಾರೋಗ್ಯವಿರುವ ಸಾಧಕರ ಪೂರ್ಣ ಕಾಳಜಿ ವಹಿಸುತ್ತಾರೆ. ಅವರ ವ್ಯಾಧಿಗನುಸಾರವಾಗಿ ಪಥ್ಯಪಾಲನೆ, ಮರ್ದನ, ಔಷಧೋಪಚಾರ ಹಾಗೂ ವೈದ್ಯರು ಹೇಳಿರುವ ಭೋಜನ-ಅಲ್ಪಾಹಾರದ ಸಮಯ ಇವೆಲ್ಲವುಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆ ಸಾಧಕನ ಕೋಣೆಯಲ್ಲಿರುವ ಸಾಧಕರು ಅವನ ಬೇಕು-ಬೇಡಗಳನ್ನೂ ನೋಡಿಕೊಳ್ಳುತ್ತಾರೆ; ಅಲ್ಲದೇ ಆತನ ಜೊತೆಯಲ್ಲಿರುವ ಸಾಧಕರೂ ಆತನಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಅನಾರೋಗ್ಯವಿರುವ ಸಾಧಕನ ಬಟ್ಟೆಗಳನ್ನು ಒಗೆಯು ವುದರಿಂದ ಹಿಡಿದು ಸಾಧಕಿಯರ ಜಡೆ ಹೆಣೆಯುವ ವರೆಗೆ ಎಲ್ಲವನ್ನೂ ಅತ್ಯಂತ ಪ್ರೀತಿಯಿಂದ ಮಾಡುತ್ತಾರೆ. ಆತನು ಕೋಣೆಯಲ್ಲಿಯೇ ಮಲಗಿಕೊಂಡಿರಬೇಕಾದ ಪ್ರಮೇಯ ಬಂದರೆ ಆತನನ್ನು ಭೇಟಿಯಾಗಿ ಆತನಿಗೆ ಸಾಧನೆಯ ವಿಷಯಗಳನ್ನು ಹೇಳಿ ಪ್ರೋತ್ಸಾಹಿಸುವುದು, ಓದು ವುದಕ್ಕೆ ಗ್ರಂಥಗಳನ್ನು ಕೊಡುವುದು ಇದೆಲ್ಲವೂ ಇದರಲ್ಲಿ ಬರುತ್ತದೆ. ನಿಜವಾಗಿಯೂ ಈ ಪ್ರೇಮಕ್ಕೆ ಉಪಮೆಯೇ ಇಲ್ಲ!
. ಸಾಧಕರ ಜೀವನದಲ್ಲಿ ಆನಂದದ ಪ್ರಸಂಗಗಳಲ್ಲಿ ಸಹಭಾಗಿಗಳಾಗುವುದು
ಆಶ್ರಮ ಸಾಧಕರ ಹುಟ್ಟುಹಬ್ಬ, ವ್ಯವಹಾರದಲ್ಲಿನ ಯಶಸ್ಸು ಮತ್ತು ಇತರ ಆನಂದದ ಕ್ಷಣಗಳನ್ನು ಉತ್ಸಾಹದಿಂದ ಆದರೆ ಧರ್ಮಶಾಸ್ತ್ರಕ್ಕನುಸಾರ ಆಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇತರ ಸಾಧಕರು ಆ ಸಾಧಕನ ಮುಂದಿನ ಆಧ್ಯಾತ್ಮಿಕ ಪ್ರಗತಿಗಾಗಿ ತಾವೇ ತಯಾರಿಸಿರುವ ಕಲ್ಪನೆಯಂತೆ ಶುಭಾಶಯಪತ್ರಗಳನ್ನು ಕೊಟ್ಟು ಆನಂದವನ್ನು ವ್ಯಕ್ತಪಡಿಸುತ್ತಾರೆ. ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ನೀಡುವ ಲೇಖನವನ್ನು ಆಶ್ರಮದ ಫಲಕದ ಮೇಲೆ ಬರೆಯಲಾಗುತ್ತದೆ.
೧೦. ಪ್ರತಿಯೊಬ್ಬ ಸಾಧಕನ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯ ಬಗ್ಗೆ ವಿಚಾರ
ಸನಾತನದ ಆಶ್ರಮದಲ್ಲಿ ಸಾಧಕರ ಸಾಧನೆಯ ಕಡೆ ಕಟ್ಟುನಿಟ್ಟಾಗಿ ಗಮನ ಹರಿಸುತ್ತಾರೆ. ಸಾಧಕರು ಸಾಧನೆಗೆಂದು ಆಶ್ರಮಕ್ಕೆ ಬಂದಿರುವುದರಿಂದ ಅವರಿಂದ ಯೋಗ್ಯ ಸಾಧನೆಯನ್ನು ಮಾಡಿಸಿಕೊಳ್ಳುವುದು ಹಾಗೂ ಅವರನ್ನು ಸಾಧನೆಯ ಪ್ರಗತಿಪಥದಲ್ಲಿ ಮುನ್ನಡೆಸುವುದನ್ನು ಸನಾತನವು ತಮ್ಮ ಕರ್ತವ್ಯವೆಂದು ಭಾವಿಸುತ್ತದೆ. ಕಾರ್ಯವಲ್ಲ, ಸಾಧಕರು ಮೋಕ್ಷಕ್ಕೆ ಹೋಗಬೇಕು, ಎಂಬುದನ್ನು ಆಗಾಗ ಅವರ ಮನಸ್ಸಿಗೆ ಬಿಂಬಿಸಲಾಗುತ್ತದೆ. ಆದ್ದರಿಂದ ಕೆಲವೊಮ್ಮೆ ಕಾರ್ಯಕ್ಕೆ ಹಾನಿಯಾಗುತ್ತಿದ್ದರೂ ಆ ಪ್ರಸಂಗದಲ್ಲಿ ಸಾಧಕನ ಸಾಧನೆಯ ಕಡೆಗೆ ಗಮನ ಕೊಡಲಾಗುತ್ತದೆ. ಸಾಧಕರಿಗೆ ವ್ಯಷ್ಟಿ ಸಾಧನೆಯಲ್ಲಿ ಮಾರ್ಗದರ್ಶನ ಮಾಡುವುದಕ್ಕೆಂದು ಸಾಪ್ತಾಹಿಕ ಸತ್ಸಂಗಗಳು, ಭಾವಸತ್ಸಂಗಗಳು ಮುಂತಾದವುಗಳನ್ನು ಆಯೋಜಿಸ ಲಾಗುತ್ತದೆ. ಸಮಷ್ಟಿ ಸಾಧನೆಯಲ್ಲಿ ಆಗುವ ತಪ್ಪುಗಳು, ಸಾಧಕನ ಫಲಶೃತಿಯನ್ನು ಹೆಚ್ಚಿಸುವುದಕ್ಕಾಗಿ ಪ್ರಯತ್ನಗಳು ಈ ವಿಷಯಗಳ ಬಗ್ಗೆಯೂ ಸಾಪ್ತಾಹಿಕ ಸತ್ಸಂಗಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ, ಆಧ್ಯಾತ್ಮದಲ್ಲಿನ ಉನ್ನತ ಸಾಧಕರು, ಎಲ್ಲರಿಗೂ ಇದುವರೆಗೆ ಅವರಿಂದ ಸೇವೆ ಯಲ್ಲಾಗಿರುವ ತಪ್ಪುಗಳು ಹಾಗೂ ಮುಂದಿನ ಪ್ರಗತಿಯಾಗುವುದಕ್ಕಾಗಿ ಮಾರ್ಗದರ್ಶನವನ್ನು ಮಾಡುತ್ತಾರೆ. ಯಾವ ಸಾಧಕನ ವ್ಯಷ್ಟಿ-ಸಮಷ್ಟಿ ಸಾಧನೆಯ ಪ್ರಯತ್ನಗಳು ಕಡಿಮೆ ಇರುತ್ತದೆಯೋ ಅವನ ಕಡೆ ವಿಶೇಷ ಗಮನಕೊಟ್ಟು ಪ್ರತಿದಿನವೂ ಸಾಧನೆಯ ಮಾರ್ಗದರ್ಶನ ಮಾಡುತ್ತಾರೆ.
೧೦ ಅ. ಹಬ್ಬಗಳಂದು ಆಧ್ಯಾತ್ಮಿಕ ಧ್ವನಿಚಿತ್ರಮುದ್ರಿಕೆ ತೋರಿಸುವುದು : ಆಶ್ರಮದಲ್ಲಿ ಹಬ್ಬಗಳಂದು ಎಲ್ಲರೂ ಪಾರಂಪಾರಿಕ ಪೋಷಾಕನ್ನು ತೊಡುತ್ತಾರೆ. ಆ ದಿನ ಸಾಧಕರಿಗೆ ಸಂತರ ಮಾರ್ಗದರ್ಶನ, ಸಂತರ ಸನ್ಮಾನ ಸಮಾರಂಭಗಳು ಅಥವಾ ಸಾಧನೆಯಲ್ಲಿ ಪ್ರಗತಿ ಹೊಂದಿರುವ ಸಾಧಕರ ಸಂದರ್ಶನ ಇಂತಹ ಆಧ್ಯಾತ್ಮಿಕ ಧ್ವನಿಮುದ್ರಿಕೆಗಳನ್ನು ತೋರಿಸಲಾಗುತ್ತದೆ. ಆದ್ದರಿಂದ ಹಬ್ಬವನ್ನು ಆಧ್ಯಾತ್ಮಿಕ ಮಟ್ಟದಲ್ಲಿ ಆಚರಿಸಿದಂತಾಗುತ್ತದೆ.
೧೦ ಆ. ಪ್ರಾರ್ಥನೆ ಮತ್ತು ಕೃತಜ್ಞತೆ ಇವುಗಳ ಉದ್ಘೋಷಣೆ : ಆಶ್ರಮದಲ್ಲಿ ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಸಾಧಕರಿಗೆ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತ ಪಡಿಸಲು ನೆನಪಿಸಲಾಗುತ್ತದೆ. ಈ ಉದ್ಘೋಷಣೆಯಿಂದಾಗಿ ಸಾಧಕರಿಗೆ ಪ್ರಾರ್ಥನೆಯ ನೆನಪಾಗಿ ಕಾರ್ಯಕ್ಕೆ ಸಾಧನೆಯನ್ನು ಜೋಡಿಸಲಾಗುತ್ತದೆ. ಇಲ್ಲಿ ನಡೆಯುವ ಪ್ರತಿಯೊಂದು ಸೇವೆಯೂ ಈಶ್ವರನನ್ನು ಸ್ಮರಿಸಿ ಮಾಡಿರುವಂತಹದ್ದಾಗಿರುವುದರಿಂದ ಅದರಲ್ಲಿ ಈಶ್ವರನ ಚೈತನ್ಯದ ಪ್ರಮಾಣವೂ ಅತ್ಯಧಿಕವಿರುತ್ತದೆ.
೧೧. ಸಾಧನೆಯ ಮಾರ್ಗದರ್ಶಕ - ತಪ್ಪುಗಳ ಫಲಕ
ಆಶ್ರಮದ ಅದ್ವಿತೀಯ ವೈಶಿಷ್ಟ್ಯವೆಂದರೆ ಇಲ್ಲಿ ಸಾಧಕರಿಂದ ಆದ ತಪ್ಪುಗಳನ್ನು ಬರೆಯುವುದಕ್ಕೆಂದು ಒಂದು ಫಲಕವಿದೆ. ಈ ಫಲಕದ ಮೇಲೆ ಸಾಧಕರು ದಿನವಿಡೀ ತಮ್ಮಿಂದಾದ ತಪ್ಪುಗಳನ್ನು ಮನಮುಕ್ತವಾಗಿ ಬರೆಯುತ್ತಾರೆ. ಆ ತಪ್ಪುಗಳಿಂದ ತಾವು ಸ್ವತಃ ಕಲಿಯಬೇಕು ಹಾಗೂ ಇತರರೂ ಅಂತಹ ತಪ್ಪುಗಳನ್ನು ಮಾಡಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಎಲ್ಲರೆದುರು ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ತಪ್ಪು ಬರೆದಿರುವ ಸಾಧಕನ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ. ತನ್ನ ತಪ್ಪುಗಳನ್ನು ಬಚ್ಚಿಟ್ಟು ಒಳ್ಳೆಯ ಸಂಗತಿಗಳನ್ನು ಮಾತ್ರ ಇತರರಿಗೆ ಹೇಳುವುದು ಮಾನವನ ಸ್ವಭಾವವಾಗಿದೆ. ಇಲ್ಲಿ ತನ್ನಲ್ಲಿರುವ ಷಡ್ರಿಪುಗಳ ನಿರ್ಮೂಲನೆಯಾಗಬೇಕೆಂಬುವುದಕ್ಕಾಗಿ ತಪ್ಪುಗಳನ್ನು ಇತರರೆದುರು ಮುಕ್ತವಾಗಿ ಮಂಡಿಸುತ್ತಾರೆ. ಇದರಿಂದ ಆಶ್ರಮದ ವಾತಾವರಣವು ಪಾರದರ್ಶಕವಾಗಿರುತ್ತದೆ, ಅಲ್ಲದೇ ಕಾರ್ಯವೂ ಉತ್ತಮವಾಗಿ ಆಗುತ್ತದೆ. ಸಾಧಕರು ಸಾಧನೆಯಲ್ಲಿ ಉನ್ನತಿ ಹೊಂದುತ್ತಾರೆ.
೧೨. ಆಶ್ರಮದ ಬಗ್ಗೆ ಸಾಧಕರ ಭಾವ ಮತ್ತು ಸ್ವಯಂಸ್ಫೂರ್ತಿಯಿಂದ ಆಗುವ ಸಾಧನೆಯ ಪ್ರಯತ್ನಗಳು
ಆಶ್ರಮವು ನನ್ನದಲ್ಲ, ನಾನು ಆಶ್ರಮದವನು ಎಂಬ ಭಾವದಿಂದ ಹಾಗೂ ಕಂಡದ್ದು ಕರ್ತವ್ಯ ಎಂಬಂತೆ ಸಾಧಕರು ಆಶ್ರಮದಲ್ಲಿ ವಾಸಿಸುತ್ತಾರೆ. ಇಲ್ಲಿ ಯಾರೂ ಹವ್ಯಾಸಿಗಳಿಲ್ಲ. ಇಲ್ಲಿ ಎಲ್ಲರೂ ಈಶ್ವರಪ್ರಾಪ್ತಿಗಾಗಿ ಸಮರ್ಪಿತರಾಗಿರುವವರು. ಪ್ರತಿಯೊಬ್ಬನಲ್ಲಿಯೂ ಸ್ವಯಂಶಿಸ್ತು ಇದೆ. ಆಶ್ರಮದಲ್ಲಿ ಎಲ್ಲ ಸೇವೆಗಳೂ ಸುಲಲಿತವಾಗಿ ನಡೆಯಬೇಕೆಂಬುದಕ್ಕಾಗಿ ಪ್ರತಿಯೊಬ್ಬನೂ ಕಾರ್ಯನಿರತನಾಗಿರುತ್ತಾನೆ. ಆದ್ದರಿಂದಲೇ ಇಲ್ಲಿ ನಡೆಯುವ ಇಷ್ಟೊಂದು ವ್ಯಾಪಕ ಕಾರ್ಯವು ಸುಲಲಿತವಾಗಿ ನಡೆಯುತ್ತಿರುವುದು ಕಾಣುತ್ತದೆ. ದೊಡ್ಡ ಸಮಾರಂಭದ ಸಮಯದಲ್ಲಿಯೂ ಎಲ್ಲೂ ಸದ್ದು-ಗದ್ದಲ ಕಾಣುವುದಿಲ್ಲ. ಎಲ್ಲರ ಅನುಕೂಲದ ದೃಷ್ಟಿಯಿಂದಲೂ, ನಿಯೋಜಿತ ಕಾರ್ಯವು ಸುಲಲಿತವಾಗಿ ನಡೆಯುವುದಕ್ಕೆಂದು ಒಮ್ಮೆ ಹಾಕಿ ಕೊಟ್ಟಿರುವ ಕಾರ್ಯಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರತಿಯೊಬ್ಬ ಸಾಧಕನೂ ಪ್ರಯತ್ನಿಸುತ್ತಾನೆ. ಯಾರಿಂದಲಾದರೂ ಹೀಗೆ ಆಗದಿದ್ದರೆ ಇತರ ಸಾಧಕರು ನಮ್ರತೆಯಿಂದ ಅವನಿಗೆ ಅದರ ಅರಿವು ಮಾಡಿಕೊಡುತ್ತಾರೆ.
ಸನಾತನದ ಆಶ್ರಮದಲ್ಲಿ ಇಂತಹ ಹಲವಾರು ಚಿಕ್ಕ-ದೊಡ್ಡ ಕಾರ್ಯಪದ್ಧತಿಗಳಿವೆ. ಅವುಗಳಿಂದಾಗಿಯೇ ಆಶ್ರಮದಲ್ಲಿ ಈಶ್ವರನ ಚೈತನ್ಯವಿದೆ. ಲೇಖನದ ಮೂಲಕ ಎಲ್ಲವನ್ನೂ ಮಂಡಿಸುವುದಕ್ಕೆ ಹಲವು ಇತಿಮಿತಿಗಳಿವೆ. ಆದುದರಿಂದ ಈ ಆಶ್ರಮಗಳಿಗೆ ಭೇಟಿ ನೀಡಿ ಇಲ್ಲಿನ ಈಶ್ವರೀ ರಾಜ್ಯವನ್ನು ಅನುಭವಿಸುವುದೇ ನಿಜವಾದ ಆನಂದ. ಇಂತಹ ಆಶ್ರಮವನ್ನು ನಿರ್ಮಿಸುವುದು ಸಾಮಾನ್ಯ ವ್ಯಕ್ತಿಯ ಕೆಲಸವಲ್ಲ, ಎಂದು ಭೇಟಿ ನೀಡುವವರು ಸಹಜವಾಗಿ ನುಡಿಯುತ್ತಾರೆ. ಈ ಆಶ್ರಮಗಳಲ್ಲಿ ಅನುಭವಿಸಲು ಸಿಗುವ ದೈವಿ ವಾತಾವರಣವು ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಿಗೆ ಸಾಧನೆಯ ಚಿರಂತನ ಬೋಧನೆಯನ್ನು ನೀಡಿ ಅವರಲ್ಲಿ ಸಾಧಕತ್ವದ ವಿಕಾಸವನ್ನುಂಟು ಮಾಡಿರುವುದರ ಪ್ರತಿಫಲವಾಗಿದೆ. ಈ ಆಶ್ರಮಗಳನ್ನು ರೂಪಿಸುವ ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಈ ನಿಮಿತ್ತ ಕೋಟಿಕೋಟಿ ನಮನಗಳು !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಎಲ್ಲ ದೃಷ್ಟಿಗಳಿಂದಲೂ ಆದರ್ಶವಾಗಿರುವ ಸನಾತನದ ಆಶ್ರಮಗಳ ವೈಶಿಷ್ಟ್ಯಗಳು !