ಭಾರತೀಯ ಸೈನಿಕರ ಜೀವದ ಬೆಲೆ ಇಷ್ಟು ಕಡಿಮೆಯೇ ?

ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಮತಾಂಧರು ಕೋಲಾಹಲವೆಬ್ಬಿಸುತ್ತಿದ್ದಾರೆ. ಅದರಲ್ಲಿ ೨೭ ಜನರು ತಮ್ಮ ಪ್ರಾಣವನ್ನು ಕಳೆದು ಕೊಳ್ಳಬೇಕಾಯಿತು ಮತ್ತು ೩ ಸಾವಿರಕ್ಕಿಂತಲೂ ಹೆಚ್ಚು ನಾಗರಿಕರು, ಭದ್ರತಾ ಪಡೆಯ ಹಲವು ಸೈನಿಕರು ಗಾಯಗೊಂಡರು. ಕಾಶ್ಮೀರ ಕಣಿವೆಯ ೧೦ ಜಿಲ್ಲೆಗಳಲ್ಲಿ ಸಂಚಾರನಿಷೇಧ ಜಾರಿಯಲ್ಲಿದೆ. ಇವೆಲ್ಲ ಪ್ರದೇಶ ಗಳಲ್ಲಿಯೂ ಮತಾಂಧರಿಂದ ಭದ್ರತಾ ಪಡೆಯ ಸೈನಿಕರ ಮೇಲೆ ಬಹಳಷ್ಟು ಆಕ್ರಮಣಗಳು ನಡೆಯುತ್ತಿವೆ. ಕೈಯಲ್ಲಿ ಬಂದೂಕುಗಳನ್ನು ಹಿಡಿದು ಕೊಂಡಿರುವ ಸೈನಿಕರು ಮತಾಂಧ ಗುಂಪುಗಳಿಂದ ಪೆಟ್ಟು ತಿನ್ನುತ್ತಿರುವ ಭೀಕರ ಚಿತ್ರಣವು ಜಗತ್ತಿನ ಯಾವುದೇ ದೇಶದಲ್ಲಿಯೂ ಕಾಣ ಸಿಗದು. ಆದರೂ ಈ ಭದ್ರತಾ ಪಡೆಯನ್ನೇ ದೋಷಿಗಳನ್ನಾಗಿಸಲಾಗುತ್ತಿದೆ ಎನ್ನುವುದೇ ದುರ್ದೈವ! ಕಾಶ್ಮೀರದಲ್ಲಿ ಸೇನಾದಳದ ಮೇಲೆ ನಿಯಮಿತವಾಗಿ ಆಗುತ್ತಿರುವ ಕಲ್ಲು ತೂರಾಟ, ಭಾರತವಿರೋಧಿ ಘೋಷಣೆಗಳು, ಭಯೋತ್ಪಾದಕರಿಗೆ ಸಿಗುವ ಪ್ರೋತ್ಸಾಹ ಇವೇ ಮುಂತಾದ ಘಟನೆಗಳನ್ನು ನೋಡಿದರೆ ಕಾಶ್ಮೀರವು ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿದೆಯೋ ಎಂಬ ಪ್ರಶ್ನೆ ಯುಂಟಾಗುತ್ತದೆ.
ಪ್ರತಿಭಟನಾಕಾರರಿಂದ ಹಿಡಿದು ಸರಕಾರದ ಬಹುದೊಡ್ಡ ಮಂತ್ರಿಗಳ ತನಕ ಎಲ್ಲರೂ ಭದ್ರತಾ ಪಡೆ ಹಾಗೂ ಸೇನೆಯನ್ನೇ ದೂಷಿಸುತ್ತಾ ಅವರಿಗೆ ಸಂಯಮ ವನ್ನು ಬೋಧಿಸುತ್ತಾ ಹೊರಟಿದ್ದಾರೆ. ಕೇಂದ್ರ ಗೃಹಮಂತ್ರಿಗಳು ಶ್ರೀನಗರಕ್ಕೆ ನೀಡಿದ ಭೇಟಿಯ ಸಮಯದಲ್ಲಿ ಸೈನ್ಯಕ್ಕೇ ಸಂಯಮದ ಸಲಹೆಯನ್ನು ಕೊಟ್ಟರು. ಎಷ್ಟು ಸಂಯಮವನ್ನು ಇಟ್ಟುಕೊಳ್ಳಬೇಕು ಎಂಬುದಕ್ಕೂ ಇತಿಮಿತಿ ಇರಬೇಕು. ಕಾಶ್ಮೀರದಲ್ಲಿ ಗಾಯಗೊಂಡಿರುವವ ರಲ್ಲಿ ನೂರಾರು ಸೈನಿಕರ ಸಮಾವೇಶವಿದೆ. ಈ ವಸ್ತುಸ್ಥಿತಿಯನ್ನು ಮಾತ್ರ ಯಾರೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದು ವರೆಗೆ ಎಷ್ಟೋ ವರ್ಷ ಸೈನಿಕರು ಕಾಶ್ಮೀರ ಕಣಿವೆಯಲ್ಲಿ ಸಂಯಮದಿಂದ ಇದ್ದಾರೆ. ಇದರಿಂದ ಅಲ್ಲಿನ ಜನರಿಗೆ ಯಾರ ಭಯವೂ ಉಳಿದಿಲ್ಲ. ಕಳೆದ ಕೆಲವು ದಿನಗಳಲ್ಲಿ ಕಣಿವೆಯಲ್ಲಿ ಸ್ತ್ರೀಯರೂ, ಮಕ್ಕಳೂ ಸೈನಿಕರ ಮೇಲೆ ಕಲ್ಲು ಎಸೆಯಲು ಮುಂದಾಗಿರುವ ಹಲವಾರು ಚಿತ್ರಗಳೂ, ಧ್ವನಿಚಿತ್ರಮುದ್ರಿಕೆಗಳೂ ಕಣ್ಣಿಗೆ ಕಂಡಿವೆ. ಹೀಗಾದರೂ ಸರಕಾರವು ಆಂದೋಲನಕಾರರ ಪರವಾಗಿಯೇ ಸಂವೇದನಾಶೀಲತೆಯನ್ನು ತೋರಿಸಿದೆ. ಇಂತಹ ಪ್ರತಿಕೂಲ ವಾತಾವರಣದಲ್ಲಿ ನಮ್ಮ ಸೈನಿಕರೂ ರಕ್ಷಣೆಯ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ನಿಜ ಹೇಳಬೇಕಾದರೆ ಭಾರತೀಯರು ಇಂತಹ ಸೈನಿಕರ ಬಗ್ಗೆ ಪ್ರತಿನಿತ್ಯ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
ಕಾಶ್ಮೀರದ ಪರಿಸ್ಥಿತಿಯನ್ನು ನೋಡಿದರೆ ಕಾಶ್ಮೀರದ ಬಗ್ಗೆ ರಣನೀತಿ ಯನ್ನು ಬದಲಾಯಿಸುವ ಅಗತ್ಯವಿದೆ. ಕಾಂಗ್ರೆಸ್ ಸರಕಾರವು ಯಾವ ಧೋರಣೆಗಳನ್ನು ಅನುಸರಿಸಿತ್ತೋ ಆ ಧೋರಣೆಗಳನ್ನು ಅನುಸರಿಸಿಯೇ ಇಂದೂ ಮುನ್ನಡೆ ಮುಂದುವರಿದರೆ ಜನರ ಭ್ರಮನಿರಸನವಾಗದೇ ಇರಲಾರದು. ಕನಿಷ್ಠ ಪಕ್ಷ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಕಾನೂನಿನ ದೊಣ್ಣೆ ತೋರಿಸಲಾಗುವುದೆಂಬಂತಹ ಕೃತಿ ಹಾಗೂ ಅದನ್ನನುಸರಿಸಿ ಆದೇಶವನ್ನು ಸರಕಾರವು ಕೈಗೊಳ್ಳಬೇಕಾಗಿತ್ತು. ಆದರೆ ಇಲ್ಲಿ ನೋಡಿದರೆ ಸೈನ್ಯಕ್ಕೇ ಸಂಯಮದಿಂದಿರಲು ಸೂಚನೆಯನ್ನು ನೀಡಲಾಗುತ್ತಿದೆ. ಇಂತಹ ಧೋರಣೆ ಹಾಗೂ ಮತಾಂಧರ ಬಗ್ಗೆ ನಿಲುವು ಭಯೋತ್ಪಾದಕರಿಗೆ ಅನುಕೂಲಕರವಾಗಿದೆ. ಇದರ ಪರಿಹಾರವೆಂದು ಸರಕಾರವು ಪ್ರಪ್ರಥಮವಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹಿಡಿತಕ್ಕೆ ತರಬೇಕು. ಇಂದಿನ ಸ್ಥಿತಿಯಲ್ಲಿ ಕಾಶ್ಮೀರವನ್ನು ಭಯೋತ್ಪಾದನಾಮುಕ್ತಗೊಳಿಸಬೇಕಾದರೆ ಕ್ಷಿಪ್ರಕೃತಿ ಮಾಡುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಸರಕಾರವು ಇಸ್ರೈಲ್ ನಂತಹ ನಿಲುವನ್ನು ಅಂಗೀಕರಿಸಬೇಕಾಗಿದೆ. ಸರಕಾರವು ಗಂಭೀರ ವಿಚಾರ ಮಾಡಿ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳನ್ನು ಓಡಿಸುವುದು, ಕಾಶ್ಮೀರಿ ಹಿಂದೂಗಳನ್ನು ಅಲ್ಲಿ ಸನ್ಮಾನದಿಂದ ಪುನರ್ವಸತಿ ಕಲ್ಪಿಸುವುದು, ಗಡಿಯಲ್ಲಿ ಸಂರಕ್ಷಣಾ ವ್ಯವಸ್ಥೆಯನ್ನು ಸರಿ ಪಡಿಸುವುದು ಈ ಸಂಗತಿಗಳಿಗಾಗಿ ಪ್ರಯತ್ನಿಸುವ ಅಗತ್ಯವಿದೆ. ಸರಕಾರವು ಗಂಭೀರ ವಿಚಾರ ಮಾಡಿ ನಮ್ಮ ಸೈನಿಕರ ಪ್ರಾಣಹಾನಿಯನ್ನು ತಡೆಯುವ ಅಗತ್ಯವಿದೆ.
- ಸೌ. ಅಪರ್ಣಾ ಜಗತಾಪ, ಪುಣೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತೀಯ ಸೈನಿಕರ ಜೀವದ ಬೆಲೆ ಇಷ್ಟು ಕಡಿಮೆಯೇ ?