ಎಲ್ಲರಿಗೂ ಕೃತಜ್ಞತೆಗಳು !

ಈಶ್ವರನು ಸನಾತನಕ್ಕೆ ಅಪಾರವಾಗಿ ಕೊಡುತ್ತಿದ್ದಾನೆ. .ಪೂ. ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ಪ್ರಾರಂಭವಾಗಿರುವ ಸನಾತನದ ಕಾರ್ಯವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಈ ೨೫ ವರ್ಷಗಳಲ್ಲಿ ಅನೇಕ ಸಂತರು ಸನಾತನದ ಮೇಲೆ ತಮ್ಮ ಕೃಪಾಛತ್ರವನ್ನು ಹಿಡಿದರು.
ಸಾಧಕರಿಗೆ ಸಾಧನೆಯಲ್ಲಿ ಅಮೂಲ್ಯವಾದ ಮಾರ್ಗದರ್ಶನವನ್ನು ಮಾಡುವ ಮತ್ತು ಅವರನ್ನು ಆಪತ್ಕಾಲದಲ್ಲಿ ರಕ್ಷಿಸುವ ಮಹರ್ಷಿಗಳು, ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜರು, ಸನಾತನದ ಸಾಧಕರಿಗಾಗಿ ಘಂಟೆಗಟ್ಟಲೆ ಅನುಷ್ಠಾನವನ್ನು ಮಾಡುವ ಯೋಗತಜ್ಞ ದಾದಾಜಿ ವೈಶಂಪಾಯನರು, ಮನುಕುಲದ ಉದ್ಧಾರಕ್ಕಾಗಿ ಯಜ್ಞ-ಯಾಗಾದಿಗಳನ್ನು ಮಾಡುವ ಪ.ಪೂ. ನಾರಾಯಣ (ನಾನಾ) ಕಾಳೆಗುರೂಜಿ ಮುಂತಾದವರಲ್ಲದೇ, ಅನೇಕ ಪರಿಚಿತ-ಅಪರಿಚಿತ ಸಂತರು ಸನಾತನಕ್ಕೆ ಮಾಡಿರುವ ಕೃಪಾಶೀರ್ವಾದಕ್ಕಾಗಿ ಸನಾತನ ಸಮಸ್ತ ಪರಿವಾರದ ವತಿಯಿಂದ ಅನಂತ ಕೋಟಿ ಕೃತಜ್ಞತೆಗಳು. ಜಿಜ್ಞಾಸುಗಳು, ಹಿತಚಿಂತಕರು, ದಾನಿಗಳು ಹಾಗೂ ಧರ್ಮಾಭಿಮಾನಿಗಳ ಅಮೂಲ್ಯವಾದ ಸಹಕಾರದಿಂದಾಗಿಯೇ ನಮಗೆ ಈ ೨೫ ವರ್ಷಗಳ ವರೆಗೆ ಮುನ್ನಡೆಯಲು ಸಾಧ್ಯವಾಯಿತು. ಅನೇಕ ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿಯೂ ಹಿಂದುತ್ವನಿಷ್ಠರು ಸನಾತನವನ್ನು ಬೆಂಬಲಿಸಲು ಸಂಘಟಿತರಾಗುತ್ತಿದ್ದಾರೆ. ಇವರೆಲ್ಲರಿಂದಾಗಿಯೇ ಈ ಆನಂದದ ಕ್ಷಣವನ್ನು ಅನುಭವಿಸಲು ಸಾಧ್ಯವಾಗುತ್ತಿದೆ. ಸನಾತನ ಪರಿವಾರವು ಎಲ್ಲರಿಗೂ ನತಮಸ್ತಕವಾಗಿದೆ. ಸನಾತನ ಧರ್ಮ ರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಗಾಗಿ ತಮ್ಮೆಲ್ಲರ ಸಹಕಾರವು ನಮಗೆ ಮುಂದೆಯೂ ಇದೇ ರೀತಿ ದೊರಯಲೆಂದು,ಪ್ರಾರ್ಥಿಸುತ್ತೇವೆ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಎಲ್ಲರಿಗೂ ಕೃತಜ್ಞತೆಗಳು !