ಈಗಿನ ಸರಕಾರ ಇಂತಹ ಮಾಜಿ ಮಂತ್ರಿಗಳ ಮೇಲೆ ಸೂಕ್ತ ಕ್ರಮ ಕೈಕೊಂಡು ಕಾರಾಗೃಹಕ್ಕೆ ಅಟ್ಟಬೇಕು ಹಾಗೂ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಪ್ರಯತ್ನಿಸಬೇಕು !

ಕೇಸರಿ ಭಯೋತ್ಪಾದನೆ ಪಿ. ಚಿದಂಬರಮ್ ಇವರ ಕಲ್ಪನೆ !
- ಮಾಜಿ ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಎಸ್. ಡಿ. ಪ್ರಧಾನ
ನವ ದೆಹಲಿ : ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸಿಲುಕಿಸಲು ದೇಶದಲ್ಲಿ ಕೇಸರಿ ಭಯೋತ್ಪಾದನೆಯ ಕಲ್ಪನೆ ಸೃಷ್ಟಿಸಿದ್ದು ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಗೃಹ ಮಂತ್ರಿಗಳಾಗಿದ್ದ ಪಿ.ಚಿದಂಬರಮ್, ಎಂಬ ಈ ಗೌಪ್ಯ ಮಾಹಿತಿಯು ಜಂಟಿ ಗುಪ್ತಚರ ಸಮಿತಿಯ ಮಾಜಿ ಪ್ರಮುಖ ಹಾಗೂ ಮಾಜಿ ರಾಷ್ಟ್ರೀಯ ಸರುಕ್ಷಾ ಉಪಸಲಹೆಗಾರರಾಗಿದ್ದ ಎಸ್.ಡಿ. ಪ್ರಧಾನ ಇವರೊಂದಿಗೆ ಜರುಗಿದ ಒಂದು ಸಂವಾದ ದಲ್ಲಿ ಬಹಿರಂಗಗೊಂಡಿದೆ. ಕೆಲವು ಹಿಂದುತ್ವ ನಿಷ್ಠ ಸಂಘಟನೆಗಳ ಪ್ರಚೋದನಾಕಾರಿ ಭಾಷಣದಿಂದಾಗಿ ಸಾಧ್ವಿ ಪ್ರಜ್ಞಾಸಿಂಗ್ ಹಾಗೂ ಅಸಿಮಾನಂದರಂತಹ ಜನರು ಕೇಸರಿ ಭಯೋತ್ಪಾದನೆಯ ಸಂಚಿಗೆ ಬಲಿ ಯಾದರು ಎಂದೂ ಪ್ರಧಾನ ಇವರು ಸ್ಪಷ್ಟ ಪಡಿಸಿದರು.

ಎಸ್.ಡಿ. ಪ್ರಧಾನ ಇವರು ಬಹಿರಂಗ ಪಡಿಸಿದ ವಿಷಯಗಳು !
೧. ಪಾಕ್‌ನ ರಾವಲ್ಪಿಂಡಿಯಲ್ಲಿ ಒಸಾಮಾ ಬಿನ್ ಲಾಡೆನ ಅಡಗಿದ್ದ ಮಾಹಿತಿ ಭಾರತದ ಗುಪ್ತಚರ ಇಲಾಖೆಗೆ ದೊರಕಿತ್ತು. ಅದನ್ನು ಭಾರತವೇ ಅಮೇರಿಕಾಗೆ ನೀಡಿತ್ತು.
೨. ಸಮಝೌತಾ ಎಕ್ಸಪ್ರೆಸ್ ಹಾಗೂ ಇತರ ಕೆಲವು ಬಾಂಬ್‌ಸ್ಫೋಟಗಳ ಮುನ್ಸೂಚನೆ ಸರಕಾರಕ್ಕೆ ಮೊದಲೇ ದೊರಕಿತ್ತು.
ಇದರ ಕಾಗದ ಪತ್ರಗಳು ಸಹ ಲಭ್ಯವಿದೆ. ಆದರೆ ಈ ಮಾಹಿತಿಯನ್ನು ಸರಕಾರ ನಿರ್ಲಕ್ಷಿಸಿತ್ತು ಹಾಗೂ ಈ ಸ್ಫೋಟದ ತನಿಖೆಯನ್ನು ಬೇರೆ ದಿಶೆಯಿಂದ ಮಾಡಲಾಯಿತು. ರಾಷ್ಟ್ರೀಯ ತನಿಖಾ ದಳವು ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಎಲ್ಲವೂ ಬದಲಾಯಿತು. ಇಶರತ್ ಜಹಾನ್ ಪ್ರಕರಣವೂ ಇದರಂತೆಯೇ ಆಯಿತು. ಇಶರತ್ ಜಹಾನಳ ಹೆಸರು ಲಷ್ಕರ್-ಎ-ತೊಯಬಾ ಜಾಲತಾಣದಲ್ಲಿತ್ತು. ಆಗಸ್ಟ್ ೨೦೦೯ರಲ್ಲಿ ಇದ್ದ ವಿವರಗಳನ್ನು ಉದ್ದೇಶಪೂರ್ವಕವಾಗಿ ಸೆಪ್ಟೆಂಬರ್-ಅಕ್ಟೋಬರ್‌ಗಳಲ್ಲಿ ಬದಲಾಯಿಸಲಾಯಿತು.
೩. ೨೦೦೯ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಬಳಿಕ ೨೦೧೪ ರ ಚುನಾವಣೆಯ ಸಿದ್ಧತೆಯೆಂದು ಕೇಸರಿ ಭಯೋತ್ಪಾದನೆಯನ್ನು ಹುಟ್ಟು ಹಾಕಿತು. ಅದರಿಂದಲೇ ಸಮಝೌತಾ ತನಿಖೆಯ ಸಮಯದಲ್ಲಿ ಬೇರೆಯದೇ ದಿಕ್ಕು ಹಾಗೂ ಬಣ್ಣವನ್ನು ನೀಡಲಾಯಿತು. ಆದರೆ ತನಿಖೆಯ ಸಮಯದಲ್ಲಿ ಮಾತ್ರ ಏನೂ ದೊರಕಲಿಲ್ಲ. ಆಗ ಗುಪ್ತಚರ ವಿಭಾಗವು ಭಾರತೀಯರು ಇದರಲ್ಲಿ ಪಾಲ್ಗೊಂಡಿಲ್ಲವೆಂದು ತಿಳಿಸಿತ್ತು.
೪. ಸಮಝೌತಾ ಸ್ಫೋಟದಲ್ಲಿ ಶೇ. ೧೦೦ ರಷ್ಟು ಹಾಗೂ ಮಾಲೆಗಾಂವ ಸ್ಫೋಟದಲ್ಲಿ ಶೇ. ೯೯ ರಷ್ಟು ಪಾಕಿಸ್ತಾನದ ಕೈವಾಡವಿರುವುದಾಗಿ ಅಮೇರಿಕಾದ ಗುಪ್ತಚರ ವಿಭಾಗವೂ ಒಪ್ಪಿಕೊಂಡಿತ್ತು. ಮಾಲೆಗಾಂವ ಸ್ಫೋಟದಲ್ಲಿ ಕೆಲವು ಭಾರತೀಯರು ಪಾಲ್ಗೊಂಡಿರುವ ಸಾಧ್ಯತೆಯಿದೆ. ಆದರೆ ಇದರಲ್ಲಿಯೂ ಅವರ ಸಹಭಾಗವು ಕೇವಲ ಸ್ಫೋಟಕಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವುದಕ್ಕಷ್ಟೇ ಸೀಮಿತವಾಗಿತ್ತು.
೫. ಅಭಿನವ ಭಾರತದಂತಹ ಹಿಂದುತ್ವನಿಷ್ಠ ಸಂಘಟನೆಗಳ ಖಡಾಖಂಡಿತವಾಗಿ ಉತ್ತರಿಸುವ ಭಾಷೆಯಿಂದಾಗಿಯೇ ಅವುಗಳನ್ನು ಇದರಲ್ಲಿ ಸಿಲುಕಿಸಲಾಗಿದೆ. ಈ ಸಂಸ್ಥೆಗಳು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತವೆ. ಆದರೆ ಅವುಗಳನ್ನು ಪ್ರತ್ಯಕ್ಷವಾಗಿ ಕಾರ್ಯರೂಪಕ್ಕೆ ತರುವ ಶಕ್ತಿ ಅವರಲ್ಲಿ ಇಲ್ಲ. ಇದರಿಂದ ಅವರ ವಿಷಯದಲ್ಲಿ ಯಾವುದೇ ಮಾಹಿತಿ ಅಥವಾ ಪುರಾವೆಗಳು ದೊರೆತಿಲ್ಲ. ಬಂಧಿಸಿದ ಬಳಿಕ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯ ಮೇಲೆ ಕೇಸರಿ ಭಯೋತ್ಪಾದನೆಯ ಕಥೆಯನ್ನು ಕಟ್ಟಲಾಯಿತು.
೬. ರಾಷ್ಟ್ರೀಯ ತನಿಖಾ ದಳದ ಪ್ರತಿಯೊಬ್ಬ ಅಧಿಕಾರಿಯನ್ನು ಚಿದಂಬರಮ್ ಇವರೇ ಆಯ್ಕೆ ಮಾಡಿದ್ದರು. ದಿಗ್ವಿಜಯ ಸಿಂಗ್ ಇವರು ಸತತವಾಗಿ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ ಕರಕರೆ ಇವರ ಸಂಪರ್ಕದಲ್ಲಿದ್ದರು. ದಿಗ್ವಿಜಯ ಸಿಂಗ್ ಇವರು ರಾಹುಲ ಗಾಂಧಿಯವರಿಗೆ ಹತ್ತಿರದವರಾಗಿದ್ದರು. ಚಿದಂಬರಮ್ ಇವರಿಗೆ ತಮ್ಮ ಖುರ್ಚಿ ಹೋಗುವ ಭಯವಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಈಗಿನ ಸರಕಾರ ಇಂತಹ ಮಾಜಿ ಮಂತ್ರಿಗಳ ಮೇಲೆ ಸೂಕ್ತ ಕ್ರಮ ಕೈಕೊಂಡು ಕಾರಾಗೃಹಕ್ಕೆ ಅಟ್ಟಬೇಕು ಹಾಗೂ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಪ್ರಯತ್ನಿಸಬೇಕು !