ದೇವಸ್ಥಾನದಲ್ಲಿ ಪ್ರವೇಶ ದೊರಕದ ಕಾರಣದಿಂದ ತಮಿಳುನಾಡಿನ ದಲಿತ ಕುಟುಂಬದಿಂದ ಮತಾಂತರಗೊಳ್ಳಲು ನಿರ್ಧಾರ !

ಈ ರೀತಿ ಆಗದಂತೆ ತಡೆಗಟ್ಟಲು ಹಿಂದೂಗಳಿಗೆ
ಧರ್ಮಶಿಕ್ಷಣ ನೀಡುವುದೇ ಪರ್ಯಾಯವಾಗಿದೆ !
ಚೆನ್ನೈ : ದೇವಸ್ಥಾನದಲ್ಲಿ ಪ್ರವೇಶಿಸಲು ಅವಕಾಶ ದೊರಕದ ಕಾರಣದಿಂದ ತಮಿಳುನಾಡಿನ ಸುಮಾರು ೨೫೦ ದಲಿತ ಕುಟುಂಬಗಳು ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮವನ್ನು ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿವೆ. ನಮಗೆ ನಮ್ಮ ಅಧಿಕಾರವನ್ನು ದೊರಕಿಸಿಕೊಡುವಲ್ಲಿ ಸರಕಾರವೂ ವಿಫಲವಾಗಿದೆ ಎಂದು ಈ ಕುಟುಂಬದವರು ಸ್ಪಷ್ಟೀಕರಣ ನೀಡುವಾಗ ಹೇಳಿದ್ದಾರೆ.
೧. ತಮಿಳುನಾಡಿನಲ್ಲಿ ಸಮುದ್ರದ ದಂಡೆಯ ಮೇಲೆ ಪಝಂಗಕಲ್ಲಿಮೆಡೂ ಪಟ್ಟಣವಿದ್ದು, ಇಲ್ಲಿ ೪೦೦ ಕುಟುಂಬಗಳು ವಾಸಿಸುತ್ತಿವೆ. ಇದರಲ್ಲಿ ೧೮೦ ಕುಟುಂಬದವರು ದಲಿತರಾಗಿದ್ದಾರೆ.
೨. ಇಲ್ಲಿಯ ದೇವಸ್ಥಾನದಲ್ಲಿ ೫ ದಿನಗಳ ವರೆಗೆ ಜರುಗುವ ಉತ್ಸವದಲ್ಲಿ ಒಂದು ದಿನ ಎಲ್ಲ ವಿಧಿಗಳನ್ನು ಮಾಡಲು ಅನುವು ಮಾಡಿಕೊಡುವಂತೆ ಈ ಕುಟುಂಬದವರ ಇಚ್ಛೆಯಾಗಿತ್ತು. ಆದರೆ ಇದನ್ನು ನಿರಾಕರಿಸಿದ ಕಾರಣ ಅವರಿಗೆ ಪೂಜೆ ಸಲ್ಲಿಸಲು ಅನುಮತಿ ದೊರಕಲಿಲ್ಲ.

೩. ಪ್ರವೇಶಿಸಲು ಅನುಮತಿ ನಿರಾಕರಿಸಿರುವುದ ರಿಂದ ೭೦ ಕುಟುಂಬದವರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಮತಾಂತರಗೊಳ್ಳುವ ಕೊನೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ೬ ಕುಟುಂಬದವರು ಈ ಮೊದಲೇ ಇಸ್ಲಾಂಗೆ ಮತಾಂತರ ಗೊಂಡಿದ್ದರು.
೪. ತಮಿಳುನಾಡಿನ ತೌಹೀದ ಜಮಾತ ಈ ಮುಸಲ್ಮಾನ ಸಂಘಟನೆಯು ಪಟ್ಟಣದ ಜನರಲ್ಲಿ ಕುರಾನಿನ ಪ್ರತಿಗಳನ್ನು ವಿತರಿಸುತ್ತಿದ್ದಾರೆ. ಹಾಗೂ ಕ್ರೈಸ್ತ ಮಿಶನರಿಗಳು ಸಹ ಈ ದಲಿತ ಕುಟುಂಬದವರನ್ನು ಸಂಪರ್ಕಿಸಿದ್ದಾರೆ. ಕೆಲವು ಹಿಂದೂ ಸಂಘಟನೆಗಳು ಈ ದಲಿತರಿಗೆ ಮತಾಂತರಗೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ನಡೆದ ಘಟನೆಯ ಕುರಿತು ಒಂದು ಮಾರ್ಗವನ್ನು ಕಂಡುಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. (ಹಿಂದೂಗಳನ್ನು ಮತಾಂತರಿಸಲು ಇತರ ಧರ್ಮದವರು ಕಾದುಕುಳಿತಿ ರುತ್ತಾರೆ ಎನ್ನುವುದು ಇದರಿಂದ ಅರಿವಾಗುತ್ತದೆ. ಮತಾಂತರಗೊಳ್ಳುತ್ತಿರುವ ಇಂತಹ ಹಿಂದೂಗಳಿಗೆ ತಿಳುವಳಿಕೆ ಹೇಳುವ ಇಂತಹ ಹಿಂದೂ ಸಂಘಟನೆಗಳು ಎಲ್ಲೆಡೆಯೂ ಇದ್ದರೆ ಮಾತ್ರ ಮತಾಂತರದಂತಹ ಪ್ರಕರಣಗಳಿಗೆ ತಡೆಯೊಡ್ಡಬಹುದಾಗಿದೆ. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಸ್ಥಾನದಲ್ಲಿ ಪ್ರವೇಶ ದೊರಕದ ಕಾರಣದಿಂದ ತಮಿಳುನಾಡಿನ ದಲಿತ ಕುಟುಂಬದಿಂದ ಮತಾಂತರಗೊಳ್ಳಲು ನಿರ್ಧಾರ !